Connect with us

BANTWAL

ಕೋಟೆಕಾರು ಮತ್ತು ವಿಟ್ಲ ಪಟ್ಟಣ ಪಂಚಾಯತ್‌ನಲ್ಲಿ ಅರಳಿದ ಕಮಲ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎರಡೂ ಪಟ್ಟಣ ಪಂಚಾಯತ್ ಗಳ ಫಲಿತಾಂಶ ಪ್ರಕಟವಾಗಿದ್ದು, ಕೋಟೆಕಾರು ಮತ್ತು ವಿಟ್ಲ ಪಟ್ಟಣ ಪಂಚಾಯತ್ ಮತ ಎಣಿಕೆ ಪೂರ್ಣಗೊಂಡಿದೆ. ಈ ಎರಡೂ ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿ ಗೆಲುವನ್ನು ದಾಖಲಿಸಿದೆ.

ವಿಟ್ಲ ಪಟ್ಟಣ ಪಂಚಾಯತ್

ಒಟ್ಟು ವಾರ್ಡ್ – 18
ಬಿಜೆಪಿ – 12
ಕಾಂಗ್ರೆಸ್ – 5
ಎಸ್ ಡಿ ಪಿ ಐ – 1
ಕೋಟೆಕಾರು ಪಟ್ಟಣ ಪಂಚಾಯತ್
ಒಟ್ಟು ವಾರ್ಡ್ – 17
ಬಿಜೆಪಿ – 11
ಕಾಂಗ್ರೆಸ್ – 4
ಎಸ್ ಡಿ ಪಿ ಐ – 1
ಪಕ್ಷೇತರ – 1

