ಉಡುಪಿ : ಕೇಂದ್ರ ಯಾ ರಾಜ್ಯದ ಸರಕಾರದ ಕಾನೂನುಗಳು ಏನೇ ಇದ್ದರೂ, ಜನ ಹಿತ ಇಲ್ಲದಿದ್ದರೆ ಅಥವಾ ಸ್ಥಳಿಯರನ್ನು ಗಡೆಗಣಿಸಿದರೆ ತನ್ನ ಪವರ್ ಏನೆಂದು ತೋರಿಸಿಕೊಟ್ಟಿದೆ ಉಡುಪಿ ಜಿಲ್ಲೆಯ ಹೆಜಮಾಡಿ ಗ್ರಾಮ ಪಂಚಾಯತ್.
ಗ್ರಾಮ ಪಂಚಾಯತ್ ತನ್ನ ಅಧಿಕಾರ ವ್ಯಾಪ್ತಿ ಮತ್ತು ತಾಕತ್ತು ಎಷ್ಟಿದೆ ಎಂದು ತೋರಿಸಿಕೊಟ್ಟು ಮಾದರಿಯಾಗಿದೆ.
ಉಡುಪಿ ಜಿಲ್ಲೆಯ ಪಡುಬಿದ್ರಿ ಮತ್ತು ಮಂಗಳೂರ ಗಡಿ ಮುಲ್ಕಿ ಮಧ್ಯೆ ಇರುವ ಹೆಜಮಾಡಿ ಟೋಲ್ ನಿಂದ ಕಳೆದ ಆನೇಕ ವರ್ಷಗಳಿಂದ ತೀವ್ರ ತರದ ಸಮಸ್ಯೆಗಳನ್ನು ಎದುರಿಸುತ್ತಿದ್ದು ಮಾತ್ರ ಗ್ರಾಮಸ್ಥರು. ಆನೇಕ ಬಾರಿ ಮನವಿ ಮಾಡಿದ್ದರೂ ಸಮಸ್ಯೆಗೆ ಸಕರಾತ್ಮಕ ಸ್ಪಂದನೆ ಆಡಳಿತ ರೂಢ ಹಾಗೂ ಪ್ರತಿಪಕ್ಷಗಳಿಂದ ಸಿಕ್ತಿರಲಿಲ್ಲ.
ಈ ಹಿನ್ನೆಲೆಯಲ್ಲಿ ರೋಸಿ ಹೋಗಿದ್ದ ಹೆಜಮಾಡಿ ಗ್ರಾಮಸ್ಥರು ನವಯುಗ್ ಕಂಪನಿಯ ಸರ್ವಾಧಿಕಾರದ ವಿರುದ್ಧ ರೊಚ್ಚಿಗೆದ್ದು ಹೆಜಮಾಡಿ ಗ್ರಾ ಪಂ ಆಡಳಿತ ಸಮಿತಿಯ ಎಲ್ಲಾ ಸದಸ್ಯರು ಒಳ ರಸ್ತೆಯ ಟೋಲ್ ಗೇಟ್ ಬಳಿಯ ಖಾಸಗಿ ಜಾಗದಲ್ಲಿ ಮತ್ತೊಂದು ರಸ್ತೆ ನಿರ್ಮಿಸಿಯೇ ಬಿಟ್ಟರು.
ತನ್ನ ಗ್ರಾಮದ ವ್ಯಾಪ್ತಿಯಲ್ಲಿ – ತನ್ನ ಪಂಚಾಯತ್ ಅಧಿಕಾರ ಬಳಸಿ ಬದಲಿ ರಸ್ತೆ ನಿರ್ಮಾಣ ಮಾಡಿ ಎಲ್ಲಾ ವಾಹಗಳಿಗೂ ಫ್ರೀಯಾಗಿ ಸಂಚರಿಸಲು ಅನುವು ಮಾಡಿ ಕೊಟ್ಟಿತ್ತು.
ಮುಂಜಾನೆ ಹೆಜಮಾಡಿ ಗ್ರಾ ಪಂ ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ ನೇತೃತ್ವದಲ್ಲಿ ಎಲ್ಲಾ ಸದಸ್ಯರು ಒಳ ರಸ್ತೆಯ ಟೋಲ್ ಬಳಿ ಸೇರಿ , ತಾವು ಕಂಪನಿಗೆ ನೀಡಿದ ಮನವಿಯ ಬಗ್ಗೆ ವಿಚಾರಿಸಿದರೂ ಪೂರಕ ಉತ್ತರ ದೊರಕಲಿಲ್ಲ.
ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ತನ್ನ ಗ್ರಾಮದ ಜನರ ಜನಹಿತಕ್ಕಾಗಿ ಗ್ರಾ ಪಂ ಸದಸ್ಯರು , ಜೆಸಿಬಿ ತರಿಸಿ ಸ್ವತ ಮುಂದೆ ನಿಂತು ಟೋಲ್ ಸಮೀಪದ ತನ್ನ ಖಾಸಗಿ ರಸ್ತೆಯಲ್ಲಿ ಪೊಲೀಸರ ಆಕ್ಷೇಪದ ನಡುವೆಯೂ ರಸ್ತೆ ನಿರ್ಮಿಸಿಯೇ ಬಿಟ್ಟರು.
