LATEST NEWS
ಉಡುಪಿ: ಹಿಂಸಾಚಾರವನ್ನು ಸರ್ಕಾರ ಸಹಿಸುವುದಿಲ್ಲ- ಸಿಎಂ ಬೊಮ್ಮಾಯಿ ಎಚ್ಚರಿಕೆ
ಉಡುಪಿ: ‘ಅವರವರ ವಿಚಾರಗಳನ್ನು ಪ್ರಚಾರ ಮಾಡುವ ಅವಕಾಶ ಇದೆ. ಆದರೆ ಅದರ ಉದ್ದೇಶದಲ್ಲಿ ಹಿಂಸಾಚಾರಕ್ಕೆ ಎಡೆ ಮಾಡಿಕೊಟ್ಟಲ್ಲಿ ಮಾತ್ರ ಸರ್ಕಾರ ಸಹಿಸುವುದಿಲ್ಲ ಎಂಬ ಸ್ಪಷ್ಟ ನಿರ್ಧಾರವನ್ನು ನಾನು ಈಗಾಗಲೇ ತಿಳಿಸಿದ್ದೇನೆ’ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಉಡುಪಿ ಜಿಲ್ಲೆಗೆ ಆಗಮಿಸಿ ಮಾಧ್ಯಮದವರು ರಾಜ್ಯದ ವ್ಯವಸ್ಥೆಯ ಬಗ್ಗೆ ಸಿಎಂ ಮೌನವಾಗಿದ್ದಾರೆ ಎಂದು ವಿಪಕ್ಷ ಮಾತಾಡ್ತಾ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ನಾನು ಮಾತಾಡದೇ ಇರಬಹುದು, ಆದ್ರೆ ನನ್ನ ಆ್ಯಕ್ಷನ್ ಮಾತಾಡ್ತ ಇದೆ ಅಷ್ಟು ಸಾಕು.
ಯಾವಾಗಲು ಮಾತಾಡುವುದಕ್ಕಿಂತ ಕೆಲಸದಲ್ಲಿ ತೋರಿಸಬೇಕು. ಇವರಿಂದ ನಾವು ಕಲಿಯಬೇಕಾಗಿರುವುದು ಏನೂ ಇಲ್ಲ.
ಹಲವಾರು ಕೊಲೆಗಳಿಗೆ ನೇರ ಹೊಣೆಯಾಗಿ ಸರ್ಕಾರದ ತನಕ ಅದನ್ನು ತೆಗೆದುಕೊಂಡು ಹೋಗಿ ಅರ್ಧದಲ್ಲೇ ಕೈ ಬಿಟ್ರಲ್ಲಾ ಆವಾಗ ಇವರಿಗೆ ಎಲ್ಲಿತ್ತು ಕರ್ತವ್ಯ ಪ್ರಜ್ಞೆ …? ಇವರಿಂದ ಕಲಿಯಬೇಕಿರುವುದು ಏನಿಲ್ಲ.
ಯಾವ ಸಂದರ್ಭದಲ್ಲಿ ಮಾತನಾಡಬೇಕು, ಹೇಗೆ ಮಾತನಾಡಬೇಕು ಮತ್ತು ಯಾವ ಸಂದರ್ಭದಲ್ಲಿ ಶಾಂತಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು ಅನ್ನೋದು ನಮಗೆ ಚೆನ್ನಾಗಿ ಗೊತ್ತಿದೆ’ ಎಂದು ಹೇಳಿದರು.
ಇನ್ನು ಲವ್ ಜಿಹಾದ್ ವಿಷಯವಾಗಿ ಮಾತನಾಡಿದ ಅವರು ‘ಮಂಗಳೂರಿನಲ್ಲಿ ಲವ್ ಜಿಹಾದ್ ವಿರುದ್ಧ ಟಾಸ್ಕ್ ಫೋರ್ಸ್ ರಚನೆ ಸುದ್ದಿ ಹರಿದಾಡುತ್ತಿದೆ. ಇದರ ಬಗ್ಗೆ ತಪ್ಪು ವಿಶ್ಲೇಷಣೆ ಸರಿಯಲ್ಲ.
