Connect with us

LATEST NEWS

ಮರಕ್ಕೆ ಡಿಕ್ಕಿ ಹೊಡೆದ ಟೆಂಪೋ ಟ್ರಾಕ್ಸ್: 3 ಮಕ್ಕಳು ಸೇರಿ 7 ಮಂದಿ ದುರಂತ ಅಂತ್ಯ

Published

on

ಧಾರವಾಡ: ಟೆಂಪೋ ಟ್ರಾಕ್ಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 7 ಜನ ಮೃತಪಟ್ಟಿದ್ದಾರೆ. 13 ಜನರಿಗೆ ಗಾಯಗಳಾಗಿವೆ.
ಅನನ್ಯ, ಹರೀಶ, ಶಿಲ್ಪಾ , ನೀಲವ್ಚ, ಮಧುಶ್ರೀ, ಮಹೇಶ್ವರಯ್ಯ, ಶಂಭುಲಿಂಗಯ್ಯ, ಸಾವನ್ನಪ್ಪಿದ ದುರ್ದೈವಿಗಳು.


ಬಾಡ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಅಪಘಾತಕ್ಕೀಡಾದ ಕ್ರೂಸರ್ ನಲ್ಲಿ 20ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು.

ಇವರಲ್ಲಿ 7 ಜನರು ಮೃತಪಟ್ಟಿದ್ದಾರೆ. 13 ಜನರು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮದುವೆ ಹಿಂದಿನ ದಿನ ನಿಶ್ಚಿತಾರ್ಥ ಮುಗಿಸಿ ಮನ್ಸೂರು ಗ್ರಾಮದಿಂದ ಬೆನಕಟ್ಟಿ ಗ್ರಾಮಕ್ಕೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ವಾಹನ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ.

ಮೃತರಲ್ಲಿ ಮೂವರು ಮಕ್ಕಳು ಇದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆ ಮತ್ತು ಕಿಮ್ಸ್‌ಗೆ ದಾಖಲು ಮಾಡಲಾಗಿದೆ. ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಪಿ ಕೃಷ್ಣಕಾಂತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನಸೂರ ಗ್ರಾಮದಿಂದ ನಿಗದಿ (ಬೆನಕನಕಟ್ಟಿ) ಗೆ ಹೋಗುವಾಗ ಈ ಘಟನೆ ನಡೆದಿದೆ.

Click to comment

Leave a Reply

Your email address will not be published. Required fields are marked *

bangalore

ತಿಂಗಳ ಮೊದಲ ದಿನವೇ ಗ್ರಾಹಕರಿಗೆ ಶಾಕ್; ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ದರ ಏರಿಕೆ

Published

on

ಬೆಂಗಳೂರು : ಹೊಸ ವರ್ಷದ 3ನೇ ತಿಂಗಳು ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಹೌದು, ತಕ್ಷಣದಿಂದಲೇ ಜಾರಿಗೆ ಬರುವಂತೆ ವಾಣಿಜ್ಯ ಬಳಕೆ ಸಿಲಿಂಡರ್ ದರದ ಬೆಲೆ ಏರಿಕೆಯಾಗಿದೆ. ಮಾರ್ಚ್ 1 ರ ಶುಕ್ರವಾರದಿಂದಲೇ ಜಾರಿಗೆ ಬರುವಂತೆ 19 ಕೆ.ಜಿ,ಯ ವಾಣಿಜ್ಯ ಸಿಲಿಂಡರ್ ಗಳ ಬೆಲೆ 25 ರೂ. ಏರಿಕೆ ಮಾಡಲಾಗಿದೆ. ಆದರೆ, ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಪ್ರತಿ ತಿಂಗಳ ಮೊದಲ ದಿನವೇ ಸಿಲಿಂಡರ್ ಬೆಲೆಯಲ್ಲಿ ಏರಿಳಿತ ಆಗುತ್ತದೆ. ಈ ಬಾರಿ ವಾಣಿಜ್ಯ ಬಳಕೆಯ ಸಿಲಿಂಡರ್ ದರದಲ್ಲಿ ಏರಿಕೆಯಾಗಿದೆ. ಅಲ್ಲದೇ,ಈ ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಶುಕ್ರವಾರದಿಂದಲೇ ಸಿಲಿಂಡರ್ ಗೆ ಹೆಚ್ಚು ಹಣ ಪಾವತಿ ಮಾಡಬೇಕಿದೆ.

ಎಲ್ಲಿ?ಎಷ್ಟು?

