Connect with us

LATEST NEWS

ಮಿಸ್ಡ್‌ ಕಾಲಿಗೆ ಬಂತು ಆಚೆಯಿಂದ ಹಾಯ್‌ ಮೆಸೇಜ್ : ಹನಿಟ್ರ್ಯಾಪ್ ಖೆಡ್ಡಾಗೆ ಬಿದ್ದ ಬ್ಯಾಂಕ್​ ಉದ್ಯೋಗಿ..!

Published

on

ಬೆಂಗಳೂರು : ಮಧ್ಯ ವಯಸ್ಕರು, ಅವಿವಾಹಿತರು ಹಾಗು ವಿಧುರ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡಿ ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್​​ನ ಕಿಂಗ್ ಪಿನ್ ಒಬ್ಬನನ್ನು ಬೆಂಗಳೂರಿನ ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ.

ಮೊಹಮ್ಮದ್ ಬಂಧಿತ ಆರೋಪಿ. ಆರೋಪಿಗಳು ಮೊದಲಿಗೆ ಮಿಸ್ಡ್ ಕಾಲ್ ಕೊಟ್ಟು ನಂತರ ವಾಟ್ಸ್ ಆ್ಯಪ್​​​ನಲ್ಲಿ ಮೆಸೇಜ್​​ ಮಾಡುತ್ತಿದ್ದರು. ವಾಟ್ಸ್​ ಆಪ್ಯ್​​ನಲ್ಲಿ ರಿಪ್ಲೈ ಮಾಡಿದರೆ ಬಳಿಕ ಮತ್ತೆ ಕರೆ ಮಾಡಿ ಖೆಡ್ಡಾಕ್ಕೆ ಬೀಳಿಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

ಮಾರತ್ತಹಳ್ಳಿ ನಿವಾಸಿಯಾಗಿರುವ 50 ವರ್ಷ ವಯಸ್ಸಿನ ವ್ಯಕ್ತಿಗೆ ವಾಟ್ಸ್​​​ ಆ್ಯಪ್​ನಲ್ಲಿ ಯುವತಿಯ ಹೆಸರಿನಲ್ಲಿ ಮೆಸೇಜ್ ಮಾಡುತ್ತಿದ್ದರು. ನಗರದಲ್ಲೇ ಕುಳಿತು ತಾವು ಉತ್ತರ ಭಾರತ ಮೂಲದವರು ಎಂದು ಹೇಳಿ ಬೆಂಗಳೂರಿಗೆ ಬಂದಾಗ ಭೇಟಿಯಾಗುವುದಾಗಿ ಸ್ನೇಹ ಬೆಳೆಸುತ್ತಿದ್ದರು.

ಕಳೆದ ಅಕ್ಟೋಬರ್10 ರಂದು ವ್ಯಕ್ತಿಗೆ ನಗರಕ್ಕೆ ಬಂದಿರುವುದಾಗಿ ಆರೋಪಿಗಳು ತಿಳಿಸಿದ್ದರು. ಯುವತಿಯೊಬ್ಬಳಿಂದ ಕರೆ ಮಾಡಿಸಿ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.

ಹಾಗಾಗಿ ದೂರುದಾರ ವ್ಯಕ್ತಿ ಯುವತಿಯನ್ನು ಭೇಟಿ ಮಾಡಲು ರಾತ್ರಿಯ ವೇಳೆ ನಗರದ ವೀರಣ್ಣಪಾಳ್ಯದ ಹೋಟೆಲ್ ಬಳಿ ಬಂದಿದ್ದರು. ನಂತರ ಹೋಟೆಲ್ ಒಳಗೆ ತೆರಳುತ್ತಿದ್ದಂತೆ ಯುವತಿ ಸಲುಗೆಯಿಂದ ಮಾತನಾಡಲು ಆರಂಭಿಸಿದ್ದಳು.