ಅವರವರ ರಕ್ಷಣೆ ಮಾಡಿಕೊಳ್ಳಲು ಅವರು ಸ್ವತಂತ್ರರು. ಸರಕಾರ ಕಾನೂನು ಬದ್ಧವಾಗಿ ಕೆಲಸ ಮಾಡುತ್ತಿದೆ. ಕೆಲವೊಂದು ಕಾನೂನುಗಳನ್ನು ಹಿಂದಿನ ಸರ್ಕಾರವೇ ಜಾರಿಮಾಡಿದೆ. ನಾವೇನು ಹೊಸ ಕಾನೂನುಗಳನ್ನು ಮಾಡಿಲ್ಲ. ಅವುಗಳನ್ನು ಸರಿಯಾದ ರೀತಿಯಲ್ಲಿ ಜಾರಿ ಮಾಡುತ್ತಿದ್ದೇವೆ ಅಷ್ಟೆ’ ಎಂದು ಹೇಳಿದರು.
ಮಾಧ್ಯಮದವರು ಇತ್ತೀಚೆಗೆ ನಡೆಯುತ್ತಿರುವ ಧರ್ಮ ಸಂಘರ್ಷದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ‘ಸರ್ಕಾರ ಅನ್ನುವಂತದ್ದು ಕಾನೂನು ಸುವ್ಯವಸ್ಥೆ ಹಾಗೂ ಸಂವಿಧಾನಾತ್ಮಕವಾಗಿ ರಚಿಸಲ್ಪಟ್ಟಿದೆ. ಹಿಜಾಬ್ ವಿಚಾರವಾಗಿ ಮತ್ತೊಮ್ಮೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಅವರು ಹಿಜಾಬ್ ವಿಚಾರದಲ್ಲಿ ಕೋರ್ಟ್ ಆದೇಶ ಏನಿದೆ ಅದರ ಪ್ರಕಾರವಾಗಿಯೇ ಕೋರ್ಟ್ ಆದೇಶ ಪಾಲನೆ ಆಗುತ್ತೆ.
ನಾವು ಸಂವಿಧಾನಬದ್ಧವಾಗಿ ಕಾನೂನು ಸುವ್ಯವಸ್ಥೆಗೆ ಆದ್ಯತೆ ನೀಡುತ್ತೇವೆ. ಕಾನೂನಿನ ಮುಂದೆ ಎಲ್ಲರೂ ಸಮಾನರು. ಈ ದೃಷ್ಟಿಕೋನ ಇಟ್ಟುಕೊಂಡು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಪ್ರತೀ ದಿನ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಆ ಪ್ರಯುಕ್ತ ಹಾಗೂ ಬಿಜೆಪಿ ಮುಖಂಡರ ಜೊತೆ ಸಭೆ ನಡೆಸುವ ಉದ್ದೇಶದಿಂದ ಇಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
LATEST NEWS
ಮುಂದಿನ 5 ದಿನ ರಾಜ್ಯದ 25 ಜಿಲ್ಲೆಗಳಲ್ಲಿ ಬಿಸಿ ಗಾಳಿ ಸಾಧ್ಯತೆ; ಎಲ್ಲೆಲ್ಲಿ?
ಮಂಗಳೂರು : ರಾಜ್ಯದಲ್ಲಿ ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಲಿದ್ದು, ಬಿಸಿಲಾಘಾತದಿಂದ ಜನ, ಜಾನುವಾರು ಮತ್ತು ಪಕ್ಷಿ ಸಂಕುಲ ತತ್ತರಿಸಿದೆ. ನೀರಿಗೆ ತತ್ವಾರ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೇ ಇದೀಗ ಹವಾಮಾನ ಇಲಾಖೆಯು ರಾಜ್ಯದ 25 ಜಿಲ್ಲೆಗಳಿಗೆ ಶಾಖಾಘಾತದ ಮುನ್ಸೂಚನೆ ನೀಡಿದೆ. ಇಂದಿನಿಂದ 5 ದಿನಗಳ ಕಾಲ ಬಿಸಿ ಗಾಳಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.
