Connect with us

LATEST NEWS

ಈ ಅಣಬೆ ರೇಟ್ ಕೇಳಿದ್ರೆ ನಿಮ್ಮ ತಲೆ ತಿರುಗುತ್ತೆ…! ಹಾಗಂತ ಇದು ಮೋದಿ ತಿನ್ನೋ ಅಣಬೆಯಲ್ಲ..!

Published

on

ಪ್ರಧಾನಿ ನರೇಂದ್ರ ಮೋದಿ ದಿನಾ ಅಣಬೆ ತಿನ್ನುತ್ತಾರೆ… ಅದು ಒಂದು ಪೀಸ್ ಗೆ 80 ಸಾವಿರದ್ದು..ಅದು ತೈವಾನಿದ್ದು..ಅದು ಹಿಮಾಲಯದ್ದು.. ಹೀಗೆ ಸಾಕಷ್ಟು ಚರ್ಚೆಗಳು ನಡೆದಿತ್ತು. ಆದ್ರೆ ಪ್ರಧಾನಿ ಮೋದಿ ಅಣಬೆ ತಿನ್ತಾರೋ ಇಲ್ಲವೋ ಗೊತ್ತಿಲ್ಲ. ಆದ್ರೆ ಅಂತಹ ಕಾಸ್ಟ್ಲಿ ಅಣಬೆ ಇರೋದಂತು ಸತ್ಯ. ಅಂತಹ ಅಣಬೆ ಎಲ್ಲಿ ಬೆಳೀತಾರೆ? ರೇಟ್ ಎಷ್ಟಿದೆ ಅಂತ ಗೊತ್ತಾದ್ರೆ ನೀವೂ ಶಾಕ್ ಆಗ್ತೀರಾ. ಅಂತಹ ದುಬಾರಿ ಅಣಬೆಗಳ ಮಾಹಿತಿ ಇಲ್ಲಿದೆ.

ಆರೋಗ್ಯಕರ ತರಕಾರಿ

ಅಣಬೆಗಳನ್ನು ವಿಶ್ವದ ಅತ್ಯಂತ ಆರೋಗ್ಯಕರ ತರಕಾರಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಆದ್ದರಿಂದ, ಇದನ್ನು ಹೆಚ್ಚಾಗಿ ಆಹಾರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಜಗತ್ತಿನಲ್ಲಿ ಹಲವಾರು ರೀತಿಯ ಅಣಬೆಗಳು ಕಂಡುಬರುತ್ತವೆ, ಆದರೆ ಕೆಲವು ಪ್ರಭೇದಗಳು ಸಾಕಷ್ಟು ದುಬಾರಿಯಾಗಿದೆ. ಜಪಾನ್‌ನ ಮಾಟ್ಸುಟೇಕ್ ಮಶ್ರೂಮ್ ಇಂತಹ ದುಬಾರಿ ಅಣಬೆಗಳಲ್ಲಿ ಒಂದಾಗಿದ್ದು, ಇದನ್ನು ಕೊರಿಯನ್ ಪೆನಿನ್ಸುಲಾ ಮತ್ತು ಚೀನಾದಲ್ಲಿ ಬೆಳೆಯಲಾಗುತ್ತದೆ ಮತ್ತು ಅಮೆರಿಕಾದಲ್ಲಿಯೂ ಅಲ್ಪ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ.

ಮಾಟ್ಸುಟೇಕ್ ಅಣಬೆಗಳು ಶರತ್ಕಾಲ ಅಂದ್ರೆ ಬೇಸಗೆ ಮತ್ತು ಮಳೆಗಾಲದ ನಡುವೆ ಬೆಳೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಜಪಾನ್‌ ದೇಶದಲ್ಲಿ ಈ ಅಣಬೆ ಬೆಳೆಯುವುದು ಕಡಿಮೆಯಾಗಿರುವ ಕಾರಣದಿಂದ ಇದು ಅವನತಿಯ ಹಾದಿಯತ್ತ ಸಾಗುತ್ತಿದೆ. ಹೀಗಾಗಿ ಈ ಅಣಬೆಯ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿದೆ.