ಈ ವೇಳೆ ಹೋಟೆಲ್ ರೂಂಗೆ ಪೊಲೀಸರ ಹೆಸರಿನಲ್ಲಿ ಎಂಟ್ರಿ ಕೊಟ್ಟ ಆರೋಪಿಗಳು ನೀನು ಡ್ರಗ್ಸ್​​ ಮಾರುತ್ತಿದ್ದೀಯಾ ಎಂಬ ಮಾಹಿತಿ ಇದೆ ಎಂದು ಅವಾಜ್ ಹಾಕಿದ್ದಾರೆ.

ಬಳಿಕ ವ್ಯಕ್ತಿಯ ಮೊಬೈಲ್ ಕಸಿದುಕೊಂಡು ಫೋನ್​​ ಪೇ, ಗೂಗಲ್ ಪೇನಲ್ಲಿ ಆತ ಅಟ್ಯಾಚ್ ಮಾಡಿದ್ದ ಅಕೌಂಟ್ ಗಳನ್ನು ಚೆಕ್ ಮಾಡಿ ವ್ಯಕ್ತಿಯ 3 ಅಕೌಂಟ್​​​ಗಳಿಂದ 5 ಲಕ್ಷದ 91 ಸಾವಿರ ರೂ. ವರ್ಗಾಯಿಸಿಕೊಂಡಿದ್ದರು.

ನಂತರ ಹೋಟೆಲ್ ರೂಂನಲ್ಲಿ ಕೂಡಿ ಹಾಕಿ ಎಸ್ಕೇಪ್ ಆಗಿದ್ದರು.ಓರ್ವ ಯುವತಿ ಸೇರಿ ಮೂವರು ಆರೋಪಿಗಳಿಂದ ಕೃತ್ಯ ನಡೆದಿದೆ ಎಂದು ಮಾರತ್ತಹಳ್ಳಿಯ ಪ್ರತಿಷ್ಠಿತ ಬ್ಯಾಂಕ್​​ನಲ್ಲಿ ಉದ್ಯೋಗಿಯಾಗಿರುವ ವ್ಯಕ್ತಿ ಗೋವಿಂದಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕಾರ್ಯಾಚರಣೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿರುವ ಪೊಲೀಸರು ಬೆಂಗಳೂರು ನಗರವೊಂದರಲ್ಲೇ ಸುಮಾರು 20ಕ್ಕೂ ಹೆಚ್ಚು ಜನರಿಗೆ ಈ ರೀತಿಯಲ್ಲೇ ಹನಿಟ್ರ್ಯಾಪ್ ಮಾಡಿರುವುದನ್ನು ಪತ್ತೆ ಮಾಡಿದ್ದಾರೆ.

ಸದ್ಯ ಪರಾರಿಯಾಗಿರುವ ಓರ್ವ ಯುವತಿ ಹಾಗು ಇನ್ನಿಬ್ಬರು ಆರೋಪಿಗಳ ಪತ್ತೆಗಾಗಿ ಗೋವಿಂದಪುರ ಪೊಲೀಸ್ ಠಾಣೆಯ ಪೊಲೀಸರು ಬಲೆ ಬೀಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

DAKSHINA KANNADA

ನರ್ಸ್‌ಗೆ ಶಾಕ್ ನೀಡಿದ ಅಂಬ್ಯುಲೆನ್ಸ್‌..! ಇದು ಮನಕಲಕುವ ಘಟನೆ..!

