Friday, August 19, 2022

ಉಪ್ಪಿನಂಗಡಿ ಕಾಲೇಜಿನಲ್ಲಿ ಮುಗಿಯದ ಹಿಜಾಬ್‌ ರಗಳೆ-ವಿದ್ಯಾರ್ಥಿಗಳ ಪ್ರತಿಭಟನೆ

ಉಪ್ಪಿನಂಗಡಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದೂ ಹಿಜಾಬ್ ವಿವಾದ ಮುಂದುವರೆದಿದೆ. ಕೆಲ ಹಿಂದೂ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.


ಕೆಲ ವಿದ್ಯಾರ್ಥಿನಿಯರು ಇಂದು ಕೂಡ ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದು, ಈ ಹಿನ್ನೆಲೆ ಕಾಲೇಜಿನ ಕೆಲ ವಿದ್ಯಾರ್ಥಿನಿಯರು ಈ ವಿವಾದ ಇತ್ಯಾರ್ಥವಾಗುವವರೆಗೆ ತರಗತಿಗೆ ತೆರಳುವುದಿಲ್ಲ ಎಂದು ತರಗತಿ ಹೊರಗಡೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.


ಉಪ್ಪಿನಂಗಡಿ ಸರಕಾರಿ ಕಾಲೇಜಿನಲ್ಲಿ ಕಳೆದ ಕೆಲ ದಿನಗಳಿಂದ ಹಿಜಾಬ್ ವಿವಾದ ಸದ್ದು ಮಾಡುತ್ತಿದ್ದು, ಹಿಜಾಬ್ ಧರಿಸಿ ಬರುತ್ತಿದ್ದ ಆರು ವಿದ್ಯಾರ್ಥಿನಿಯರನ್ನು ನಿನ್ನೆ ಅಮಾನತು ಮಾಡಿದ್ದು, ಜೊತೆಗೆ ವರದಿಗಾರಿಕೆಗೆ ತೆರಳಿದ್ದ ಪತ್ರಕರ್ತನ ಮೇಲೆ ಹಲ್ಲೆ ನಡೆಸಲಾಗಿದೆ.

LEAVE A REPLY

Please enter your comment!
Please enter your name here

Hot Topics

ಪುಂಡ ಕಾಂಗ್ರೆಸ್ಸಿಗರೇ ನಿಮಗೆ ಎಚ್ಚರಿಕೆ ಕೊಡ್ತೇನೆ ಎಂದ ಯಶ್ಪಾಲ್‌ ಸುವರ್ಣ

ಮಂಗಳೂರು: ಇವತ್ತಿನ ಪೀಳಿಗೆಗೆ ಸಾವರ್ಕರ್ ಅವರ ಆದರ್ಶ, ಕೊಡುಗೆಗಳನ್ನು ತಿಳಿಸುವ ನಿಟ್ಟಿನಲ್ಲಿ ನಾವು ಕೇವಲ ಆ ಭಾಗದಲ್ಲಿ ಫ್ಲೆಕ್ಸ್ ಮಾತ್ರವಲ್ಲ,ಪುತ್ಥಳಿ ನಿರ್ಮಾಣಕ್ಕೆ ಅನುಮತಿ ಕೋರಿ ಉಡುಪಿ ನಗರ ಸಭೆಗೆ ಪತ್ರವನ್ನು ಬರೆದಿದ್ದೇವೆ ಎಂದು...

ಇಂದು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ: ಭರದ ಸಿದ್ದತೆ-ನಾಳೆ ವಿಟ್ಲ ಪಿಂಡಿ

ಉಡುಪಿ: ಕೃಷ್ಣಮಠದಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಆ.20 ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದ್ದು, ಪರ್ಯಾಯ ಕೃಷ್ಣಾಪುರ ಮಠದ ನೇತೃತ್ವದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.ಭಕ್ತರಿಗೆ ಪ್ರಸಾದವಾಗಿ ಹಂಚಲು ಚಕ್ಕುಲಿ ಹಾಗೂ ಬಗೆಬಗೆಯ ಉಂಡೆಗಳ...

ಈ ಪುಟ್ಟ ಹುಡುಗನಿಗಿರುವಷ್ಟು ಕಾಳಜಿಯೂ ಜನಪ್ರತಿನಿಧಿ, ಅಧಿಕಾರಿಗಳಿಗೆ ಇಲ್ವಾಲ್ಲಾ ಛೇ..!

ಮಂಗಳೂರು: ಸ್ಮಾರ್ಟ್‌ ಸಿಟಿ ಹೆಸರಿನಲ್ಲಿ ಕೋಟಿ ಗಟ್ಟಲೆ ಹಣವನ್ನು ತಂದು ಮಂಗಳೂರು ನಗರವನ್ನು ಸುಂದರೀಕರಣಗೊಳಿಸಲಾಗುತ್ತಿದೆ. ಆದರೆ ಹೊಂಡಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸುವ ಕೆಲಸಕ್ಕೆ ಯಾರೂ ಮುಂದಾಗುತ್ತಿಲ್ಲ.ಕಾರಿನಲ್ಲಿ ಸಂಚಾರ ಮಾಡುವವರಿಗೆ ಬೈಕಿನ ಸವಾರರ ಕಷ್ಟ...