Connect with us

LATEST NEWS

ಮಹಾತ್ಮಾ ಗಾಂಧಿ ಅವಹೇಳನಗೈದ ಕಾಳಿಚರಣ್ ಮಹಾರಾಜ್ ಅರೆಸ್ಟ್

Published

on

ರಾಯಪುರ: ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದಕ್ಕಾಗಿ  ರಾಯಪುರ ಪೊಲೀಸರು ಕಾಳಿಚರಣ್ ಮಹಾರಾಜ್ ಅವರನ್ನು ಬಂಧಿಸಿದ್ದಾರೆ.


ಛತ್ತೀಸ್ ಗಢದಲ್ಲಿ ಡಿಸೆಂಬರ್ 26 ರಂದು ನಡೆದ ಧರ್ಮ ಸಂಸದ್ ನಲ್ಲಿ ಗಾಂಧೀಜಿ ಅವರನ್ನು ಹತ್ಯೆ ಮಾಡಿದ್ದ ನಾಥೂರಾಂ ಗೂಡ್ಸೆ ಅವರನ್ನು ಹೊಗಳುವಾಗ ಕಾಳಿ ಚರಣ್ ಮಹಾತ್ಮ ಗಾಂಧೀಜಿ ವಿರುದ್ದ ಅವಹೇಳನಾಕಾರಿ ಪದ ಬಳಸಿದ್ದರು.
ನೌಪದ್ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿರುವ ಮಹಾರಾಷ್ಟ್ರದ ಸಚಿವ ಜೀತೇಂದ್ರ ಅವದ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ವಿರುದ್ಧ ಕಾಳಿಚರಣ್ ಸ್ವಾಮೀಜಿ ಬಳಸಿರುವ ಪದ ತುಂಬಾ ನೋವುಂಟು ಮಾಡಿದೆ ಎಂದು ಹೇಳಿದ್ದರು

LATEST NEWS

ಐವರು ಮೆಡಿಕಲ್ ವಿದ್ಯಾರ್ಥಿಗಳು ನೀರುಪಾಲು…!

Published

on

ಮಂಗಳೂರು ( ಕನ್ಯಾಕುಮಾರಿ ) : ಮದುವೆ ಸಮಾರಂಭಕ್ಕೆಂದು ಕನ್ಯಾಕುಮಾರಿಗೆ ತೆರಳಿದ್ದ ಐವರು ಮೆಡಿಕಲ್ ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಅಸು ನೀಗಿದ್ದಾರೆ. ಮದುವೆಗೆ ತೆರಳಿದ್ದ ಸ್ನೇಹಿತರು ಲೇಮುರ್ ಬೀಚ್‌ನಲ್ಲಿ ಈಜಲು ಇಳಿದಾಗ ಈ ಧುರ್ಘಟನೆ ಸಂಭವಿಸಿದೆ. ಒಟ್ಟು ಎಂಟು ವಿದ್ಯಾರ್ಥಿಗಳು ಸಮುದ್ರಲ್ಲಿ ಈಜಲು ಹೋಗಿದ್ದು ಮೂವರನ್ನು ಸ್ಥಳಿಯರು ರಕ್ಷಣೆ ಮಾಡಿದ್ದಾರೆ. ಎಲ್ಲರೂ ತಿರುಚಿನಪಳ್ಳಿಯಲ್ಲಿರುವ ಎಸ್‌ಆರ್‌ಎಂ ಮೆಡಿಕಲ್ ಕಾಲೇಜಿನವರು ಎಂದು ಮಾಹಿತಿ ಲಭ್ಯವಾಗಿದೆ. ತಂಜಾವೂರಿನ ಚಾರುಕವಿ, ನೇಯ್ವೇಲಿಯ ಗಾಯತ್ರಿ, ಕನ್ಯಾಕುಮಾರಿಯ ಸರ್ವದರ್ಶಿತ್, ದಿಂಡಿಗಲ್‌ನ ಪ್ರವೀಣ್ ಸ್ಯಾಮ್ ಹಾಗೂ ಆಂದ್ರದ ವೆಂಕಟೇಶ್‌ ನೀರುಪಾಲದ ಮೆಡಿಕಲ್ ವಿದ್ಯಾರ್ಥಿಗಳಾಗಿದ್ದಾರೆ. ಇಂಟರ್ನ್‌ಗಳಾಗಿದ್ದ ಕರೂರಿನ ನೇಶಿ, ಥೆಂಗಿಯ ಪ್ರಿಯಾಂಕಾ ಹಾಗೂ ಮದುರೈನ ಶರಣ್ಯ ಎಂಬ ಯುವತಿಯರನ್ನು ರಕ್ಷಿಸಲಾಗಿದೆ

