Thursday, December 2, 2021

ತುಳುವರ ಮನಗೆದ್ದ ತುಳುಕೂಟ ಕುವೈಟ್- ತುಳು ಪರ್ಬ-2021 ಸಂಗೀತ-ಹಾಸ್ಯ–ನಾಟ್ಯ-ವೈಭವದ ಸಂಗಮ..!

ಕುವೈಟ್ : ಪರಶುರಾಮನ ಸೃಷ್ಟಿಯ ತುಳುನಾಡಿನ ಶ್ರೀಮಂತ ಸಂಸ್ಕೃತಿ ಆಚಾರ ವಿಚಾರವನ್ನು ಹೊರದೇಶದಲ್ಲಿ ಪಸರಿಸುತ್ತಿರುವ ತುಳು ಕೂಟ ಕುವೈಟ್ ನ ಪ್ರಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ತುಳುಪರ್ಬ.

ಹೊರದೇಶದಲ್ಲಿದ್ದರೂ ಕೂಡ ಸದಾ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಹೆಸರುವಾಸಿಯಾದ ಸಂಘ ತುಳುಕೂಟ ಕುವೈಟ್.

ಅದೇ ರೀತಿ ಸರ್ವ ಧರ್ಮದ ಬಂಧುಗಳನ್ನ ಒಟ್ಟು ಸೇರಿಸಿ ತುಳುನಾಡಿನ ಸಂಸ್ಕೃತಿ ಆಚಾರ ವಿಚಾರ ಉಳಿಸಿ ಬೆಳೆಸುವಲ್ಲಿ ಈ ಸಂಘದ ಕಾರ್ಯ ಪ್ರಶಂಸನೀಯ.

ವರ್ಷಂಪ್ರತಿ ತುಳು ಪರ್ಬ ಅನ್ನುವ ಯಶಸ್ವಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ತುಳುಕೂಟ ಕುವೈಟ್ ನಡೆಸಿಕೊಂಡು ಬರುತ್ತಿದ್ದು, ಈ ಬಾರಿಯೂ ಕೂಡ ಈ ಅರ್ಥಪೂರ್ಣ ಕಾರ್ಯಕ್ರಮ ಶುಕ್ರವಾರ ಭಾರತೀಯ ಕಾಲಮಾನ ಸಂಜೆ 6.30ಕ್ಕೆ ಮತ್ತು ಕುವೈಟ್ ಕಾಲಮಾನ ಸಂಜೆ 4 ಗಂಟೆಗೆ ನೇರಪ್ರಸಾರಗೊಂಡಿತು.

ಬರೋಬ್ಬರಿ 22 ವರ್ಷಗಳಿಂದ ಅರಬ್ಬೀಸ್ಥಾನದಲ್ಲಿ ತುಳುನಾಡಿನ ಕಂಪನ್ನು ಪಸರಿಸುತ್ತಿರುವ ತುಳು ಕೂಟ ಕುವೈಟ್ ನ ಯಶಸ್ವೀ ಕಾರ್ಯಕ್ರಮ ತುಳುಪರ್ಬವನ್ನು ಸಂಘದ ಪ್ರಥಮ ಅಧ್ಯಕ್ಷ ಸುಧಾಕರ್ ಶೆಟ್ಟಿ ಮತ್ತು ಪ್ರಸಕ್ತ ಅಧ್ಯಕ್ಷರಾದ ಸನತ್ ಶೆಟ್ಟಿ ಸೇರಿದಂತೆ ಸಂಘದ ಪದಾಧಿಕಾರಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಇನ್ನು ದೀಪ ಬೆಳಗಿಸಿ ಮಾತನಾಡಿದ ತುಳುಕೂಟ ಕುವೈಟ್ ಅಧ್ಯಕ್ಷರಾದ ಸನತ್ ಕುಮಾರ್ ಶೆಟ್ಟಿ ನಮ್ಮ ಸಂಘ ಸಾವಿರ ಸಾವಿರ ತುಳುವರ ಕೂಡುಕುಟುಂಬವಾಗಿದ್ದು, ತುಳು ಭಾಷೆ, ಸಂಸ್ಕೃತಿ, ಆಚಾರ, ವಿಚಾರ ಉಳಿಸಿ ಬೆಳೆಸುವುದು ಪ್ರತಿಯೊಬ್ಬನ ಕರ್ತವ್ಯ, ಈ ನಿಟ್ಟಿನಲ್ಲಿ ನಮ್ಮ ಸಂಘ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ ಜೊತೆಗೆ ತುಳು ಭಾಷೆ 8ನೇ ಪರಿಚ್ಚೇಧಕ್ಕೆ ಸೇರಬೇಕೆಂಬ ಮಹತ್ವಾಕಾಂಶೆಯಿಂದ ಬಲೇ ತುಳು ಲಿಪಿ ಕಲ್ಪುಗ ಅನ್ನುವ ಕಾರ್ಯಕ್ರಮವನ್ನೂ ನಾವು ಆಯೋಜನೆ ಮಾಡಿದ್ದೇವೆ. ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು ಖುಷಿ ತಂದಿದೆ ಎಂದರು.

