Connect with us

  DAKSHINA KANNADA

  ಕಾಲಲ್ಲಿ ಪರೀಕ್ಷೆ ಬರೆದು ಪಿಯುಸಿಯಲ್ಲಿ ಡಿಸ್ಟಿಂಕ್ಷನ್‌ ಪಡೆದ ಆಳ್ವಾಸ್‌ ಕೌಶಿಕ್‌

  Published

  on

  ಮೂಡುಬಿದಿರೆ: ಕಾಲಿನಲ್ಲಿ ಪಿಯುಸಿ ಪರೀಕ್ಷೆ ಬರೆದು ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿಯೊಬ್ಬ ಡಿಸ್ಟಿಂಕ್ಷನ್‌ ಸಾಧನೆಯೊಂದಿಗೆ ಉತೀರ್ಣರಾಗಿ ಗಮನ ಸೆಳೆದಿದ್ದಾನೆ.

  ಮೂಡುಬಿದಿರೆಯ ಆಳ್ವಾಸ್‌ ಪಿಯು ಕಾಲೇಜಿನ ಕೌಶಿಕ್‌ 600ರಲ್ಲಿ 524 ಅಂಕ ಪಡೆಯುವ ಮೂಲಕ ಅಂಗವೈಕಲ್ಯವನ್ನೇ ಮೆಟ್ಟಿ ನಿಂತಿದ್ದಾರೆ. ಈ ಹಿಂದೆ ಎಸ್‌ಎಸ್‌ಎಲ್‌ಸಿ 424 ಅಂಕ ಗಳಿಸಿ ಶಿಕ್ಷಣ ಸಚಿವ ಮನಗೆದ್ದಿದ್ದ.

  ಬಂಟ್ವಾಳ ಕಂಚಿಗಾರ ಪೇಟೆ ಮನೆ ನಿವಾಸಿ ರಾಜೇಶ್‌ ಆಚಾರ್ಯ ಜಲಜಾಕ್ಷಿ ದಂಪತಿಯ ಮೂವರು ಮಕ್ಕಳ ಪೈಕಿ ಎರಡನೆಯವರಾದ ಕೌಶಿಕ್‌ ಹುಟ್ಟಿನಲ್ಲೇ ಅಂಗವೈಕಲ್ಯಕ್ಕೆ ತುತ್ತಾದರು.

  ಜನಿಸುವಾಗಲೇ ಕೌಶಿಕ್‌ಗೆ ಕೈಗಳು ಇರಲಿಲ್ಲ. ಬಲಭಾಗದಲ್ಲಿ ಹೆಗಲಿನಿಂದ ಈಚೆ ಕೈಯ ಲಕ್ಷಣವೇ ಇಲ್ಲ, ಎಡಭಾಗದಲ್ಲಿ ಮೊಣಕೈ ವರೆಗೆ ಕೈಯನ್ನು ಹೋಲುವ ರೀತಿಯ ಮಾಂಸ ಜೋತಾಡುತ್ತಿದೆ.

  ಬೀಡಿ ಕಾರ್ಮಿಕೆ, ಅಮ್ಮ ಜಲಜಾಕ್ಷಿ ಕಾಲುಬೆರಗಳುಗಳ ನಡುವೆ ಬಳಪದ ಕಡ್ಡಿ ಸಿಕ್ಕಿಸಿ ಅಕ್ಷರ ಬರೆಯಲು ಕಲಿಸಿದ್ದರು. ಅದೇ ಅವರ ಮೊದಲ ಪಾಠವಾಗಿತ್ತು.

  ನಂತರ ಬಂಟ್ವಾಳದ ಎಸ್‌.ವಿ.ಎಸ್‌. ಶಾಲೆಯಲ್ಲಿ ಕಲಿಕೆಗೆ ಅವಕಾಶ ದೊರೆತು ಎಸ್‌ಎಸ್‌ಎಲ್‌ಸಿಯಲ್ಲಿ ಕಾಲಲ್ಲೇ ಬರೆದು ಕೌಶಿಕ್‌ ಪ್ರಥಮ ದರ್ಜೆಯಲ್ಲಿ ಉತೀರ್ಣರಾಗಿ ರಾಜ್ಯದ ಗಮನ ಸೆಳೆದಿದ್ದರು.

