ಮಂಗಳೂರು: ತಾನು ಪ್ರೀತಿಸಿದ ಹುಡುಗಿಯ ಜೊತೆ ಮದುವೆಯಾಗಲು ಸಿದ್ಧತೆ ನಡೆಸಿದ್ದ ವರ ಅದೇ ಯುವತಿಯ ಜೊತೆ ಮದುವೆ ಮಂಟಪದಿಂದಲೇ ಪರಾರಿಯಾಗಿರುವ ಆಶ್ಚರ್ಯಕರ ಘಟನೆ ಮಂಗಳೂರಿನ ಮುಲ್ಕಿಯ ಪಡುಪಣಂಬೂರು ಬಳಿ ನಡೆದಿದೆ.
ತಾನು ಇಷ್ಟಪಟ್ಟ ಹುಡುಗಿಯ ಜೊತೆಗೆ ಮದುವೆಯಾಗಲು ಹೊರಟಿದ್ದ ವರ ಇದ್ದಕಿದ್ದಂತೆ ವದುವಿನ ಜೊತೆ ಓಡಿಹೋಗಿದ್ದಾನೆ. ಇದಕ್ಕೆ ಕಾರಣವೇನೆಂದರೆ ಆತನ ಮೊದಲ ಪತ್ನಿ ಮದುವೆಗೆ ಬಂದಿದ್ದಳು.
ಶಿವಮೊಗ್ಗ-ಮೂಡುಬಿದಿರೆ ರಸ್ತೆಯಲ್ಲಿ ಸಂಚರಿಸುವ ಖಾಸಗಿ ಬಸ್‌ನ ಚಾಲಕ ತೀರ್ಥಹಳ್ಳಿಯ ಯುವಕ ಸಸಿಹಿತ್ಲು ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದ.
ಮದುವೆಗೆ ಕೂಡಾ ರೆಡಿಯಾಗಿದ್ದ ಇವರು ಮದುವೆ ಸಭಾಂಗಣದ ಹೊರಗೆ ನವ ವಧು ವರನ ಫೋಟೋ ಶೂಟಿಂಗ್ ನಡೆಯುತ್ತಿತ್ತು.
ಇದೇ ಸಂದರ್ಭ ಈತನ ಮೊದಲ ಹೆಂಡತಿ ಬಂದು ಮದುವೆಯಲ್ಲಿ ಗಲಾಟೆ ಮಾಡಿದ್ದಾಳೆ.
ತನಗೆ ಒಂದು ಗಂಡು ಮಗುವಿದ್ದು ಈಗ ಮತ್ತೊಂದು ಮದುವೆಯಾಗಲು ಹೊರಟಿದ್ದಾನೆ ಎಂದು ಹೇಳಿದ್ದು, ಕಕ್ಕಾಬಿಕ್ಕಿಯಾದ ವರ ವಧುವಿನ ಜೊತೆ ಎಸ್ಕೇಪ್ ಆಗಿದ್ದಾನೆ.
ಘಟನೆ ಬಗ್ಗೆ ವಧುವಿನ ಪೋಷಕರು ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಅಧಿಕೃತವಾಗಿ ಪ್ರಕರಣ ದಾಖಲಾಗಿಲ್ಲ.