Saturday, November 26, 2022

ನಾಡಿನಲ್ಲಿ ದಸರಾ ಜೊತೆ ರಿಷಭ್‌ ಶೆಟ್ಟಿಯ ‘ಕಾಂತಾರ’ ದ್ದೇ ಹವಾ- ಪ್ರೇಕ್ಷಕ ಫುಲ್ ಫಿದಾ : ಫುಲ್ ಮಾರ್ಕ್ಸ್ ನೀಡಿದ ನೆಟ್ಟಿಗ..!

ಮಂಗಳೂರು : ತುಳುವ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿದ್ದು ಪ್ರೇಕ್ಷಕ ಫುಲ್ ಫಿದಾ ಆಗಿದ್ದಾನೆ ಜೊತೆಗೆ ಪ್ರಶಂಸೆಯ ಮಹಾಪೂರವೇ ಚಿತ್ರತಂಡಕ್ಕೆ ಹರಿದುಬರುತ್ತಿದೆ.

ಸಾಮಾಜಿಕ ಜಾಲತಾಣದಲ್ಲಂತೂ ಸದ್ಯಕ್ಕೆ ಕಾಂತಾರದ್ದೇ ಹವಾ ಫೇಸ್‌ಬುಕ್‌, ಟ್ವಿಟರ್‌, ಯೂಟ್ಯೂಬ್‌ಗಳ ಲಕ್ಷಾಶಂತರ ಅಭಿಮಾನಿಗಳು ಕಾಂತಾರಕ್ಕೆ ಮೆಚ್ಚುಗೆಯ ಹೊಳೆಯೇ ಹರಿದಿದೆ.

ಎಲ್ಲಿ ಹುಡುಕಿದರೂ ಸಿನಿಮಾದ ಕುರಿತು ನೆಗೆಟಿವ್‌ ವಿಮರ್ಶೆಗಳು ಸಿಗುವುದು ಕಷ್ಟವೇ ಎನಿಸಿದೆ.

ರಿಷಭ್‌ ಶೆಟ್ಟಿಯವರ ಆಲೋಚನೆಯ ಗಿಡಕ್ಕೆ ನೀರು ಹಾಕಿದವರು ಹೊಂಬಾಳೆಯಂತಹ ದೊಡ್ಡ ನಿರ್ಮಾಣ ಸಂಸ್ಥೆ.

ಈ ಸಂಸ್ಥೆ ಬೆನ್ನೆಲುಬಾಗಿ ನಿಂತಿದ್ದರಿಂದ ಅದ್ಬುತವಾದ ಕೃತಿ ರಚನೆಯಾಗಿದೆ. ಕರಾವಳಿಯ ದೈವಾರಾಧನೆಯನ್ನು ಮೂಲವಾಗಿಟ್ಟುಕೊಂಡು ಬಂದಿರುವ ಕಾಂತಾರದಂತಹ ಅದ್ಬುತವಾದ ಚಿತ್ರವನ್ನು ನಾವು ಇಲ್ಲಿಯವರೆಗೆ ಕನ್ನಡದಲ್ಲಿ ನೋಡಿಲ್ಲ ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದಾರೆ.

ಇದು ನಮ್ಮ ನೆಲದ ಸೊಗಡು ಎಂದು ಕೆಲವರು ಹಾಡಿ ಹೊಗಳಿದ್ದಾರೆ.

ಕಾಂತಾರವೇ ಕನ್ನಡ ದಂತಕಥೆ. ಯಾವ ಭಾಷೆಯ ಸಿನಿಮಾ ಬಂದರೂ ಕಾಂತಾರವನ್ನು ಸೋಲಿಸಲು ಸಾಧ್ಯವಿಲ್ಲ.

ಈ ವರ್ಷದ ಎಲ್ಲ ಪ್ರಶಸ್ತಿಗಳು ಈ ಸಿನಿಮಾಕ್ಕೆ ಸಲ್ಲಬೇಕು ಎಂಬಿತ್ಯಾದಿ ರೀತಿಯ ಸಾಕಷ್ಟು ಬರಹಗಳು ಸಾಮಾಜಿಕ ಜಾಲತಾಣದಲ್ಲಿ ಕಾಣುತ್ತಿದೆ.