ನಿಶೇಧವಿದ್ರೂ ಸಮುದ್ರಕ್ಕೆ ಪ್ರವೇಶ ಮಾಡಿದ್ದರು

ಖಾಸಗಿ ಬೀಚ್‌ ಆಗಿರೋ ಲೆಮುರ್ ಬೀಚ್‌ ಒಳಗೆ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಲಾಗಿತ್ತು. ಇನ್ನು ಭಾನುವಾರದಂದು ಸಮುದ್ರದಲ್ಲಿ ಭಾರಿ ಅಲೆಗಳು ಇದ್ದ ಕಾರಣ ಯಾರೂ ಸಮುದ್ರಕ್ಕೆ ಇಳಿಯಬಾರದು ಅನ್ನೋ ಎಚ್ಚರಿಕೆ ನೀಡಲಾಗಿತ್ತು. ಹೀಗಿದ್ರೂ ಇವರು ಸಮುದ್ರಕ್ಕೆ ಹೇಗೆ ಹೋದ್ರು ಅನ್ನೋದು ತನಿಖೆ ನಡೆಸಲಾಗುತ್ತಿದೆ. ಮದುವೆಗೆ ಬಂದಿದ್ದ ಸ್ನೇಹಿತರೆಲ್ಲ ಬೇರೆ ಬೇರೆ ಗುಂಪುಗಳಾಗಿ ಚದುರಿ ಹೋಗಿದ್ದು, ಈ ಎಂಟು ಜನ ವಿದ್ಯಾರ್ಥಿಗಳು ಸಮುದ್ರ ಕಿನಾರೆ ಬಂದು ಸಮುದ್ರಕ್ಕೆ ಇಳಿದಿದ್ದಾರೆ.

ಕೋರ್ಸು ಮುಗಿಸುವ ಹಂತದಲ್ಲಿ ನಡೆಯಿತು ದುರ್ಘಟನೆ

ಈ ವಿದ್ಯಾರ್ಥಿಗಳ ಕೋರ್ಸ್‌ ಇನ್ನೇನು ಕೆಲವೇ ದಿನಗಳಲ್ಲಿ ಮುಗಿದು ಎಲ್ಲರೂ ವೈದ್ಯರಾಗುವ ಕನಸು ಕಾಣುತ್ತಿದ್ದರು. ಯಾವ ಆಸ್ಪತ್ರೆಯಲ್ಲಿ ಇಂಟರ್ನ್‌ಶಿಪ್‌ ಮಾಡಬೇಕು, ಯಾವ ನಗರಕ್ಕೆ ಹೋದರೆ ಸೂಕ್ತ ಎಂಬ ಕುರಿತು ಅವರ ಮಧ್ಯೆಯೇ ಚರ್ಚೆ ನಡೆಯುತ್ತಿತ್ತು. ಅವರ ಪೋಷಕರು ಕೂಡ ನೂರಾರು ಕನಸು ಕಂಡಿದ್ದರು. ಆದರೆ, ಮದುವೆಗೆ ಹೋದವರು, ಮದುವೆ ಮುಗಿಸಿ ನೇರ ಮನೆಗೆ ಬಂದಿದ್ರೆ ಎಲ್ಲವೂ ಎನಿಸಿದಂತೆ ನಡೆಯುತ್ತಿತ್ತು. ಆದ್ರೆ ವಿಧಿ ಇವರ ಎಲ್ಲಾ ಕನಸುಗಳನ್ನ ಕಿತ್ತುಕೊಂಡಿದೆ.

Continue Reading

LATEST NEWS

ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್‌ ಪ್ರಕರಣ; ದೇವೇಗೌಡ, ಕುಮಾರಸ್ವಾಮಿ ಹೆಸರು ಬಳಸದಂತೆ ನಿರ್ಬಂಧ..!