Published

on

ನಿರಂಜಿನಿ… ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿರೋ ಆಸ್ಪತ್ರೆಯ ತುರ್ತು ಸೇವಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಯುವತಿ. ಮುಂಜಾನೆ ಆಸ್ಪತ್ರೆಗೆ ಬಂದ್ರೆ ಡ್ಯೂಟಿ ಮುಗಿಸಿ ಮತ್ತೆ ಮನೆಗೆ ವಾಪಾಸಾಗೋದು ಸಂಜೆಯ ವೇಳೆಗೆ. ಆಸ್ಪತ್ರೆಯಲ್ಲಿರೋ ಆಕೆಗೆ ಸಾವು ನೋವು ಎಲ್ಲವನ್ನೂ ನೋಡಿ ಅಭ್ಯಾಸ ಆಗಿದೆ. ಆದ್ರೆ ಇಂದು ಮಾತ್ರ ಅಂಬ್ಯುಲೆನ್ಸ್‌ನಲ್ಲಿ ಬಂದಿರೋ ಮೃತ ದೇಹ ನೋಡಿ ಆಕೆಯ ಆಕ್ರಂದನ ಮುಗಿಲು ಮುಟ್ಟಿದೆ. ಆಕೆಯ ಆಕ್ರಂದನ ನೋಡಿ ಶಾಕ್ ಆದ ಇತರ ಸಿಬ್ಬಂದಿ ವಿಚಾರ ತಿಳಿದ ಬಳಿಕ ತಾವೂ ಕಂಬನಿ ಮಿಡಿದಿದ್ದಾರೆ.

ಇಂದು ನಿರಂಜಿನಿ ಆಸ್ಪತ್ರೆಗೆ ಬಂದು ತುರ್ತು ಚಿಕಿತ್ಸಾ ವಿಭಾಗದಲ್ಲಿ ಡ್ಯೂಟಿಯಲ್ಲಿದ್ದ ವೇಳೆ ಅಂಬ್ಯುಲೆನ್ಸ್ ಒಂದು ವೇಗವಾಗಿ ಬಂದು ಗಂಭೀರವಾಗಿದ್ದ ಇಬ್ಬರನ್ನು ತುರ್ತು ಚಿಕಿತ್ಸಾ ವಿಭಾಗಕ್ಕೆ ಶಿಫ್ಟ್‌ ಮಾಡಿದೆ. ದೇಹ ಜರ್ಜರಿತವಾಗಿದ್ದ ಒಂದು ದೇಹವನ್ನು ಅಂಬ್ಯುಲೆನ್ಸ್‌ನಿಂದ ಇಳಿಸಿದಾಗ ಅದಾಗಲೇ ಆ ವ್ಯಕ್ತಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮತ್ತೊಂದು ಮಹಿಳೆಯೂ ಗಂಭೀರವಾಗಿದ್ದು ತಕ್ಷಣ ಅವರನ್ನು ತುರ್ತು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಈ ವೇಳೆ ಮೃತ ದೇಹವನ್ನು ನೋಡಿದ ನಿರಂಜನಿ ಇದ್ದಕ್ಕಿದ್ದಂತೆ ಜೋರಾಗಿ ಅಳಲು ಆರಂಭಿಸಿದ್ದಾಳೆ. ಆಕೆಯ ಅಳುವಿಗೆ ಕಾರಣವಾಗಿದ್ದು ಅಲ್ಲಿದ್ದ ಮೃತ ದೇಹ ಆಕೆಯ ತಂದೆಯದೇ ಆಗಿದ್ದು.