ಬಹುತೇಕರು ಮೆಚ್ಚಿದ್ದು ಚಿತ್ರದ ಕ್ಲೈಮ್ಯಾಕ್ಸ್‌ ಹಾಗೂ ರಿಷಭ್‌ ಶೆಟ್ಟಿಯವರ ನಟನೆಯನ್ನು. ಬಾಲ್ಯದಿಂದಲೂ ಭೂತ, ಕೋಲ, ದೈವಗಳು, ಅವುಗಳ ಕಾರ್ಣಿಕ, ಗಗ್ಗರದ ಸದ್ದು ನೋಡಿಕೊಂಡು ಬೆಳೆದ ನಮಗೆ ಇದೊಂದು ವಿಶುವಲ್‌ ಟ್ರೀಟ್‌ ಎಂದು ಬಹುತೇಕ ದಕ್ಷಿಣ ಕನ್ನಡಿಗರು ಬರೆದುಕೊಂಡಿದ್ದಾರೆ.


ರಮ್ಯಾ, ರಕ್ಷಿತ್ ಶೆಟ್ಟಿ, ಅಮೂಲ್ಯ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

‘ಕಾಂತಾರ’, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿದ್ದು, ಈ ಚಿತ್ರದಲ್ಲಿ ರಿಷಭ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ.

 

LEAVE A REPLY

Please enter your comment!
Please enter your name here

Hot Topics

ಬೆಳ್ತಂಗಡಿಯಲ್ಲಿ ರಸ್ತೆ ಅಪಘಾತಕ್ಕೆ ಕಾಲೇಜು ವಿದ್ಯಾರ್ಥಿ ಬಲಿ..! 2 ದಿನದಲ್ಲಿ ಇಬ್ಬರು ಬಲಿ..!

ಬೆಳ್ತಂಗಡಿ:  ಬೆಳ್ತಂಗಡಿಯಲ್ಲಿ 2 ದಿನದಲ್ಲಿ ಒಂದೇ ಕಾಲೇಜಿನ  ಇಬ್ಬರು ವಿದ್ಯಾರ್ಥಿಗಳು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಜೀವಕಳಕೊಂಡಿದ್ದಾರೆ. ಎಳೆ ವಯಸ್ಸಿನ ಮಕ್ಕಳಿಗೆ ದ್ವಿಚಕ್ರವಾಹನಗಳನ್ನು ಕೊಡುವ ಪೋಷಕರಿಗೆ ಎಚ್ಚರಿಕೆಯ ಕರೆ ಗಂಟೆಯಾಗಿದೆ.  ಮಡಂತ್ಯಾರು ಸೆಕ್ರೆಡ್ ಹಾರ್ಟ್...

ಮಂಗಳೂರು ಬಲ್ಮಠ ರಸ್ತೆಯಲ್ಲಿ ಕಾರ್ ಬೆಂಕಿಗಾಹುತಿ..!

ಮಂಗಳೂರು : ನಗರದ ಬಲ್ಮಠ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ಕಾರೊಂದು ಬೆಂಕಿಗಾಹುತಿಯಾದ ಘಟನೆ ಇಂದು ಅಪರಾಹ್ನ ಸಂಭವಿಸಿದೆ.ಬಲ್ಮಠ ಜ್ಯೂಸ್ ಜಂಕ್ಷನ್ ಬಳಿ ಪಾರ್ಕ್ ಮಾಡಲಾಗಿದ್ದ ಫೋರ್ಡ್‌ ಕಂಪೆನಿ ಕಾರು ಬೆಂಕಿಗಾಹುತಿಯಾಗಿದೆ.ಕಾರಿನ ಇಂಜಿನ್...

ಹೆಜಮಾಡಿ ಟೋಲ್ ಶುಲ್ಕ ಹೆಚ್ಚಳಕ್ಕೆ ಉಡುಪಿ ಶಾಸಕ ರಘುಪತಿ ಭಟ್ ತೀವ್ರ ವಿರೋಧ..!

ಸುರತ್ಕಲ್‌ನಲ್ಲಿ ಕಾರ್ಯಾಚರಿಸುತಿದ್ದ ಟೋಲ್‌ಗೇಟ್‌ನ್ನು ಮುಚ್ಚಿ ಅದನ್ನು ಹೆಜಮಾಡಿ ಟೋಲ್‌ಗೆ ವಿಲೀನಗೊಳಿಸಿ ಟೋಲ್ ಶುಲ್ಕ ಹೆಚ್ಚಳ ಮಾಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಧಾರವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ತೀವ್ರವಾಗಿ ವಿರೋಧಿಸಿದ್ದಾರೆ.ಉಡುಪಿ : ಸುರತ್ಕಲ್‌ನಲ್ಲಿ...