ವಿಟ್ಲ ಪಟ್ಟಣ ಪಂಚಾಯತ್‌ ರಿಸಲ್ಟ್‌

1ನೇ ವಾರ್ಡ್‌ನಲ್ಲಿ 828 ಮತ ಚಲಾವಣೆಯಾಗಿದ್ದು, ಕಾಂಗ್ರೆಸ್ ವಿ. ಕೆ. ಮಹಮ್ಮದ್ ಅಶ್ರಫ್ 425 ಮತಗಳನ್ನು ಪಡೆದು ಜಯಗಳಿಸಿದರೆ, ಬಿಜೆಪಿ ಕೃಷ್ಣಪ್ಪ ಗೌಡ 388 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. 15ಮತ ನೋಟಕ್ಕೆ ಚಲಾವಣೆಯಾಗಿದೆ.
2ನೇ ವಾರ್ಡ್ ನಲ್ಲಿ 608 ಮತಚಲಾವಣೆಯಾಗಿದ್ದು, ಬಿಜೆಪಿ ಸಂಗೀತ 316 ಮತ ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಕಮಲಾಕ್ಷಿ 192, ಎಸ್. ಡಿ. ಪಿ. ಐ. : ಆಯಿಷ ಎನ್. 92 ಮತ ಪಡದು ಸೋಲು ಕಂಡಿದ್ದಾರೆ. ನೋಟ 8 ಮತ ಚಲಾವಣೆಯಾಗಿದೆ.
3ನೇ ವಾರ್ಡ್ ನಲ್ಲಿ 637 ಮತಚಲಾವಣೆಯಾಗಿದ್ದು, ಬಿಜೆಪಿ ಸಿ. ಎಚ್. ಜಯಂತ 322 ಮತ ಪಡೆದು ಜಯ ಗಳಿಸಿದ್ದಾರೆ. ಕಾಂಗ್ರೆಸ್ ಶ್ರೀನಿವಾಸ ಶೆಟ್ಟಿ 310 ಮತದು ಸೋಲು ಕಂಡಿದ್ದಾರೆ. ನೋಟ 5 ಮತ ಚಲಾವಣೆಯಾಗಿದೆ.
4ನೇ ವಾರ್ಡ್ ನಲ್ಲಿ 578 ಮತಚಲಾವಣೆಯಾಗಿದ್ದು, ಬಿಜೆಪಿ ರಕ್ಷಿತ 301ಮತ ಗಳಿಸಿ ವಿಜಯಶಾಲಿಯಾಗಿದ್ದಾರೆ. ಕಾಂಗ್ರೆಸ್ ಆಯಿಷಾ 269ಮತ ಪಡೆದು ಸೋಲು ಕಂಡಿದ್ದಾರೆ. ನೋಟ 8ಮತ ಚಲಾವಣೆಯಾಗಿದ್ದಾರೆ.
5ನೇ ವಾರ್ಡ್ ನಲ್ಲಿ 578 ಮತಚಲಾವಣೆಯಾಗಿದ್ದು, ಬಿಜೆಪಿ ವಸಂತ ಕೆ. 314 ಮತ ಗಳಿಸಿ ಜಯಗಳಿಸಿದ್ದಾರೆ. ಕಾಂಗ್ರೆಸ್ ವಸಂತಿ 251 ಮತಗಳಿಸಿ ಸೋಲುಂಡಿದ್ದಾರೆ. ನೋಟ 13 ಮತ ಚಲಾವಣೆಯಾಗಿದೆ.
6ನೇ ವಾರ್ಡ್ ನಲ್ಲಿ 507 ಮತಚಲಾವಣೆಯಾಗಿದ್ದು, ಬಿಜೆಪಿ ವಿಜಯಲಕ್ಷ್ಮಿ 274 ಮತ ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಲೀಲಾವತಿ 226 ಮತ ಪಡೆದು ಸೋಲು ಕಂಡಿದ್ದಾರೆ. ನೋಟ 7 ಮತ ಚಲಾವಣೆಯಾಗಿದೆ.
7ನೇ ವಾರ್ಡ್ ನಲ್ಲಿ 659 ಮತಚಲಾವಣೆಯಾಗಿದ್ದು, ಬಿಜೆಪಿ ರವಿಪ್ರಕಾಶ್ ಯಸ್. 439 ಮತಗಳಿಸಿ ವಿಜಯಶಾಲಿಯಾದರು. ಕಾಂಗ್ರೆಸ್ ಶಿವಪ್ರಸಾದ್ ವಿ. 214 ಮತ ಪಡೆದು ಸೋಲು ಕಂಡಿದ್ದಾರೆ. ನೋಟ 6 ಮತ ಗಳಿಸಿದ್ದಾರೆ.
8ನೇ ವಾರ್ಡ್ ನಲ್ಲಿ 533 ಮತಚಲಾವಣೆಯಾಗಿದ್ದು, ಬಿಜೆಪಿ ಸುನೀತಾ 190 ಮತ ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಸುನೀತ ಕೊಟ್ಯಾನ್ 161, ಎಸ್. ಡಿ. ಪಿ. ಐ  ರಝೀಯಾ 177 ಮತ ಪಡೆದು ಸೋಲುಕಂಡಿದ್ದಾರೆ. ನೋಟ 5 ಮತ ಪಡೆದಿದ್ದಾರೆ.
9ನೇ ವಾರ್ಡ್ ನಲ್ಲಿ 666 ಮತಚಲಾವಣೆಯಾಗಿದ್ದು, ಬಿಜೆಪಿ ಎನ್. ಕೃಷ್ಣ 395 ಮತ ಗಳಿಸಿ ವಿಜಯಿಯಾಗಿದ್ದಾರೆ. ಕಾಂಗ್ರೆಸ್ ಶಿವಪ್ರಸಾದ್ 266 ಮತ ಗಳಿಸಿ ಸೋಲು ಕಂಡಿದ್ದಾರೆ. ನೋಟ 5 ಮತ ಚಲಾವಣೆಯಾಗಿದೆ.
