bengaluru
ಕ್ರಿಕೆಟ್ ನಲ್ಲಿ ಮೀಸಲಾತಿ ಇದ್ದಿದ್ದರೆ ಟೀಂ ಇಂಡಿಯಾ ಗೆಲ್ಲುತ್ತಿತ್ತು- ಚೇತನ್ ಉಡಾಫೆ ಮಾತು
ಬೆಂಗಳೂರು: ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನುಭವಿಸಿ ಕಣ್ಣೀರು ಇಡುತ್ತಿದ್ದಾರೆ ಇತ್ತ ನಟ ಚೇತನ್ ಟೀಂ ಇಂಡಿಯಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ವರ್ಲ್ಡ್ ಕಪ್ 2023 ರ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಕ್ರಿಕೆಟ್ ಕದನ ಶುರುವಾಗಿತ್ತು, ಆದರೆ ಅದರಲ್ಲಿ ಭಾರತ ಸೋಲನ್ನು ಅನುಭವಿಸಿದ್ದು, ಕೋಟ್ಯಂತರ ಅಭಿಮಾನಿಗಳಿಗೆ ನೋವು ಉಂಟಾಗಿದೆ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಸೋತ ಬೆನ್ನಲೇ ನಟ ಚೇತನ್ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ‘ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಅಗತ್ಯವಿದೆ. ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಇದ್ದಿದ್ದರೆ ಭಾರತ ಸುಲಭವಾಗಿ ಈ ವಿಶ್ವ ಕಪ್ ಗೆಲ್ಲುತ್ತಿತ್ತು’ ಎಂದು ಬರೆದುಕೊಂಡಿದ್ದಾರೆ.
ಈ ಟೀಕೆಗೆ ಸಾಮಾಜಿಕ ಜಾಲತಣಾದಲ್ಲಿ ಇಂಡಿಯಾ ಕ್ರಿಕೆಟ್ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರ ಟೀಕೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ ಕ್ರಿಕೆಟ್ ಫ್ಯಾನ್ಸ್’ ಎಂತೆಂತಹ ಮನೋ ರೋಗಿಗಳನ್ನು ವೈದ್ಯರು ಗುಣಪಡಿಸಿದ್ದಾರೆ, ಸಾಧ್ಯವಾದರೆ ಇವರನ್ನು ಗುಣಪಡಿಸಬೇಕು. ಏಕೆಂದರೆ ಇಂತಹ ಪ್ರತಿಭೆ ನಮ್ಮನ್ನು ಬಿಟ್ಟು ಹೋಗಬಾರದು ಎಂದು ತಿವಿದಿದ್ದಾರೆ. ಅಲ್ಲದೇ ನೆಮ್ಮದಿಯಾಗಿ ಅಳೋಕು ಈ ಜನ ಬಿಡ್ತಿಲ್ಲ, ಅಣ್ಣ ರಿಸರ್ವೇಶನ್ ಕ್ರಿಕೆಟ್ ಅಲ್ಲಿ ಬೇಕು ಅಂತ ಅಂಬೇಡ್ಕರ್ ಹೇಳಿದ್ರಾ? ಪೆರಿಯಾರ್ ಹೇಳಿದ್ರಾ? ಎಂದು ಪ್ರಶ್ನೆ ಮಾಡಿದ್ದಾರೆ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 240 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 43 ಓವರ್‌ಗಳಲ್ಲೇ 4 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿ ಗೆಲುವು ಸಾಧಿಸಿತು. ಈ ಮೂಲಕ 6ನೇ ಬಾರಿಗೆ ಏಕದಿನ ವಿಶ್ವಕಪ್ ಟೂರ್ನಿ ಟ್ರೋಫಿ ಗೆಲ್ಲುವ ಕನಸನ್ನು ನನಸು ಮಾಡಿಕೊಂಡಿತು.
bengaluru
ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕ*ರಣಕ್ಕೆ ಟ್ವಿಸ್ಟ್..! ಎಸ್‌ಐಟಿ ರಚನೆ!!
ಹಾಸನ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಪ್ರಜ್ವಲ್ ಸಾವಿರಾರು ಹೆಣ್ಣುಮಕ್ಕಳ ಮೇಲಿನ ಲೈಂ*ಗಿಕ ದೌರ್ಜ*ನ್ಯ ಆರೋಪ ಎದುರಿಸುತ್ತಿದ್ದಾರೆ. ಈ ಬಗ್ಗೆ ಮಾಜಿ ಸಚಿವ, ಶಾಸಕ ಎಚ್.ಡಿ.ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ರವಿವಾರ ಪ್ರಕರಣ ದಾಖಲಾಗಿದೆ.