ಯಾವ ಜಿಲ್ಲೆಗಳಿಗೆ ಬಿಸಿಲಾಘಾತ?
ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಮಂಡ್ಯ, ಬಳ್ಳಾರಿ, ಹಾಸನ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶಾಖದ ಅಲೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಮೇ 5 ರವರೆಗೂ ಇದೇ ಪರಿಸ್ಥಿತಿ ಇರಲಿದೆ ಎಂದು ಇಲಾಖೆ ತಿಳಿಸಿದೆ.
ಮೇ 4 ರ ವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ವಾತಾವರಣವಿರುವ ಸಂಭವವಿದೆ.
ಮಳೆಯಾಗುವ ಸಾಧ್ಯತೆ :
ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ, ರಾಮನಗರ ಹಾಗೂ ತುಮಕೂರು ಜಿಲ್ಲೆಯ ಕೆಲವೆಡೆ ಬುಧವಾರ ಹಗುರ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ ನಾಲ್ಕುದಿನ ಒಣಹವೆ ಇರಲಿದೆ.
ಮೇ 6 ರಿಂದ ಕೊಡಗು, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಶಿವಮೊಗ್ಗ, ತುಮಕೂರು, ವಿಜಯನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ : ಮಂಗಳೂರು ವಿಮಾನ ನಿಲ್ದಾಣವಿನ್ನು ನಿಶ್ಶಬ್ದ ವಲಯ!
ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ :
ಇಂದಿನಿಂದ(ಮೇ 1 ರಿಂದ) ಮುಂದಿನ ಐದು ದಿನಗಳು ಬಾಗಲಕೋಟೆ, ಕಲಬುರಗಿ ಹಾಗೂ ಕೊಪ್ಪಳದಲ್ಲಿ ರಾತ್ರಿಯ ಅವಧಿಯೂ ಬಿಸಿ ವಾತಾವರಣದಿಂದ ಕೂಡಿರುವ ಸಾಧ್ಯತೆಯಿದೆ. ಮಂಗಳವಾರ ಬೆಳಿಗ್ಗೆ 8.30 ರಿಂದ ಬುಧವಾರ ಬೆಳಗ್ಗಿನ ತನಕದ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 42.8 ಡಿಗ್ರಿ ಸೆಲ್ಸಿಯಸ್ ವರದಿಯಾಗಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 38.2 ಡಿಗ್ರಿ ಸೆಲ್ಸಿಯಸ್ ವರದಿಯಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಮೂರು ದಿನ 38 ಡಿಗ್ರಿ ಸೆಲ್ಸಿಯಸ್ ದಾಟಿದೆ.
DAKSHINA KANNADA
ಭರತನಾಟ್ಯದಂತೆ ಯಕ್ಷಗಾನಕ್ಕೂ ಪರೀಕ್ಷೆ..! ಪಟ್ಲ ಸತೀಶ್ ಶೆಟ್ಟಿ
ಮಂಗಳೂರು: ಸಂಗೀತ, ಭರತನಾಟ್ಯದ ಮಾದರಿಯಲ್ಲಿ ಯಕ್ಷಗಾನಕ್ಕೂ ನಿರ್ದಿಷ್ಟ ಚೌಕಟ್ಟಿನಲ್ಲಿ ಪಠ್ಯ ರಚಿಸಿ ಪರೀಕ್ಷೆಗಳನ್ನು ನಡೆಸುವ ಪ್ರಯತ್ನಗಳು ನಡೆಯುತ್ತಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ಮಂಗಳೂರಿನ ಪ್ರೆಸ್ ಕ್ಲಬ್ ವತಿಯಿಂದ ನಡೆದ ಪ್ರೆಸ್ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಯಕ್ಷಗಾನದಲ್ಲಿ ಪ್ರತಿಯೊಬ್ಬ ಗುರು ತಮ್ಮದೇ ಆದ ಶೈಲಿಯಲ್ಲಿ ನಾಟ್ಯವನ್ನು ಕಲಿಸುತ್ತಾರೆ. ಯಕ್ಷಗಾನ ಕಲಿಕೆಗೆ ಒಂದು ಚೌಕಟ್ಟು ರೂಪಿಸುವ ಮೂಲಕ ಏಕರೂಪತೆ ತರಬೇಕಾಗಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್ನ ಯಕ್ಷ ಶಿಕ್ಷಣ ಯೋಜನೆಯು ಪಠ್ಯ ರೂಪಿಸಿದ್ದು, ಫೌಂಡೇಶನ್ನ ಶಿಕ್ಷಕರು ಇದರ ಪ್ರಕಾರವೇ ನಾಟ್ಯ ಕಲಿಸುತ್ತಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಕ್ಷಗಾನಕ್ಕೆಂದೇ ಒಂದು ಸೀಲೆಬಸ್ ಮಾಡಿ ಅದರ ಮುಖೇನ ಯಕ್ಷಗಾನ ನಾಟ್ಯ ಕಲಿಯುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದರು.