ಇಂದಿನಿಂದ ವಾಣಿಜ್ಯ ಬಳಕೆ ಎಲ್ ಪಿ ಜಿ ಸಿಲಿಂಡರ್ ದೆಹಲಿಯಲ್ಲಿ 1,769.50 ರೂ. ಇದ್ದ ಬೆಲೆ 1795 ರೂ. ಏರಿಕೆ ಕಂಡಿದೆ. ಕೋಲ್ಕತ್ತಾದಲ್ಲಿ 1,887ರ ಬದಲಿಗೆ 1,911 ರೂ.ಗೆ ಲಭ್ಯವಾಗಲಿದೆ.ಮುಂಬೈನಲ್ಲಿ 1,749 ರೂ., ಹಾಗೂ ಚೆನ್ನೈನಲ್ಲಿ 1,960 ರೂ.ಗೆ ಲಭ್ಯವಾಗಲಿದೆ. ದೇಶೀಯ ಗ್ಯಾಸ್ ಸಿಲಿಂಡರ್ ದೆಹಲಿಯಲ್ಲಿ 903 ರೂ. ಮತ್ತು ಕೋಲ್ಕತ್ತಾದಲ್ಲಿ 929 ರೂ., ಮುಂಬೈನಲ್ಲಿ 902.50 ರೂ., ಚೆನ್ನೈನಲ್ಲಿ 918.50 ರೂ. ಗೆ ಹೆಚ್ಚಳ ಕಂಡಿದೆ.

Continue Reading

LATEST NEWS

100 ಅಡಿ ಆಳದ ಬಾವಿಗೆ ಬಿದ್ದ ಬಾಲಕ- ಪಾಳು ಬಾವಿಗೆ ಬಿದ್ರೂ ಬಾಲಕ ಬಚಾವ್

Published

on

ಹುಬ್ಬಳ್ಳಿ: ಮಾನಸಿಕ ಅಸ್ವಸ್ಥ ಬಾಲಕನೊರ್ವ 100 ಅಡಿ ಆಳದ ಬಾವಿಗೆ ಬಿದ್ದರೂ ಪವಾಡ ಸದೃಶ ರೀತಿಯಲ್ಲಿ ಬಚಾವಾದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

ಮಾಲತೇಶ ಮಾವನೂರ ಎಂಬ(16)  ಬಾಲಕ ಮನೆಯಿಂದ ಹೊರಬಂದು ಏಕಾ ಏಕಿ ಬಾವಿಗೆ ಹಾರಿದ್ದ. ಸದ್ದು ಕೇಳಿ ಬಾವಿ ಬಳಿ ಬಂದ ಸ್ಥಳೀಯರಿಗೆ ಬಾಲಕ ಬಾವಿಗೆ ಬಿದ್ದ ವಿಚಾರ ಗೊತ್ತಾಗಿದೆ. ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಬಾವಿಯಲ್ಲಿ ನೀರಿಲ್ಲದೆ ಕೇವಲ ಕಸ ಕಡ್ಡಿ ಪ್ಲಾಸ್ಟಿಕ್ ತುಂಬಿಕೊಂಡಿದ್ದು ಬಾವಿಯ ಸುತ್ತ ಮುಳ್ಳುಕಂಟಿಗಳು ಬೆಳೆದಿತ್ತು. ಆದ್ರೆ 100 ಅಡಿ ಆಳಕ್ಕೆ ಬಿದ್ದಿದ್ದರೂ ಬಾಲಕ ಮಾಲತೇಶನಿಗೆ ಯಾವುದೇ ಗಾಯಗಳಾಗದೆ ಪಾರಾಗಿದ್ದೇ ದೊಡ್ಡ ಅಚ್ಚರಿಯಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಹಗ್ಗಕ್ಕೆ ಬುಟ್ಟಿ ಕಟ್ಟಿ ಬಾವಿಗೆ ಇಳಿಸಿ ಮಾಲತೇಶನನ್ನು ಮೇಲೆತ್ತಿದ್ದಾರೆ. ಮುಳ್ಳುಕಂಟಿ ತಾಗಿದ ಕಾರಣ ಸಣ್ಣಪುಟ್ಟ ತರುಚಿದ ಗಾಯಗಳಷ್ಟೇ ಆಗಿದೆ.

Continue Reading

LATEST NEWS

Udupi: ನೇಜಾರು ಕೊಲೆ ಪ್ರಕರಣ-ಆರೋಪಿ ಪ್ರವೀಣ್‌ ಗೆ ಕೋರ್ಟಿಗೆ ಹಾಜರಾಗಲು ನೋಟಿಸ್‌

Published

on

ಉಡುಪಿ : ನೇಜಾರಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣದ ಆರೋಪಿ ಪ್ರವೀಣ್‌ ಚೌಗುಲೆಯನ್ನು ಮಾ. 7 ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೋಟಿಸ್‌ ಜಾರಿ ಮಾಡಿದೆ.

ಆರೋಪಿ ಪ್ರವೀಣ್‌ ಚೌಗುಲೆ ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಪ್ರವೀಣ್‌ ಚೌಗುಲೆ ವಿರುದ್ಧ ಈಗಾಗಲೇ ಉಡುಪಿಯ ಪೊಲೀಸರು ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.ಇದೀಗ ದೋಷಾರೋಪ ವಾಚಿಸುವ ಪ್ರಕ್ರಿಯೆಗೆ ಮೊದಲು ನಡೆಯುವ ಪೂರ್ವಭಾವಿ ವಿಚಾರಣೆಗಾಗಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಉಡುಪಿಯ ನ್ಯಾಯಾಲಯ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಮಾರ್ಚ್ 7 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆ ಇದೆ.

Continue Reading

LATEST NEWS

Trending