  ಆಗ ಪೊಳಲಿಗೆ ಭೇಟಿ ನೀಡಿದ್ದ ಅಂದಿನ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಈ ಪ್ರತಿಭೆಯನ್ನು ಶ್ಲಾಘಿಸಿದ್ದು, ಸ್ಥಳದಲ್ಲಿದ್ದ ಶಾಸಕ ರಾಜೇಶ್‌ ನಾಯ್ಕ್‌ ಜತೆಗಿದ್ದ ಡಾ. ಎಂ. ಮೋಹನ ಆಳ್ವರಲ್ಲಿ ಹುಡುಗನ ಬಗ್ಗೆ ಪ್ರಸ್ತಾಪಿಸಿದಾಗ

  ಈ ಪ್ರತಿಭೆಯನ್ನು ಆ ಕ್ಷಣವೇ ಆಳ್ವರು ದತ್ತು ಸ್ವೀಕರಿಸಿ ತಮ್ಮ ಕಾಲೇಜಿನಲ್ಲಿ ಉಚಿತ ಶಿಕ್ಷಣ ಯೋಜನೆಯಲ್ಲಿ ಪುಸ್ತಕ, ಕಲಿಕಾ ಸಾಮಗ್ರಿ ಮತ್ತು ಸಮವಸ್ತ್ರ ಒದಗಿಸಿದರು. ಇದೀಗ ಆಸರೆ ನೀಡಿದ ಸಂಸ್ಥೆಗೆ ಕೌಶಿಕ್ ಗೌರವ ತಂದುಕೊಟ್ಟಿದ್ದಾರೆ.
  ಮುಂದೆ ಬಿ.ಕಾಂ ಓದಿ ಬ್ಯಾಂಕಿಂಗ್‌ ಉದ್ಯೋಗಿಯಾಗಬೇಕು ಎನ್ನುವ ಕೌಶಿಕ್‌ ಆಸೆಗೆ ಆಳ್ವಾಸ್‌ ಮತ್ತೆ ನೀರೆರೆಯುತ್ತಿದೆ.


  ಡಾ. ಎಂ. ಮೋಹನ ಆಳ್ವ ಮತ್ತು ಸಂಸ್ಥೆಯ ಉಪನ್ಯಾಸಕರು ಮತ್ತಿತರ ಎಲ್ಲ ಮಂದಿಯ ಸಹಕಾರ, ಸಹೋದರರ ಪೋತ್ಸಾಹ ವಿಶೇಷವಾಗಿ ತಾಯಿಯ ಮಮತೆ ಈ ಮಟ್ಟಕ್ಕೆ ನನ್ನನ್ನು ಬೆಳೆಸಿದೆ ಎನ್ನುವ ಕೌಶಿಕ್‌ ಈಜು,

  ಡ್ಯಾನ್ಸ್‌, ಕಲೆ, ಕ್ರಾಫ್ಟ್‌, ಕ್ರಿಕೆಟ್‌, ಶಟಲ್‌ ಹೀಗೆ ಕ್ರೀಡೆಯಲ್ಲೂ ಮುಂದಿದ್ದಾರೆ. ಕಾಲನ್ನೇ ಬಳಸಿಕೊಂಡರೂ ಎಲ್ಲರಂತೆ ಸಹಜ ವೇಗದಿಂದ ಬರೆಯಬಲ್ಲ ಸಾಮರ್ಥ್ಯ ಕೌಶಿಕ್‌ನ ವಿಶೇಷತೆ.

  ಸಂಭ್ರಮಿಸಲು ತಂದೆ ಇದ್ದಿದ್ದರೆ
  ಕೌಶಿಕ್ ತಂದೆ ರಾಜೇಶ್ ಬಡಗಿ ಕೆಲಸ ಮಾಡುತ್ತಿದ್ದರು. ಕೌಶಿಕ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗಲೇ ಅವರು ಅನಾರೋಗ್ಯದಿಂದ ತೀರಿಕೊಂಡಿದ್ದರು.

  ‘ತಂದೆಗೆ ನನ್ನ ಮೇಲೆ ತುಂಬ ಪ್ರೀತಿ ಇತ್ತು. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದಾಗ ಸಂಭ್ರಮಿಸಿದ್ದರು. ಪಿಯುಸಿ ಸಾಧನೆಗೆ ಸಾಕ್ಷಿಯಾಗಲು ಅವರಿಲ್ಲ. ಅವರು ಈಗ ಇದ್ದಿದ್ದರೆ….’ ಎಂದು ಹೇಳಿ ಕೌಶಿಕ್ ಗದ್ಗದಿತರಾದರು.

