Monday, July 4, 2022

ಬಂಟ್ವಾಳ: ಮದುವೆ ಮನೆಯಲ್ಲಿ ಕೊರಗಜ್ಜನಿಗೆ ಅವಮಾನ ಪ್ರಕರಣ- ಆರೋಪಿಗಳಿಗೆ ಜಾಮೀನು

ಬಂಟ್ವಾಳ: ಇಲ್ಲಿನ ಸಾಲೆತ್ತೂರು ಬಳಿ ಮದುವೆ ಮನೆಯಲ್ಲಿ ವರ ಕೊರಗಜ್ಜನ ವೇಷವನ್ನು ಧರಿಸಿದ ಪ್ರಕರಣದಲ್ಲಿ ಬಂಧಿತರಾದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಲ್ಪಡಿ ನಿವಾಸಿ, ಪುತ್ತೂರು ಫಾತಿಮಾ ಅಂಗಡಿಯ ಮಾಲಕ ಅಹ್ಮದ್ ಮುಜಿತಾಬು (28) ಮತ್ತು ಬಾಯಾರು ಪದವು ನಿವಾಸಿ ಮೊಯ್ದೀನ್ ಮುನಿಶ್ (19) ಎಂಬಿಬ್ಬರು ಆರೋಪಿಗಳನ್ನು ಇತ್ತೀಚಿಗೆ ಪೊಲೀಸರು ಬಂಧಿಸಿದ್ದರು.
ಬಂಧಿತ ಆರೋಪಿಗಳನ್ನು ಅಂದೇ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಜಾಮೀನು ದೊರೆತಿದೆ.
ಆರೋಪಿಗಳ ಪರ ನ್ಯಾಯವಾದಿ ಶ್ರೀಕಾಂತ್ ಭಟ್ ವಾದ ಮಂಡಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ದೋಣಿ ಮೇಲೆತ್ತುವಾಗ ನೇತ್ರಾವತಿ ನದಿಗೆ ಬಿದ್ದ ಓರ್ವ ನಾಪತ್ತೆ ಮತ್ತಿಬ್ಬರ ರಕ್ಷಣೆ

ಬಂಟ್ವಾಳ: ದೋಣಿ ಮೇಲೆತ್ತುವಾಗ ಪ್ರವಾಹದ ರಭಸಕ್ಕೆ ದೋಣಿ ಸಮೇತ ನದಿಗೆ ಬಿದ್ದು ಓರ್ವ ನಾಪತ್ತೆಯಾದ ಘಟನೆ ಬಂಟ್ವಾಳ ತಾಲೂಕಿನ ಅರ್ಕುಳ ಗ್ರಾಮದ ಶಶಿರಾಜ್ ಧಕ್ಕೆಯಲ್ಲಿ ನಿನ್ನೆ ಸಂಜೆ ನಡೆದಿದೆ.ನಾಪತ್ತೆಯಾದ ಯುವಕನನ್ನು ರಾಜು ಸಾಹ್...

ಸೌದಿ ಅರೇಬಿಯಾ: ಹಜ್‌ ಯಾತ್ರಿಗಳ ಸೇವೆಯಲ್ಲಿ ಇಂಡಿಯಾ ಫ್ರೆಟರ್ನಿಟಿ ಫೋರಂ(I.F.F.)

ರಿಯಾದ್‌: ಕೊಲ್ಲಿ ರಾಷ್ಟ್ರದಲ್ಲಿ ನಿರಂತರವಾಗಿ ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಇಂಡಿಯ ಫ್ರೆಟರ್ನಿಟಿ ಫೋರಂ (ಐ.ಎಫ್.ಎಫ್) ಪ್ರತೀ ವರ್ಷದಂತೆ ಈ ವರ್ಷವೂ ಹಜ್‌ ಯಾತ್ರಾರ್ಥಿಗಳ ಸೇವೆಯಲ್ಲಿ ಸಕ್ರಿಯವಾಗಿದೆ.2022 ರ ಹಜ್‌ಗೆ ಈಗಾಗಲೇ ಭಾರತದಿಂದ ಎಪ್ಪತ್ತು...

ಮಂಗಳೂರು KSRTC ನಿಲ್ದಾಣದ ಟಾಯ್ಲೆಟ್‌ಗೆ ಹೋಗಿದ್ದ ಯುವತಿ ನಾಪತ್ತೆ..!

ಮಂಗಳೂರು: ಸಾರ್ವಜನಿಕ ಶೌಚಾಲಯಕ್ಕೆ ತೆರಳಿದ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ಮಂಗಳೂರು ನಗರದ ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದಲ್ಲಿ ಜು.2 ರಂದು ಮುಂಜಾನೆ ನಡೆದಿದೆ. ನಾಪತ್ತೆಯಾದ ಯುವತಿಯನ್ನು ಕು. ದೀಪಿಕಾ (19) ಎಂದು ಗುರುತಿಸಲಾಗಿದೆ.ಘಟನೆ ವಿವರ ಹಾವೇರಿ ಜಿಲ್ಲೆ...