ಮುಂಜಾನೆ ತಂದೆ ತಾಯಿ ಇಬ್ಬರೂ ಅಜ್ಜಾವರ ಗ್ರಾಮದಲ್ಲಿನ ಕೆಎಫ್‌ಡಿಸಿಗೆ ಕೆಲಸಕ್ಕೆ ಹೋಗಿ ವಾಪಾಸಾಗುವಾಗ ಜೀಪ್ ಒಂದು ಇವರ ಬೈಕ್‌ಗೆ ಡಿಕ್ಕಿ ಹೊಡೆದಿದೆ.  ಜೀಪ್ ಅಡಿಗೆ ಬಿದ್ದಿದ್ದ ತಂದೆ ವಿನಾಯಕ ಮೂರ್ತಿ ಮೃ*ತ ಪಟ್ಟಿದ್ದರೆ, ತಾಯಿ ಮಂಜುಳ ಕೂಡಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಆದ್ರೆ ಇದ್ಯಾವುದು ವಿಚಾರ ಗೊತ್ತಿಲ್ಲದ ನಿರಂಜಿನಿ ಎಂದಿನಂತೆ ಇದೂ ಒಂದು ಅಕ್ಸಿಡೆಂಟ್ ಕೇಸ್ ಅಂತ ಅಟೆಂಡ್ ಮಾಡಲು ಹೋಗಿದ್ದಾಳೆ. ಅಂಬ್ಯುಲೆನ್ಸ್‌ನಲ್ಲಿ ತಂದೆಯ ಮೃತ ದೇಹ ಹಾಗೂ ಪ್ರಜ್ಞಾ ಹೀನ ಸ್ಥಿತಿಯಲ್ಲಿ ತಾಯಿಯನ್ನ ನೋಡಿದ್ರೆ ಮಗಳ ಪರಿಸ್ಥಿತಿ ಹೇಗಿರಬಹುದು ಅನ್ನೋದು ಊಹಿಸಲೂ ಅಸಾದ್ಯ. ತಾಯಿ ಮಂಜುಳ ಪರಿಸ್ಥಿತಿ ಕೂಡಾ ಗಂಭೀರವಾಗಿದ್ದು, ಬೆನ್ನು ಮೂಳೆಗೆ ಗಾಯವಾದ ಮಾಹಿತಿ ಇದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

Continue Reading

LATEST NEWS

ಹೋಟೆಲ್​ನಲ್ಲಿ ಅ*ಗ್ನಿ ದುರಂತ; 6 ಮಂದಿ ಸಜೀವ ದ*ಹನ

Published

on

ಪಾಟ್ನಾ: ಹೋಟೆಲ್​ವೊಂದರಲ್ಲಿ ಆಕಸ್ಮಿಕವಾಗಿ ಬೆಂ*ಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 6 ಜನರು ಸಜೀವವಾಗಿ ದಹನಗೊಂಡು ಸಾ*ವನ್ನಪ್ಪಿದ್ದು ಹಲವು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಬಿಹಾರದ ಪಾಟ್ನಾದ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ರೈಲು ನಿಲ್ದಾಣದ ಸಮೀಪದ ಹೋಟೆಲ್​ನಲ್ಲಿ ಬೆಂ*ಕಿ ಹೊತ್ತಿಕೊಂಡ ಪರಿಣಾಮ ಸ್ಥಳದಲ್ಲೇ 6 ಜನರು ಮೃ*ತಪಟ್ಟಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಹೋಟೆಲ್‌ ಒಳಗಿದ್ದ ಹಲವರನ್ನು ರಕ್ಷಣೆ ಮಾಡಿದ್ದಾರೆ. ಇದರಲ್ಲಿ ಗಂಭೀರವಾಗಿ ಗಾಯಗೊಂಡ ಕೆಲವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿಸಿದ್ದಾರೆ. ಬೆಂ*ಕಿಯಿಂದಾಗಿ ಹೋಟೆಲ್​​ನಲ್ಲಿನ ಎಲ್ಲ ವಸ್ತುಗಳೆಲ್ಲ ಸಂಪೂರ್ಣವಾಗಿ ಸುಟ್ಟು ಹೋಗಿವೆ ಎಂದು ತಿಳಿದು ಬಂದಿದೆ.

ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅ*ಗ್ನಿ ಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಮಾಹಿತಿ ಪ್ರಕಾರ ಹೋಟೆಲ್​ನಲ್ಲಿನ ಸುಮಾರು 45 ಜನರನ್ನು ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬೆಂಕಿಯಿಂದಾಗಿ ಸುಟ್ಟಗಾಯಗಳಿಂದ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ.