  DAKSHINA KANNADA

  ಲಾರಿಯ ಟಯರ್‌ ಬದಲಿಸುವಾಗ ಹೊರಚಿಮ್ಮಿದ ಡಿಸ್ಕ್; ವ್ಯಕ್ತಿಗೆ ಗಂಭೀ*ರ ಗಾ*ಯ

  Published

  on

  ಪುತ್ತೂರು : ಲಾರಿಯೊಂದರ ಟಯರ್‌ ಬದಲಿಸುವಾಗ ಡಿಸ್ಕ್ ಚಿಮ್ಮಿ ಟಯರ್‌ ಸಮೇತ ಕಾಂಪೌಂಡ್‌ ಗೆ ಎಸೆಯಲ್ಪಟ್ಟು, ವ್ಯಕ್ತಿಯೊಬ್ಬರು ಗಂಭೀ*ರ ಗಾಯಗೊಂಡ ಘಟನೆ ಪುತ್ತೂರು ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ಸೋಮವಾರ(ಜು.22) ರಾತ್ರಿ ನಡೆದಿದೆ.

  ಬೆಳ್ತಂಗಡಿ ತಾಲೂಕಿನ ಕರಾಯದ ಜನತಾ ಕಾಲನಿ ನಿವಾಸಿ ರಶೀದ್ ಗಂಭೀರವಾಗಿ ಗಾಯಗೊಂಡವರು. ತನ್ನ ಬಾವನಿಗೆ ಸೇರಿದ ಕಲ್ಲು ಸಾಗಾಟದ ಲಾರಿಯ ಟಯರ್‌ ಪಂಚರ್ ಆದ ಕಾರಣ ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ನಿಲ್ಲಿಸಲಾಗಿತ್ತು ಎನ್ನಲಾಗಿದೆ.

  ಪಂಚರ್ ಮಾಡಿಸಿಕೊಂಡು ಆಟೋ ರಿಕ್ಷಾದಲ್ಲಿ ಟಯರ್‌ ತಂದಿದ್ದರು. ಟಯರ್‌ ಬದಲಿಸುವ ವೇಳೆ ಒಮ್ಮೆಲೇ ಟಯರ್‌ನ ರಿಂಗ್ ಹೊರಚಿಮ್ಮಿದೆ. ರಭಸಕ್ಕೆ ಟಯರ್‌ ಸಹಿತ ರಶೀದ್ ಅವರು ತುಸು ದೂರ ಕಾಂಪೌಂಡ್ ಗೆ ಎಸೆಯಲ್ಪಟ್ಟಿದ್ದಾರೆ.

  ಇದನ್ನೂ ಓದಿ :‘ಕೊಹ್ಲಿ’ ಜೊತೆಗಿನ ನಿಮ್ಮ ಸಂಬಂಧ ಹೇಗಿದೆ? ಎಂದು ಪ್ರಶ್ನಿಸಿದಕ್ಕೆ ‘ಗಂಭೀರ್’ ಖಡಕ್ ಉತ್ತರವೇನು ಗೊತ್ತಾ?
  ತೀವ್ರ ಗಾಯಗೊಂಡ ರಶೀದ್‌ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.

  Continue Reading

  DAKSHINA KANNADA

  ಸೊಳ್ಳೆ ಉತ್ಪತ್ತಿ ತಾಣವಾಗಿರುವ ಹೃದಯಭಾಗದ ಕಟ್ಟಡ; ಕಟ್ಟಡ ಮಾಲಕರಿಗೆ ನೊಟೀಸ್‌.!!

  Published

  on

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಡೆಂಗ್ಯೂ ನಿರ್ಮೂಲನೆಗೆ ಇನ್ನಿಲ್ಲದ ಪ್ರಯತ್ನ ಮಾಡ್ತಾ ಇದೆ. ಹಲವು ಜಾಗೃತಿ ಕಾರ್ಯಕ್ರಮದ ಮೂಲಕ ಲಾರ್ವಾ ಉತ್ಪತ್ತಿ ಸ್ಥಳಗಳನ್ನು ನಾಶ ಮಾಡುವ ಪ್ರಯತ್ನ ಕೂಡಾ ನಡೆಯುತ್ತಿದೆ. ಆದರೆ ನಗರದ ಹೃದಯಭಾಗದಲ್ಲೇ ಇರುವ ಬೃಹತ್ ವಾಣಿಜ್ಯ ಕಟ್ಟಡವೊಂದು ಸೊಳ್ಳೆ ಉತ್ಪತ್ತಿ ತಾಣವಾಗಿದೆ. ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ ಇರುವ ಸಹಕಾರಿ ಭವನ ಹೆಸರಿನ ಕಟ್ಟಡ ಇಡೀ ನಗರಕ್ಕೇ ಡೆಂಗ್ಯೂ ಮಲೇರಿಯ ಹರಡಿಸ್ತಾ ಇದೆ. ಬಾವಾ ಬಿಲ್ಡರ್ಸ್ ಗೆ ಸೇರಿರುವ ಈ ಕಟ್ಟಡ ಸದ್ಯ ಕಮಿಟಿಯೊಂದರ ಪಾಲಾಗಿದೆ ಎಂಬ ಮಾಹಿತಿ ಇದೆ.

