BIG BOSS
ಹನುಮಂತನ ಮೇಲೆ ತಿರುಗಿ ಬಿದ್ದ ಮೂವರು! ಮನೆಯ ಕ್ಯಾಪ್ಟನ್ ಈಗ ಗೇಮ್ ಪ್ಲಾನರ್ ಅಂತೆ!
ಬಿಗ್ ಬಾಸ್ ಮನೆಯ ಈ ವಾರದ ಕ್ಯಾಪ್ಟನ್ ಹನುಮಂತನಿಗೆ ನಾಮಿನೇಟ್ ಟಾಸ್ಕ್ ನೀಡಲಾಗಿದೆ. ಅದರಂತೆಯೇ ಹನುಮಂತ ಮೂವರ ಹೆಸರನ್ನು ತೆಗೆದುಕೊಂಡಿದ್ದು, ನಾಮಿನೇಟ್ ಮಾಡಿದ್ದಾನೆ. ಗೋಲ್ಡ್ ಸುರೇಶ್, ಮಾನಸ ಮತ್ತು ಭವ್ಯ ಗೌಡ ಅವರ ಹೆಸರನ್ನು ಆಯ್ಕೆ ಮಾಡಿದ್ದಾನೆ. ಆದರೀಗ ಆತ ನಾಮಿನೇಟ್ ವೇಳೆ ನೀಡಿದ ಕಾರಣಕ್ಕೆ ಮೂವರು ಅಸಮಾಧಾನರಾಗಿದ್ದಾರೆ.
ಹನುಮಂತ ಮೊದಲಿಗೆ ಗೋಲ್ಡ್ ಸುರೇಶ್ ಹೆಸರನ್ನು ತೆಗೆದುಕೊಂಡಿದ್ದು, ಆತ ಅಲ್ಲಲ್ಲಿ ಕೋಳಿ ಮಲಗಿಕೊಂಡಂತೆ ಮಲಗುತ್ತಾನೆ. ಭವ್ಯಾ ಗೌಡ ಯಾವುದರಲ್ಲೂ ಹೆಚ್ಚು ಭಾಗವಹಿಸಿಲ್ಲ, ಮಾನಸ ಅದೊಂತರ ಬಾಂಬ್ ಇದ್ದಂತೆ ಸೌಂಡ್ ಮಾಡುವಾಗ ಟುಸುಕ್ ಅನ್ನುತ್ತೆ ಎಂದು ಕಾರಣ ನೀಡಿದ್ದಾನೆ.
ಹನುಮಂತ ನೀಡಿದ ಕಾರಣಕ್ಕೆ ಮೂವರು ಅಸಾಮಾಧಾನರಾಗಿದ್ದಾರೆ. ಅದಲ್ಲಿ ಭವ್ಯ ನೇರವಾಗಿ ಹನುಮಂತುವಿಗೆ ನೀವು ಕೊಟ್ಟಿರುವ ಕಾರಣ ಚೆನ್ನಾಗಿಲ್ಲ ಎಂದಿದ್ದಾರೆ. ಮಾನಸ ಕಣ್ಣೀರು ಹಾಕಿದ್ದು, ನಿನ್ನಂತ ಗೇಮ್ ಪ್ಲಾನರ್ ನಮ್ ತಾಯಾಣೆ ಈ ಮನೆಯಲ್ಲಿ ಯಾರು ಇಲ್ಲ ಕಣೋ ಎಂದು ಹೇಳಿದ್ದಾರೆ. ಗೋಲ್ಡ್ ಸುರೇಶ್ ಚೈತ್ರಾ ಕುಂದಾಪುರ ಬಳಿ ಆತ ಅನ್ಕೊಂಡಿರುವ ಹಾಗೆ ಇಲ್ಲ ಎಂದು ಹೇಳಿದ್ದಾರೆ.
