Tuesday, October 19, 2021

ಬಿಎಸ್‌ವೈಗೆ ಗುಲಾಬಿ ಕೊಟ್ಟು ಹಾಲಾಡಿಗೆ ಸಚಿವ ಸ್ಥಾನ ಕೊಡುವಂತೆ ಅಭಿಮಾನಿಗಳಿಂದ ಸಾತ್ವಿಕ ಪ್ರತಿಭಟನೆ

ಇಂದು ಸಚಿವ ಸಂಪುಟದ ಪದಗ್ರಹಣ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದು, ಈಗಾಗಲೇ ಸಂಭಾವ್ಯ ಸಚಿವರ ಪಟ್ಟಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡತೊಡಗಿದ್ದು, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಹೆಸರು ಎಲ್ಲೂ ಇಲ್ಲದೇ ಇರುವುರಿಂದ ಅವರ ಅಭಿಮಾನಿಗಳ ಅಸಮಾಧಾನ ಸ್ಫೋಟಗೊಂಡಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಹಾಗೂ ಯಡಿಯೂರಪ್ಪನವರಿಗೆ ನೇರ ಪತ್ರ ಬರೆದು ತಮ್ಮ ಆಕ್ರೋಶಗಳನ್ನು ಹೊರಹಾಕುತ್ತಿದ್ದಾರೆ. ಜೊತೆಗೆ ಇಂದು ಗುಲಾಬಿ ನೀಡುವ ಮೂಲಕ ಮತ್ತೊಮ್ಮೆ ಬಿಎಸ್‌ವೈಗೆ ನೆನಪಿಸುವ ಕಾರ್ಯವನ್ನು ಅವರ ಅಭಿಮಾನಿಗಳು ನಡೆಸಲಿದ್ದಾರೆ.

 


ಐದು ಬಾರಿ ಕುಂದಾಪುರದ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಇದುವರೆಗೂ ಮಂತ್ರಿ ಸ್ಥಾನ ಸಿಕ್ಕಿಲ್ಲ. ಹೀಗಾಗಿ ನೊಂದ ಹಾಲಾಡಿ ಅಭಿಮಾನಿಗಳು ಯಡಿಯೂರಪ್ಪನವರಿಗೆ ನೇರ ಪತ್ರ ಬರೆದು ತಮ್ಮ ಆಕ್ರೋಶಗಳನ್ನು ಹೊರಹಾಕುತ್ತಿದ್ದಾರೆ. ನಾನು ಬೆಂಗಳೂರಿಗೆ ಹೋಗಿ ನನ್ನ ಉಸಿರು ಇದ್ದರೆ ಕಾಡಿಬೇಡಿ ಮಂತ್ರಿಯಾಗುವುದಿಲ್ಲ ಎಂದು ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಕೆಲ ದಿನಗಳ ಹಿಂದೆಯೇ ಸ್ಪಷ್ಟಪಡಿಸಿದ್ದರು. ಆದರೂ ಹಾಲಾಡಿ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಪತ್ರ ಅಭಿಯಾನ ಆರಂಭಿಸಿದ್ದಾರೆ.


ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಬರೆದ ಪತ್ರದಲ್ಲಿ ಹಳೆಯ ಎಲ್ಲ ನೆನಪುಗಳನ್ನು ಕೆದಕಿದ್ದಾರೆ. ಬೆಂಗಳೂರಿಗೆ ಕರೆಸಿ ಮಂತ್ರಿ ಸ್ಥಾನ ತಪ್ಪಿದಾಗ ಯಡಿಯೂರಪ್ಪ ಮಾತುಕತೆ ಮಾಡಿ ಸಿಹಿಸುದ್ದಿ ಕೊಡುವುದಾಗಿ ಹೇಳಿದ್ದರು. ಅದನ್ನು ಯಾಕೆ ಮರೆತಿದ್ದೀರಿ? ನೀವು ಕಿಂಗ್ ಮೇಕರ್, ಸದಾನಂದಗೌಡ, ಶೆಟ್ಟರ್, ಬೊಮ್ಮಾಯಿಯನ್ನು ಸಿಎಂ ಮಾಡಿದ್ದೀರಿ. ಹಾಲಾಡಿಯನ್ನು ಮಂತ್ರಿ ಮಾಡಬೇಕೆಂದು ಅನ್ನಿಸಲಿಲ್ಲವಾ?
ಕೋಟ ಶ್ರೀನಿವಾಸ ಪೂಜಾರಿಗೆ ಸ್ಥಾನ ಕೊಟ್ಟಿದ್ದು ಯಾಕೆ ಎಂಬುದನ್ನು ನಾವು ಇನ್ನೂ ಮರೆತಿಲ್ಲ. ಶೋಭಾ ಕರಂದ್ಲಾಜೆಗೆ ಹಾಲಾಡಿ ಕ್ಷೇತ್ರದಲ್ಲಿ ಅತಿ ಹೆಚ್ಚು ಲೀಡ್ ಕೊಡಿಸಿದ್ದು ನಿಮಗೆ ಮರೆತುಹೋಯಿತೆ ? ಹಾಲಾಡಿ ಜಿಲ್ಲೆಯ ಏಕೈಕ ಶಾಸಕರಾಗಿದ್ದ ದಿನಗಳನ್ನು ನೀವು ಮರೆಯಬೇಡಿ.
ಪಕ್ಷೇತರರಾಗಿದ್ದಾಗ ನಿರ್ಮಲಾ ಸೀತಾರಾಮನ್‌ಗೆ ಮತ ಹಾಕಿದ್ದು ನಿಮಗೆ ನೆನಪಿಲ್ಲವೇ? ಹಾಲಾಡಿಗೆ ಸಚಿವ ಸ್ಥಾನ ಸಿಗದಿದ್ದರೆ ನಮಗೆ ಬೇಸರವಿಲ್ಲ. ಆದರೆ ಲಕ್ಷಾಂತರ ಮಂದಿಯ ಶಾಪ ನಿಮಗೆ ತಟ್ಟಲಿದೆ. ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲ ಅಭಿಮಾನಿಗಳು ಪ್ರಿಂಟ್ ತೆಗೆದು ಯಡಿಯೂರಪ್ಪನವರಿಗೆ ಪೋಸ್ಟ್ ಮಾಡುತ್ತಿದ್ದಾರೆ.

ಯಡಿಯೂರಪ್ಪರಿಗೆ ಗುಲಾಬಿ ನೀಡಿ ನೆನಪಿಸುತ್ತೇವೆ

ಮ೦ತ್ರಿಯಾಗುವ ಎಲ್ಲ ಅರ್ಹತೆಗಳಿದ್ದರೂ ಇಂದಿಗೂ ತಮಗೊಂದು ಮಂತ್ರಿ ಸ್ಥಾನ ಕೊಡಿ ಎಂದು ಹಾಲಾಡಿ ಇದುವರೆಗೂ ರಾಜ್ಯ, ಕೇಂದ್ರ ಮುಖಂಡರ ಬಳಿ ಬೇಡಿಕೆ ಇಟ್ಟಿಲ್ಲ, ಹಾಲಾಡಿಯವರ ಇದೇ ವ್ಯಕ್ತಿತ್ವವನ್ನು ಬಳಸಿ ಅವರನ್ನು ಪ್ರತಿ ಬಾರಿಯೂ ಸಚಿವ ಸ್ಥಾನದಿಂದ ಹೊರಗಿಡಲಾಗುತ್ತಿದೆ. ಇಂದು ಮಾಜಿ ಸಿಎಂ ಯಡಿಯೂರಪ್ಪನವರ ಬೆಂಗಳೂರಿನ ನಿವಾಸಕ್ಕೆ ತೆರಳಿ ಅವರಿಗೆ ಕೆಂಗುಲಾಬಿಯ ಗುಚ್ಛವನ್ನು ನೀಡಿ ಹಾಲಾಡಿಯವರ ಹೆಸರನ್ನು ನೆನಪಿಸಿ ಬರುತ್ತೇವೆ. ಇದು ಪ್ರತಿಭಟನೆಯಲ್ಲಿ, ಆಕ್ರೋಶವೂ ಅಲ್ಪ ಶಕ್ತಿ ಪ್ರದರ್ಶನವಂತೂ ಅಲ್ಲವೇ ಅಲ್ಲ, ಇಪತ್ತು ಮೂವತ್ತು ಮಂದಿ ತೆರಳಿ ಹಾಲಾಡಿ ಅವರಿಗೆ ಸಚಿವ ಸ್ಥಾನ ಕೊಡಿ ಎಂದು ವಿನಂತಿ ಮಾಡಿಕೊಳ್ಳುತ್ತೇವೆ ಎಂದು ಹಾಲಾಡಿ ಅಭಿಮಾನಿಗಳು ತಿಳಿಸಿದ್ದಾರೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...