ವಿಶೇಷವಾದ ಸುವಾಸನೆಯನ್ನು ಹೊಂದಿರುವ ಕಾರಣ ಈ ಅಣಬೆ ಅಡುಗೆ ಮಾಡುವಾಗ ಸುಮಧುರವಾದ ಪರಿಮಳವನ್ನು ಹರಡುತ್ತದೆ. ಅಷ್ಟೇ ಅಲ್ಲದೆ, ಮಾಂಸದಂತಹ ರುಚಿ ಹಾಗೂ ತಿನ್ನುವಾಗ ಮಾಂಸದಂತ ಅನುಭವ ನೀಡುವ ಕಾರಣ ಇದನ್ನು ಶ್ರೀಮಂತರು ತುಂಬಾ ಇಷ್ಟ ಪಡುತ್ತಾರೆ. ಇವುಗಳ ಬೆಲೆ ಪ್ರತಿ ಪೌಂಡ್‌ಗೆ ಸರಿ ಸುಮಾರು ೫೦೦ ಡಾಲರ್‌ಗಳಾಗಿದ್ದು, ಭಾರತದ ಅಂದಾಜು ೪೧ ಸಾವಿರ ರೂಪಾಯಿಗಳಾಗುತ್ತದೆ. ಅಂದರೆ ಒಂದು ಕೆ.ಜಿ ಅಣಬೆಯ ಬೆಲೆ ಏನಿಲ್ಲಾಂದ್ರೂ ೧ ರಿಂದ ೧.೫ ಲಕ್ಷ ಆಗುತ್ತದೆ.

ಇದನ್ನೂ ಓದಿ : ತೀವ್ರಗೊಳ್ಳುತ್ತಿರುವ ತಾಪಮಾನ; ಹೆಚ್ಚುತ್ತಿದೆ ಫುಡ್ ಪಾಯಿಸನಿಂಗ್ ಪ್ರಕರಣ

ಮಾಟ್ಸುಟೇಕ್ ಅಣಬೆಗಳ ರುಚಿ ಹೇಗಿರುತ್ತೆ?

ಸಾಮಾನ್ಯವಾಗಿ ಜನರು ಅಡುಗೆಯಲ್ಲಿ ಪರಿಮಳ ಸೂಸಲು ಮಸಾಲೆ ಅಥವಾ ದಾಲ್ಚಿನ್ನಿಯಂತಹ ಪದಾರ್ಥಗಳನ್ನು ಹೆಚ್ಚಾಗಿ ಬಳಕೆ ಮಾಡ್ತಾರೆ. ಆದ್ರೆ ಈ ಅಣಬೆಯ ಪದಾರ್ಥಕ್ಕೆ ಇಂತಹ ಮಸಾಲೆಗಳನ್ನು ವಿಶೇಷವಾಗಿ ಬಳಸಬೇಕಾಗಿಲ್ಲ. ಅಣಬೆಯಿಂದ ಹೊರ ಸೂಸುವ ಪರಿಮಳ ಅದು ಎಲ್ಲಾ ಮಸಾಲಾ ಪದಾರ್ಥಗಳಿಗಿಂತಲೂ ವಿಶೇಷವಾಗಿದೆ. ಹೀಗಾಗಿ ಅತ್ಯಂತ ರುಚಿಯಾಗಿಯೂ ತಿನ್ನಲು ಸ್ವಾದಿಷ್ಟವೂ ಆಗಿದೆ.

ಮಾಟ್ಸುಟೇಕ್ ಅಣಬೆಗಳು ಏಕೆ ದುಬಾರಿಯಾಗಿವೆ?