  ಈ ಕಟ್ಟಡದ ಬೇಸ್ಮೆಂಟ್ ನಲ್ಲಿ ಏಳಡಿಯಷ್ಟು ಸೊಳ್ಳೆಗಳು ಸಂಗ್ರಹವಾಗಿ ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿದೆ. ಗಲೀಜು ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲಿ ಇರದ ಕಾರಣ ಡ್ರೈನೇಜ್ ನಲ್ಲಿ ಹರಿಯಬೇಕಾದ ನೀರು ಇಲ್ಲಿ ಸಂಗ್ರಹವಾಗಿದೆ. ಕಟ್ಟಡದ ಅಕ್ಕ ಪಕ್ಕದಲ್ಲಿ ಹೊಟೇಲ್ ಹಾಗೂ ಫಾಸ್ಟ್ ಫುಡ್ ಅಂಗಡಿಗಳ ಜೊತೆಗೆ ಸಾಕಷ್ಟು ಜನನಿಬಿಡ ಪ್ರದೇಶ ಇದಾಗಿದೆ. ಹೀಗಾಗಿ ಈ ಡ್ರೈನೇಜ್ ನೀರಿನ ಸಂಗ್ರಹದಿಂದ  ಜನರಿಗೆ ರೋಗ ಹರಡುವ ಆತಂಕ ಎದುರಾಗಿದೆ.  ವಾರಗಳ ಹಿಂದೆ  ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಎಚ್ಚರಿಕೆ ನೋಟಿಸ್ ನೀಡಿದ್ದರು.

  ಮಂಗಳೂರಿನಲ್ಲಿ ಮತ್ತೆ ಭೀತಿ ಹುಟ್ಟಿಸುತ್ತಿರುವ ಕಳ್ಳರ ಕಾಟ..!!

  ಡ್ರೈನೇಜ್ ನೀರು ನಿಲ್ಲದಂತೆ ಕ್ರಮಕ್ಕೆ ಸೂಚಿಸಿದ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ ವಿಚಾರಕ್ಕೆ ಫೈನ್ ಕೂಡಾ ವಿಧಿಸಿದ್ದರು. ಆದರೆ  ಎಚ್ಚರಿಕೆ ನೋಟಿಸಿಗೂ ಕ್ಯಾರೇ ಅನ್ನದ ಕಟ್ಟಡದ ಕಮಿಟಿ ಫೈನ್‌ ಕೂಡಾ ಕಟ್ಟಿಲ್ಲ. ಇನ್ನು ಇಲ್ಲಿ ಸಂಗ್ರಹವಾಗಿರೋ ಡ್ರೈನೇಜ್ ನೀರು ಖಾಲಿ ಮಾಡೋ ಕೆಲಸಕ್ಕೂ ಕೈ ಹಾಕಿಲ್ಲ. ಹೀಗಾಗಿ ಇಂದು ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಕುಮಾರ್ ಶೆಟ್ಟಿ, ಕಟ್ಟಡ ಸಮಿತಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಟ್ಟಡ ಮಾಲೀಕರಾದ ಬಾವ ಬಿಲ್ಡರ್ಸ್ ಹಾಗೂ ಕಟ್ಟಡದ ಸಮಿತಿಗೆ ನೋಟೀಸ್ ಜಾರಿ ಮಾಡಿ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಳವಾದಾಗ ಜಿಲ್ಲೆಯಿಂದಲೇ ಲಾರ್ವಾ ನಿರ್ಮೂಲನಾ ಕೇಂದ್ರಕ್ಕೆ ಆರೋಗ್ಯ ಸಚಿವರು ಚಾಲನೆ ನೀಡಿದ್ದರು. ಇದಾದ ಬಳಿಕ ಸಾಕಷ್ಟು ಕಡೆಯಲ್ಲಿ ಲಾರ್ವ ನಿರ್ಮೂಲನೆ ಮಾಡುವ ಕೆಲಸ ಕೂಡಾ ಆಗಿತ್ತು. ಆದ್ರೆ ಈ ಸಹಕಾರಿ ಭವನದ ಬೇಸ್ಮೆಂಟ್ ನಲ್ಲಿ ನಿಂತಿರೋ ಡ್ರೈನೇಜ್ ನೀರಿನಿಂದ ಇಡೀ ನಗರಕ್ಕೇ ಹಲವು ಕಾಯಿಲೆ ಹರಡುವ ಅಪಾಯ ಇದೆ. ಹೀಗಾಗಿ ಕಟ್ಟಡ ಮಾಲೀಕರ ವಿರುದ್ಧ ಸೂಕ್ತ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

  Continue Reading

  DAKSHINA KANNADA

  ಮಂಗಳೂರಿನಲ್ಲಿ ಮತ್ತೆ ಭೀತಿ ಹುಟ್ಟಿಸುತ್ತಿರುವ ಕಳ್ಳರ ಕಾಟ..!!

