Connect with us

    BIG BOSS

    BBK 11 : ಸೃಜನ್ ಲೊಕೇಶ್ ಜೊತೆ ಬಂದ ಹೊಸ ಕಾರಲ್ಲಿ ಹೊರ ಹೊಗೋದು ಯಾರು ಗೊತ್ತಾ ??

    Published

    on

    BBK 11 : ಬಿಗ್ ಬಾಸ್ ಕನ್ನಡ ಶೋ ನಲ್ಲಿ ವಾರದ ಕೊನೆಯಲ್ಲಿ ಕಿಚ್ಚನ ಜೊತೆಗೆ ಪಂಚಾಯತಿ ನಡೆಯುತ್ತೆ. ಆದ್ರೆ ಈ ವಾರ ಸುದೀಪ್ ಬಂದಿಲ್ಲ. ಹಾಗಾಗಿ ಶನಿವಾರದ ಎಪಿಸೋಡ್​ಗೆ ನಿರ್ದೇಶಕ ಯೋಗರಾಜ್ ಭಟ್ ಮನೆಗೆ ಬಂದಿದ್ದರು. ಇನ್ನು ಭಾನುವಾರದ ಎಪಿಸೋಡ್​ಗೆ ಹೊಸ ಅತಿಥಿ ಬಂದಿದ್ದು ತಮ್ಮೊಟ್ಟಿಗೆ ಕಾರುಗಳನ್ನು ಸಹ ಕರೆತಂದಿದ್ದಾರೆ.

    ಕಳೆದ ಶನಿವಾರ ಸುದೀಪ್ ಅವರ ತಾಯಿ ಸರೋಜಮ್ಮ ನಿಧನರಾದ ಕಾರಣ ಸುದೀಪ್ ಆ ನಂತರದ ತಮ್ಮ ಎಲ್ಲ ಚಿತ್ರೀಕರಣ, ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ. ಈ ವೀಕೆಂಡ್​ನ ವಾರದ ಪಂಚಾಯಿತಿಗೆ ಸಹ ಸುದೀಪ್ ಬಂದಿಲ್ಲ. ಹಾಗಾಗಿ ಬಿಗ್​ಬಾಸ್ ಆಯೋಜಕರು ಇಬ್ಬರು ಅತಿಥಿಗಳನ್ನು ಮನೆಯ ಒಳಕ್ಕೆ ಕಳಿಸಿದ್ದಾರೆ. ಶನಿವಾರದ ಎಪಿಸೋಡ್​ಗೆ ನಿರ್ದೇಶಕ ಯೋಗರಾಜ್ ಭಟ್ ಅವರು ಬಂದಿದ್ದರು. ಮನೆಯ ಸದಸ್ಯರ ಕೈಲಿ ಕೆಲವು ತಮಾಷೆಯ ಟಾಸ್ಕ್​ಗಳನ್ನು ಮಾಡಿದ್ದರು. ಕೆಲವರಿಗೆ ಬುದ್ಧಿವಾದ ಹೇಳಿದ್ದರು. ಇದೀಗ ಭಾನುವಾರದ ಎಪಿಸೋಡ್​ಗೆ ಸೃಜನ್ ಬಂದಿದ್ದಾರೆ.

    ಈ ಹಿಂದೆ ಸೃಜನ್ ಸ್ಪರ್ಧಿಯಾಗಿ ಬಿಗ್‌ಬಾಸ್‌ಗೆ ಬಂದಿದ್ದರು, ಆದರೆ ಈಗ ಅತಿಥಿಯಾಗಿ ಬಂದಿದ್ದಾರೆ. ಖಾಲಿ ಕೈಯಲ್ಲಿ ಬಾರದೆ ತಮ್ಮೊಡನೆ ದುಬಾರಿ ಟಾಟಾ ಕರ್ವ್ ಕಾರುಗಳನ್ನು ತಂದಿದ್ದರು. ಮನೆಗೆ ಬಂದಿದ್ದ ಕಾಲಿ ಕಾರುಗಳು ಎಲಿಮಿನೇಟ್ ಆಗಲಿರುವ ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿವೆ. ಆದರೆ ಆ ವ್ಯಕ್ತಿ ಯಾರು ಎಂದು ಇವತ್ತಿನ ಎಪಿಸೋಡ್‌ನಲ್ಲಿ ಕಾದು ನೋಡಬೇಕಷ್ಟೇ.