47 ವರ್ಷದ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ದೂರು ನೀಡಿದ್ದಾರೆ. ಈ ಹಿಂದೆ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತ ಮಹಿಳೆ ನೀಡಿದ ದೂರಿನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದೂರಿನಲ್ಲಿ ತಂದೆ ಎಚ್‌ಡಿ ರೇವಣ್ಣ ಅವರನ್ನು ಎ1 ಆರೋಪಿಯಾಗಿ ನಮೂದಿಸಿದ್ದು, ಎ2 ಪ್ರಜ್ವಲ್ ರೇವಣ್ಣ ಆಗಿದ್ದಾರೆ. ದೂರಿನಲ್ಲಿ ಏನಿದೆ ಅಂದರೆ… ನಮ್ಮ ಪತಿಗೆ ಎಚ್‌ಡಿ ರೇವಣ್ಣ ತಮ್ಮ ಡೇರಿಯಲ್ಲಿ ಕೆಲಸ ಕೊಡಿಸಿದ್ದರು. ಬಳಿಕ 2015ರಲ್ಲಿ ಹಾಸ್ಟೆಲ್ ಒಂದರಲ್ಲಿ ಅಡುಗೆ ಕೆಲಸಕ್ಕೆ ಸೇರಿಸಿದ್ದರು. ನಂತರ ತಮ್ಮ ಮನೆಯಲ್ಲಿ ಅಡುಗೆ ಕೆಲಸಕ್ಕೆ ಬರುವಂತೆ ರೇವಣ್ಣ ಹೇಳಿದ್ದರು. ಅಡುಗೆ ಕೆಲಸಕ್ಕೆ ಸೇರಿಕೊಂಡ ಬಳಿಕ ಭವಾನಿ ರೇವಣ್ಣ ಮನೆಯಲ್ಲಿ ಇಲ್ಲದ ವೇಳೆ ಮೈಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ಅಡುಗೆ ಮನೆಗೆ ಬಂದು ಪ್ರಜ್ವಲ್ ಸಹ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಪ್ರಜ್ವಲ್ ರೇವಣ್ಣ ಅಸಭ್ಯವಾಗಿ ವರ್ತಿಸಿದ್ದಾರೆ. ನನ್ನ ಮಗಳಿಗೂ ವಿಡಿಯೋ ಕಾಲ್ ಮಾಡಿ ಅಸಭ್ಯವಾಗಿ ವರ್ತಿಸಿದ್ದಾರೆ. ಪದೇ ಪದೇ ಕಾಲ್ ಮಾಡಿದ್ದಕ್ಕೆ ಪುತ್ರಿ ಪ್ರಜ್ವಲ್ ನಂಬರ್ ಬ್ಲಾಕ್ ಮಾಡಿದ್ದರು. ಲೈಂಗಿಕ ಕಿರುಕುಳ ಹೆಚ್ಚಾದಾಗ ಕೆಲಸಬಿಟ್ಟು ಹೋಗಿದ್ದೆ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾರೆ. ಸದ್ಯ ಪೆನ್‌ಡ್ರೈವ್ ವಿವಾದದಲ್ಲಿರುವ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಜರ್ಮನಿ ಸೇರಿದ್ದಾರೆ ಎಂದು ಹೇಳಲಾಗಿದೆ. ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಹಾಸನದಲ್ಲಿ ಏಪ್ರಿಲ್ 26 ರಂದು ನಡೆದಿದೆ. ಜೆಡಿಎಸ್ – ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದ್ದಾರೆ.
ಮುಂದೆ ಓದಿ..; ಲೈಂ*ಗಿಕ ದೌರ್ಜ*ನ್ಯ ಆರೋಪ : ವಿಕಿಪೀಡಿಯಾದಲ್ಲಿ ಸೇವ್ ಆಯ್ತು ಪ್ರಜ್ವಲ್ ರೇವಣ್ಣ ಕೇಸ್!
ಎಸ್‌ಐಟಿಗೆ ನೀಡುವುದಾಗಿ ಗೃಹಸಚಿವರಿಂದ ಸೂಚನೆ:
ಚುನಾವಣೆಗೆ ಎರಡು ದಿನಗಳು ಬಾಕಿ ಉಳಿದಿರುವಾಗ ಈ ವಿಡಿಯೊ ದೃಶ್ಯಾವಳಿಗಳ ತುಣುಕುಗಳ ಪೆನ್‌ಡ್ರೈವ್‌ಗಳು ಹಾಸನದಾದ್ಯಂತ ವೈರಲ್ ಆಗಿತ್ತು. ಪ್ರಜ್ವಲ್ ರೇವಣ್ಣ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ನೀಡುವುದಾಗಿ ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
bengaluru
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬ್ಯಾಗ್ ಪರಿಶೀಲಿಸಿದ ಕಸ್ಟಮ್ಸ್ ಅಧಿಕಾರಿಗಳಿಗೆ ಶಾಕ್; ಅದರಲ್ಲಿತ್ತು 10 ಅನಕೊಂಡಾ!