ಈ ಬಾರಿಯ ತುಳು ಪರ್ಬದಲ್ಲಿ ಸಂಗೀತ-ಹಾಸ್ಯ–ನಾಟ್ಯ-ವೈಭವದ ಸಂಗಮವಾಗಿದ್ದು, Excellence dance istutute ಸುರತ್ಕಲ್ ನಿಂದ ನೃತ್ಯ ವೈವಿಧ್ಯ ಮತ್ತು ಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಮಹಿಳೆ ತುಳುನಾಡ ಬೀರೆದಿ ರಾಣಿ ಅಬ್ಬಕ್ಕ-ನೃತ್ಯ ರೂಪಕ ಮನಸೂರೆಗೊಂಡಿತು. ಜೊತೆಗೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಪ್ರಶಂಸೆ ಪಡೆದ ರಾಜ್ ಗೋಪಾಲ್ ತಂಡದಿಂದ ಸಂಗಿತ ರಸ ಮಂಜರಿ ಕಾರ್ಯಕ್ರಮ ಸಂಗೀತ ಪ್ರಿಯರ ಮೆಚ್ಚುಗೆಗೆ ಪಾತ್ರವಾಯಿತು.

ಜೊತೆಗೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ತುಳುನಾಡಿನ ಪ್ರಸಿದ್ಧ ಹಾಸ್ಯ ಕಲಾವಿದರಿಂದ ಮನಸ್ ಗೆಂದಿ ಮನ್ಮಥೆ ಎನ್ನುವ ವಿನೂತನ ಹಾಸ್ಯ ಪ್ರಹಸನ ನಡೆದು ವೀಕ್ಷಕರನ್ನು ನಗೆಗೆಡಲಿನಲ್ಲಿ ತೇಲುವಂತೆ ಮಾಡಿತು.

ಈ ಸಂಧರ್ಭ ತುಳುಕೂಟ ಕುವೈಟ್ನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳನ್ನು ಜೊತೆಗೆ ತುಳು ಲಿಪಿ ಕಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಕ್ಷಯ ಪೇಜಾವರ ಮತ್ತು ಅಲೋಕಿತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು ಸಂಘದ ಪದಾಧಿಕಾರಿ ರೋಶನ್ ಕ್ವಾಡ್ರಸ್ ಧನ್ಯವಾದ ಸಮರ್ಪಿಸಿದರು. ಖ್ಯಾತ ಕಲಾವಿದ ಮಿಮಿಕ್ರಿ ಶರಣ್ ಕಾರ್ಯಕ್ರಮವನ್ನು ನೀರೂಪಿಸಿದರು. ವರ್ಚುವಲ್ ಮಾಧ್ಯಮದಲ್ಲಿ ನಡೆದ ಈ ಕಾರ್ಯಕ್ರಮ ನಮ್ಮ ಕುಡ್ಲ ಟಿವಿ, ಯೂಟೂಬ್, ಪೇಸ್ ಬುಕ್ , ಮತ್ತು ಟಿಕೆಕೆ ಯೂಟೂಬ್ ಮೂಲಕ ಏಕಕಾಲದಲ್ಲಿ ನೇರಪ್ರಸಾರಗೊಂಡು ಲಕ್ಷಾಂತರ ಜನ ವೀಕ್ಷಕರ ಪ್ರಶಂಸೆಗೆ ಪಾತ್ರವಾಯಿತು.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...