ಉಡುಪಿ: ದಕ್ಷಿಣ ಭಾರತದ ಪ್ರಸಿದ್ದ ದೇವಾಲಯಗಳೊಂದಾದ ಪುರಾಣ ಪ್ರಸಿದ್ಧ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಳದ ಹುಂಡಿ ಹಾಗೂ ಹರಕೆಯ ಲೆಕ್ಕಚಾರ ಮುಗಿದಿದೆ.
ಇದೇ ಮೊದಲ ಬಾರಿಗೆ ಅತೀ ಹೆಚ್ಚು ಕಾಣಿಕೆ ರೂಪದಲ್ಲಿ ನಗದು ಸಂಗ್ರಹವಾಗಿದೆ.
ಈ ಬಾರಿ 1.53 ಕೋಟಿ ರೂಪಾಯಿ ನಗದು ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. ಅದೇ ರೀತಿ 2,500 ಕೆ.ಜಿ ಬಂಗಾರ ಮತ್ತು 4,200 ಕೆಜಿ ಬೆಳ್ಳಿಯನ್ನು ಹರಕೆ ರೂಪದಲ್ಲಿ ಸಮರ್ಪಿಸಿದ್ದಾರೆ.
ಕಳೆದೊಂದು ವರ್ಷದಿಂದ ಕೋವಿಡ್ ನಿರ್ಬಂಧಗಳ ಸಡಿಲಿಕೆಯ ಹಿನ್ನೆಲೆ ದೇವಳದಲ್ಲಿ ಭಕ್ತರ ಸಂಖ್ಯೆ ಎರಿಕೆಯಾಗಿದೆ. ಇದೇ ಇದೇ ಮೊದಲ ಬಾರಿ ಇಷ್ಟೊಂದು ಪ್ರಮಾಣದ ಹರಕೆ ಸಲ್ಲಿಕೆಯಾಗಿದೆ.
ಕಾಣಿಕೆ ಹಾಗೂ ಹರಕೆ ಲೆಕ್ಕಚಾರದ ವೇಳೆ ದೇವಳದ ಕಾರ್ಯನಿರ್ವಹಣಾಧಿಕಾರಿ ಮತ್ತು ಆಡಳಿತ ಮಂಡಳಿ ಸದಸ್ಯರು ಭಾಗಿಯಾಗಿದ್ದರು.