Saturday, August 20, 2022

ಉಡುಪಿ: ಧಾರಾಕಾರ ಮಳೆ-ಬೋಟ್ ಹಾಗೂ ಮೀನಿನ ಬಲೆಗೆ ಹಾನಿ

ಉಡುಪಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಮುದ್ರ ತೀರದಲ್ಲಿ ಲಂಗರು ಹಾಕಿದ್ದ ಬೋಟ್ ಹಾಗು ಮೀನಿನ ಬಲೆಗಳು ಹಾನಿಗೊಂಡ ಘಟನೆ ಉಡುಪಿ ಮಲ್ಪೆಯಲ್ಲಿ ನಡೆದಿದೆ.


ರಾಜ್ಯದಾದ್ಯಂತ ಸುರಿದ ರಣ ಭೀಕರ ಮಳೆ ಹಲವು ಅನಾಹುತವನ್ನೇ ಸೃಷ್ಟಿಮಾಡಿದ್ದು, ಅನೇಕ ಜೀವಗಳನ್ನು ಬಲಿ ಪಡೆದುಕೊಂಡಿದೆ. ಇತ್ತ ಉಡುಪಿಯಲ್ಲೂ ಮಳೆಯು ಹಲವು ಅನಾಹುತವನ್ನು ಉಂಟು ಮಾಡಿದೆ.

ಮಳೆಯ ಕಾರಣದಿಂದಾಗಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ ಎಂದು ಮೀನುಗಾರರು ಮಾಧ್ಯಮಗಳ ಮೂಲಕ ತಮ್ಮ ವ್ಯಥೆಯನ್ನು ತೋಡಿಕೊಂಡಿದ್ದಾರೆ.


ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಗಮನ ಹರಿಸಿ ಸರಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಸಂತ್ರಸ್ಥ ಮೀನುಗಾರರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here

Hot Topics