ತುಮಕೂರು: ಜೂನಿಯರ್ ರವಿಚಂದ್ರನ್ ಖ್ಯಾತಿಯ ಕಲಾವಿದ ಲಕ್ಷ್ಮೀ ನಾರಾಯಣ್ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ಧಾರೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕಸಬಾ ಹೋಬಳಿಯ ಹೇರೂರು ಗ್ರಾಮದ ಲಕ್ಷ್ಮೀ ನಾರಾಯಣ್ (35)ನಿನ್ನೆ ತಮ್ಮ ಮನೆಯಲ್ಲಿರುವ
ಸಂಪ್ ಗೆ ನೀರು ಬಿಡಲು ಮೋಟರ್ ಸ್ವಿಚ್ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಕರೆಂಟ್ ಶಾಕ್ ನಿಂದ ಲಕ್ಷ್ಮೀ ನಾರಾಯಣ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಾಕಷ್ಟು ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ಈ ದುರ್ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಲಕ್ಷ್ಮೀ ನಾರಾಯಣ್ ರಾಜ್ಯದೆಲ್ಲೆಡೆ ಸಂಗೀತ ಸಂಜೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಹಾಡು ಹೇಳಿ ಜನರನ್ನು ರಂಜಿಸುತ್ತಿದ್ದರು.
ಜೊತೆಗೆ ರವಿಚಂದ್ರನ್ ಅವರಂತೆಯೇ ಕಾಣುತ್ತಿದ್ದ ಅವರು ರವಿಚಂದ್ರನ್ ಅಭಿನಯದ ದೃಶ್ಯಗಳನ್ನು ವೇದಿಕೆ ಮೇಲೆ ಅಭಿನಯಿಸುವ ಮೂಲಕ ಜನರ ಮನಗೆದ್ದಿದ್ದರು.