10ನೇ ವಾರ್ಡ್ ನಲ್ಲಿ 594 ಮತಚಲಾವಣೆಯಾಗಿದ್ದು, ಕಾಂಗ್ರೆಸ್ ಪದ್ಮಿನಿ 377 ಮತಗಳಿಸಿ ವಿಜಯವಾಗಿದ್ದಾರೆ. ಬಿಜೆಪಿ ಸುಮತಿ 214ಮತ ಪಡೆದು ಸೋಲು ಕಂಡಿದ್ದಾರೆ. ನೋಟ 3 ಮತ ಚಲಾವಣೆಯಾಗಿದೆ.
11ನೇ ವಾರ್ಡ್ ನಲ್ಲಿ 526 ಮತಚಲಾವಣೆಯಾಗಿದ್ದು, ಬಿಜೆಪಿ ಅರುಣ್ ಎಂ 288 ಮತಗಳನ್ನು ಪಡೆದು ಜಯಗಳಿಸಿದರೆ, ಕಾಂಗ್ರೆಸ್ ರಮಾನಾಥ ವಿ. 213, ಪಕ್ಷೇತರ ಜಾನ್ ಡಿಸೋಜ 15 ಮತ ಪಡೆದು ಸೋಲು ಕಂಡಿದ್ದಾರೆ. ನೋಟ 10 ಚಲಾವಣೆಯಾಗಿದೆ.
12ನೇ ವಾರ್ಡ್ ನಲ್ಲಿ 497 ಮತಚಲಾವಣೆಯಾಗಿದ್ದು, ಬಿಜೆಪಿ ಹರೀಶ್ ಸಿ. ಎಚ್. 332 ಮತಗಳಿಸಿ ವಿಜಯಶಾಲಿಯಾಗಿದ್ದಾರೆ. ಕಾಂಗ್ರೆಸ್ ಎಂ. ಕೆ. ಮೂಸಾ 161 ಮತ ಗಳಿಸಿ ಸೋಲು ಕಂಡಿದ್ದಾರೆ. ನೋಟ 4 ಮತ ಚಲಾವಣೆಯಾಗಿದೆ.
13ನೇ ವಾರ್ಡ್ ನಲ್ಲಿ 608 ಮತಚಲಾವಣೆಯಾಗಿದ್ದು, ಎಸ್.ಡಿ.ಪಿ.ಐ. ಶಾಕೀರ 279 ಮತಗಳಿಸುವ ಮೂಲಕ ಜಯಗಳಿಸಿದ್ದಾರೆ. ಕಾಂಗ್ರೆಸ್ ಅಸ್ಮ ಯು.ಕೆ. 204, ಬಿಜೆಪಿ ಪುಷ್ಪಾ 119 ಮತಗಳಿಸಿ ಸೋಲುಕಂಡಿದ್ದಾರೆ. ನೋಟ 6ಮತಗಳಿಸಿದ್ದಾರೆ.
14ನೇ ವಾರ್ಡ್ ನಲ್ಲಿ 512 ಮತಚಲಾವಣೆಯಾಗಿದ್ದು, ಬಿಜೆಪಿ ಅಶೋಕ್ ಕುಮಾರ್ ಶೆಟ್ಟಿ 242 ಮತಗಳಿಸಿ ಜಯಗಳಿಸಿದ್ದಾರೆ. ಕಾಂಗ್ರೆಸ್ ಮನೋಹರ ಲ್ಯಾನ್ಸಿ ಡಿ ಸೋಜ 144, ಪಕ್ಷೇತರ ಮೋಹನ್ ಸೇರಾಜೆ 125 ಮತ ಪಡೆದು ಸೋಲು ಕಂಡಿದ್ದಾರೆ. ನೋಟ 1ಮತ ಗಳಿಸಿದ್ದಾರೆ.
15ನೇ ವಾರ್ಡ್ ನಲ್ಲಿ 703 ಮತಚಲಾವಣೆಯಾಗಿದ್ದು, ಕಾಂಗ್ರೆಸ್ ಲತಾವೇಣಿ 381ಮತ ಗಳಿಸಿ ಜಯಗಳಿಸಿದ್ದಾರೆ. ಬಿಜೆಪಿ ಸಂಧ್ಯಾಗಣೇಶ್ 319 ಪಡೆದು ಸೋಲುಕಂಡಿದ್ದಾರೆ. ನೋಟ 3 ಮತ ಚಲಾವಣೆಯಾಗಿದೆ.
16ನೇ ವಾರ್ಡ್ ನಲ್ಲಿ 480 ಮತಚಲಾವಣೆಯಾಗಿದ್ದು, ಕಾಂಗ್ರೆಸ್ ಡೀಕಯ್ಯ 247 ಮತ ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಕೃಷ್ಣಪ್ಪ 220ಮತ ಪಡೆದ ಸೋಲು ಕಂಡಿದ್ದಾರೆ. ನೋಟ 13 ಮತಚಲಾವಣೆಯಾಗಿದೆ.
17ನೇ ವಾರ್ಡ್ ನಲ್ಲಿ 749 ಮತಚಲಾವಣೆಯಾಗಿದ್ದು, ಬಿಜೆಪಿ ಕರುಣಾಕರ 415ಮತ ಗಳಿಸಿ ಜಯಗಳಿಸಿದ್ದಾರೆ. ಕಾಂಗ್ರೆಸ್ ಶ್ರೀಚರಣ್ 320 ಮತಪಡೆದು ಸೋಲು ಕಂಡಿದ್ದಾರೆ. ನೋಟ 14ಮತ ಚಲಾವಣೆಯಾಗಿದೆ.
18ನೇ ವಾರ್ಡ್ ನಲ್ಲಿ 590 ಮತಚಲಾವಣೆಯಾಗಿದ್ದು ಕಾಂಗ್ರೆಸ್ ಅಬ್ದುಲ್ ರಹಿಮನ್ 352 ಜಯಗಳಿಸಿದ್ದಾರೆ. ಬಿಜೆಪಿ ಕೃಷ್ಣಪ್ಪ ಮೂಲ್ಯ 60,ಎಸ್.ಡಿ.ಪಿ.ಐ. ಸಯ್ಯದ್ ಇಳ್ಯಾಸ್ 173 ಮತಪಡೆದು ಸೋಲು ಕಂಡಿದ್ದಾರೆ. ನೋಟ 5 ಮತ ಗಳಿಸಿದ್ದಾರೆ

