Saturday, July 2, 2022

ಹ್ಯಾಶ್ ಆಯಿಲ್ ಮಾರಾಟ: ಕೇರಳ ಮೂಲದ ಆರೋಪಿ ಬಂಧನ

ಬೆಂಗಳೂರು : ಹ್ಯಾಶ್ ಆಯಿಲ್ ಮಾರಾಟದಲ್ಲಿ ತೊಡಗಿದ್ದ ಕೇರಳ ಮೂಲದ ಆರೋಪಿಯನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ‌.

ಕಾಸರಗೋಡು ಮೂಲದ ರಾಹುಲ್ (25) ಎಂಬಾತ ಬಂಧಿತ ಆರೋಪಿ.


ಬಂಧಿತನಿಂದ 10 ಲಕ್ಷ ರೂ. ಮೌಲ್ಯದ ಹ್ಯಾಶ್ ಆಯಿಲ್ ವಶಕ್ಕೆ ಪಡೆಯಲಾಗಿದೆ.

ಮೇ 10ರಂದು ಆಡುಗೋಡಿ ಠಾಣಾ ವ್ಯಾಪ್ತಿಯ ಮಹಾಲಿಂಗೇಶ್ವರ ಬಂಡೆ ಬಳಿ ಆರೋಪಿಯು ಗಿರಾಕಿಗಳಿಗೆ ಹ್ಯಾಶ್ ಆಯಿಲ್ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು.


ಇದರ ಹಿನ್ನೆಲೆ ಆಡುಗೋಡಿ ಠಾಣಾ ಇನ್ಸ್​ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ದಾಳಿ ನಡೆಸಿ, ಮಾಲು ಸಮೇತ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here

Hot Topics

ವಿಟ್ಲ: ಉದ್ಯಮಿ ಮನೆಗೆ ನುಗ್ಗಿ ಕುಡುಕನ ದರ್ಬಾರ್…

ವಿಟ್ಲ: ಉದ್ಯಮಿಯೊಬ್ಬರ ಮನೆಗೆ ನುಗ್ಗಿ ಕುಡುಕನೋರ್ವ ಮಹಿಳೆ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ವಿಟ್ಲ ಚಂದಳಿಕೆಯಲ್ಲಿ ನಡೆದಿದೆ.ಚಂದಳಿಕೆ ನಿವಾಸಿ ಉದ್ಯಮಿ ನವೀನ್ ಶೆಟ್ಟಿ ಎಂಬವರ ಮನೆಗೆ ಚಂದಳಿಕೆ ಸಮೀಪದ ರಿಕ್ಷಾ ಡ್ರೈವರ್...

ಯುಗಾದಿ ಹಬ್ಬದ ಪ್ರಯುಕ್ತ ‘ದುಬೈ ಹೆಮ್ಮೆಯ ಯುಎಇ ಕನ್ನಡಿಗ’ರಿಂದ ಪ್ರತಿಭಾ ಸ್ಪರ್ಧೆ& ಪುರಸ್ಕಾರ

ದುಬೈ: ಯುಗಾದಿ ಹಬ್ಬದ ಪ್ರಯುಕ್ತ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ತಂಡವು ಸಂಯುಕ್ತ ಅರಬ್ ಸಂಸ್ಥಾನದ ಕನ್ನಡ ಮಕ್ಕಳಿಗಾಗಿ ವಿವಿಧ ರೀತಿಯ ಕಲಾ ಪ್ರತಿಭಾ ಸ್ಪರ್ಧೆಯ ಗ್ರಾಂಡ್ ಫೈನಲ್ ಕಾರ್ಯಕ್ರಮ ಜೊತೆಗೆ ಹೆಚ್ಚು...

ಮಂಗಳೂರು: ಒಡೆದು ಹೋದ ನೀರಿನ ಪೈಪ್‌ ಪತ್ತೆ, ದುರಸ್ತಿ ಕಾಮಗಾರಿಗೆ ವೇಗ

ಮಂಗಳೂರು: ತುಂಬೆಯಿಂದ ಮಂಗಳೂರು ನಗರದ ಕೆಲವು ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಬೃಹತ್ ಭೂಗತ ಪೈಪ್‌ಲೈನ್ ಜೂನ್ 28ರಂದು ಪಂಪ್ವೆಲ್ ಫ್ಲೈಓವರ್‌ ಬಳಿ ಒಡೆದು ಹೋಗಿತ್ತು.ಇದೀಗ ಒಡೆದು ಹೋಗಿದ್ದ ಪೈಪನ್ನು ಪತ್ತೆ...