Saturday, July 2, 2022

ಗಾಯದೊಳಗಿದ್ದ ಕಲ್ಲುಗಳ ಸಮೇತ ಸ್ಟಿಚ್‌ ಹಾಕಿದ ಕಡಬದ ಬೋದಾಳ ಸರ್ಕಾರಿ ವೈದ್ಯರು

ಪುತ್ತೂರು: ಅಪಘಾತದಲ್ಲಿ ದೇಹದೊಳಗೆ ಸೇರಿದ್ದ ಕಲ್ಲು-ಮಣ್ಣನ್ನು ಶುಚಿಗೊಳಿಸಿ ಹೊರತೆಗೆಯದೆ ಅದರ ಮೇಲೆಯೇ ಸ್ಟಿಚ್‌ ಹಾಕಿದ ಕಡಬ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಬೇಜಾವಾಬ್ದಾರಿ ತೋರಿದ ಪರಿಣಾಮ ಗಾಯ ಉಲ್ಬಣಗೊಂಡು ಇದೀಗ ಶಸ್ತ್ರಚಿಕಿತ್ಸೆ ಮೂಲಕ ಕಲ್ಲು ಹೊರತೆಗೆದಿದ್ದಾರೆ.

ಈ ಮೂಲಕ ಸರ್ಕಾರಿ ಸಂಬಳ ಪಡೆದು ತಿಂದು ತೇಗಿ ಪ್ರಾಣದ ಜೊತೆ ಚೆಲ್ಲಾಟವಾಡುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.


ಕಡಬದ ಕೋಡಿಂಬಾಳ ಗ್ರಾಮದ ಕಲ್ಪುರೆ ನಿವಾಸಿ, ಪುರುಷೋತ್ತಮ ಎಂಬುವರು ಏ. 25 ರಂದು ರಾತ್ರಿ ಪತ್ನಿಯೊಂದಿಗೆ ಸಂಬಂಧಿಕರ ಮನೆಗೆಂದು ಹೊರಟಿದ್ದರು. ದಾರಿ ಮಧ್ಯೆ ಅವರ ಸ್ಕೂಟಿ ಸ್ಕಿಡ್ ಆಗಿ ಬಿದ್ದು, ಅವರ ಮೊಣಕಾಲಿಗೆ ಗಾಯವಾಗಿತ್ತು.

ಕೂಡಲೇ ಗಾಯಾಳುವನ್ನು ಸ್ಥಳೀಯರು ಸೇರಿ ಕಡಬ ಸಮುದಾಯ ಆಸ್ಪತ್ರೆಗೆ ಕರೆ ತಂದಿದ್ದರು. ಈ ವೇಳೆ ಆಸ್ಪತ್ರೆಯ ವೈದ್ಯರು ಪರಿಶೀಲಿಸಿ ಗಾಯಕ್ಕೆ ಸ್ಟಿಚ್ ಹಾಕುವಂತೆ ಸೂಚಿಸಿದ್ದರು.

ತಕ್ಷಣ ದಾದಿಯರು ಹಾಗೂ ಸಿಬ್ಬಂದಿ ಗಾಯಕ್ಕೆ ಸ್ಟಿಚ್ ಹಾಕಿ ಮನೆಗೆ ಕಳುಹಿಸಿದ್ದರು.


ಇದಾದ ವಾರದ ಬಳಿಕವೂ ಪುರುಷೋತ್ತಮ ಅವರ ಗಾಯ ಗುಣವಾಗದೆ, ಉಲ್ಬಣಗೊಂಡಿತ್ತು. ಇದರಿಂದ ಅನುಮಾನಗೊಂಡ ಪುರುಷೋತ್ತಮ ಅವರು ಮೇ. 4ರಂದು ಡಯಾಗ್ನಸ್ಟಿಕ್ ಸೆಂಟರ್‌ನಲ್ಲಿ ಗಾಯದ ಎಕ್ಸ್‌ರೇ ತೆಗೆಸಿದ್ದರು.

ನಂತರ ಕ್ಲಿನಿಕ್‌ನಲ್ಲಿದ್ದ ವೈದ್ಯರು ಎಕ್ಸರೇ ಪರಿಶೀಲಿಸಿ ಕೂಡಲೇ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ಪುರುಷೋತ್ತಮ ಅವರು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.