Published

on

ಬೆಂಗಳೂರು: ಹಾಸನದ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್‌ ಪ್ರಕರಣದಲ್ಲಿ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೆಸರು ಬಳಸದಂತೆ ಬೆಂಗಳೂರಿನ ನ್ಯಾಯಾಲಯ ನಿರ್ಬಂಧ ಹೇರಿದೆ.

ಪ್ರಜ್ವಲ್ ರೇವಣ್ಣ ಪ್ರಕರಣ ; ವೀಡಿಯೋ ಹರಿಬಿಟ್ಟ ಕಾರ್ತಿಕ್ ನಾಪತ್ತೆ! ಮಲೇಷ್ಯಾಕ್ಕೆ ಹೋಗಿರುವ ಶಂಕೆ

ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮಗಳು ತಮ್ಮ ಹೆಸರು ಬಳಸುವುದನ್ನು ನಿರ್ಬಂಧಿಸುವಂತೆ ಕೋರಿ‌ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಎಚ್. ಡಿ ದೇವೇಗೌಡ ಮತ್ತು ಎಚ್. ಡಿ. ಕುಮಾರಸ್ವಾಮಿ ಹೆಸರು ಬಳಸಂತೆ ಮಾಧ್ಯಮಗಳು, ಪತ್ರಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ. ‘ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ. ಮಾಧ್ಯಮಗಳಲ್ಲಿ ನಮ್ಮ ಹೆಸರು ಬಳಸುವುದರಿಂದ ತಮ್ಮ ಘನತೆ, ಗೌರವಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ಮಧ್ಯಂತರ ತಡೆಯಾಜ್ಞೆ ನೀಡಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದರು.‌ ಮನವಿ ಆಲಿಸಿದ ನ್ಯಾಯಾಧೀಶರು ಮಾಧ್ಯಮಗಳು ಸತ್ಯಕ್ಕೆ ದೂರವಾದ, ಆಧಾರ ರಹಿತ ಸುದ್ದಿಗಳನ್ನು ಅರ್ಜಿದಾರರ ವಿರುದ್ಧ ಪ್ರಸಾರ ಮಾಡದಂತೆ ನಿರ್ಬಂಧ‌ ವಿಧಿಸಿ ಪ್ರತಿವಾದಿಗಳಿಗೆ ಸಮನ್ಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದ್ದಾರೆ.

 

Continue Reading

FILM

ಅರೆಬೆತ್ತಲೆ ಫೊಟೊ ಪೋಸ್ಟ್ ಮಾಡಿದ ಸಮಂತಾ..! ಅಸಲಿಯತ್ತೇನು?

Published

on

ಜನಪ್ರಿಯ ನಟಿ ಸಮಂತಾರುತು ಪ್ರಭು  ತಮ್ಮ ಸಿನೆಮಾ ನಟನೆ ಮೂಲಕ ಎಲ್ಲರ ಫೇವರೆಟ್ ಆಗಿದ್ದವರು. ಮುದ್ದು ಮುಖದ ಚೆಲುವೆಯ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ಈಕೆ ಅನಾರೋಗ್ಯಕ್ಕೂ ತುತ್ತಾಗಿದ್ದರು. ಇತ್ತೀಚೆಗೆ ತನ್ನ ಮಾಜಿ ಪತಿಯ ವಿಚಾರಕ್ಕೆ ಸಂಬಂಧಿಸಿ ಹಲವಾರು ವಿಚಾರಗಳಲ್ಲಿ ಸುದ್ದಿಯಲ್ಲಿರುತ್ತಾರೆ.

ಇದೀಗ ಸಮಂತಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತನ್ನ ಖಾತೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಅರೆನಗ್ನ ಫೊಟೋವನ್ನು ಪೋಸ್ಟ್‌ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅದು ಸುಳ್ಳಾಗಿತ್ತು. ಯಾರೋ ಕಿಡಿಗೇಡಿಗಳು ಸಮಂತಾ ಫೊಟೋವನ್ನು ತಿರುಚಿ ಪೋಸ್ಟ್ ಮಾಡಿದ್ದಾರೆ.

