Thursday, December 1, 2022

ಇಯಾನ್ ಚಂಡಮಾರುತಕ್ಕೆ ಬೆಚ್ಚಿಬಿದ್ದ ಅಮೇರಿಕಾ-ಭಾರೀ ಅನಾಹುತ…

ವಾಷಿಂಗ್ಟನ್: ಚಂಡಮಾರುತದ ಅಬ್ಬರಕ್ಕೆ ಇಯಾನ್ ಕಂಗಾಲಾಗಿರುವುದರ ಜೊತೆಗೆ ಅಮೆರಿಕದ ಅನೇಕ ರಾಜ್ಯಗಳು ಕೂಡಾ ಅಕ್ಷರಶಃ ನಲುಗಿ ಹೋಗಿವೆ.

ಈ ಪ್ರಕೃತಿ ದುರಂತವು ಫ್ಲೋರಿಡಾದಲ್ಲಿ ಅನಾಹುತಕಾರಿ ಹಾನಿ ಉಂಟುಮಾಡಿದೆ.
ಭೀಕರ ಬಿರುಗಾಳಿ ಮಳೆ, ಈಗ ಸೌತ್ ಕೆರೋಲಿನಾದ ಕರಾವಳಿಗೆ ಅಪ್ಪಳಿಸಿದೆ. ರಸ್ತೆಗಳು ಜಲಾವೃತಗೊಂಡಿದ್ದು, ಸಾವಿರಾರು ಮಂದಿ ಮನೆಗಳಿಂದ ಹೊರಗೆ ಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ಕನಿಷ್ಠ 17 ಮಂದಿ ಮೃತಪಟ್ಟಿದ್ದಾರೆ.


ಒಂದು ವಾರದಿಂದ ಚಂಡಮಾರುತ ಜನರಲ್ಲಿ ಭೀತಿ ಮೂಡಿಸಿದೆ. ಪಶ್ಚಿಮ ಕ್ಯೂಬಾ ಮೂಲಕ ಬಂದ ಚಂಡಮಾರುತವು ಫ್ಲೋರಿಡಾದಲ್ಲಿ ಆರ್ಭಟ ಪ್ರದರ್ಶಿಸಿತ್ತು.

ಅಟ್ಲಾಂಟಿಕ್ ಸಮುದ್ರದ ಬಿಸಿ ನೀರಿನಲ್ಲಿ ಮತ್ತಷ್ಟು ಪ್ರಬಲಗೊಂಡು, ಹಿಂದಕ್ಕೆ ತಿರುಗಿ ದಕ್ಷಿಣ ಕೆರೋಲಿನಾಕ್ಕೆ ಅಪ್ಪಳಿಸಿದೆ.

ಗಂಟೆಗೆ ಸುಮಾರು 140 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಇದರ ಜತೆಯಲ್ಲಿ ಸುರಿಯುತ್ತಿರುವ ಮಳೆ ಜನಜೀವನವನ್ನು ಅಸ್ತವ್ಯಸ್ತ ಮಾಡಿದೆ. ಬೀಚ್ ಸಮೀಪದ ಕಟ್ಟಡಗಳು ಧರೆಗುರುಳಿವೆ.

20 ಲಕ್ಷಕ್ಕೂ ಅಧಿಕ ಜನರು ವಿದ್ಯುತ್ ಇಲ್ಲದೆ ಪರದಾಡುವಂತಾಗಿದೆ. ನೀರಿನಲ್ಲಿ ಮುಳುಗಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಹೆಣವಾಗುತ್ತಿದ್ದಾರೆ.

ಈ ನೈಸರ್ಗಿಕ ವಿಕೋಪದ ವಿರುದ್ಧ ರಕ್ಷಣಾ ಕಾರ್ಯಾಚರಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸಿಡಿಲಿನ ಹೊಡೆತಕ್ಕೆ ಅನೇಕ ಮನೆಗಳು, ಮರಗಳು ಬೆಂಕಿಯ ಕೆನ್ನಾಲಗೆಯಲ್ಲಿ ಭಸ್ಮವಾಗಿರುವುದು ಕಂಡುಬಂದಿದೆ.

ದೋಣಿಯೊಂದು ಚಂಡಮಾರುತದ ಪರಿಣಾಮ ಮುಳುಗಿಹೋಗಿದ್ದ, ಅದರಲ್ಲಿದ್ದ 17 ವಲಸಿಗರು ನಾಪತ್ತೆಯಾಗಿದ್ದರು. ಅವರಲ್ಲಿ ಒಬ್ಬರ ಮೃತದೇಹ ಪತ್ತೆಯಾಗಿದ್ದು, 9 ಮಂದಿಯನ್ನು ರಕ್ಷಿಸಲಾಗಿದೆ.

LEAVE A REPLY

Please enter your comment!
Please enter your name here

Hot Topics