ಹೋಟೆಲ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಬೆಂ*ಕಿ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಅಲ್ಲದೇ ಹೋಟೆಲ್​ನಲ್ಲಿ ಸುರಕ್ಷತಾ ಮಾನದಂಡಗಳನ್ನು ಸರಿಯಾಗಿ ಅನುಸರಿಸದ ಕಾರಣ 6 ಜನರ ಸಾ*ವಿಗೆ ಕಾರಣವಾಗಿದೆ. ಸದ್ಯ ಈ ಘಟನೆ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Continue Reading

FILM

ಹೊಸ ಅವತಾರದಲ್ಲಿ ZEE ಕನ್ನಡ ‘ಕಾಮಿಡಿ ಕಿಲಾಡಿಗಳು’… ಸ್ಟಾರ್ ನಿರೂಪಕರು ಈಗ ಜಡ್ಜಸ್? ಏನಿದು ಟ್ವಿಸ್ಟ್?

Published

on

ಬೆಂಗಳೂರು: ಜೀ ಕನ್ನಡ ವಾಹಿನಿ ವಿಭಿನ್ನ ರೀತಿಯ ಕಥೆಗಳನ್ನೊಳಗೊಂಡ ಧಾರವಾಹಿಗಳ ಜೊತೆಗೆ ರಿಯಾಲಿಟಿ ಶೋಗಳೂ ಜನರ ಮನಸ್ಸು ಗೆದ್ದಿದೆ. ಜೀ ಕನ್ನಡ ವಾಹಿನಿಯ ಅಚ್ಚು ಮೆಚ್ಚಿನ ರಿಯಾಲಿಟಿ ಶೋ ಗಳಲ್ಲಿ ಜನರನ್ನು ನಕ್ಕು ನಗಿಸುವ ರಿಯಾಲಿಟಿ ಶೋ ಅಂದ್ರೆ ಅದು ಕಾಮಿಡಿ ಕಿಲಾಡಿಗಳು… ಹೌದು, ನಗುವಿನ ಅಲೆಯಲ್ಲಿ ತೇಲಿಸಿ ಮನೆಯವರೆಲ್ಲರೂ ಒಟ್ಟಾಗಿ ಕೂತು ನೋಡುವಂತಹ ಶೋ ‘ಕಾಮಿಡಿ ಕಿಲಾಡಿಗಳು’.

zee

ಮಾಸ್ಟರ್ ಆನಂದ್ ನಿರೂಪಣೆಯಲ್ಲಿ ಮೂಡಿ ಬರುತ್ತಿದ್ದ ಕಾರ್ಯಕ್ರಮವನ್ನು  ‘ಸೈಡ್‌ಗಿಡ್ರಿ ನಿಮ್‌ ಟೆನ್ಷನ್‌ಗಳು, ಮತ್ತೆ ಬಂದಿದ್ದಾರೆ ಕಾಮಿಡಿ ಕಿಲಾಡಿಗಳು’ ಎಂದು ಶೋ ಆರಂಭ ಮಾಡ್ತಾ ಇದ್ದು ಕರ್ನಾಟಕವನ್ನೇ ನಗುವಿನ ಕಡಲಲ್ಲಿ ತೇಲಿಸುವುದಿತ್ತು. ಇದೀಗ ಸೀಸನ್‌ 5 ಪ್ರೇಕ್ಷಕರ ಮುಂದೆ ಬರುತ್ತಿದೆ. ಈಗ ಜೀ ವಾಹಿನಿ ʻಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ʼಮೂಲಕ ನಿಮ್ಮನ್ನು ಮನರಂಜಿಸಲು ಸಿದ್ಧವಾಗಿದೆ.

ಮುಂದೆ ಓದಿ..; “ನಿತ್ಯಾಮೆನನ್” ಚಿತ್ರರಂಗದಿಂದ ‘ಬ್ಯಾನ್’ ಆಗಲು ಕಾರಣವೇನು ಗೊತ್ತಾ? ಈ ಬಗ್ಗೆ ನಿತ್ಯಾ ಹೇಳಿದ್ದೇನು?

ಪ್ರೀಮಿಯರ್ ಲೀಗ್‌ನಲ್ಲಿ ಇರಲಿದ್ದಾರೆ 5 ಜಡ್ಜಸ್..!