    ಮುಖ್ಯವಾಗಿ ಬಿಗ್‌ಬಾಸ್ ಮನೆಗೆ ಬಂದ ಸೃಜನ್ ಮೊದಲಿಗೆ ಟಾಸ್ಕ್ ನೀಡಿ ಕೆಲವು ತಾಷೆ ಆಟಗಳನ್ನೂ ಆಡಿದ್ದಾರೆ. ಬಳಿಕ ಮನೆಯಿಂದ ಯಾರು ಹೊರಹೋಗಬೇಕು ಹಾಗೂ ಯಾಕೆ ? ಎಂಬ ಸೂಕ್ತ ಕಾರಣ ಸ್ಪರ್ಧಿಗಳಿಗೆ ನೀಡಿದ್ದಾರೆ. ಐಶ್ವರ್ಯ ಸೇರಿದಂತೆ ಇನ್ನೂ ಹಲವರು ವಿಕ್ರಮ ಹೆಸರು ಹೇಳಿದ್ದಾರೆ. ಒಬ್ಬೊಬ್ಬರ ಹೆಸರು ಕೆಳಿ ಬಂದಿದ್ದು, ಕೊನೆಗೆ ಮತಗಲ ಆಧಾರದಲ್ಲಿ ಒಬ್ಬ ಸ್ಪರ್ಧಿಯನ್ನು ಇಂದು ಬಿಗ್‌ಬಾಸ್ ಮನೆಯಿಂದ ಹೊರ ಹಾಕಲಿದೆ.

    BIG BOSS

    BBK11: ಬಿಗ್​ಬಾಸ್​ನಲ್ಲಿ ಹೊಸ ಲವ್ ಕಹಾನಿ.. ತ್ರಿವಿಕ್ರಮ್ ಪ್ರೀತಿ ಬಲೆಗೆ ಬಿದ್ರಾ ಈ ಸ್ಪರ್ಧಿಗಳು..?

    Published

    on

    ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ 11ರ ಸೀಸನ್‌ 4 ವಾರಗಳನ್ನ ಮುಗಿಸಿ 5ನೇ ವಾರದತ್ತ ಸಾಗುತ್ತಿದೆ. ಕಳೆದ ವಾರ ಕಿಚ್ಚ ಸುದೀಪ್ ಅವರ ಅನುಪಸ್ಥಿತಿ ಬಿಗ್‌ ಬಾಸ್ ಪ್ರೇಕ್ಷಕರಿಗೆ ಕಾಡಿತ್ತು. ಸದ್ಯ ಅವರು ವಾರದ ಪಂಚಾಯತಿಗೆ ಆಗಮಿಸಿ ಕೆಲ ಸ್ಪರ್ಧಿಗಳಿಗೆ ಮಾತಿನ ಏಟು ಕೊಟ್ಟಿದ್ದು ವೈಲ್ಡ್​ ಕಾರ್ಡ್​ ​ ಎಂಟ್ರಿಯಾಗಿದ್ದ ಹನುಮಂತಗೆ ಕ್ಲಾಪ್ ಮಾಡಿದ್ದಾರೆ. ಇದೆಲ್ಲದರ ನಡುವೆ ಇಂದಿನ ಪಂಚಾಯತಿ ಫುಲ್ ತಮಾಷೆ, ನಗುವಿನಲ್ಲೇ ಕಳೆಯಬಹುದು.

    ಬಿಗ್​ಬಾಸ್​ನಲ್ಲಿ ಲವ್ ಕಹಾನಿ ನಡೆಯುತ್ತಿದೆ. ಅದು ಒಬ್ಬರನ್ನೇ ಇಬ್ಬರು ಪ್ರೀತಿ ಮಾಡಬೇಕು ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಸದ್ಯ ಇದರ ಗಮ್ಮತ್ತು ಏನೆಂಬುದು ಇಲ್ಲಿದೆ. ಮಂಜು ಅವರು ಭವ್ಯ ರೀತಿಯಲ್ಲಿ, ಅದರಂತೆ ಧನರಾಜ್ ಅವರು ಭನ್ಯಾ ರೀತಿಯಲ್ಲಿ ತ್ರಿವಿಕ್ರಮ್​ರನ್ನ ಲವ್ ಮಾಡಬೇಕು ಎಂದು ತಮಾಷೆಯಾಗಿ ಕಿಚ್ಚ ಹೇಳಿದ್ದರು. ಇದಕ್ಕೆ ಮಸ್ತ್ ಕಾಮಿಡಿ ಮಿಕ್ಸ್ ಮಾಡಿ ಪರ್ಫಾಮೆನ್ಸ್ ನೀಡಿರುವ ಮಂಜು, ಧನರಾಜ್ ತ್ರಿವಿಕ್ರಮ್​ಗೆ ಕೀಟಲೆ ಕೊಟ್ಟಿದ್ದಾರೆ.

