Friday, July 1, 2022

ಮಂಗಳೂರು: ದುಬೈನಿಂದ ಮಂಗಳೂರಿಗೆ ಬಂದಿಳಿದ ಪ್ರಯಾಣಿಕನಲ್ಲಿ ಅಕ್ರಮ ಚಿನ್ನ ಪತ್ತೆ

ಮಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ 10.62 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.


ಕೇರಳದ ಕಾಸರಗೋಡು ಮೂಲದ ಪ್ರಯಾಣಿಕ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ. ಈತ ದುಬೈನಿಂದ ರವಿವಾರ ರಾತ್ರಿ ಮಂಗಳೂರು ತಲುಪಿದ್ದ.

ಈ ವೇಳೆ ಅಧಿಕಾರಿಗಳು ತಪಾಸಣೆ ನಡೆಸಿದಾಗ, ಜ್ಯೂಸರ್ ನಲ್ಲಿ ಅಡಗಿಸಿಡಲಾಗಿದ್ದ ಚಿನ್ನ ಪತ್ತೆಯಾಗಿದೆ.
ಬಂಧಿತನಿಂದ ಒಟ್ಟು 199 ಗ್ರಾಂ ಚಿನ್ನವನ್ನು ವಶಪಡಿಕೊಳ್ಳಲಾಗಿದ್ದು, ಇದರ ಮೌಲ್ಯ ರೂ. 10,62,660 ಎಂದು ಅಂದಾಜಿಸಲಾಗಿದೆ.

ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ಬಿರುವೆರ್ ಕುಡ್ಲ ದುಬೈ ಘಟಕದ ವತಿಯಿಂದ ನೆರವು ನಿಧಿ ವಿತರಣೆ

ಮಂಗಳೂರು: ಫ್ರೆಂಡ್ಸ್‌ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಇದರ ಸ್ಪಂದನ ತಂಡವು ಬಡ ವರ್ಗದ ಚಿಕಿತ್ಸೆಗಾಗಿ ಕಳೆದ ಹಲವಾರು ವರ್ಷಗಳಿ೦ದ ಮಾನವೀಯ ನೆಲೆಯಲ್ಲಿ ನೆರವು ನೀಡುತ್ತಾ ಬರುತ್ತಿರುವುದು ಇತರ ಸಂಘಟನೆಗಳಿಗೆ ಮಾದರಿ ಎಂದು...

ಮಂಗಳೂರು: ಬೈಕಾಡಿ ಪ್ರತಿಷ್ಠಾನದ ವತಿಯಿಂದ ಮಕ್ಕಳಿಗಾಗಿ “ಕಥಾನಕ” ಸ್ಪರ್ಧೆ

ಮಂಗಳೂರು: ಮಂಗಳೂರು ಉರ್ವದ ಬೈಕಾಡಿ ಪ್ರತಿಷ್ಠಾನದ ವತಿಯಿಂದ ಮಕ್ಕಳಿಗಾಗಿ ಕನ್ನಡದಲ್ಲಿ ಕಥೆ ಹೇಳುವ ಆನ್ ಲೈನ್ ಕಥಾ ಸ್ಪರ್ಧೆ"ಕಥಾನಕ" ಎಂಬ ಸ್ಪರ್ಧೆ ಆಯೋಜನೆ ಮಾಡಲಾಗಿದೆ.ಈ ಕುರಿತು ಪ್ರತಿಷ್ಠಾನದ ಕಾರ್ಯದರ್ಶಿಯಾದ ಭರತ್ ಬೈಕಾಡಿಯವರು ಮಾಧ್ಯಮಗಳೊಂದಿಗೆ...

ಬಂಟ್ವಾಳ: ಗೋಕಳ್ಳತನ-ದನದ ಮಾಂಸ ಸಹಿತ ಆರೋಪಿಗಳು ವಶಕ್ಕೆ

ಬಂಟ್ವಾಳ: ಕಳ್ಳತನ ಮಾಡಿದ ದನಗಳನ್ನು ಕಡಿದು ಮಾರಾಟ ಮಾಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ದನದ ಮಾಂಸ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಗೋಳ್ತಮಜಲು ಎಂಬಲ್ಲಿ...