LATEST NEWS
Chitradurga: ಲಾರಿಗೆ ಕಾರು ಢಿಕ್ಕಿ- ಒಂದೇ ಕುಟುಂಬದ ನಾಲ್ವರು ಸಾವು..!
ಲಾರಿಗೆ ಕಾರು ಢಿಕ್ಕಿ ಹೊಡೆದ ಅಪಘಾತದಲ್ಲಿ ಪ್ರವಾಸಕ್ಕೆ ತೆರಳಿದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಲ್ಲಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಆ.13 ರಂದು ನಡೆದಿದೆ.
ಚಿತ್ರದುರ್ಗ: ಲಾರಿಗೆ ಕಾರು ಢಿಕ್ಕಿ ಹೊಡೆದ ಅಪಘಾತದಲ್ಲಿ ಪ್ರವಾಸಕ್ಕೆ ತೆರಳಿದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಲ್ಲಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಆ.13 ರಂದು ನಡೆದಿದೆ.
ಖಾಸಗಿ ಬ್ಯಾಂಕ್ ನೌಕರ ಸಂಗನಬಸವ (36), ಪತ್ನಿ ರೇಖಾ(29), ಪುತ್ರ ಅಗಸ್ತ್ಯ(7), ಸಂಬಂಧಿ ಭೀಮಾಶಂಕರ್ (26) ಮೃತ ದುರ್ದೈವಿಗಳು.
ಮೃತ ದಂಪತಿಯ ಮತ್ತೋರ್ವ ಪುತ್ರ ಆದರ್ಶ (3) ಹಾಗೂ ಪುತ್ರಿ ಅನ್ವಿಕಾ (5) ಮತ್ತು ಕಾರು ಚಾಲಕನಿಗೆ ಗಾಯವಾಗಿದೆ.
ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕುದರಿ ಸಾಲವಡಗಿ ಗ್ರಾಮದ ಏಳು ಜನರು ರಜೆ ಹಿನ್ನೆಲೆಯಲ್ಲಿ ಕಾರಿನಲ್ಲಿ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ತೆರಳುತ್ತಿದ್ದರು.
ಶನಿವಾರ ರಾತ್ರಿ 11 ಗಂಟೆಗೆ ಕುಟುಂಬವು ಮನೆಯಿಂದ ಕಾರಿನಲ್ಲಿ ಹೊರಟಿತ್ತು.
ಇಂದು ಮುಂಜಾನೆ ವೇಳೆ ಮಲ್ಲಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಲಾರಿವೊಂದಕ್ಕೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದಿದೆ.
ಢಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದು, ಮೂವರಿಗೆ ಗಾಯಗಳಾಗಿವೆ.
ಗಾಯಗೊಂಡವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ರವಾನಿಸಾಗಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಕೆ.ಪರಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
DAKSHINA KANNADA
ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಗೆ ಗೌರವ ಡಾಕ್ಟರೇಟ್ ಪ್ರದಾನ
ಮಂಗಳೂರು : ಕರಾವಳಿ ಮೂಲದ ಕನ್ನಡ ಚಲನ ಚಿತ್ರ ರಂಗದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ.
ಬೆಂಗಳೂರು ವಿವಿಯು ಈ ಗೌರವ ಡಾಕ್ಟರೇಟ್ ನೀಡಿ ಗುರುಕಿರಣ್ ಅವರನ್ನು ನೀಡಿ ಗೌರವಿಸಿದೆ. ಸೆಪ್ಟಂಬರ್ 10 ರಂದು ನಡೆದಿದ್ದ ವಿವಿ ಘಟಿಕೋತ್ಸವದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಬೆಂಗಳೂರು ವಿವಿಯ ಈ ಪ್ರಶಸ್ತಿಯಿಂದ ಗುರು ಕಿರಣ್ ಇನ್ನು ಮುಂದೆ ಡಾಕ್ಟರ್ ಗುರುಕಿರಣ್ ಆಗಲಿದ್ದಾರೆ.
LATEST NEWS
ನೃತ್ಯ ಮಾಡಲು ನಿರಾಕರಿಸಿದ ನೃತ್ಯಗಾರ್ತಿಯರ ಮೇಲೆ ಸಾಮೂಹಿಕ ಅತ್ಯಾಚಾ*ರ
ಮಂಗಳೂರು/ಉತ್ತರ ಪ್ರದೇಶ : ಇತ್ತೀಚೆಗೆ ಅಪಹರಣ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ಆಕ್ರೋಶ ಕೇಳಿ ಬರುತ್ತಿದೆ. ಆದರೂ ಅತ್ಯಾಚಾ*ರ ಪ್ರಕರಣಗಳು ನಿಂತಿಲ್ಲ. ಇದೀಗ ಉತ್ತರ ಪ್ರದೇಶದಲ್ಲಿ ಅಂತಹುದ್ದೇ ಮತ್ತೊಂದು ಪ್ರಕರಣ ದಾಖಲಾಗಿದೆ.