LATEST NEWS
ಬೆಳಗ್ಗೆ ಏಳುವಾಗ ಬಲಗಡೆಯಿಂದ ಯಾಕೆ ಏಳಬೇಕು ಗೊತ್ತೇ..?
ಮಂಗಳೂರು: ರಾತ್ರಿ ಮಲಗೋದು ಎಷ್ಟು ಮುಖ್ಯವೋ ಬೆಳಗ್ಗಿನ ಜಾವ ಏಳೋದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಸನಾತನ ಹಿಂದೂ ಧರ್ಮದಲ್ಲಿ ಒಂದು ವಿಶೇಷ ಸಂಪ್ರದಾಯ ಇದೆ. ಬೆಳಿಗ್ಗೆ ಬಲಗಡೆಯಿಂದ ಎದ್ದು ಅಂಗೈ ಉಜ್ಜಿ ಕಣ್ಣು ಮುಚ್ಚಿ ಕರಾಗ್ರೆ ವಸತೆ ಲಕ್ಷ್ಮಿ ಎನ್ನುವ ಶ್ಲೋಕ ಹೇಳುವುದು. ಬಾಲ್ಯದಲ್ಲಿ ನಮ್ಮ ಹಿರಿಯರು ಹಾಗೂ ನಮ್ಮ ಅಮ್ಮಂದಿರು ಬಲಗಡೆಗೆ ಏಳು ಅಂತ ಹೇಳಿರುವುದನ್ನು ಕೇಳಿರುತ್ತೇವೆ. ಅಥವಾ ನಾವು ಎಡ ಬದಿಯಿಂದ ಎಳುವುದ್ದನ್ನು ನೋಡಿದಾಗ ನಮ್ಮನ್ನು ಬಲಗಡೆಯಿಂದ ಎಬ್ಬಿಸಲು ಟ್ರೈ ಮಾಡಿರಬಹುದು.
ಬಲ ಭಾಗದಿಂದ ಎದ್ದರೆ ಅದೃಷ್ಟ
ಬಲ ಭಾಗದಿಂದ ಎದ್ದರೆ ಒಳ್ಳೆಯದು ಅನ್ನೋದು ಹೇಳಿದ್ದನ್ನ ನಾವು ಕೇಳಿರಬಹುದು. ಬಲ ಭಾಗದಿಂದ ಎಚ್ಚರಗೊಂಡರೆ ದಿನವಿಡೀ ಅದೃಷ್ಟ ಇತ್ಯಾದಿ ಕಲ್ಪನೆಗಳು ನಮ್ಮಲ್ಲಿ ಇರುತ್ತದೆ. ಇನ್ನೊಂದು ವಿಚಾರ ಏನು ಅಂದ್ರೆ ನಮ್ಮ ದೇಹ ನಿದ್ದೆಗೆ ಜಾರಿದಾಗ ನಮ್ಮ ದೇಹದಲ್ಲಿ ಸ್ನಾಯುಗಳು ರೆಸ್ಟ್ ಅಲ್ಲಿ ಇರುತ್ತವೆ.