BANTWAL

ಬಯಲಾಯ್ತು ಅಕ್ರಮ ಸಂಬಂಧ; ನೇಣಿಗೆ ಶರಣಾದ ವಿವಾಹಿತ!

Published

on

ಪುತ್ತೂರು : ವ್ಯಕ್ತಿಗಳು ಸಾಲಬಾಧೆಯಿಂದಲೋ, ಅನಾರೋಗ್ಯದಿಂದಲೋ ಅಥವಾ ಜೀವನದಲ್ಲಿ ಜಿಗುಪ್ಸೆ ಹೊಂದಿಯೋ ಜೀವಾಂತ್ಯಗೊಳಿಸುವುದನ್ನು ಕಾಣುತ್ತೇವೆ. ಆದರೆ, ಇಲ್ಲೊಬ್ಬ,
ಅಕ್ರಮ ಪ್ರೇಮ ಸಂಬಂಧದ ಹಿನ್ನಲೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪ ಶನಿವಾರ ಘಟನೆ ಸಂಭವಿಸಿದೆ.

ಈಶ್ವರಮಂಗಲ ಸಮೀಪದ ಕತ್ರಿಬೈಲುವಿನ ಪ್ರಶಾಂತ್ ಮುಖಾರಿ (೩೮) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ ತನ್ನ ಮನೆಯಿಂದ ಸುಮಾರು ಒಂದು ಕಿಲೋಮೀಟರ್ ಅಂತರದಲ್ಲಿರುವ ಚಿಮುಣಿಗುಡ್ಡೆ ಎಂಬಲ್ಲಿನ ಗುಡ್ಡದ ರಸ್ತೆ ಬದಿಯಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

 

ಇದನ್ನು ಓದಿ: ಈ ವೀಡಿಯೋವನ್ನು ವೈರಲ್ ಮಾಡುವ ಧೈರ್ಯ ನಿಮ್ಮಲ್ಲಿ ಇದ್ಯಾ ? ವೀಡಿಯೋವೊಂದನ್ನು ಹಂಚಿಕೊಂಡು ಸವಾಲೆಸೆದ ನಟಿ ಜ್ಯೋತಿ ರೈ

ಅಕ್ರಮ ಸಂಬಂಧ ಬಯಲು – ನೇಣಿಗೆ ಶರಣು :

ಪ್ರಶಾoತ್ ಮುಖಾರಿ ಅವರಿಗೆ ಪತ್ನಿ ಮತ್ತು ಎಳೆಯ ವಯಸ್ಸಿನ ಪುತ್ರನಿದ್ದಾನೆ. ಈ ನಡುವೆ ಇನ್ನೊಬ್ಬಳು ಯುವತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ವಿಚಾರ ಬಹಿರಂಗಗೊಂಡಿದ್ದ ಹಿನ್ನೆಲೆಯಲ್ಲಿ ಅವರು ಅಪಮಾನಗೊಂಡು ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ.
ಮೃತರ ಪತ್ನಿ ನೀಡಿರುವ ದೂರಿನಂತೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

BANTWAL

ಕಡಬ : ಸಿಡಿಲು ಬಡಿದು ಓರ್ವ ಸಾವು; ಇಬ್ಬರಿಗೆ ಗಾಯ

Published

on

ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ವರುಣ ಕೃಪೆ ತೋರಿದ್ದಾನೆ. ಇನ್ನೊಂದೆಡೆ ಸಿಡಿಲಾರ್ಭಟಕ್ಕೆ ವ್ಯಕ್ತಿ ಬಲಿಯಾಗಿದ್ದಾರೆ.. ಕಡಬ ತಾಲೂಕಿನಲ್ಲಿ ಸಿಡಿಲು ಬಡಿದು ಓರ್ವ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯಗಳಾಗಿವೆ. ಉತ್ತರ ಪ್ರದೇಶ,ಚೈನ್‌ಪುರ್ ಮೂಲದ ಶ್ರೀಕಿಶುನ್ ಮೃತ ವ್ಯಕ್ತಿ.