    ತ್ರಿವಿಕ್ರಮ್​ಗಾಗಿ ಧನರಾಜ್ ಹಾಗೂ ಮಂಜು ಕಿತ್ತಾಡುವುದು ಸಖತ್ ಮಜವಾಗಿ ಇದೆ. ನಾನು ಇಲ್ಲಿವರೆಗೂ ಒಂದು ವಿಷ್ಯ ಹೇಳಿಲ್ಲ. ಹೊಟ್ಟೆಯಲ್ಲಿ ಒಂದು ಮಗು ಇದೆ ಎಂದು ಧನರಾಜ್ ಹೇಳುತ್ತಿದ್ದಂತೆ ಎಲ್ಲ ಸ್ಫರ್ಧಿಗಳು ಹೊಟ್ಟೆ ಹುಣ್ಣು ಆಗುವಂತೆ ನಕ್ಕಿದ್ದಾರೆ. ಇದಕ್ಕೆ ಪ್ರತಿಯಾಗಿ ತ್ರಿವಿಕ್ರಮ್​ ಹೊಟ್ಟೆಯಲ್ಲಿರುವುದು ನಂದೇ ಸರ್ ಎಂದು ನಗುತ್ತಲೇ ಸುದೀಪ್ ಅವರಿಗೆ ಹೇಳಿದ್ದಾರೆ. ಇದಕ್ಕೆ ಸಖತ್ ಟಾಂಗ್ ಕೊಟ್ಟ ಸುದೀಪ್ ಹೊಟ್ಟೆಯಲ್ಲಿ ಇರೋದು ನಂದೇ ಎಂದು ಕೈ ಎತ್ತಿದ್ರಿ, ಆದರೆ ಪಕ್ಕದಲ್ಲಿ ಹಿಡಿದಿರೋ ಕೈ ಮಾತ್ರ ಬಿಡುತ್ತಿಲ್ಲ ಅಂತ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಒಂದಂತೂ ನಿಜ ಇವತ್ತಿನ ಎಪಿಸೋಡ್ ಸಖತ್ ಕಾಮಿಡಿಯಿಂದ ಕೂಡಿರಲಿದೆ ಎಂದು ರಿಲೀಸ್ ಆದ ವಿಡಿಯೋ ಹೇಳುತ್ತಿದೆ.

    Continue Reading

    BIG BOSS

    BBK11 : ಬಿಗ್‌ಬಾಸ್ ವೇದಿಕೆಯಲ್ಲಿ ತಾಯಿಯನ್ನು ನೆನೆದು ಕಣ್ಣಿರಿಟ್ಟ ಕಿಚ್ಚ

    Published

    on

    ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಶೋ ನಡೆಸಿಕೊಡುವ ಕಿಚ್ಚ ಸುದೀಪ್ ವೇದಿಕೆಯಲ್ಲೇ ತಮ್ಮ ತಾಯಿಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

    ತಾಯಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೂ, ಕರ್ತವ್ಯ ನಿಷ್ಠಬಿಡದೆ ಕಿಚ್ಚ ಸುದೀಪ್‌ ಬಿಗ್‌ ಬಾಸ್‌ ಶೋ ನಡೆಸಿಕೊಟ್ಟಿದ್ದರು. ತಾಯಿ ನಿಧನ ಹೊಂದಿದ ದಿನದಿಂದ ಸುದೀಪ್‌ ನೋವಿನಿಂದ ಕುಗ್ಗಿದ್ದಾರೆ.

