Connect with us

  LATEST NEWS

  Jaipura: ಬಸ್, ವ್ಯಾನ್ ಮುಖಾಮುಖಿ ಢಿಕ್ಕಿ- ಒಂದೇ ಕುಟುಂಬದ 7 ಮಂದಿ ಸಾವು..!

  Published

  on

  ಬಸ್ ಹಾಗೂ ವ್ಯಾನ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 7 ಮಂದಿ ಮೃತಪಟ್ಟಿರುವ ಘಟನೆ ರಾಜಸ್ಥಾನದ ದಿಡ್ವಾನಾ-ಕುಚಮನ್ ಜಿಲ್ಲೆಯಲ್ಲಿ ನಡೆದಿದೆ.

  ಜೈಪುರ: ಬಸ್ ಹಾಗೂ ವ್ಯಾನ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 7 ಮಂದಿ ಮೃತಪಟ್ಟಿರುವ ಘಟನೆ ರಾಜಸ್ಥಾನದ ದಿಡ್ವಾನಾ-ಕುಚಮನ್ ಜಿಲ್ಲೆಯಲ್ಲಿ ನಡೆದಿದೆ.


  ಕುಟುಂಬವೊಂದು ವ್ಯಾನ್‍ನಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಸಿಕಾರ್ ನಿಂದ ನಾಗೌರ್ ಗೆ ಪ್ರಯಾಣಿಸುತ್ತಿದ್ದರು.

  ಈ ವೆಳೆ ಅವಘಡ ಸಂಭವಿಸಿದೆ.

  ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಬಂಗಾರ್ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜೈಪುರಕ್ಕೆ ರವಾನಿಸಲಾಗಿದೆ.

  ಖುಂಖುನಾ ಪೊಲೀಸ್ ಠಾಣಾ ವ್ಯಾಪ್ತಿಯ ಬಂಥಾಡಿ ಗ್ರಾಮದ ಬಳಿ ಈ ಘಟನೆ ನಡೆದಿದೆ ಎಂದು ಡಿಎಸ್ಪಿ ಧರಂಚಂದ್ ಬಿಷ್ಣೋಯ್ ಹೇಳಿದ್ದಾರೆ.

  ಅಪಘಾತಕ್ಕೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  LATEST NEWS

  ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಕಛೇರಿಯಲ್ಲಿ ವಿದ್ಯುತ್ ಅವ*ಘಡ..!

  Published

  on

  ಮಂಗಳೂರು: ನಗರದ ಉರ್ವದಲ್ಲಿರುವ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಕಛೇರಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ವಿದ್ಯುತ್ ಅವ*ಘಡ ಸಂಭವಿಸಿದೆ.

  ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದವರು ಅಗ್ನಿ ನಂದಿಸಲು ತೊಡಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

  Continue Reading

  DAKSHINA KANNADA

  ಅಗಲಿದ ಇಬ್ಬರು ಪತ್ರಕರ್ತರಿಗೆ ದ.ಕ. ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ

  Published

  on

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿದ್ದ ಮಂಗಳೂರಿನ ಹಿರಿಯ ಫೋಟೊ ಜರ್ನಲಿಸ್ಟ್ ಅಲ್ಫ್ರೆಡ್ ಡಿಸೋಜ ಮತ್ತು ಕ್ಯಾಮೆರಾಮ್ಯಾನ್ ಚಿಕ್ಕನರಗುಂದ ನಿವಾಸಿ ವೀರೇಶ್ ಕಡ್ಲಿಕೊಪ್ಪ ಅವರು ಇತ್ತೀಚೆಗೆ ನಿ*ಧನರಾಗಿದ್ದು, ಈ ಬಗ್ಗೆ ಶ್ರದ್ಧಾಂಜಲಿ ಸಭೆ ಇಂದು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆಯಿತು.

  ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್‌ ನಾಯಕ್‌ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಮಂಗಳೂರು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಪಿ.ಬಿ. ಹರೀಶ್‌ ರೈ ಮತ್ತಿತರರು ನುಡಿ ನಮನ ಸಲ್ಲಿಸಿದರು. ಪತ್ರಿಕಾ ಭವನ ಟ್ರಸ್ಟ್‌ ಅಧ್ಯಕ್ಷ ರಾಮಕೃಷ್ಣ ಆರ್‌. ಹಾಗೂ ಸಂಘದ ಇತರ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಒಳಗೊಂಡಂತೆ ಉಪಸ್ಥಿತರಿದ್ದ ಎಲ್ಲರೂ ಅಗಲಿದ ಇಬ್ಬರು ಪತ್ರಕರ್ತರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

   

  ಸಂಘದ ಅಧ್ಯಕ್ಷ ಶ್ರೀನಿವಾಸ್‌ ನಾಯಕ್‌ ಇಂದಾಜೆ ಅವರು ಮಾತನಾಡಿ, ಇಬ್ಬರು ಪತ್ರಕರ್ತರ ಅಗ*ಲಿಕೆಯಿಂದ ಜಿಲ್ಲೆಯ ಮಾಧ್ಯಮ ಲೋಕಕ್ಕೆ ಅಪಾರ ನಷ್ಟವಾಗಿದೆ. ಕ್ಯಾಮೆರಾಮ್ಯಾನ್ ವೀರೇಶ್ ತನ್ನ ಊರು ಚಿಕ್ಕ ನರಗುಂದಕ್ಕೆ ಹೋಗಿದ್ದ ವೇಳೆ ಅಲ್ಲಿ ನಿಧ*ನರಾಗಿದ್ದಾರೆ. ಅವರ ಸಾವಿನ ಬಗ್ಗೆ ಅನೇಕ ಸಂಶಯಗಳಿವೆ. ಹಾಗಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಸರಕಾರವನ್ನು ಒತ್ತಾಯಿಸಲಾಗುವುದು. ಸ್ಪೀಕರ್ ಯು.ಟಿ. ಖಾದರ್‌ ಅವರನ್ನು ಭೇಟಿಯಾಗಿ ಈ ಕುರಿತಂತೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

  ಪ್ರೆಸ್‌ ಕ್ಲಬ್‌ ಅಧ್ಯಕ್ಷ ಪಿ.ಬಿ. ಹರೀಶ್‌ ರೈ ಅವರು ಫೋಟೊ ಜರ್ನಲಿಸ್ಟ್ ಅಲ್ಫ್ರೆಡ್ ಡಿ’ಸೋಜಾ ಆಕಸ್ಮಿಕವಾಗಿ ಹೃದಯಾಘಾ*ತದಿಂದ ನಿಧ*ನರಾಗಿರುವುದನ್ನು ಉಲ್ಲೇಖಿಸಿ, ಎಲ್ಲಾ ಪತ್ರಕರ್ತರು ಆಗಿಂದಾಗ್ಗೆ ಆರೋಗ್ಯ ತಪಾಸಣೆಯನ್ನು ಮಾಡುತ್ತಿರಬೇಕು. ಕೆಲಸದ ಒತ್ತಡದ ನಡುವೆಯೂ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕೆಂದು ಸಲಹೆ ಮಾಡಿದರು.