ಹಿಂದೆ ಧಾರಾಳವಾಗಿ ಸಿಗುತ್ತಿದ್ದ ಈ ಅಣಬೆ ಈಗ ಬಹಳ ಕಡಿಮೆ ಪ್ರಮಾಣದಲ್ಲಿ ಪೂರೈಕೆ ಆಗುತ್ತಿದೆ. ಉತ್ತರ ಅಮೆರಿಕಾದಲ್ಲಿ ಹುಟ್ಟಿಕೊಂಡ ಒಂದು ವೈರಾಣು ಹಾಗೂ ನಾಶವಾಗುತ್ತಿರುವ ರೆಡ್‌ ಫೈನ್‌ ಕಾಡುಗಳಿಂದಾಗಿ ಪರಿಸರದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಈ ಕಾರಣದಿಂದ ಪರಿಸರದ ನಾಶ ಉಂಟಾಗುತ್ತಿರುವ ಕಾರಣ ವಾತಾವರಣದಲ್ಲೂ ಏರುಪೇರು ಉಂಟಾಗಿದೆ. ಹೀಗಾಗಿ ದಿನೇ ದಿನೇ ಜಪಾನ್‌ ದೇಶದಲ್ಲಿ ಈ ಅಣಬೆ ಬೆಳೆ ಕಡಿಮೆ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತಿದೆ. ಈಗ ವಾರ್ಷಿಕವಾಗಿ ೧ ಸಾವಿರ ಮೆಟ್ರಿಕ್‌ ಟನ್‌ ಗಿಂತಲೂ ಕಡಿಮೆ ಪ್ರಮಾಣದಲ್ಲಿ ಈ ಅಣಬೆ ಮಾರುಕಟ್ಟೆಗೆ ಬರುತ್ತಿದೆ. ಹೀಗಾಗಿ ಡಿಮ್ಯಾಂಡ್‌ ಜಾಸ್ತಿ ಇದ್ರೂ ಪೂರೈಕೆ ಇಲ್ಲದ ಕಾರಣ ಬೆಲೆ ಈ ಮಟ್ಟಕ್ಕೆ ಏರಿಕೆಯಾಗಿದೆ.

LATEST NEWS

ಮಾಜಿ ಸಿಎಂ ಎಸ್.ಎಂ. ಕೃಷ್ಣರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ!

Published

on

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ(91) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ, ತೀವ್ರ ನಿಗಾ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಏಪ್ರಿಲ್ 21ರಂದು ಜ್ವರ, ಕೆಮ್ಮು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಚೇತರಿಸಿಕೊಂಡಿದ್ದ ಅವರು ಡಿಸ್ಚಾರ್ಜ್ ಆಗಿದ್ದರು.
ಮತ್ತೆ ಎಸ್‌.ಎಂ. ಕೃಷ್ಣ ಅವರನ್ನು ಏಪ್ರಿಲ್ 29 ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನು ಓದಿ:ಪ್ರತಿ ಮಹಿಳೆಗೆ ಸಿಗುತ್ತೆ 3 ಲಕ್ಷ ರೂಪಾಯಿ..! ಈ ಹಣ ಸಿಗಲು ಹೀಗೆ ಮಾಡಿ ಸಾಕು!

ಆಸ್ಪತ್ರೆ ಪ್ರಕಟಣೆ :

ಎಸ್ ಎಂ ಕೃಷ್ಣ ಅವರು ಐಸಿಯುನಲ್ಲಿದ್ದಾರೆ . ವಿಶೇಷ ನಿಗಾ ವಹಿಸಲಾಗುತ್ತಿದೆ. ಅವರಿಗೆ ಡಾ.ಸತ್ಯನಾರಾಯಣ ಮೈಸೂರು ಹಾಗೂ ಡಾ.ಸುನೀಲ್ ಕಾರಂತ್ ನೇತೃತ್ವದ ಕ್ರಿಟಿಕಲ್ ಕೇರ್ ತಂಡ ಚಿಕಿತ್ಸೆ ನೀಡುತ್ತಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

Continue Reading

BANTWAL

ಬಯಲಾಯ್ತು ಅಕ್ರಮ ಸಂಬಂಧ; ನೇಣಿಗೆ ಶರಣಾದ ವಿವಾಹಿತ!