ವೈಜ್ಞಾನಿಕ ಕಾರಣ
ವೈಜ್ಞಾನಿಕವಾಗಿ ಹೇಳುವುದಾದರೆ ನಮ್ಮ ಹೃದಯ ದೇಹದ ಎಡ ಭಾಗದಲ್ಲಿ ಇದೆ. ಅದರ ಸುತ್ತಲೂ ಹಲವಾರು ಸ್ನಾಯುಗಳು ಇವೆ. ನಾವು ಎಡ ಭಾಗದಿಂದ ಧಿಡೀರ್ ಅಂತ ಇದ್ರೆ ನಮ್ಮ ಇಡೀ ದೇಹದ ಒತ್ತಡ ಆ ಸ್ನಾಯುಗಳ ಮೇಲೆ ಬೀಳುತ್ತೆ. ಆ ಸ್ನಾಯುಗಳಿಗೆ ಸ್ವಲ್ಪ ಪೆಟ್ಟು ಬಿದ್ರೆ ಕೂಡ ಅದು ನಮ್ಮ ಹೃದಯಕ್ಕೆ ತುಂಬಾ ಅಪಾಯಕಾರಿ. ಆದ್ದರಿಂದ ನಮ್ಮ ಹಿರಿಯರು ಬಲ ಭಾಗದಿಂದ ಏಳಬೇಕು ಅಂತ ಹೇಳುತ್ತಿದ್ದರು.
ಇನ್ನು ಎಡಭಾಗದಿಂದ ಎದ್ದರೆ ದಿನ ಒಳ್ಳೆಯದಿರುವುದಿಲ್ಲ, ಏನಾದರೂ ಕೆಟ್ಟದ್ದು ಆಗುವ ಸಾಧ್ಯತೆಗಳು ಇರುತ್ತದೆ ಎಂಬುದು ಜನರ ನಂಬಿಕೆಯಾಗಿರುತ್ತದೆ. ಹಾಗಾಗಿ ಈಗಲೂ ಹೆಚ್ಚಿನ ಜನರು ಬೆಳ್ಳಗ್ಗಿನ ಜಾವ ಎಡಭಾಗದಿಂದ ಏಳದೇ ಬಲಭಾಗದಿಂದ ಏಳುತ್ತಾರೆ. ಬೆಳಗ್ಗೆ ಬಲ ಬದಿಯಿಂದ ಏಳುವುದರಿಂದ ನಿಮ್ಮ ಅಂದಿನ ದಿನ ಶಾಂತಿಯುತವಾಗಿಯೂ ಹಾಗೂ ಒತ್ತಡವಿಲ್ಲದೇ ಕಳೆಯಬಹುದು.
- FILM6 days ago
“ನಿತ್ಯಾಮೆನನ್” ಚಿತ್ರರಂಗದಿಂದ ‘ಬ್ಯಾನ್’ ಆಗಲು ಕಾರಣವೇನು ಗೊತ್ತಾ? ಈ ಬಗ್ಗೆ ನಿತ್ಯಾ ಹೇಳಿದ್ದೇನು?
- DAKSHINA KANNADA6 days ago
ನಮ್ಮ ಮಾತುಗಳಿಗೆ ಅಸ್ತು ಅನ್ನುವ ಅಶ್ವಿನಿ ದೇವತೆಗಳು – ಯಾರಿವರು?
- LATEST NEWS6 days ago
ಕಾಲಿನ ಮೂಲಕವೇ ಕಾರು ಚಲಾಯಿಸಿ, ಡ್ರೈವಿಂಗ್ ಲೈಸೆನ್ಸ್ ಪಡೆದ ಏಷ್ಯಾದ ಮೊದಲ ಮಹಿಳೆ!
- DAKSHINA KANNADA6 days ago
ಪತ್ನಿ ಮಗಳೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಪದ್ಮರಾಜ್ ಪೂಜಾರಿ