ಇದನ್ನು ಓದಿ:ಪುತ್ತೂರಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯುವಕ! 

ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ನದಿ ಬದಿಯ ಶೆಡ್ ನಲ್ಲಿದ್ದ ವೇಳೆ ಶೆಡ್ ಗೇ ಸಿಡಿಲು ಬಡಿದಿದೆ. ಪರಿಣಾಮ ಮರಳು ತೆಗೆಯುವ ಉತ್ತರ ಪ್ರದೇಶ ಮೂಲದ ಕಾರ್ಮಿಕ ಸಾವನ್ನಪ್ಪಿದ್ದಾನೆ.
ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.

Continue Reading

BANTWAL

ಸಾಲದ ಶೂಲಕ್ಕೆ ಜೀವಾಂತ್ಯಗೊಳಿಸಿದ ಯುವಕ…!

Published

on

ಮಂಗಳೂರು : ತಾನು ತಂಗಿದ್ದ ಲಾಡ್ಜ್ ನಲ್ಲಿಯೇ ಅವಿವಾಹಿತ ಯುವಕನೋರ್ವ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡ ‌ಘಟನೆ ಬಿಸಿರೋಡಿನಲ್ಲಿ ನಡೆದಿದೆ.

ಮಂಗಳೂರು ಅತ್ತಾವರ ನಿವಾಸಿ ಪ್ರಜ್ವಲ್ ( 30) ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡ ಯುವಕ. ಮೇ. 5 ರಂದು ಬಿಸಿರೋಡಿನ ಖಾಸಗಿ ಬಸ್ ನಿಲ್ದಾಣದ ಹತ್ತಿರವಿರುವ ಹೋಟೆಲೊಂದರಲ್ಲಿ ರೂಂ ಮಾಡಿದ್ದ. ಈತ ಮೇ.6 ರಂದು ರಾತ್ರಿ ಊಟ ಮುಗಿಸಿ, ಬಾಗಿಲು ಹಾಕಿಕೊಂಡಿದ್ದ. ಮಂಗಖವಾರ ಬೆಳಿಗ್ಗೆ ರೂಂನ ಬಾಗಿಲು ತೆರೆಯದ ಇದ್ದ ಕಾರಣ ಹೋಟೆಲ್ ಸಿಬ್ಬಂದಿ ಕರೆದರೂ ಸ್ಪಂದಿಸಿರಲಿಲ್ಲ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿ ಬಾಗಿಲು ತೆರೆದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಜ್ವಲ್ ಮೃ*ತದೇಹದ ಪತ್ತೆಯಾಗಿದೆ.


ಓನ್ ಲೈನ್ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಪ್ರಜ್ವಲ್ ಇತ್ತೀಚಿನ ದಿನಗಳಲ್ಲಿ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದ ಎನ್ನಲಾಗಿದೆ. ತಾನು ಕೆಲಸ ಮಾಡಿಕೊಂಡಿದ್ದ ಕಂಪೆನಿಯ ಮಾಲಕರಿಂದ 60 ಸಾವಿರ ಸಾಲ ಪಡೆದು ಬಳಿಕ ಹಣ ಹೊಂದಿಸಲಾಗದೆ, ಸರಿಯಾದ ಸಮಯಕ್ಕೆ ಹಿಂದುರುಗಿಸಲಾಗಿಲ್ಲ ಎಂಬ ಕಾರಣಕ್ಕೆ ಕೊರುಗುತ್ತಿದ್ದ ಎಂದು ಹೇಳಲಾಗಿದೆ. ಸಾಲದ ವಿಚಾರವಲ್ಲದೆ ಪ್ರೀತಿಸಿದ ಯುವತಿ ಕೈಕೊಟ್ಟಿದ್ದು, ಪ್ರೇಮ ವೈಫಲ್ಯದ ನೋವಿನಲ್ಲೂ ಇದ್ದ ಎಂದು ವರದಿಯಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

Trending