8 ಮಂದಿ ಯುವಕರು ನೃತ್ಯ ಮಾಡಲು ನಿರಾಕರಿಸಿದ ಯುವತಿಯರ ಮೇಲೆ ಅತ್ಯಾಚಾ*ರ ಎಸಗಿರುವ ಅಮಾನವೀಯ ಘಟನೆ ನಡೆದಿದೆ.
ಅಪಹರಿಸಿ ಕೃ*ತ್ಯ :
ಆರ್ಕೆಸ್ಟ್ರಾ ನಡೆಯುತ್ತಿದ್ದ ಸಂದರ್ಭದಲ್ಲಿಆರೋಪಿಗಳು ನೃತ್ಯಗಾರ್ತಿಯರ ಹಣೆಗೆ ಬಂದೂಕಿಟ್ಟು ಅಪಹರಿಸಿ 10 ಕಿ.ಮೀ ದೂರಕ್ಕೆ ಕರೆದೊಯ್ದಿದ್ದಾರೆ. 2 ಜನ ನೃತ್ಯಗಾರ್ತಿಯರು ಬರ್ತ್ ಡೇ ಪಾರ್ಟಿಯಲ್ಲಿ ನೃತ್ಯ ಮಾಡಲು ನಿರಾಕರಿಸಿದ್ದಕ್ಕೆ ಸಾಮೂಹಿಕ ಅತ್ಯಾಚಾ*ರ ಎಸಗಿದ ಘಟನೆ ಉತ್ತರ ಪ್ರದೇಶದ ಖುಷಿನಗರದಲ್ಲಿ ನಡೆದಿದೆ.
ಆರೋಪಿಗಳಲ್ಲಿ ಒಬ್ಬನ ಮನೆಗೆ ಕರೆದೊಯ್ದು ಯುವತಿಯರ ಬಳಿ ನೃತ್ಯ ಮಾಡುವಂತೆ ಒತ್ತಾಯಿಸಿದಾಗ ಅವರ ನಿರಾಕರಣೆಯ ಸಹಿಸದೆ ಕುಡಿದ ಮತ್ತಿನಲ್ಲಿ ಅತ್ಯಾಚಾ*ರವೆಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.. ಅಪರಾಧಕ್ಕೆ ಬಳಸಿದ್ದ ಎರಡು ಎಸ್ ಯು ವಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಎಲ್ಲಾ ಆರೋಪಿಗಳು 30 ವರ್ಷಕ್ಕಿಂತ ಕೆಳ ವಯಸ್ಸಿನವರಾಗಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದಿದ್ದು ,ಯುವತಿಯರ ವೈದ್ಯಕೀಯ ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ.
ಎನ್ ಕೌಂಟರ್ ನಡೆಸಿ ಅರೆಸ್ಟ್ :
ಸಪ್ಟೆಂಬರ್ 8 ರಾತ್ರಿ ಘಟನೆ ಕುರಿತು ಪೋಲಿಸರಿಗೆ ದೂರು ಬಂದಿತ್ತು. ನಾಗೇಂದ್ರ ಯಾಧವ್, ಆಸನ್ ಸಂಗ್, ಖ್ರಿಶ್ ತಿವಾರಿ, ಅರ್ಥಕ್ ಸಿಂಗ್ ಮತ್ತು ವಿವೆಕ್ ಸೇಠ್ ಎಂದು ಗುರುತಿಸಲಾಗಿದೆ. ಇತರ ಇಬ್ಬರು ಆರೋಪಿಗಳಾದ ನಿಸಾರ್ ಅನ್ಸಾರಿ ಮತ್ತು ಆದಿತ್ಯ ಸಾಹ್ನಿ ಸೆಪ್ಟೆಂಬರ್ 10 ರಂದು ಪೋಲಿಸರು ನಡೆಸಿದ ಎನ್ಕೌಂಟರ್ನಲ್ಲಿ ಸಿಕ್ಕಿಬಿದ್ದರು. ಇಬ್ಬರ ಕಾಲಿಗೂ ಗುಂಡು ತಗುಲಿದ್ದು ಪ್ರಥಮ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ವಿಚಾರಣೆ ನಡೆಸಿದ ಬಳಿಕ ತಮ್ಮ ಎಲ್ಲಾ ವಿಷಯವನ್ನು ಬಹಿರಂಗಪಡಿಸಿದ್ದಾರೆ.
DAKSHINA KANNADA
ಮಂಗಳೂರು : ತಾಯಿಯನ್ನು ರಕ್ಷಿಸಿದ ವಿದ್ಯಾರ್ಥಿನಿಗೆ ಜಿಲ್ಲಾಡಳಿತದಿಂದ ಸನ್ಮಾನ
ಮಂಗಳೂರು : ಆಟೋರಿಕ್ಷಾದಡಿಗೆ ಬಿದ್ದ ಅಮ್ಮನನ್ನು ರಕ್ಷಿಸಲು ಆಟೋರಿಕ್ಷಾವನ್ನೇ ಮೇಲಕ್ಕೆತ್ತಿ ಶೌರ್ಯ ಮೆರೆದ ಕಿನ್ನಿಗೋಳಿಯ ವೈಭವಿಗೆ ಇದೀಗ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಬಾಲಕಿಯ ಶೌರ್ಯವನ್ನು, ಸಕಾಲಿಕ ಪ್ರಜ್ಞೆಯನ್ನು ಕೊಂಡಾಡಿದ್ದರು.
