LATEST NEWS
ಕೋಟ : ಶಿಕ್ಷಕಿ ಮೇಲೆ ಹೆಜ್ಜೇನು ದಾಳಿ
ಕೋಟ: ಹೆಜ್ಜೇನು ದಾಳಿಯಿಂದ ಶಿಕ್ಷಕಿಯೋರ್ವರು ಗಂಭೀರ ಗಾಯಗೊಂಡ ಘಟನೆ ಸೋಮವಾರ ಯಡ್ತಾಡಿ ಸಮೀಪ ಕಾವಡಿಯಲ್ಲಿ ಸಂಭವಿಸಿದೆ.
ಕಾವಡಿ ಪ್ರೌಢಶಾಲೆಯ ಗೌರವ ಶಿಕ್ಷಕಿ ಚುಕ್ಕಿ ದಾಳಿಗೊಳಗಾದವರು.
ಮೂಲತಃ ಗುಜರಾತ್‌ನವರಾದ ಚುಕ್ಕಿ ಪ್ರಸ್ತುತ ಬಾರ್ಕೂರಿನಲ್ಲಿ ವಾಸವಾಗಿದ್ದರು. ಅಪರಾಹ್ನ ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭ ಮಹಾಲಿಂಗೇಶ್ವರ ದೇವಸ್ಥಾನದ ಸ್ವಾಗತ ಗೋಪುರದ ಸಮೀಪ ಹತ್ತಾರು ಹೆಜ್ಜೇನುಗಳು ಒಮ್ಮೆಲೆ ದಾಳಿ ನಡೆಸಿತ್ತು. ಅಪರಾಹ್ನದ ವೇಳೆಯಾದ್ದರಿಂದ ರಸ್ತೆಯಲ್ಲಿ ಜನಸಂಚಾರ ವಿರಳವಾಗಿತ್ತು. ರಕ್ಷಣೆಗೆ ಯಾರು ಇರಲಿಲ್ಲ.
ಈ ಸಂದರ್ಭ ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಸ್ಥಳೀಯರಾದ ಪ್ರಸಾದ್ ಮೆಂಡನ್ ಅವರು ಶಿಕ್ಷಕಿಯನ್ನು ಗಮನಿಸಿದ್ದು, ನೋವಿನಿಂದ ಬೊಬ್ಬೆ ಹೊಡೆಯುತ್ತಿದ್ದ ಶಿಕ್ಷಕಿಯ ಬಳಿ ತೆರಳಿ ಹೆಜ್ಜೇನು ದಾಳಿಯ ನಡುವೆ ತನಗೆ ಎದುರಾಗಬಹುದಾದ ಅಪಾಯವನ್ನೂ ಪರಿಗಣಿಸದೆ ರಕ್ಷಣೆಗೆ ಮುಂದಾದರು. ತನ್ನ ಕಾರಿನಲ್ಲಿ ಸಮೀಪದ ಮನೆಯೊಂದಕ್ಕೆ ಕರೆದೊಯ್ದು ಉಪಚರಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
LATEST NEWS
ನಿಯಂತ್ರಣ ತಪ್ಪಿ ಬೈಕ್ ಗದ್ದೆಗೆ; ಸವಾರ ಸಾ*ವು
ತೆಕ್ಕಟ್ಟೆ : ನಿಯಂತ್ರಣ ತಪ್ಪಿ ಬೈಕ್ ಗದ್ದೆಗೆ ಉರುಳಿ ಬಿದ್ದು ಸವಾರ ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾದ ಘಟನೆ ಕುಂದಾಪುರ ತೆಕ್ಕಟ್ಟೆ ಸಮೀಪದ ಕೊಮೆಯಲ್ಲಿ ಸಂಭವಿಸಿದೆ.
ಪಡುಕರೆ ನಿವಾಸಿ ಮಹೇಂದ್ರ (32) ಮೃತ ದುರ್ದೈವಿ.
ಸಂಬಂಧಿಕರ ಮನೆಯಲ್ಲಿ ದೀಪಾವಳಿ ಹಬ್ಬದ ಕಾರ್ಯಕ್ರಮವನ್ನು ಮುಗಿಸಿ ತಡರಾತ್ರಿ ಬೈಕ್ ನಲ್ಲಿ ಮಹೇಂದ್ರ ಬರುತ್ತಿದ್ದ ವೇಳೆ ತೆಕ್ಕಟ್ಟೆ– ಕೊಮೆ ರಸ್ತೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಬೈಕ್ ಸಹಿತ ರಸ್ತೆ ಬದಿಯ ಗದ್ದೆಗೆ ಆಯತಪ್ಪಿ ಬಿದ್ದಿದ್ದಾರೆ. ಗದ್ದೆಯಲ್ಲಿ ನೀರಿದ್ದುದರಿಂದ ಉಸಿರುಗಟ್ಟಿ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಕೃಷಿಭೂಮಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ತುಂಬಿ ಕೊಂಡಿದ್ದು, ಬೈಕ್ ಚಾಲಕನ ನಿಯಂತ್ರಣ ತಪ್ಪಿ ಆಕಸ್ಮಿಕವಾಗಿ ಮಗುಚಿ ಬಿದ್ದಿದ್ದರಿಂದ ನೀರಿನಲ್ಲಿ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
DAKSHINA KANNADA
ಸುಬ್ರಹ್ಮಣ್ಯ: ಅನ್ಯಕೋಮಿನ ಯುವಕನಿಂದ ಮೆಸೇಜ್; ಯುವಕರಿಂದ ಹಲ್ಲೆ
ಸುಬ್ರಹ್ಮಣ್ಯ: ಅನ್ಯಕೋಮಿನ ಯುವಕನೋರ್ವ ವಿದ್ಯಾರ್ಥಿನಿಗೆ ಮೆಸೇಜ್ ಮಾಡಿದ್ದಾನೆ ಎಂದು ಆರೋಪಿಸಿ ತಂಡವೊಂದು ಹಲ್ಲೆ ಮಾಡಿದ ಘಟನೆ ಸುಬ್ರಹ್ಮಣ್ಯದ ಗುತ್ತಿಗರುವಿನಲ್ಲಿ ನಡೆದಿದೆ.