ಆಸ್ಪತ್ರೆಯಲ್ಲಿ ಮೇ 4 ರಂದು ರಾತ್ರಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಈ ವೇಳೆ ವೈದ್ಯರಿಗೆ ಬರೋಬ್ಬರಿ 14 ಕಲ್ಲುಗಳು ದೊರೆತಿದೆ.

ಏ. 25 ರಂದು ಸರ್ಕಾರದಿಂದ ಸಂಬಳ ಪಡೆಯುವ ಆಸ್ಪತ್ರೆಯ ಸಿಬ್ಬಂದಿ ಕಾಟಾಚಾರಕ್ಕೆ ಗಾಯ ಶುಚಿಗೊಳಿಸದೆ ಸ್ಟಿಚ್‌ ಹಾಕಿ ಪ್ರಾಣದ ಜೊತೆ ಚೆಲ್ಲಾಟವಾಡಿದ್ದರು.

ಇವರ ಬೇಜಾಬ್ದಾರಿತನದಿಂದ ಒಂದು ವೇಳೆ ಗಾಯ ಮತ್ತಷ್ಟು ಉಲ್ಬಣಗೊಂಡಿದ್ದರೆ ಕಾಲನ್ನೇ ಕತ್ತರಿಸುವ ಮಟ್ಟಕ್ಕೆ ಹೋಗುತ್ತಿತ್ತು ಅನ್ನುತ್ತಾರೆ ಗಾಯಾಳು ಸಂಬಂಧಿಗಳು.

ಘಟನೆ ಬಗ್ಗೆ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಕಡಬ ಪ್ರತಿಕ್ರಿಯಿಸಿ ಪ್ರಕರಣದ ಕುರಿತು ಸ್ಥಳೀಯ ವೈದ್ಯಾಧಿಕಾರಿಯಿಂದ ಮಾಹಿತಿ ಪಡೆದುಕೊಂಡು ಅಗತ್ಯ ಕ್ರಮಕ್ಕಾಗಿ ಇಲಾಖೆಯ ಉನ್ನತಾಧಿಕಾರಿಗಳಿಗೆ ವರದಿ ಕಳುಹಿಸಿಕೊಡಲಾಗುವುದು ಎಂದಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಬಾಕ್ರಬೈಲಿನ ಗತ್ತಿನ ಗುತ್ತುಮನೆಗಿದೆ 987 ವರ್ಷದ ಇತಿಹಾಸ…

ಮಂಗಳೂರು: ಹಿಂದಿನ ಕಾಲದಲ್ಲಿ 'ಗುತ್ತು ಮನೆ' ಎಂದರೆ ವಿಶೇಷ ತೆರನಾದ ಗೌರವ. ಆ ಮನೆಯವರಿಗೆ ಒಂದು ತೆರನಾದ ಸ್ಥಾನಮಾನ. ಕಾಲ ಅದೆಷ್ಟೇ ಗತಿಸಿ ಹೋದರೂ ಆ ಮನೆಯ ಮೇಲಿನ ಅಭಿಮಾನ, ಮಾನ್ಯತೆ ಒಂದು...

ಮಳೆ ಹಾನಿ ಪರಿಶೀಲಿಸಿದ ಶಾಸಕ ಡಾ. ಭರತ್‌ ಶೆಟ್ಟಿ

ಸುರತ್ಕಲ್‌: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುರಿದ ಭಾರಿ ಮಳೆಯಿಂದ ಕೆಲವು ಪ್ರದೇಶಗಳಲ್ಲಿ ಉಂಟಾಗಿರುವ ಹಾನಿ ಪರಿಶೀಲಿಸಲು ಶಾಸಕರಾದ ಡಾ.ಭರತ್ ಶೆಟ್ಟಿ ನಿನ್ನೆ ಪಾಲಿಕೆ ವ್ಯಾಪ್ತಿಯ ಕೆಲವು ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ...

ವಿಟ್ಲ: ಅಕ್ರಮ ಗಾಂಜಾ ಸಾಗಾಟ-ಮೂವರ ಬಂಧನ

ವಿಟ್ಲ: ಮಾದಕ ವಸ್ತುಗಳಾದ ಎಂಡಿಎಮ್ಎ, ಗಾಂಜಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ವಿಟ್ಲದಲ್ಲಿ ನಡೆದಿದೆ.ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನೆಲ್ಲಿಗುಡ್ಡೆ ನಿವಾಸಿ...