ಮುಂದೆ ಓದಿ..; “ಮದುವೆ ಗೌನ್‌”ಗೆ ಮತ್ತೊಂದು ಟಚ್ ಕೊಟ್ಟ ‘ಸಮಂತಾ’..!! ಶಾಕ್‌ನಲ್ಲಿಅಭಿಮಾನಿಗಳು!

ಇನ್ನು ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿರುವ ಸಮಂತಾ ದಿನಕ್ಕೊಂದು ಆರೋಗ್ಯ ಮಾಹಿತಿಯನ್ನು ಪೋಸ್ಟ್ ಮಾಡುತ್ತಾರೆ. ಇತ್ತೀಚೆಗಷ್ಟೇ ಸಮಂತಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ‘ಫಾರ್ ಇನ್‌ಫ್ರಾರೆಡ್ ಸೌನಾ’ ಉಪಯೋಗಗಳು ಎಂದು ಬರೆದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.  ಪೋಸ್ಟ್‌ನಲ್ಲಿ ದೀರ್ಘಕಾಲದ ಕಾಯಿಲೆಗಳು, ಚರ್ಮದ ಸೌಂದರ್ಯ, ದೇಹದ ಕೊಬ್ಬನ್ನು ಕಡಿಮೆ ಮಾಡುವುದು ಮುಂತಾದ ವಿವಿಧ ಉದ್ದೇಶಗಳಿಗಾಗಿ ಜನರು ಬಾತ್‌ ಟಬ್‌ನಲ್ಲಿ ಸ್ವಲ್ಪ ಸಮಯ ಇರುತ್ತಾರೆ ಎಂದು ಬರೆದುಕೊಂಡಿದ್ದರು.

ಅರೆಬೆತ್ತಲೆ ಫೊಟೊ ವೈರಲ್:

ಇನ್ನು ಬಾತ್ ಟಬ್‌ನಲ್ಲಿ ಟವಲ್ ಸುತ್ತಿಕೊಂಡು ಇರುವ ಸಮಂತಾ ಅವರ ಫೊಟೋದ ಜೊತೆಗೆ ಕೆಲವೊಂದು ಹೆಲ್ತ್‌ ಟಿಪ್ಸ್‌ಗಳನ್ನು ಬರೆದು ಪೋಸ್ಟ್ ಮಾಡಿದ್ದರು. ಇದರ ಬೆನ್ನಲೇ ಇನ್ನೊಂದು ಸಮಂತಾ ಅರೆಬೆತ್ತಲೆ ಫೊಟೋ ಪೋಸ್ಟ್ ಮಾಡಿ ಡಿಲೀಟ್ ಮಾಡಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಆದರೆ ಅದರಲ್ಲಿ ಆಕೆಯ ಮುಖ ಕಾಣುತ್ತಿಲ್ಲ. ಅಸಲಿಗೆ ಅದು ನಕಲಿ ಎಂದು ಗೊತ್ತಾಗಿದೆ.  ಸೋಶಿಯಲ್ ಮೀಡಿಯಾದಲ್ಲಿ ಫೇಕ್‌ ಸುದ್ದಿ ಹಬ್ಬಿಸುವವರ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಖುದ್ದು ಸಮಂತಾ ಈ ಫೋಟೊ ಹಾಕಿ ಡಿಲೀಟ್ ಮಾಡಿದ್ದಾರೆ ಎಂದು ಕೆಲವರು ವೈರಲ್ ಮಾಡುತ್ತಿದ್ದಾರೆ. ಆದರೆ ಇದೆಲ್ಲಾ ಸುಳ್ಳು. ಆಕೆಯ ಅಂತಹ ಯಾವುದೇ ಫೋಟೊ ಪೋಸ್ಟ್ ಮಾಡಿಲ್ಲ. ಕಿಡಿಗೇಡಿಗಳು ಈ ರೀತಿ ಫೋಟೊ ವೈರಲ್ ಮಾಡುತ್ತಿದ್ದಾರೆ ಎನ್ನುವ ಚರ್ಚೆಯೂ ನಡೀತಿದೆ. ಒಟ್ಟಾರೆ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಕಾಮೆಂಟ್ಸ್ ಬರುತ್ತಿವೆ.

Continue Reading

LATEST NEWS

Trending