Monday, July 4, 2022

ಕುಸಿಯುವ ಭೀತಿಯಲ್ಲಿದೆ ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಮೇಲ್ಸೇತುವೆ..!

ಉಡುಪಿ: ನಗರದ ಮಧ್ಯಭಾಗದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಮೇಲ್ಸೇತುವೆ ಇದು. ಈ ಮೇಲ್ಸೇತುವೆ ಇದೀಗ  ಅಪಾಯವನ್ನೇ ಎದುರು ನೋಡುತ್ತಿದೆ. ಈ ಮೇಲ್ಸೇತುವೆಯ ಅಡಿಭಾಗದಲ್ಲಿರುವ  ಕೊಳಚೆ ನೀರಿನ ಪೈಪ್  ಒಡೆದು ಹೋಗಿರುವ ಕಾರಣ  ಮೇಲ್ಸೇತುವೆ ಕುಸಿಯುವ ಹಂತದಲ್ಲಿದೆ. ಮೂರು ತಿಂಗಳ ಹಿಂದೆ ರಾತ್ರಿ ಇದ್ದಕ್ಕಿದ್ದ ಹಾಗೆ ಈ ಮೇಲ್ಸೇತುವೆಯ ಅಡಿಯಿಂದ ಭಾರಿ ಪ್ರಮಾಣದ ಮಣ್ಣು ಮತ್ತು ಕೊಳಚೆ ನೀರು ರಸ್ತೆಗೆ ಕೊಚ್ಚಿಕೊಂಡು ಬಂದಿತ್ತು. ಆ ಕೂಡಲೇ ಉಡುಪಿ ನಗರದ ಕೊಳಚೆ ನೀರು ಸಂಸ್ಕರಣ ಘಟಕಕ್ಕೆ ನೀರು ಪಂಪ್ ಮಾಡುವುದನ್ನು ನಿಲ್ಲಿಸಲಾಯಿತು. ಇದರಿಂದಾಗಿ ಸದ್ಯಕ್ಕೆ ಈ ಸೇತುವೆ ಉಳಿದಿದೆಯಾದರೂ ಕೊಳಚೆ ಶುದ್ಧೀಕರಣ ಘಟಕವನ್ನು ಆರಂಭಿಸಿದರೆ ಒಂದು ಗಂಟೆಯೊಳಗೆ ಈ ಸೇತುವೆ  ಕುಸಿದು ಹೋಗೋದು ಗ್ಯಾರಂಟಿ.

ಕೊಳಚೆ ಶುದ್ಧೀಕರಣದ ಪೈಪನ್ನು ಬದಲಾಯಿಸದೆ ಅದರ ಮೇಲೆ ಸೇತುವೆ ಕಟ್ಟಿ ಹೋದವರು ನವಯುಗ ಕಂಪನಿಯ  ಮನೆಹಾಳು  ಇಂಜಿನಿಯರ್ ಗಳು.

ಇವರು ಮಾಡಿರುವ ಎಡವಟ್ಟಿಗೆ ಇದೀಗ  ಇಡೀ ಉಡುಪಿಯ ಜನತೆ ಬೆಲೆ ತೆರುತ್ತಿದೆ. ಹೌದು ಶುದ್ಧೀಕರಣ ಘಟಕ ಕಾರ್ಯ ನಿಲ್ಲಿಸಿ ಮೂರು ತಿಂಗಳುಗಳೇ ಕಳೆದಿವೆ.

ಉಡುಪಿಯ ತ್ಯಾಜ್ಯ ನೀರು ಜನರ ಮಲಮೂತ್ರಗಳನ್ನು ಶುದ್ಧೀಕರಣ ಮಾಡದೆ ನೇರವಾಗಿ  ಇಂದ್ರಾಣಿ ನದಿಗೆ  ಹರಿಯ ಬಿಡಲಾಗುತ್ತಿದೆ.      ಈ ಬಗ್ಗೆ  ಜನತೆ ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆಉಡುಪಿಯ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಕುಸಿಯುವ ಹಂತದಲ್ಲಿದ್ದರೂ ದುರಸ್ತಿ ಮಾಡದೆ  ಕಾಲ ಹರಣ ಮಾಡುತ್ತಿರುವ ಅಧಿಕಾರಿಗಳು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.

ಈ ಬಗ್ಗೆ ಪ್ರಶ್ನಿಸಿದಾಗ ನಮ್ಮಲ್ಲಿ ಪೈಪ್ ನ ಕೊರತೆಯಿದೆ ಎಂದು ಅಧಿಕಾರಿಗಳು ಮೊಂಡುವಾದ ಮಾಡುತ್ತಿದ್ದಾರೆ. ಇಂದ್ರಾಣಿಯ ನದಿ ನೀರಿನಲ್ಲಿ ಸಲ್ಫರ್ ಅಂಶ ಹೆಚ್ಚಾಗುತ್ತಿದ್ದು, ಸ್ಥಳೀಯ ನಿವಾಸಿಗಳಲ್ಲಿ ಕ್ಯಾನ್ಸರ್ ಮೊದಲಾದ ಭಯಾನಕ ರೋಗಗಳು ಕಾಣಿಸಿಕೊಂಡಿವೆ.