ಎಲ್ಲಾ ವಾಹನಗಳಿಗೂ ಉಚಿತವಾಗಿ ಓಡಾಟ ನಡೆಸಲು ಅವಕಾಶ ಕಲ್ಪಿಸುವ ಮೂಲಕ , ಗ್ರಾ ಪಂ ಸದಸ್ಯರು ಸಾರ್ವಜನಿಕರಿಗಾಗಿ ತಮ್ಮ ಪಂಚಾಯತ್ ಅಧಿಕಾರದ ಸದುಪಯೋಗ ಹೇಗೆ ಮಾಡಬಹುದು ಎಂಬುದನ್ನು ಮಾಡಿ ತೋರಿಸಿಕೊಟ್ಟರು.
ಗ್ರಾ ಪಂ ಎಲ್ಲಾ ಸದಸ್ಯರು ಸೇರಿ ನಿರ್ಮಿಸಿದ ರಸ್ತೆಯನ್ನು ಒಂದು ಹಂತದಲ್ಲಿ ಮುಚ್ಚಲು ಯತ್ನಿಸಿದರಾದರೂ , ಅದಕ್ಕೆ ವಿರೋಧ ಪಡಿಸಿದ ಸದಸ್ಯರು ಹೆಜಮಾಡಿ ಗ್ರಾಮಸ್ಥರಿಗೆ ಟೋಲ್ ಫ್ರೀ ಎಂಬುದಾಗಿ ಲಿಖಿತವಾಗಿ ನೀಡದ ಹೊರತು ಆ ರಸ್ತೆಯನ್ನು ಮುಚ್ಚಲು ಬಿಡುವುದಿಲ್ಲ ಎಂದು ಖಡಾಖಂಡಿತವಾಗಿಯೇ ಹೇಳಿಯೇ ಬಿಟ್ಟರು, ಪಂಚಾಯತ್ ಅಧಿಕಾರದ ಪವರ್ ಲೆಕ್ಕ ಹಾಕಿದ ಪೊಲೀಸ್ ಅಧಿಕಾಗಳು ಸ್ಥಳದಲ್ಲಿದ್ದರೂ ಏನೂ ಮಾಡದೆ ಅಸಹಾಯಕರಾಗಿದ್ದರು.
ಇದನ್ನೆಲ್ಲ ಗಮನಿಸಿದ್ದ ಟೋಲ್ ಉಸ್ತುವಾರಿ ಶಿವಪ್ರಸಾದ್ ರೈ ಕಂಗಾಲಾಗಿ ಮೇಲಧಿಕಾರಿಗಳಿಗೆ ಅಲ್ಲಿನ ಪರಿಸ್ಥಿತಿಯನ್ನು ಮನದಟ್ಟು ಮಾಡಿ ಟೋಲ್ ಫ್ರೀ ಎಂಬ ಪತ್ರ ಗ್ರಾ ಪಂ ಕೈ ಸೇರುವಂತೆ ಮಾಡುವ ಮೂಲಕ ಸಮಸ್ಯೆ ಪರಿಹಾರ ಕಂಡು ಕೊಂಡರು.
ವಾಹನಗಳಿಗೆ ಟೋಲ್ ತಪ್ಪಿಸಿ ಹೋಗುವ ವ್ಯವಸ್ಥೆ ಕಲ್ಪಿಸುತ್ತಿದಂತೆ ಚುರುಕಾದ ನವಯುಗ್ ಅಧಿಕಾರಿಗಳು ಹೆಜಮಾಡಿ ವಿಳಾಸದ ಐಡಿ ಇದ್ದ ವಾಹನಗಳಿಗೆ ಟೋಲ್ ಫ್ರೀ ಎಂಬುದಾಗಿ ಲಿಖಿತವಾಗಿ ನೀಡಿದ್ದಾರೆ .
ಇದು ನಾಗರೀಕರು ಪಂಚಾಯತ್ ಹಾಗೂ ಸದಸ್ಯರು ಒಟ್ಟಿಗೆ ಸೇರಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಳಿಯ ಅಡಳಿತ ಪವರ್ ಪುಲ್ ಎಂದು ತೋರಿಸಿ ಕೊಟ್ಟಿದೆ ಜೊತೆಗೆ ಟೋಲ್ ಕಂಪೆನಿಗಳ ಎಂಜಲು ಕಾಸಿಗೆ ಕೈಒಡ್ಡಿ ಓಟಿಗಾಗಿ ಜನರೊಟ್ಟಿಗೆ – ನೋಟಿಗಾಗಿ ಕಂಪೆನಿಗಳೊಟ್ಟಿಗೆ ಒಳೊಪ್ಪಂದ ಮಾಡುವ ಜನಪ್ರತಿನಿಧಿಗಳಿಗೂ ಎಚ್ಚರಿಕೆಯ ಕರೆಗಂಟೆಯಾಗಿದೆ.