Connect with us

LATEST NEWS

ಅತಿಥಿ ಉಪನ್ಯಾಸಕರಿಗೆ ಒಂದೆರಡು ದಿನಗಳಲ್ಲಿ ಸಿಹಿಸುದ್ದಿ : ಸರ್ಕಾರದಿಂದ ಬೇಡಿಕೆ ಈಡೇರಿಸುವ ಭರವಸೆ

Published

on

ಬೆಂಗಳೂರು : ಕಳೆದ ಒಂದು ತಿಂಗಳಿನಿಂದ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ನಡೆಸುತ್ತಿರುವ ರಾಜ್ಯದ ಅತಿಥಿ ಉಪನ್ಯಾಸಕರಿಗೆ ಸರ್ಕಾರ ಸಿಹಿ ಸುದ್ದಿ ನೀಡುವ ಭರವಸೆ ನೀಡಿದೆ.

ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆ ಮತ್ತು ಸಮಸ್ಯೆಗಳ ಕುರಿತು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಚೇರಿಯಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಮಂಗಳವಾರ ಮೂರು ತಾಸುಗಳ ಕಾಲ ಸಭೆ ನಡೆಯಿತು.

ಸಭೆಯಲ್ಲಿ ಉಪನ್ಯಾಸಕರಿಗೆ ಸಂಬಂಧಿಸಿದ ನಾಲ್ಕೈದು ಸಂಘಗಳ ಪ್ರತಿನಿಧಿಗಳೂ ಭಾಗವಹಿಸಿದ್ದರು. ಈ ವೇಳೆ ಉಪಸ್ಥಿತರಿದ್ದ ವಿಧಾನಪರಿಷತ್ತಿನ ಹಲವು ಸದಸ್ಯರೊಂದಿಗೆ ವಿಷಯವನ್ನು ಕುರಿತು ಚರ್ಚಿಸಲಾಯಿತು.

ಜೊತೆಗೆ ಅತಿಥಿ ಉಪನ್ಯಾಸಕರ ಸಂಘಗಳ ಪರವಾಗಿ ಸಲ್ಲಿಸಿದ ಅಹವಾಲುಗಳನ್ನು ಕೂಡ ಪರಿಶೀಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶ್ವತ್ಥ್​ನಾರಾಯಣ,ಅತಿಥಿ ಉಪನ್ಯಾಸಕರ ಸಂಕಷ್ಟಗಳನ್ನು ಆಲಿಸಿದ್ದೇವೆ.

ಅತಿಥಿ ಉಪನ್ಯಾಸಕರ ಸಮಸ್ಯೆ ಇತ್ಯರ್ಥದಲ್ಲಿ ಆರ್ಥಿಕ ಹೊರೆ ಮುಂತಾದ ಅಂಶಗಳಿವೆ. ಒಟ್ಟಿನಲ್ಲಿ ವಿಚಾರವನ್ನು ಸಹಾನುಭೂತಿಯಿಂದ ಪರಿಶೀಲಿಸಲಾಗುತ್ತಿದೆ ಪ್ರಸ್ತುತ ಸಿಎಂಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು. ಹಾಗಾಗಿ ಒಂದೆರಡು ದಿನಗಳಲ್ಲಿ ಸೂಕ್ತ ತೀರ್ಮಾನ ಪ್ರಕಟಿಸಲಾಗುವುದು. ಎಂದು ಅಭಯ ನೀಡಿದರು.

DAKSHINA KANNADA

ಎರಡು ಲಾರಿಗಳ ಮಧ್ಯೆ ಅಪಘಾತ; ಚಾಲಕ ಗಂಭೀ*ರ

Published

on

ಮಂಗಳೂರು: ಬೈಕಂಪಾಡಿ ಹೋಟೆಲ್ ಶ್ರೀ ದ್ವಾರದ ಬಳಿ ಲಾರಿಗಳೆರಡರ ನಡುವೆ ಅಪಘಾತ ಸಂಭವಿಸಿ ಲಾರಿ ಚಾಲಕ ಗಂಭಿರ ಗಾಯಗೊಂಡ ಘಟನೆ ನಡೆದಿದೆ. ಒಂದು ಲಾರಿಯೊಂದು ಗ್ರಾನೈಟ್ ಅಂಗಡಿಯೊಳಗೆ ನುಗ್ಗಿದ್ದು, ಅಪಾರ ಮೌಲ್ಯದ ಗ್ರಾನೈಟ್‌ ಹಾನಿಗೊಂಡಿದೆ.