Published

on

ಪುತ್ತೂರು : ವ್ಯಕ್ತಿಗಳು ಸಾಲಬಾಧೆಯಿಂದಲೋ, ಅನಾರೋಗ್ಯದಿಂದಲೋ ಅಥವಾ ಜೀವನದಲ್ಲಿ ಜಿಗುಪ್ಸೆ ಹೊಂದಿಯೋ ಜೀವಾಂತ್ಯಗೊಳಿಸುವುದನ್ನು ಕಾಣುತ್ತೇವೆ. ಆದರೆ, ಇಲ್ಲೊಬ್ಬ,
ಅಕ್ರಮ ಪ್ರೇಮ ಸಂಬಂಧದ ಹಿನ್ನಲೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪ ಶನಿವಾರ ಘಟನೆ ಸಂಭವಿಸಿದೆ.

ಈಶ್ವರಮಂಗಲ ಸಮೀಪದ ಕತ್ರಿಬೈಲುವಿನ ಪ್ರಶಾಂತ್ ಮುಖಾರಿ (೩೮) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ ತನ್ನ ಮನೆಯಿಂದ ಸುಮಾರು ಒಂದು ಕಿಲೋಮೀಟರ್ ಅಂತರದಲ್ಲಿರುವ ಚಿಮುಣಿಗುಡ್ಡೆ ಎಂಬಲ್ಲಿನ ಗುಡ್ಡದ ರಸ್ತೆ ಬದಿಯಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

 

ಇದನ್ನು ಓದಿ: ಈ ವೀಡಿಯೋವನ್ನು ವೈರಲ್ ಮಾಡುವ ಧೈರ್ಯ ನಿಮ್ಮಲ್ಲಿ ಇದ್ಯಾ ? ವೀಡಿಯೋವೊಂದನ್ನು ಹಂಚಿಕೊಂಡು ಸವಾಲೆಸೆದ ನಟಿ ಜ್ಯೋತಿ ರೈ

ಅಕ್ರಮ ಸಂಬಂಧ ಬಯಲು – ನೇಣಿಗೆ ಶರಣು :

ಪ್ರಶಾoತ್ ಮುಖಾರಿ ಅವರಿಗೆ ಪತ್ನಿ ಮತ್ತು ಎಳೆಯ ವಯಸ್ಸಿನ ಪುತ್ರನಿದ್ದಾನೆ. ಈ ನಡುವೆ ಇನ್ನೊಬ್ಬಳು ಯುವತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ವಿಚಾರ ಬಹಿರಂಗಗೊಂಡಿದ್ದ ಹಿನ್ನೆಲೆಯಲ್ಲಿ ಅವರು ಅಪಮಾನಗೊಂಡು ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ.
ಮೃತರ ಪತ್ನಿ ನೀಡಿರುವ ದೂರಿನಂತೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

BANTWAL

ಕಡಬ : ಸಿಡಿಲು ಬಡಿದು ಓರ್ವ ಸಾವು; ಇಬ್ಬರಿಗೆ ಗಾಯ

Published

on

ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ವರುಣ ಕೃಪೆ ತೋರಿದ್ದಾನೆ. ಇನ್ನೊಂದೆಡೆ ಸಿಡಿಲಾರ್ಭಟಕ್ಕೆ ವ್ಯಕ್ತಿ ಬಲಿಯಾಗಿದ್ದಾರೆ.. ಕಡಬ ತಾಲೂಕಿನಲ್ಲಿ ಸಿಡಿಲು ಬಡಿದು ಓರ್ವ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯಗಳಾಗಿವೆ. ಉತ್ತರ ಪ್ರದೇಶ,ಚೈನ್‌ಪುರ್ ಮೂಲದ ಶ್ರೀಕಿಶುನ್ ಮೃತ ವ್ಯಕ್ತಿ.

ಇದನ್ನು ಓದಿ:ಪುತ್ತೂರಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯುವಕ! 

ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ನದಿ ಬದಿಯ ಶೆಡ್ ನಲ್ಲಿದ್ದ ವೇಳೆ ಶೆಡ್ ಗೇ ಸಿಡಿಲು ಬಡಿದಿದೆ. ಪರಿಣಾಮ ಮರಳು ತೆಗೆಯುವ ಉತ್ತರ ಪ್ರದೇಶ ಮೂಲದ ಕಾರ್ಮಿಕ ಸಾವನ್ನಪ್ಪಿದ್ದಾನೆ.
ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.

Continue Reading

LATEST NEWS

Trending