  Continue Reading

  LATEST NEWS

  ಕಾಲೇಜು ಕ್ಯಾಂಟೀನ್‌ನಲ್ಲಿ ವಿದ್ಯಾರ್ಥಿನಿಯರ ಡಿಶುಂ..ಡಿಶುಂ..!! ವೀಡಿಯೋ ವೈರಲ್

  Published

  on

  ಅಮಿಟಿ/ಮಂಗಳೂರು: ಇಲ್ಲೊಂದು ವಿಶ್ವವಿದ್ಯಾನಿಲಯದ ಕಾಲೇಜು ವಿದ್ಯಾರ್ಥಿನಿಯರಿಬ್ಬರು ಕಾಲೇಜು ಕ್ಯಾಂಟೀನ್‌ನಲ್ಲಿ ಹೊಡೆದಾಡಿಕೊಂಡಿರುವ ವೀಡಿಯೋ ಭಾರಿ ವೈರಲ್ ಆಗುತ್ತಿದೆ. ಈ ಹಿಂದೆ ಹಾಸ್ಟೆಲ್ ಹುಡುಗಿಯರ ಎರಡು ಗುಂಪಿನ ಮಧ್ಯೆ ಚಕಾಮಕಿ ನಡೆದಿದ್ದು ಬಳಿಕ ಹೊಯಿ-ಕೈಗೆ ತಿರುಗಿತ್ತು. ಜುಟ್ಟು ಜುಟ್ಟು ಹಿಡಿದುಕೊಂಡು ಗಲಾಟೆ ಮಾಡಿದ್ದ ವೀಡಿಯೋ ಸಾಮಾಜಿಕ ಜಾಲತಾನದಲ್ಲಿ ಭಾರೀ ವೈರಲ್ ಆಗಿತ್ತು. ಇವರೆಲ್ಲಾ ಸಮಾಜಕ್ಕೆ ಏನು ಸಂದೇಶ ಕೊಡಲು ಸಾಧ್ಯ. ನಮ್ಮ ದೇಶದ ಮುಂದಿನ ಪೀಳಿಗೆ ಎತ್ತ ಸಾಗುತ್ತಿದೆ ಅನ್ನುವುದು ಪ್ರಶ್ನೆಯಾಗಿದೆ.

  ನೋಯ್ಡಾದ ಅಮಿಟಿ ವಿಶ್ವವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ. ಕಾಲೇಜು ಕ್ಯಾಂಟೀನ್‌ನಲ್ಲಿ ಇಬ್ಬರು ವಿದ್ಯಾರ್ಥಿನಿಯರ ಮಧ್ಯೆ ಮೊದಲು ಮಾತಿಗೆ ಮಾತು ಬೆಳೆದಿದೆ. ಬಳಿಕ ಮಾತು ಅತಿರೇಕಕ್ಕೆ ತಿರುಗಿ ಹೊಯಿ ಕೈ ನಡೆಸಿದ್ದಾರೆ. ಕಾಲೇಜು ಕ್ಯಾಂಟೀನ್‌ ತುಂಬಾ ವಿದ್ಯಾರ್ಥಿಗಳಿದ್ದರೂ ಕ್ಯಾರೇ ಅನ್ನದೇ ತಮ್ಮ ಗಲಾಟೆಯನ್ನು ಮುಂದುವರಿಸಿದ್ದಾರೆ. ವಿದ್ಯಾರ್ಥಿನಿಯರ ಜಗಳ ನೋಡಿ ಒಬ್ಬಾಕೆ ಮಧ್ಯ ಪ್ರವೇಶಿಸಿ ಕಾದಾಟವನ್ನು ನಿಲ್ಲಿಸಲು ಮುಂದಾಗುತ್ತಾರೆ. ಅದರೂ ಕೇಳದ ಈ ವಿದ್ಯಾರ್ಥಿನಿಗಳು ಒಬ್ಬರ ಮೇಲೆ ಒಬ್ಬರು ಬಿದ್ದುಕೊಂಡು ಹೊಡೆದಾಡುತ್ತಾರೆ. ಪಕ್ಕದಲ್ಲಿದ್ದ ಇತರ ವಿದ್ಯಾರ್ಥಿಗಳು ಹೇ ಮೇಜು ಮುರಿದು ಹೋಯಿತು ಎಂದು ಬೊಬ್ಬೆ ಹೊಡೆಯುತ್ತಾರೆ.

  ಈ ವಿಡಿಯೋ ಹಲವು ಎಕ್ಸ್​​ ಖಾತೆಯಲ್ಲಿ ವೈರಲ್​ ಆಗಿದ್ದು, ಈ ಬಗ್ಗೆ ಕಮೆಂಟ್​​ ಮಾಡಿದ ನೆಟ್ಟಿಗರು, ಇದು ಹುಡುಗಿಯರ WWE ಎಂದು ಹೇಳಿದ್ದಾರೆ. ಪ್ರತಿಯೊಂದು ಕಾಲೇಜಿನಲ್ಲೂ ಈ ಹುಡುಗಿಯರ ಜಗಳ ಇರುತ್ತದೆ ಎಂದು ಹೇಳಿದ್ದಾರೆ. ಇನ್ನು ಕೆಲವರು ಈ ಯುವ ಸಮಾಜ ಎತ್ತ ಸಾಗುತ್ತಿದೆ ಎಂದು ಹೇಳಿದ್ದಾರೆ.

  Continue Reading

  LATEST NEWS

  Trending