ಬೆಂಗಳೂರು : ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ನಡೆಸುತ್ತಿದ್ದ ಕಸ್ಟಮ್ಸ್ ಅಧಿಕಾರಿಗಳು ಶಾಕ್ ಗೆ ಒಳಗಾಗಿದ್ದಾರೆ. ಯಾಕೆಂದರೆ, ಪ್ರಯಾಣಿಕನೊಬ್ಬನ ಬ್ಯಾಗ್ ನಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 10 ಅನಕೊಂಡಾ ಪತ್ತೆಯಾಗಿವೆ. ಆತ ಬ್ಯಾಂಕಾಕ್ನಿಂದ ಅಕ್ರಮವಾಗಿ 10 ಅನಕೊಂಡಾ ಹಾವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಬ್ಯಾಂಕಾಕ್ನಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರ ಲಗೇಜ್ಗಳನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದರು. ಈ ವೇಳೆ ಪ್ರಯಾಣಿಕನೊಬ್ಬನ ಲಗೇಜ್ ತಪಾಸಣೆ ಮಾಡುವಾಗ 10 ಹಳದಿ ಅನಕೊಂಡ ಪತ್ತೆಯಾಗಿವೆ.
ಕೂಡಲೇ ಅಧಿಕಾರಿಗಳು ಪ್ರಯಾಣಿಕನನ್ನ ವಶಕ್ಕೆ ಪಡೆದಿದ್ದು, ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳು ಹಳದಿ ಬಣ್ಣ ಆನಕೊಂಡಾ ಹಾವುಗಳನ್ನು ರಕ್ಷಿಸಿ, ಅರಣ್ಯ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ.
ಇದನ್ನೂ ಓದಿ : ಸಾಕುನಾಯಿಯನ್ನು ಹೊತ್ತೊಯ್ದ ಚಿರತೆ..!! ಭಯ ಭೀತರಾದ ಜನತೆ
ವನ್ಯಜೀವಿಗಳ ಕಳ್ಳಸಾಗಣೆ ಮಾಡಿದ ಆರೋಪದಡಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ.
bangalore
ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಕೆಎಸ್ ಈಶ್ವರಪ್ಪ ಬಿಜೆಪಿ ಪಕ್ಷದಿಂದ ಉಚ್ಛಾಟನೆ..!
ಬೆಂಗಳೂರು: ಬಿಜೆಪಿ ಹಿರಿಯ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಆರು ವರ್ಷಗಳ ಕಾಲ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶಿಸಿ ಬಿಜೆಪಿ ಶಿಸ್ತು ಸಮಿತಿ ಈ ನಿರ್ಧಾರ ಕೈಗೊಂಡಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಕೆಎಸ್ ಈಶ್ವರಪ್ಪ, ತಮ್ಮ ನಾಮಪತ್ರವನ್ನು ಹಿಂಪಡೆಯಲು ನಿನ್ನೆ(ಎ.22) ಕೊನೆಯ ದಿನವಾಗಿತ್ತು. ಆದರೆ, ಈಶ್ವರಪ್ಪ ನಾಮಪತ್ರವನ್ನು ಹಿಂಪಡೆಯಲು ನಿರಾಕರಿಸಿದ ಕಾರಣ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ. ಆರು ವರ್ಷಗಳ ಕಾಲ ಅವರು ಬಿಜೆಪಿ ಪಕ್ಷದಡಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.
ಮುಂದೆ ಓದಿ..; ಚೌಟ ಪರ ಪ್ರಚಾರಕ್ಕೆ ಪುತ್ತೂರಿಗೆ ಬರಲಿದ್ದಾರೆ ಅಣ್ಣಾಮಲೈ
ಬಿಜೆಪಿ ಪಕ್ಷದಲ್ಲೇ ಇದ್ದುಕೊಂಡ ಕೆ ಎಸ್ ಈಶ್ವರಪ್ಪ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡು ನಿಂದಿಸುತ್ತಿದ್ದರು. ಬಿ ಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬ ರಾಜಕಾರಣವನ್ನು ಕೆ ಎಸ್ ಈಶ್ವರಪ್ಪ ತೀವ್ರವಾಗಿ ಟೀಕಿಸುತ್ತಿದ್ದರು. ತನ್ನ ಬೆಂಬಲ ಮೋದಿ ಪ್ರಧಾನಿಗೆ ಇದೆ ಎಂದು ಹೇಳಿಕೊಂಡಿದ್ದ ಈಶ್ವರಪ್ಪ ತಾನು ಗೆದ್ದ ಬಳಿಕ ಮೋದಿಗೆ ಬೆಂಬಲ ನೀಡುವುದಾಗಿ ಹೇಳಿಕೆ ನೀಡುತ್ತಿದ್ದರು. ಆದರೆ ಇದೀಗ ಪಕ್ಷದಿಂದಲೇ ಇವರನ್ನು ಉಚ್ಛಾಟಿಸಲಾಗಿದೆ.