    ಒಂದು ವಾರ ಬಿಗ್‌ ಬಾಸ್‌ ಕಾರ್ಯಕ್ರಮಕ್ಕೂ ಬಾರದ ಕಿಚ್ಚ ಈ ವಾರ ಬಿಗ್‌ ಬಾಸ್‌ ವೇದಿಕೆಗೆ ಬಂದಿದ್ದಾರೆ. ಈ ವೇಳೆ ಅವರು ಬಿಗ್‌ ಬಾಸ್‌ ವೇದಿಕೆಯಲ್ಲೇ ತಾಯಿಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

    ‘ಕಿಚ್ಚ ಅವರ ಮುಂದೆ ಅವರ ತಾಯಿ ಫೋಟೋವನ್ನು ಹಾಕಿ, ಪ್ರೇಕ್ಷಕರನ್ನು ರಂಜಿಸುವ ʼಮಾಣಿಕ್ಯʼನಂತಹ ನಾಯಕನನ್ನು ಕರುನಾಡ ಮಡಿಲಿಗೆ ಹಾಕಿ, ತನ್ನ ಪ್ರೀತಿಯನ್ನು ಮನೆ ಮನೆಯ ಜೊತೆ ಹಂಚಿಕೊಂಡ ನಿಮ್ಮ ತಾಯಿಯ ಅಗಲಿಕೆ ಭರಿಸಲಾರದ ಭಾರ’ ಎನ್ನುವ ಧ್ವನಿಯನ್ನು ಹಿನ್ನೆಲೆಯಲ್ಲಿ ಹಾಕಲಾಗಿದೆ.

    ತಾಯಿಯ ಭಾವಚಿತ್ರವನ್ನು ನೋಡುತ್ತಾ ಕಿಚ್ಚ ನಿಂತಲ್ಲೇ ನಿಂತು ಮಾತು ಬಾರದೆ, ನೋವನ್ನು ನುಂಗಿ ಕಣ್ಣೀರಿಟ್ಟಿದ್ದಾರೆ.

    ಇಡೀ ಬಿಗ್‌ ಬಾಸ್‌ ಮನೆ ಸುದೀಪ್‌ ತಾಯಿಯ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದೆ. ಮನೆಯೊಳಗಿನ ಸ್ಪರ್ಧಿಗಳು ಭಾವುಕರಾಗಿದ್ದಾರೆ.

    ಅಕ್ಟೋಬರ್‌ 20 ರಂದು ಸುದೀಪ್‌ ಜೀವನದಲ್ಲಿ ಅತೀ ಹೆಚ್ಚಾಗಿ ಪ್ರೀತಿಸುತ್ತಿದ್ದ ತಾಯಿಯನ್ನು ಕಳೆದುಕೊಂಡಿದ್ದರು. ಸರೋಜಾ ಸಂಜೀವ್‌ ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದರು.

    Continue Reading

    BIG BOSS

    BBK 11 : ಬಿಗ್‌ಬಾಸ್‌ ಮನೆಗೆ ಮತ್ತೆ ಎಂಟ್ರಿ ಕೊಟ್ಟ ಯಮುನಾ ಶ್ರೀನಿಧಿ ! ಯಾಕೆ ಗೊತ್ತಾ ??