BIG BOSS
BBK11 : ಬಿಗ್‌ಬಾಸ್ ವೇದಿಕೆಯಲ್ಲಿ ತಾಯಿಯನ್ನು ನೆನೆದು ಕಣ್ಣಿರಿಟ್ಟ ಕಿಚ್ಚ
ಬೆಂಗಳೂರು: ಬಿಗ್ ಬಾಸ್ ಕನ್ನಡ ಶೋ ನಡೆಸಿಕೊಡುವ ಕಿಚ್ಚ ಸುದೀಪ್ ವೇದಿಕೆಯಲ್ಲೇ ತಮ್ಮ ತಾಯಿಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ.
ತಾಯಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೂ, ಕರ್ತವ್ಯ ನಿಷ್ಠಬಿಡದೆ ಕಿಚ್ಚ ಸುದೀಪ್ ಬಿಗ್ ಬಾಸ್ ಶೋ ನಡೆಸಿಕೊಟ್ಟಿದ್ದರು. ತಾಯಿ ನಿಧನ ಹೊಂದಿದ ದಿನದಿಂದ ಸುದೀಪ್ ನೋವಿನಿಂದ ಕುಗ್ಗಿದ್ದಾರೆ.
ಒಂದು ವಾರ ಬಿಗ್ ಬಾಸ್ ಕಾರ್ಯಕ್ರಮಕ್ಕೂ ಬಾರದ ಕಿಚ್ಚ ಈ ವಾರ ಬಿಗ್ ಬಾಸ್ ವೇದಿಕೆಗೆ ಬಂದಿದ್ದಾರೆ. ಈ ವೇಳೆ ಅವರು ಬಿಗ್ ಬಾಸ್ ವೇದಿಕೆಯಲ್ಲೇ ತಾಯಿಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ.
‘ಕಿಚ್ಚ ಅವರ ಮುಂದೆ ಅವರ ತಾಯಿ ಫೋಟೋವನ್ನು ಹಾಕಿ, ಪ್ರೇಕ್ಷಕರನ್ನು ರಂಜಿಸುವ ʼಮಾಣಿಕ್ಯʼನಂತಹ ನಾಯಕನನ್ನು ಕರುನಾಡ ಮಡಿಲಿಗೆ ಹಾಕಿ, ತನ್ನ ಪ್ರೀತಿಯನ್ನು ಮನೆ ಮನೆಯ ಜೊತೆ ಹಂಚಿಕೊಂಡ ನಿಮ್ಮ ತಾಯಿಯ ಅಗಲಿಕೆ ಭರಿಸಲಾರದ ಭಾರ’ ಎನ್ನುವ ಧ್ವನಿಯನ್ನು ಹಿನ್ನೆಲೆಯಲ್ಲಿ ಹಾಕಲಾಗಿದೆ.
ತಾಯಿಯ ಭಾವಚಿತ್ರವನ್ನು ನೋಡುತ್ತಾ ಕಿಚ್ಚ ನಿಂತಲ್ಲೇ ನಿಂತು ಮಾತು ಬಾರದೆ, ನೋವನ್ನು ನುಂಗಿ ಕಣ್ಣೀರಿಟ್ಟಿದ್ದಾರೆ.
ಇಡೀ ಬಿಗ್ ಬಾಸ್ ಮನೆ ಸುದೀಪ್ ತಾಯಿಯ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದೆ. ಮನೆಯೊಳಗಿನ ಸ್ಪರ್ಧಿಗಳು ಭಾವುಕರಾಗಿದ್ದಾರೆ.
ಅಕ್ಟೋಬರ್ 20 ರಂದು ಸುದೀಪ್ ಜೀವನದಲ್ಲಿ ಅತೀ ಹೆಚ್ಚಾಗಿ ಪ್ರೀತಿಸುತ್ತಿದ್ದ ತಾಯಿಯನ್ನು ಕಳೆದುಕೊಂಡಿದ್ದರು. ಸರೋಜಾ ಸಂಜೀವ್ ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದರು.