ಜೊತೆಗೆ ಜಿಲ್ಲಾಡಳಿತವೂ ಬಾಲಕಿಯ ಕಾರ್ಯ ಮೆಚ್ಚಿಕೊಂಡಿದೆ. ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಂಗಳವಾರ(ಸೆ.10) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವೈಭವಿಯನ್ನು ಸನ್ಮಾನಿಸಿದರು. ಪೇಟ, ಹಾರ ತೊಡಿಸಿ ಸನ್ಮಾನಿಸಿದರಲ್ಲದೆ, ಬಾಲಕಿಯ ಸಮಯ ಪ್ರಜ್ಞೆ ಮತ್ತು ಧೈರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಹೇಮಲತಾ, ಸಹಾಯಕ ನಿರ್ದೇಶಕ ಸುರೇಶ್ ಅಡಿಗ ಮತ್ತು ವೈಭವಿಯ ಪಾಲಕರು ಉಪಸ್ಥಿತರಿದ್ದರು.
ಪೊಲೀಸ್ ಕಮಿಷನರ್ ಸನ್ಮಾನ :
ಬಾಲಕಿ ವೈಭವಿಯ ಕಾರ್ಯವನ್ನು ಮೆಚ್ಚಿರುವ ಕಮಿಷನರ್ ಅನುಪಮ್ ಅಗರ್‌ವಾಲ್ ಅವರೂ ಪ್ರಶಂಸಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಕಚೇರಿ ವತಿಯಿಂದ ಕಮಿಷನರ್ ಅನುಪಮ್ ಅಗರ್‌ವಾಲ್ ಅವರು ಬಾಲಕಿಯ ಸಮಯಪ್ರಜ್ಞೆಯನ್ನು ಕೊಂಡಾಡಿದರಲ್ಲದೇ, ಆಕೆಗೆ ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಿದ್ದಾರೆ.
ಇದನ್ನೂ ಓದಿ : ಪುತ್ತೂರು : ಖಾಸಗಿ ಆಸ್ಪತ್ರೆಯಲ್ಲಿ ಅ*ಗ್ನಿ ಅವಘ*ಡ
ಏನಿದು ಘಟನೆ?
ಸೆಪ್ಟೆಂಬರ್ 6ರಂದು ಸಂಜೆ ಕಿನ್ನಿಗೋಳಿ ರಾಮನಗರ ಎಂಬಲ್ಲಿ ಚೇತನಾ ಯಾನೆ ಶ್ವೇತಾ ಎಂಬವರು ರಸ್ತೆ ದಾಟುತ್ತಿದ್ದಾಗ ಆಟೋರಿಕ್ಷಾವೊಂದು ಡಿ*ಕ್ಕಿ ಹೊಡೆದಿತ್ತು. ಆಟೋರಿಕ್ಷಾ ಪಲ್ಟಿಯಾಗಿ ಚೇತನ ಅವರು ರಿಕ್ಷಾದಡಿಗೆ ಬಿದ್ದಾಗ ಅಲ್ಲೇ ಇದ್ದ 13 ವರ್ಷದ ಮಗಳು ವೈಭವಿ ಯಾರ ಸಹಾಯಕ್ಕೂ ಕಾಯದೇ, ತಕ್ಷಣ ಕಾರ್ಯಪ್ರವೃತ್ತಳಾಗಿ ಆಟೋವನ್ನು ಎತ್ತಿ ಅಮ್ಮನ ಪ್ರಾ*ಣ ಉಳಿಸಿದ್ದರು.
- LATEST NEWS7 days ago
ಪೇಟಿಎಂ ಮೂಲಕ ಲಕ್ಷ ಹಣ ವರ್ಗಾವಣೆ..! ಆರೋಪಿಯ ಬಂಧನ
- LATEST NEWS2 days ago
ಕನ್ನಡದಲ್ಲೇ ಔಷಧ ಚೀಟಿ ಬರೆಯಲಾರಂಭಿಸಿದ ವೈದ್ಯರು..! ವೈರಲ್ ಆಗ್ತಿದೆ ಈ ಪ್ರಿಸ್ಕ್ರಿಪ್ಶನ್
- DAKSHINA KANNADA6 days ago
ದ.ಕ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪಟ್ಟಿ ಪ್ರಕಟ; 21 ಶಿಕ್ಷಕರಿಗೆ ಪ್ರಶಸ್ತಿ
- FILM6 days ago
ಅಮ್ಮನಾದ ಮಿಲನಾ ನಾಗರಾಜ್; ಸಂತಸ ಹಂಚಿಕೊಂಡ ನಟ ಡಾರ್ಲಿಂಗ್ ಕೃಷ್ಣ