Monday, July 4, 2022

ಬಂಟ್ವಾಳ: ಅಕ್ರಮವಾಗಿ ದನದ ಮಾಂಸ ಸಾಗಾಟ- ಓರ್ವನ ಬಂಧನ

ಬಂಟ್ವಾಳ: ವೀಕೆಂಡ್‌ ಕರ್ಪ್ಯೂ ಸಂದರ್ಭ ಅಕ್ರಮವಾಗಿ ದನ ಮಾಂಸ ಮಾರಾಟ ಮಾಡುವ ವೇಳೆ ಆರೋಪಿಯೊಬ್ಬ ಸಿಕ್ಕಿ ಬಿದ್ದ ಘಟನೆ ಬಂಟ್ವಾಳದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾವೂರು ಗ್ರಾಮದ ಪಟ್ಲ ನಿವಾಸಿ ಅಬ್ದುಲ್‌ ಖಾದರ್‌ ಬಂಧಿತ ಆರೋಪಿ.


ಬಂಧಿತನಿಂದ ಒಟ್ಟು 60 ಸಾವಿರ ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ವೀಕೆಂಡ್ ಲಾಕ್ ಡೌನ್ ಕರ್ಪೂ ಜ್ಯಾರಿ ಇದ್ದ ಕಾರಣ ರೌಂಡ್ಸ್ ಕರ್ತವ್ಯದಲ್ಲಿದ್ದ ಗ್ರಾಮಾಂತರ ಎಸ್.ಐ.ಹರೀಶ್ ಅವರು ನಾವೂರು ಮಸೀದಿಯ ಮುಂದೆ ಹೋಗುತ್ತಿದ್ದಂತೆ

ಸರಪಾಡಿ ಕಡೆಯಿಂದ ಒಂದು ಅಟೋ ರಿಕ್ಷಾ ಮಣಿಹಳ್ಳ ಕಡೆಗೆ ಅತೀ ವೇಗವಾಗಿ ಬರುತ್ತಿದ್ದು ಸಂಶಯಗೊಂಡ ಎಸ್.ಐ. ರಿಕ್ಷಾವನ್ನು ನಿಲ್ಲಿಸುವಂತೆ ಅದರ ಚಾಲಕನಿಗೆ ಸೂಚನೆ ನೀಡಿದಾಗ ಅಟೋ ರಿಕ್ಷಾದ ಚಾಲಕ ರಿಕ್ಷಾವನ್ನು ಸ್ವಲ್ಪ ದೂರ ನಿಲ್ಲಿಸಿ ಓಡಿ ಹೋಗಲು ಪ್ರಯತ್ನಿಸಿದ್ದ,

ಆತನನ್ನು ಹಿಡಿದು ವಿಚಾರಿಸಿದಾಗ ಅಟೋ ರಿಕ್ಷಾದ ಹಿಂದಿನ ಸೀಟಿನ ಕೆಳಗೆ ಒಂದು ಪ್ಲಾಸ್ಟಿಕ್ ಚೀಲದಲ್ಲಿ ದನದ ಮಾಂಸ ತುಂಬಿಸಿದ್ದ. ‌ಮಾರಾಟ ಮಾಡುವ ಉದ್ದೇಶದಿಂದ ಆಟೋ ರಿಕ್ಷಾದಲ್ಲಿ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದು,

ಈತ ಸ್ವತಃ ಮನೆಯಲ್ಲಿ ಸಾಕಿದ ಒಂದು ದನವನ್ನು ವಧೆ ಮಾಡಿ ಗಿರಾಕಿಗಳಿಗೆ ಸಾಗಾಟ ಮಾಡುತ್ತಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.
2 ಕೆ.ಜಿ ತೂಕದ ಒಟ್ಟು 15 ಪ್ಯಾಕೆಟ್, ಅದರ ಅಂದಾಜು ಬೆಲೆ 7,500 ಆಗಿದ್ದು. ಅಟೋ ರಿಕ್ಷಾವನ್ನು ವಶಕ್ಕೆ ಪಡೆಯಲಾಗಿದೆ.

LEAVE A REPLY

Please enter your comment!
Please enter your name here

Hot Topics

“ಮದರಸ ಬಗ್ಗೆ ಹೇಳಿಕೆಯನ್ನು ಉದುರುವಾಗ ನಾಲಗೆ ಹದ್ದು ಬಸ್ತಿನಲ್ಲಿ ಇಟ್ಟು ಮಾತನಾಡುವುದು ಒಳಿತು”

ಮಂಗಳೂರು: ಪ್ರವಾದಿ ನಿಂದನೆಗೈದ ನೂಪುರ್ ಶರ್ಮಾ ರನ್ನು ಬೆಂಬಲಿಸಿ ಹೇಳಿಕೆ ನೀಡಿದ ಕನ್ನಯ್ಯ ಲಾಲ್ ನನ್ನು ಇತ್ತೀಚೆಗೆ ರಾಜಸ್ತಾನದ ಉದಯಪುರದಲ್ಲಿ ಹತ್ಯೆ ಮಾಡಿದ ಆರೋಪಿಗಳು ಸ್ಥಳೀಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಸದಸ್ಯರು ಆಗಿದ್ದು,ಅಂತಹ...

ಮುಂದಿನ 30-40 ವರ್ಷಗಳು ಬಿಜೆಪಿ ಯುಗ: ಅಮಿತ್‌ ಶಾ

ಹೈದರಾಬಾದ್‌: ಮುಂದಿನ 30-40 ವರ್ಷಗಳು ಬಿಜೆಪಿ ಯುಗವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹೇಳಿದ್ದಾರೆ.ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅಮಿತ್‌ ಶಾ, ಬಿಜೆಪಿಯ ಅಭಿವೃದ್ಧಿ...

ಮಂಗಳೂರಿನ ‘ಕದ್ರಿ‌ ರೋಲರ್ಸ್ ಸ್ಕೇಟಿಂಗ್ ಕ್ಲಬ್’ ಅಧ್ಯಕ್ಷರಾಗಿ ಡಾ.ರಾಜೇಶ್ ಹುಕ್ಕೇರಿ ಆಯ್ಕೆ

ಮಂಗಳೂರು: ಮಂಗಳೂರಿನಲ್ಲಿ‌ ನೂತನವಾಗಿ "ಕದ್ರಿ‌ ರೋಲರ್ಸ್ ಸ್ಕೇಟಿಂಗ್ ಕ್ಲಬ್(ರಿ)" ಆರಂಭಗೊಂಡಿದ್ದು, ಇದರ ಸ್ಥಾಪಕಾಧ್ಯಕ್ಷರಾಗಿ ಡಾ.ರಾಜೇಶ್ ಹುಕ್ಕೇರಿ ಆಯ್ಕೆಯಾಗಿದ್ದಾರೆ.ನಗರದ ಕೆಪಿಟಿ‌ ಸರ್ಕಲ್ ನ ಬಳಿಯ ಕದ್ರಿ ಪಾರ್ಕ್ ನಲ್ಲಿರುವ "ಅನಘಾಸ್ ಸ್ಕೇಟಿಂಗ್ ಅಕಾಡೆಮಿ"ಯಲ್ಲಿ ಇತ್ತೀಚೆಗೆ...