ಕಾರ್ಕಳ: ಹರಿಯುತ್ತಿರುವ ತೋಡಿನಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾದ ಘಟನೆ ಕಾರ್ಕಳ ಕಸಬಾ ಗ್ರಾಮದ ಪೆರ್ವಾಜೆ ಪತ್ತೊಂಜಿಕಟ್ಟೆ ಜುವಾ ಮೆನ್ಷನ್ 8ನೇ ಕ್ರಾಸ್ ನಲ್ಲಿ ನಡೆದಿದೆ.
ನಿನ್ನೆ ಅಬ್ದುಲ್ ಖಾದರ್ ಎನ್ನುವವರು ಮನೆಯಿಂದ ಕಾರ್ಕಳ ಪೇಟೆಗೆ ಸಂಜೆ 4 ಗಂಟೆಗೆ ಹೊರಡಿ ಮನೆಯ ಎದುರುಗಡೆ ತೋಡಿನ ಬಳಿ ಬರುತ್ತಿದ್ದಾಗ ಹರಿಯುವ ತೋಡಿನ ಕೆಳಗಡೆ
ನೀರಿನಲ್ಲಿ ನವಜಾತ ಶಿಶುವಿನ ಮೃತದೇಹ ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿದ್ದು, ತಕ್ಷಣವೇ ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಮಾಹಿತಿ ನೀಡಿದ್ದಾರೆ.
ಯಾರೋ ಅಪಚಿತರು ಮಗು ಹುಟ್ಟಬಾರದೆಂಬ ಉದ್ದೇಶದಿಂದಲೋ ಅಥವಾ ಮಗು ಹುಟ್ಟಿದ ಬಳಿಕ ಸಾಯುವ ಉದ್ದೇಶದಿಂದಲೋ ಅಥವಾ ಹುಟ್ಟಿದ ಮಗುವಿನ ಜನನದ ರಹಸ್ಯವನ್ನು ಬಚ್ಚಿಡುವ ಉದ್ದೇಶದಿಂದ
ಈ ಕೃತ್ಯವನ್ನು ಮಾಡಿ ಬಳಿಕ ಸಾಕ್ಷ್ಯಾಧಾರವನ್ನು ನಾಶ ಮಾಡುವ ಉದ್ದೇಶದಿಂದ ನವಜಾತಶಿಶುವಿನ ಮೃತದೇಹವನ್ನು ತೋಡಿಗೆ ಬಿಸಾಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.