BIG BOSS
BBK 11 : ಬಿಗ್‌ಬಾಸ್ ಮನೆಗೆ ಮತ್ತೆ ಎಂಟ್ರಿ ಕೊಟ್ಟ ಯಮುನಾ ಶ್ರೀನಿಧಿ ! ಯಾಕೆ ಗೊತ್ತಾ ??
ಮಂಗಳೂರು/BBK 11 : ಬಿಗ್‌ಬಾಸ್ ಕನ್ನಡ 11ರಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಮನೆಯವರ ಸಂದೇಶ ಪಡೆಯುವ ಟಾಸ್ಕ್ ಜೊತೆಗೆ ಯುಮುನಾ ಶ್ರೀನಿಧಿ ಮತ್ತೆ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಬಿಗ್‌ಬಾಸ್ ಕನ್ನಡ 11ರಲ್ಲಿ ಈ ವಾರ ದೀಪಾವಳಿ ಹಬ್ಬದ ಪ್ರಯುಕ್ತ ಮನೆ ಸದಸ್ಯರ ಸಂದೇಶ ಪಡೆಯುವ ಟಾಸ್ಕ್ ನೀಡಲಾಗಿತ್ತು. ಇದರಲ್ಲಿ ಮನೆಯವರು ಮಾಡಿದ ತಪ್ಪಿನಿಂದ ಮಾನಸ ಮತ್ತು ಚೈತ್ರಾ ಕುಂದಾಪುರ ಸಂದೇಶ ಪಡೆಯುವ ಅವಕಾಶ ವಂಚಿತರಾದರು. ಇನ್ನು ಧನ್‌ರಾಜ್ ಕೂಡ ತಾವೇ ಮಾಡಿದ ಮಿಸ್ಟೇಕ್ ನಿಂದ ಮನೆಯವರ ಲೆಟರ್ ಮಿಸ್ ಮಾಡಿಕೊಂಡರು. ಇದಕ್ಕೆ ಕಾರಣ ಏನೆಂದರೆ ಬಝರ್ ಆದಾಗ ಬಿಗ್ ಬಾಸ್ ಮನೆಗೆ ಹೊರಗಿನವರು ಬಂದು ಡಿಸ್ಟರ್ಬ್ ಮಾಡುತ್ತಾರೆ. ಬಿಗ್‌ಬಾಸ್ ಮಾಡುವ ಯಾವುದೇ ಕ್ರಿಯೆಗೆ ಪ್ರತಿಕ್ರಿಯೆ ನೀಡದಿದ್ದರೆ ಪತ್ರ ಸಿಗುತ್ತದೆ ಎಂಬುದು ಟಾಸ್ಕ್ ನ ನಿಯಮವಾಗಿತ್ತು.
ಲೈಟ್ ಆಫ್ ಆದಾಗ ಸ್ಪರ್ಧಿಗಳು ಗುಡ್ ನೈಟ್ ಬಿಗ್‌ಬಾಸ್ ಎಂದು ಪ್ರತಿಕ್ರಿಯಿಸಿದರು. ಶುಕ್ರವಾರದ ಎಪಿಸೋಡ್ನಲ್ಲಿ ತುಸು ಮುಂಚೆಯೇ ಲೈಟ್ ಆಫ್ ಆದಾಗ ಬಹುತೇಕರಿಗೆ ಶಾಕ್ ಆಯಿತು. ಈಗಲೇ ಮಲಗೇಕಾ ಎಂದು ಕೂಡ ಪ್ರತಿಕ್ರಿಯೆ ನೀಡಿದರು. ಹೀಗಾಗಿ ಮಾಸನಾ ಮತ್ತು ಚೈತ್ರಾ ಅವರಿಗೆ ಸಿಗಬೇಕಿದ್ದ ಮನೆಯವರ ಸಂದೇಶ ಇಬ್ಬರಿಗೆ ಕೈತಪ್ಪಿತು.