ಈ ಕಾಮಿಡಿ ಪ್ರೀಮಿಯರ್‌ ಲೀಗ್‌ನಲ್ಲಿ ಈ ಬಾರಿ ಐವರು ನಿರೂಪಕರು ಇರಲಿದ್ದಾರೆ. ಸ್ಟೇಜ್‌ನಲ್ಲಿ ಕಂಟೆಂಸ್ಟೆಂಟ್‌ಗಳ ಕುರಿತು ಜಡ್ಜಸ್‌ ಗಳಲ್ಲಿ ಕಮೆಂಟ್ಸ್ ಕೆಳ್ತಾ ಇದ್ದ ನಿರೂಪಕರು ಈಗ ತಾವೇ ಜಡ್ಜ್‌ಮೆಂಟ್ ನೀಡಲು ಹೊರಟಿದ್ದಾರೆ. ಹೌದು, ನಿರೂಪಕರುಗಳಾದ ಅನುಶ್ರೀ, ಮಾಸ್ಟರ್‌ ಆನಂದ್‌, ಅಕುಲ್‌ ಬಾಲಾಜಿ, ಶ್ವೇತಾ ಚಂಗಪ್ಪ ಹಾಗೂ ಕುರಿ ಪ್ರತಾಪ್‌ ಅವರು ಈ ಕಾರ್ಯಕ್ರಮದಲ್ಲಿ ಹೊಸ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರಂತೆ.

5 ತಂಡಗಳು.. 1 ಟ್ರೋಫಿಗಾಗಿ ಗುದ್ದಾಟ..!

zee

ಮೂಲಗಳ ಪ್ರಕಾರ ಈ ಬಾರಿಯ ಶೋನಲ್ಲಿ ಟಿ-20 ರೀತಿಯಲ್ಲಿ ಹೇಗೆ ತಂಡಗಳು, ಮಾಲೀಕರು , ಕ್ಯಾಪ್ಟನ್‌ಗಳು ಇರುತ್ತಾರೋ ಅದೇ ರೀತಿ ಇಲ್ಲಿಯೂ ಇರಲಿದೆ. ಕರ್ನಾಟಕದ 31 ಜಿಲ್ಲೆಗಳಿಂದ ಆಯ್ಕೆ ಮಾಡಿ ತಂದ ಕಲಾವಿದರನ್ನು ಮೆಗಾ ಆಕ್ಷನ್‌ ಮೂಲಕ ತಮ್ಮ ತಂಡಗಳಿಗೆ ಸೇರಿಸಿಕೊಳ್ಳಲಾಗುವುದು. 5 ತಂಡಗಳು 1 ಟ್ರೋಫಿಗಾಗಿ ಗುದ್ದಾಟ ನಡೆಸಲಿದೆ. ಈ ಶೋ ವಾರಾಂತ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡಕ್ಕೆ ಬರೋಬ್ಬರಿ 1 ಲಕ್ಷ ಬಹುಮಾನ ಪಡೆಯುವ ಅವಕಾಶವಿದೆ. ಈ ʻಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ʼಗೆ ಐವರು ನಿರೂಪಕರು ಹೊಸ ಜವಬ್ದಾರಿ ಹೊತ್ತಿದ್ದಾರೆ. ಹೀಗಾಗಿ ಹೊಸ ನಿರೂಪಕರನ್ನು ಈ ಶೋ ಮೂಲಕ ಕರೆ ತರಲಾಗುತ್ತಿದೆ ಎಂದು ವರದಿಯಾಗಿದೆ. ಆ ನಿರೂಪಕರು ಯಾರು ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು ಇದಕ್ಕೆ ಇದೇ ಶನಿವಾರ ಹಾಗೂ ಭಾನುವಾರು ರಾತ್ರಿ 9ಗಂಟೆಗೆ ತೆರೆ ಬೀಳಲಿದೆ.

Continue Reading

LATEST NEWS

Trending