ಬಂಟ್ವಾಳ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಹೆಂಚು ತೆಗೆದು ಮನೆಯೊಳಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವಾದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕಟ್ಟೆ ಮನೆಯ ಕೆ ಎಂ ಮಹಮ್ಮದ್ ಎಂಬುವವರು ಮೇ.19 ರಂದು ಸಂಜೆ 7.00 ಗಂಟೆಗೆ ಬೀಗ ಹಾಕಿ ತಮ್ಮ ಮನೆಯವರೊಂದಿಗೆ ತಮ್ಮ ತಂಗಿಯ ಮನೆಗೆ ಹೋಗಿದ್ದರು.
ಮರುದಿನ ಮನೆಗೆ ಬಂದಾಗ ಮನೆಯೊಳಗೆ ಬಟ್ಟೆಗಳು ಚಲ್ಲಾಪಿಲ್ಲಿಯಾಗಿದ್ದು. ಮನೆಯ ಮಾಡಿನ ಹಂಚು ತೆಗೆದಿರುವುದು ಕಂಡು ಬಂದಿದೆ.
ನಂತರ ಮಲಗುವ ಕೋಣೆಗೆ ಹೋಗಿ ನೋಡಿದಾಗ ಕಪಾಟಿನಲ್ಲಿದ್ದ 5 ಪವನ್ ತೂಕದ ನಕ್ಲೇಸ್ 1, 1 ಪವನ್ ತೂಕದ 1 ಸರ, ಅರ್ಧ ಪವನ್ ತೂಕದ 1 ಉಂಗುರ, ಹಾಗೂ 5000 ನಗದು ಹಣವನ್ನು ಕಳ್ಳತನ ಮಾಡಿರುವುವುದಾಗಿದೆ.
ಕಳವಾದ ಸ್ವತ್ತಿನ ಮೌಲ್ಯ 1,40,000 ರೂ ಆಗಬಹುದು ಎಂದು ದೂರಿನಲ್ಲಿ ತಿಳಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.