ಇನ್ನು ಯುಮುನಾ ಶ್ರೀನಿಧಿ ಮತ್ತೆ ಬಿಗ್‌ಬಾಸ್ ಮೆನೆಗೆ ಎಂಟ್ರಿ ಕೊಟ್ಟರು. ಮನೆಯವ ಪತ್ರ ಪಡೆಯಲು ಗೋಲ್ಡ್ ಸುರೇಶ್ ಮತ್ತು ಮೋಕ್ಷಿತಾ ಪೈ ಅವರಿಗೆ ಟಾಸ್ಕ್ ನೀಡಿದ ಸಂದರ್ಭದಲ್ಲಿ ಯುಮುನಾ ಶ್ರೀನಿಧಿ ಅವರು ಸರ್ಧಿಗಳನ್ನು ಡಿಸ್ಟ್ರಾಕ್ಟ್ ಮಾಡಲು ಕಳುಹಿಸಿದ್ದರು. ಆದರೆ ಯಾರು ಕೂಡಾ ಯಮುನಾ ಬಂದಾಗ ಪ್ರತಿಕ್ರಿಯೆ ನೀಡಲಿಲ್ಲ. ಕೊನೆಗೆ ಟಾಸ್ಕ್ ಮುಕ್ತಾಯವಾದಾಗ ಸುರೇಶ ಅವರ ಲೆಟರ್ ತೆಗೆದುೊಂಡು ಬಂದರು. ಮೋಕ್ಷಿತಾ ಅವರಿಗೆ ಮನೆಯವರಿಂದ ವಿಡಿಯೋ ಸಂದೇಶ ಸಿಕ್ಕಿತು.
BIG BOSS
ಬಿಗ್‌ಬಾಸ್ ಮನೆಗೆ ಲಾಯರ್ ಜಗದೀಶ್ ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತಾರಂತೆ? ಗುಟ್ಟು ಬಿಚ್ಚಿಟ್ಟ ಹಂಸಾ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11ರಿಂದ ನಾಲ್ಕನೇ ಸ್ಪರ್ಧಿಯಾಗಿ ಹಂಸಾ ಅವರು ಆಚೆ ಬಂದಿದ್ದಾರೆ. ನಾಲ್ಕು ವಾರಗಳವರೆಗೆ ಬಿಗ್‌ಬಾಸ್ ಮನೆಯಲ್ಲಿ ಕಾಲ ಕಳೆದ ಹಂಸಾ ಅವರು ಕೊನೆಯ ಕ್ಷಣದಲ್ಲಿ ದೊಡ್ಮನೆಯಿಂದ ಔಟ್ ಆಗಿದ್ದಾರೆ.
ಇನ್ನು, ಬಿಗ್‌ಬಾಸ್ ಮನೆಯಿಂದ ಆಚೆ ಬಂದ ಕೂಡಲೇ ಸ್ಪರ್ಧಿಗಳ ಬಗ್ಗೆ ಅದರಲ್ಲೂ ಲಾಯರ್ ಜಗದೀಶ್ ಅವರ ಬಗ್ಗೆ ಕೆಲವೊಂದು ವಿಚಾರದ ಬಗ್ಗೆ ಮಾತಾಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿದ್ದಾಗ ಹಂಸಾ ಹಾಗೂ ಲಾಯರ್ ಜಗದೀಶ್ ಒಳ್ಳೆಯ ಸ್ನೇಹಿತರಾಗಿದ್ದರು. ಗಲಾಟೆ ಮಾಡುತ್ತಾ ಮಾಡುತ್ತಾ ಒಳ್ಳೆಯ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಬಳಿಕ ಕಿಚ್ಚ ಸುದೀಪ್ ಮುಂದೆಯೂ ಈ ಇಬ್ಬರು ಡ್ಯಾನ್ಸ್ ಮಾಡಿ ವೀಕ್ಷಕರ ಮೂಖದಲ್ಲಿ ನಗು ಹುಟ್ಟಿಸಿದ್ದರು.