  Published

  on

  ಮಂಗಳೂರು: ಮಂಗಳೂರು ನಗರದ ಹೊರವಲಯದ  ಪದವಿನಂಗಡಿ ಸಮೀಪದ ಮಹಾತ್ಮನಗರ ಬಡಾವಣೆಯ ಮನೆಯೊಂದರ ಮುಖ್ಯಗೇಟ್ ತೆಗೆದು ಒಳನುಗ್ಗಿರುವ ಕಳ್ಳರು ಬಾಗಿಲಿನ ಬಳಿ ಇದ್ದ ಇನ್ನೊಂದು ಸ್ಟೀಲ್ ಗೇಟ್‌ನ್ನು ತೆರೆದು ಮನೆಯ ಬಾಗಿಲನ್ನು ರಾಡ್‌ನಿಂದ  ಒಡೆಯಲು ಯತ್ನಿಸಿರುವ ಘಟನೆ ಶನಿವಾರ(ಜು.20) ತಡ ರಾತ್ರಿ ನಡೆದಿರುವುದು ಬೆಳಕಿಗೆ ಬಂದಿದೆ.

  ಸ್ನಾನ ಮಾಡುತ್ತಿದ್ದಾಗ ವೀಡಿಯೋ ಮಾಡಿದ ಕಿಡಿಗೇಡಿ..! ಅರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು..!!

  ಕಳ್ಳರು ಕಳವು ಯತ್ನದಲ್ಲಿರುವಾಗ  ಎಚ್ಚರಗೊಂಡ  ಮನೆ ಮಂದಿ ಕೂಗಿದಾಗ ಕಳ್ಳರು ಓಡಿ ಹೋಗಿದ್ದಾರೆ. ಮನೆಯವರು ಪೊಲೀಸರು ಹಾಗೂ ನೆರೆಮನೆಯವರಿಗೆ ಮಾಹಿತಿ ನೀಡಿದ್ದಾರೆ. ಕಾವೂರು ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶನಿವಾರ ತಡರಾತ್ರಿ ನಾಲ್ವರ ತಂಡ ಪದವಿನಂಗಡಿಯ ಪೆರ್ಲಗುರಿಯ ಪ್ರಸನ್ನ ಗಣಪತಿ ದೇವಸ್ಥಾನದಿಂದ ಕಳವಿಗೆ ಯತ್ನಿಸಿರುವ ಘಟನೆ ವರದಿಯಾಗಿದೆ. ದೇವಸ್ಥಾನದ ಬಳಿ ಓಡಾಡುತ್ತಿದ್ದ ಕಳ್ಳರ ಕೈಯಲ್ಲಿದ್ದ ಟಾರ್ಚ್ ಬೆಳಕು ದೇವಸ್ಥಾನದ ಪಕ್ಕದ ಮನೆಯವರಿಗೆ ಕಂಡು ಅವರು ಎಚ್ಚರಗೊಂಡರು ಎನ್ನಲಾಗಿದೆ.  ಮನೆಯ ಹೊರಭಾಗದ ಲೈಟ್‌ಗಳನ್ನು ಅವರು ಹಾಕಿದಾಗ ಕಳ್ಳರು ಪರಾರಿಯಾಗಿದ್ದಾರೆ  ಎಂದು ತಿಳಿದು ಬಂದಿದೆ. ಇದು ಚಡ್ಡಿ ಗ್ಯಾಂಗಿನವರ ಕೃತ್ಯ ಇರಬಹುದೇ ಎನ್ನುವ ಗುಮಾನಿ ಹುಟ್ಟಿದೆ. ಕೆಲವು ದಿನಗಳ ಹಿಂದೆ ಖತರ್ನಾಕ್ ಚಡ್ಡಿ ಗ್ಯಾಂಗಿನ ಕಳ್ಳರನ್ನು ಪೊಲೀಸರು ಬಂಧಿಸಿ, ಅವರು ಕಳವು ಮಾಡಿದ್ದ ಚಿನ್ನಾಭರಣ ವಶಪಡಿಸಿಕೊಂಡಿದ್ದರು.

  Continue Reading

  LATEST NEWS

  Trending