Saturday, August 20, 2022

ಮರಳುಗಾರಿಕೆಗೆ ಸಮರ್ಪಕ ನೀತಿ ಇಲ್ಲದೆ ದುಬಾರಿ ಬೆಲೆ ನೀಡಿ ಮರಳು ಪಡೆಯುವ ಸ್ಥಿತಿ ನಿರ್ಮಾಣ: ಶಾಸಕ ಯು.ಟಿ ಖಾದರ್‌

ಮಂಗಳೂರು: ಕರಾವಳಿ ಪ್ರದೇಶದಲ್ಲಿ ಮರಳುಗಾರಿಕೆಗೆ ಸಮರ್ಪಕ ನೀತಿ ಇಲ್ಲದೆ ಜನ ಸಾಮಾನ್ಯರಿಗೆ ಮನೆ ಕಟ್ಟಲು ಮರಳು ದೊರೆಯದೆ ಜನ ಸಾಮಾನ್ಯರು ದುಬಾರಿ ಬೆಲೆ ನೀಡಿ ಮರಳು ಪಡೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಉಳ್ಳಾಲ ಶಾಸಕ ಯು.ಟಿ ಖಾದರ್‌ ಹೇಳಿದ್ದಾರೆ.


ಈ ಬಗ್ಗೆ ಸರ್ಕ್ಯೂಟ್‌ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಆಗ‌‌ಸ್ಟ್‌ನಿಂದ ಇಂದಿನವರೆಗೂ ಮರಳುಗಾರಿಕೆ ಅವಕಾಶ ನೀಡಿಲ್ಲ. ಇದರಿಂದ ಸರಕಾರದ ಬೊಕ್ಕಸಕ್ಕೆ ಸಾಕಷ್ಟು ನಷ್ಟ ವಾಗಿದೆ ಈ ಬಗ್ಗೆ ಸರಕಾರ ಜನರಿಗೆ ವಿವರ ನೀಡಬೇಕು.

ಸಿಆರ್‌ಝೆಡ್ ಹೊರತಾದ ಪ್ರದೇಶದಲ್ಲಿ ಮರಳುಗಾರಿಕೆ ಅವಕಾಶ ನೀಡಲು ಗುರುತಿಸಲಾದ ಬ್ಲಾಕ್ ಗಳಲ್ಲಿ ಮರಳುಗಾರಿಕೆ ನಡೆಸಲು ಟೆಂಡರ್ ಕರೆದ ಬಳಿಕವೂ ಮರಳು ಎತ್ತಲು ಅವಕಾಶ ನೀಡದಿರುವುದು ಮರಳಿನ ಅಭಾವಕ್ಕೆ ಕಾರಣವಾಗಿದೆ.

ಮಳೆಗಾಲದಲ್ಲಿ ಮರಳು ತೆಗೆಯಲು ಸಾಧ್ಯವಾಗುವುದಿಲ್ಲ. ಸೂಕ್ತ ಕಾರಣವಿಲ್ಲದೆ ಮರಳಿನ ದರವನ್ನು ಏರಿಸಿರುವ ಬಗ್ಗೆ ಸರಕಾರ ಸೂಕ್ತ ನೀತಿ ರೂಪಿಸಬೇಕು ಎಂದು ಖಾದರ್ ಆಗ್ರಹಿಸಿದ್ದಾರೆ.

ಧಾರವಾಢದಲ್ಲಿ ನಾಲ್ಕು ಜನ ಯುವಕರ ಕೃತ್ಯವನ್ನು ಇಡೀ ಸಮಾಜ ಖಂಡಿಸಿದೆ. ದೇವಸ್ಥಾನದ ಅರ್ಚಕರು ಖಂಡಿಸಿದ್ದಾರೆ. ರಾಜ್ಯ ಸರಕಾರ ಜನಸಾಮಾನ್ಯರಿಗೆ ಏನೂ ಕಾರ್ಯಕ್ರಮ ನೀಡಿದ್ದೇವೆ ಎಂದು ಹೇಳಲು ಆಗುತ್ತಿಲ್ಲ.

ಅದಕ್ಕಾಗಿ ಇಂತಹ ಕೃತ್ಯಗಳಿಗೆ ಬೆಂಬಲ ನೀಡುತ್ತಿದೆ. ಮುಖ್ಯಮಂತ್ರಿ ಗೂಂಡಾಗಳ ಕೈಯಲ್ಲಿ ರಾಜ್ಯವನ್ನು ಕೊಟ್ಟಿದ್ದಾರೆ. ಇದೀಗ ರಾಜ್ಯವನ್ನು ಗೂಂಡಾಗಳು ಆಳುತ್ತಿದ್ದಾರೆ. ಗೃಹಮಂತ್ರಿ, ಸಚಿವರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ.

ಈ ಬೆಳವಣಿಗೆಗೆ ಕಡಿವಾಣ ಹಾಕುವ ಜವಾಬ್ದಾರಿ ಯಾರದ್ದು? ಎಂದು ಪ್ರಶ್ನಿಸಿದ ಅವರು ಮುಖ್ಯಮಂತ್ರಿ ಈ ಬಗ್ಗೆ ಮಾತನಾಡಲೇಬೇಕು ಎಂದು ಆಗ್ರಹಿಸಿದರು.

LEAVE A REPLY

Please enter your comment!
Please enter your name here

Hot Topics