ಥಳಿತಕ್ಕೊಳಗಾದ ಯುವಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ನಿಯಾಝ್ ಎಂಬಾತ ಹಲ್ಲೆಗೊಳಗಾದ ಯುವಕ.
ಸ್ಥಳೀಯ ಯುವತಿಯೋರ್ವಳಿಗೆ ನಿಯಾಝ್ ಮೆಸೇಜ್ ಮಾಡುತ್ತಿರುವುದಾಗಿ ತಿಳಿದು ಬಂದ ಬಳಿಕ, ಅವನನ್ನು ಕರೆಸಿಕೊಂಡ ಯುವಕರ ತಂಡವೊಂದು ಹಲ್ಲೆ ನಡೆಸಿದ್ದಾರೆ.
ಈ ಪ್ರಕರಣದ ಕುರಿತು, ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LATEST NEWS
ಪ್ರಚಾರದ ವೇಳೆ ಬೈಕ್‌ನಿಂದ ಬಿದ್ದ ನಿಖಿಲ್ ಕುಮಾರಸ್ವಾಮಿ
ಮಂಗಳೂರು/ರಾಮನಗರ : ಚನ್ನಪಟ್ಟಣ ಉಪಚುನಾವಣಾ ಪ್ರಚಾರದ ವೇಳೆ ನಿಖಿಲ್ ಕುಮಾರಸ್ವಾಮಿ ಬೈಕ್‌ನಿಂದ ಬಿದ್ದಿದ್ದಾರೆ.
ಚನ್ನಪಟ್ಟಣ ತಾಲೂಕಿನ ಮಂಗಾಡಹಳ್ಳಿಯಲ್ಲಿ ನಿಖಿಲ್ ಕಾರ್ಯಕರ್ತನ ಬೈಕ್ ಏರಿ ಪ್ರಚಾರ ನಡೆಸುತ್ತಿದ್ದರು. ಈ ಸಂದರ್ಭ ಮಳೆ ನೀರಿನಿಂದ ಕೆಸರಾಗಿದ್ದ ರಸ್ತೆಯಲ್ಲಿ ಆಯತಪ್ಪಿ ಬಿದ್ದಿದ್ದಾರೆ.
ಇದನ್ನೂ ಓದಿ : ಚಲಿಸುತ್ತಿದ್ದ ಬೈಕಿನಲ್ಲಿ ಪಟಾಕಿ ಸಿಡಿಸಿ ಪುಂಡಾಟ; ಇಬ್ಬರ ಬಂಧನ
ತಕ್ಷಣವೇ ಸ್ಥಳೀಯ ಕಾರ್ಯಕರ್ತರು ನಿಖಿಲ್ ನೆರವಿಗೆ ಧಾವಿಸಿದ್ದಾರೆ. ಅವರನ್ನು ಮೇಲಕ್ಕೆತ್ತಿ ಉಪಚರಿಸಿದ್ದಾರೆ. ಸ್ವಲ್ಪಹೊತ್ತು ವಿಶ್ರಾಂತಿ ಪಡೆದ ಬಳಿಕ ಮತ್ತೆ ನಿಖಿಲ್ ಕುಮಾರಸ್ವಾಮಿ ಪ್ರಚಾರ ಕಾರ್ಯ ಮುಂದುವರಿಸಿದರು.
- LATEST NEWS6 days ago
ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ʼಡಿಜಿಟಲ್ ಕಾಂಡೋಮ್ʼ !! ಬಳಕೆ ಹೇಗೆ ?
- BIG BOSS7 days ago
BBK 11 : ಸೃಜನ್ ಲೊಕೇಶ್ ಜೊತೆ ಬಂದ ಹೊಸ ಕಾರಲ್ಲಿ ಹೊರ ಹೊಗೋದು ಯಾರು ಗೊತ್ತಾ ??
- LATEST NEWS6 days ago
ರೀಲ್ಸ್ ರಾಣಿ ಪತಿ ಕೊ*ಲೆಯಲ್ಲಿ ಮತ್ತೊಂದು ಟ್ವಿಸ್ಟ್ : ಪ್ರತಿಮಾ ಬಳಸಿದ್ದ ವಿಷ ಯಾವುದು ಗೊತ್ತಾ ?
- BIG BOSS7 days ago
BBK 11 : ಹನುಮಂತನ ನಿಜಬಣ್ಣ ಬಯಲು ಮಾಡಿದ ಭಟ್ರು !!