    Published

    on

    ಮಂಗಳೂರು/BBK 11 :  ಬಿಗ್‌ಬಾಸ್‌ ಕನ್ನಡ 11ರಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಮನೆಯವರ ಸಂದೇಶ ಪಡೆಯುವ ಟಾಸ್ಕ್‌ ಜೊತೆಗೆ ಯುಮುನಾ ಶ್ರೀನಿಧಿ ಮತ್ತೆ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ಬಿಗ್‌ಬಾಸ್‌ ಕನ್ನಡ 11ರಲ್ಲಿ ಈ ವಾರ ದೀಪಾವಳಿ ಹಬ್ಬದ ಪ್ರಯುಕ್ತ ಮನೆ ಸದಸ್ಯರ ಸಂದೇಶ ಪಡೆಯುವ ಟಾಸ್ಕ್‌ ನೀಡಲಾಗಿತ್ತು. ಇದರಲ್ಲಿ ಮನೆಯವರು ಮಾಡಿದ ತಪ್ಪಿನಿಂದ ಮಾನಸ ಮತ್ತು ಚೈತ್ರಾ ಕುಂದಾಪುರ ಸಂದೇಶ ಪಡೆಯುವ ಅವಕಾಶ ವಂಚಿತರಾದರು. ಇನ್ನು ಧನ್‌ರಾಜ್ ಕೂಡ ತಾವೇ ಮಾಡಿದ ಮಿಸ್ಟೇಕ್‌ ನಿಂದ ಮನೆಯವರ ಲೆಟರ್‌ ಮಿಸ್‌ ಮಾಡಿಕೊಂಡರು. ಇದಕ್ಕೆ ಕಾರಣ ಏನೆಂದರೆ ಬಝರ್ ಆದಾಗ ಬಿಗ್ ಬಾಸ್ ಮನೆಗೆ ಹೊರಗಿನವರು ಬಂದು ಡಿಸ್ಟರ್ಬ್​ ಮಾಡುತ್ತಾರೆ. ಬಿಗ್‌ಬಾಸ್ ಮಾಡುವ ಯಾವುದೇ ಕ್ರಿಯೆಗೆ ಪ್ರತಿಕ್ರಿಯೆ ನೀಡದಿದ್ದರೆ ಪತ್ರ ಸಿಗುತ್ತದೆ ಎಂಬುದು ಟಾಸ್ಕ್‌ ನ ನಿಯಮವಾಗಿತ್ತು.

    ಲೈಟ್​ ಆಫ್​ ಆದಾಗ ಸ್ಪರ್ಧಿಗಳು ಗುಡ್‌ ನೈಟ್‌ ಬಿಗ್‌ಬಾಸ್‌ ಎಂದು ಪ್ರತಿಕ್ರಿಯಿಸಿದರು. ಶುಕ್ರವಾರದ ಎಪಿಸೋಡ್​ನಲ್ಲಿ ತುಸು ಮುಂಚೆಯೇ ಲೈಟ್ ಆಫ್​ ಆದಾಗ ಬಹುತೇಕರಿಗೆ ಶಾಕ್ ಆಯಿತು. ಈಗಲೇ ಮಲಗೇಕಾ ಎಂದು ಕೂಡ ಪ್ರತಿಕ್ರಿಯೆ ನೀಡಿದರು. ಹೀಗಾಗಿ ಮಾಸನಾ ಮತ್ತು ಚೈತ್ರಾ ಅವರಿಗೆ ಸಿಗಬೇಕಿದ್ದ ಮನೆಯವರ ಸಂದೇಶ ಇಬ್ಬರಿಗೆ ಕೈತಪ್ಪಿತು.

    ಇನ್ನು ಯುಮುನಾ ಶ್ರೀನಿಧಿ ಮತ್ತೆ ಬಿಗ್‌ಬಾಸ್‌ ಮೆನೆಗೆ ಎಂಟ್ರಿ ಕೊಟ್ಟರು. ಮನೆಯವ ಪತ್ರ ಪಡೆಯಲು ಗೋಲ್ಡ್‌ ಸುರೇಶ್ ಮತ್ತು ಮೋಕ್ಷಿತಾ ಪೈ ಅವರಿಗೆ ಟಾಸ್ಕ್‌ ನೀಡಿದ ಸಂದರ್ಭದಲ್ಲಿ ಯುಮುನಾ ಶ್ರೀನಿಧಿ ಅವರು ಸರ್ಧಿಗಳನ್ನು ಡಿಸ್ಟ್ರಾಕ್ಟ್ ಮಾಡಲು ಕಳುಹಿಸಿದ್ದರು. ಆದರೆ ಯಾರು ಕೂಡಾ ಯಮುನಾ ಬಂದಾಗ ಪ್ರತಿಕ್ರಿಯೆ ನೀಡಲಿಲ್ಲ. ಕೊನೆಗೆ ಟಾಸ್ಕ್‌ ಮುಕ್ತಾಯವಾದಾಗ ಸುರೇಶ ಅವರ ಲೆಟರ್‌ ತೆಗೆದುೊಂಡು ಬಂದರು. ಮೋಕ್ಷಿತಾ ಅವರಿಗೆ ಮನೆಯವರಿಂದ ವಿಡಿಯೋ ಸಂದೇಶ ಸಿಕ್ಕಿತು.

    Continue Reading

    LATEST NEWS

    Trending