ಆದರೆ ಅದು ಜಾಸ್ತಿ ದಿನಗಳ ಕಾಲ ಉಳಿಯಲಿಲ್ಲ. ಲಾಯರ್ ಜಗದೀಶ್ ಅವರು ಮಹಿಳಾ ಸ್ಪರ್ಧಿಗಳಿಗೆ ಬೈದಿದ್ದಕ್ಕೆ ಬಿಗ್‌ಬಾಸ್ ಮನೆಯಿಂದ ಔಟ್ ಆಗಿದ್ದರು. ಅಲ್ಲದೇ ಲಾಯರ್ ಜಗದೀಶ್ ಅವರನ್ನು ತಳ್ಳಿದ ಕಾರಣಕ್ಕೆ ರಂಜಿತ್ ಅವರನ್ನು ಆಚೆ ಕಳುಹಿಸಲಾಗಿತ್ತು. ಇನ್ನೂ ನ್ಯೂಸ್ಫಸ್ಟ್ ಸಂದರ್ಶನದಲ್ಲಿ ಈ ಬಗ್ಗೆ ಮಾತಾಡಿದ ಹಂಸ ಅವರು ಲಾಯರ್ ಜಗದೀಶ್ ಅವರ ಮತ್ತೆ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡಬೇಕು ಅಂತ ಹೇಳಿದ್ದಾರೆ.
ನನಗೆ ಬಿಗ್‌ಬಾಸ್ ಮನೆಯಲ್ಲಿ ಅವರ ಜೊತೆಗೆ ಮಾತನಾಡಲು ಅವಕಾಶ ಸಿಗಲಿಲ್ಲ. ಈಗ ಆಚೆ ಬಂದಿದ್ದೀನಿ. ಅವರು ಮನೆಗೆ ಹೋಗ್ತೀನಿ. ಜಗದೀಶ್ ಅವರ ಜೊತೆಗೆ ಮಾತಾಡಬೇಕು. ಯಾಕೆ ನನ್ನ ಬಗ್ಗೆ ಹಾಗೇ ಹೇಳಿದ್ರಿ ಅಂತ ಪ್ರಶ್ನೆ ಮಾಡ್ತೀನಿ. ಬಿಗ್‌ಬಾಸ್ ಮನೆಗೆ ಜಗದೀಶ್ ಅವರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಗೆಲ್ಲುತ್ತಾರೆ. ಜಗದೀಶ್ ಅವರು ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟು ಬಂದ್ರೆ ಸಖತ್ ಮಜಾ ಇರುತ್ತೆ. ನನಗೆ ಅನಿಸುತ್ತೆ ಜಗದೀಶ್ ಅವರು ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತಾರೆ. ಮಾತಲ್ಲಿ ಸ್ವಲ್ಪ ಹಿಡಿತವಿದ್ದರೆ ಜಗದೀಶ್ ಅವರೇ ಬಿಗ್‌ಬಾಸ್ ವಿನ್ನರ್ ಆಗ್ತಾರೆ ಅಂತ ಹೇಳಿದ್ದಾರೆ.
- LATEST NEWS6 days ago
ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ʼಡಿಜಿಟಲ್ ಕಾಂಡೋಮ್ʼ !! ಬಳಕೆ ಹೇಗೆ ?
- BIG BOSS7 days ago
BBK 11 : ಸೃಜನ್ ಲೊಕೇಶ್ ಜೊತೆ ಬಂದ ಹೊಸ ಕಾರಲ್ಲಿ ಹೊರ ಹೊಗೋದು ಯಾರು ಗೊತ್ತಾ ??
- LATEST NEWS6 days ago
ರೀಲ್ಸ್ ರಾಣಿ ಪತಿ ಕೊ*ಲೆಯಲ್ಲಿ ಮತ್ತೊಂದು ಟ್ವಿಸ್ಟ್ : ಪ್ರತಿಮಾ ಬಳಸಿದ್ದ ವಿಷ ಯಾವುದು ಗೊತ್ತಾ ?
- BIG BOSS7 days ago
BBK 11 : ಹನುಮಂತನ ನಿಜಬಣ್ಣ ಬಯಲು ಮಾಡಿದ ಭಟ್ರು !!