ಅಧಿಕಾರಿಗಳ ಬೇಜವಾಬ್ದಾರಿತನದಿಂದ ತೀವ್ರ ಆಕ್ರೋಶಗೊಂಡಿರುವ ಇಂದ್ರಾಣಿ ನದಿ ತೀರದ ನಿವಾಸಿಗಳು ಶುದ್ಧೀಕರಣ ಘಟಕಕ್ಕೆ ಮುತ್ತಿಗೆ ಹಾಕಿ ಬಲವಂತದಿಂದ ಘಟಕವನ್ನು ಆರಂಭಿಸುತ್ತೇವೆ.ಒಂದು ವೇಳೆ ಸೇತುವೆ ಕುಸಿದು ಹೋದರೆ ಅದಕ್ಕೆ ನಗರ ಸಭೆಯೆ  ಉತ್ತರಿಸಲಿ. ಯಾವುದೇ ಕಾರಣಕ್ಕೂ ನದಿಗೆ ಕೊಳಚೆ ನೀರನ್ನು ಬಿಡಲು ನಾವು ಅವಕಾಶ ಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿ ನಗರಸಭೆ ಅತಂತ್ರ ಸ್ಥಿತಿಯಲ್ಲಿದೆ. ಇಲ್ಲಿ ನಗರದ ಕೊಳಚೆ ನೀರು ಶುದ್ಧೀಕರಣ ಘಟಕದ ಕೆಲಸ ಆರಂಭಿಸದೆ ಹೋದ್ರೆ, ಜನರು ರೋಗರುಜಿನಗಳಿಂದ ಸಾಯೋದು ಗ್ಯಾರಂಟಿ.

LEAVE A REPLY

Please enter your comment!
Please enter your name here

Hot Topics

ಸುಳ್ಯ: ದ್ವಿಚಕ್ರ ವಾಹನಗಳು ಪರಸ್ಪರ ಢಿಕ್ಕಿ-ಸಹಸವಾರೆಗೆ ಗಾಯ

ಸುಳ್ಯ: ಎರಡು ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿ ಎರಡು ವಾಹನಗಳ ಸವಾರರು ಅಪಾಯದಿಂದ ಪಾರಾದಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಜಟ್ಟಿಪಳ್ಳ ಎಂಬಲ್ಲಿನ ಮುಖ್ಯ ರಸ್ತೆಯಲ್ಲಿ ನಡೆದಿದೆ.ಸುಳ್ಯದ ಮಾಧ್ಯಮವೊಂದರ...

ಕಾರ್ಕಳದಲ್ಲಿ ಅಕ್ರಮ ಗೋಸಾಗಾಟ: ಓರ್ವ ಪರಾರಿ-ಕಾರಿನಲ್ಲೇ ಅಸುನೀಗಿದ ದನ

ಕಾರ್ಕಳ: ಕಾರಿನಲ್ಲಿ ಎರಡು ಗೋವುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಕಳ್ಳರನ್ನು ಖಚಿತ ಮಾಹಿತಿ ಮೇರೆಗೆ ಸಿನಿಮಾ ಶೈಲಿಯಲ್ಲಿ ಪೊಲೀಸರು ಚೇಸ್ ಮಾಡಿದ ಘಟನೆ ಕಾರ್ಕಳದ ಹೆಬ್ರಿ ಕೆರೆಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಡೆದಿದೆ.ಉಡುಪಿಯ ಮಲ್ಪೆ...

ಮಂಗಳೂರು ಬಂದರಿಗೆ ಶ್ರೀಲಂಕಾದ MSC ಅರ್ಮೀನಿಯಾ ಹಡಗು ಆಗಮನ

ಮಂಗಳೂರು: ನವಮಂಗಳೂರು ಬಂದರಿನ 14ನೇ ಬರ್ತ್‌ಗೆ ನಿನ್ನೆ ಸಾಯಂಕಾಲ ಮುಖ್ಯ ಕಂಟೇನರ್ ಹಡಗು ಶ್ರೀಲಂಕಾದಿಂದ ಎಂಎಸ್‌ಸಿ ಅರ್ಮೀನಿಯಾ ಆಗಮಿಸಿದ್ದು, ಜಲಫಿರಂಗಿಯ ಮೂಲಕ ಸ್ವಾಗತಿಸಲಾಯಿತು.ಇದರೊಂದಿಗೆ ಎನ್‌ಎಂಪಿಎ ಹೊಸದೊಂದು ಮೈಲಿಗಲ್ಲು ಸಾಧಿಸಿದೆ. 276.5 ಮೀಟರ್ ಉದ್ದ...