ಮುಂದೆ ಓದಿ..; ಪುತ್ತೂರು : ಧರೆಗುರುಳಿದ ಬೃಹದಾಕಾರದ ಮರ; ಮಾವಿನಕಾಯಿಗಾಗಿ ಮುಗಿಬಿದ್ದ ಜನ!

accident

ಲಾರಿ ಸಾಗಾಟ ಮಾಡುತ್ತಿದ್ದ ಲಾರಿ ಅಪಘಾತದಿಂದ ನಜ್ಜುಗುಜ್ಜಾಗಿದೆ. ಇನ್ನು ಇದೇ ಭಾಗದಲ್ಲಿ ನಿತ್ಯವೂ ಮಹಿಳೆಯರು ಮೀನ ಮಾರಾಟ ಮಾಡುತ್ತಿದ್ದರು. ಅದೃಷ್ಟವಶಾತ್ ಇದೀಗ ಭಾರೀ ಅನಾಹುತ ತಪ್ಪಿದೆ.

 

Continue Reading

LATEST NEWS

60ನೇ ವಯಸ್ಸಿಗೆ “ಮಿಸ್ ಯುನಿವರ್ಸ್” ಕಿರೀಟ ಮುಡಿಗೇರಿಸಿಕೊಂಡ ಈಕೆ ಯಾರು ಗೊತ್ತಾ? ಈಕೆಯ ಸೌಂದರ್ಯಕ್ಕೆ ಬೆರಗಾದ್ರು ಜನ..!!

Published

on

ಹೆಚ್ಚಾಗಿ ಮಿಸ್​ ವರ್ಲ್ಡ್​​​, ಮಿಸ್​​ ಯುನಿವರ್ಸ್ ಇನ್ನೂ ಮುಂತಾದ ಸೌಂದರ್ಯ ಸ್ಪರ್ಧೆಯಲ್ಲಿ ಹದಿಹರೆಯದ ಸುಂದರಿಯರೇ ಭಾಗವಹಿಸುತ್ತಾರೆ. ಆದರೆ ಅಲೆಜಾಂಡ್ರಾ ಮಾರಿಸಾ ರೋಡ್ರಿಗಸ್ ಎಂಬ ಮಹಿಳೆ ತನ್ನ 60ನೇ ವಯಸ್ಸಿನಲ್ಲಿ ಮಿಸ್ ಯುನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾಳೆ.

ವೃತ್ತಿಯಲ್ಲಿ ವಕೀಲ ಮತ್ತು ಪತ್ರಕರ್ತೆಯಾಗಿರೋ ಅಲೆಜಾಂಡ್ರಾ ಅವರು 60ನೇ ವಯಸ್ಸಿನಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ಮೊದಲ ಮಹಿಳೆ ಎಂಬ ದಾಖಲೆ ಪಡೆದುಕೊಂಡಿದ್ದಾರೆ. ಅರ್ಜೆಂಟೀನಾದ ಬ್ಯೂನಸ್ ಐರಿಸ್​​ನ ರಾಜಧಾನಿ ಲಾ ಪ್ಲಾಟಾದಲ್ಲಿ ನಡೆದ 2024ರ ಮಿಸ್‌ ಯೂನಿವರ್ಸ್ ಬ್ಯೂನಸ್ ಐರಿಸ್ ಸ್ಪರ್ಧೆಯಲ್ಲಿ ಗೆದ್ದು ಇಡೀ ಜಗತ್ತೆ ತಿರುಗಿ ನೋಡುವಂತೆ ಮಾಡಿದ್ದಾಳೆ.

ಇನ್ನೂ 60ನೇ ವಯಸ್ಸಿನಲ್ಲಿಯೂ ಈಕೆಯ ಸೌಂದರ್ಯ ಕಂಡು ನೆಟ್ಟಿಗರು ಫುಲ್​ ಶಾಕ್​ ಆಗಿದ್ದಾರೆ. ಅನೇಕರು ಆಕೆ ಮಿಸ್​​ ಯುನಿವರ್ಸ್​​ ಕಿರೀಟ ಪಡೆದುಕೊಂಡಿರೋದಕ್ಕೆ ಶುಭಾಶಯ ತಿಳಿಸುತ್ತಿದ್ದು ಇನ್ನೂ ಕೆಲವರು ಕಮೆಂಟ್ಸ್‌ಗಳನ್ನು ಹಾಕುತ್ತಿದ್ದಾರೆ.

Continue Reading

LATEST NEWS

ಪುತ್ತೂರು : ಧರೆಗುರುಳಿದ ಬೃಹದಾಕಾರದ ಮರ; ಮಾವಿನಕಾಯಿಗಾಗಿ ಮುಗಿಬಿದ್ದ ಜನ!

Published

on

ಪುತ್ತೂರು :  ಬೊಳ್ವಾರ್ ಬಸ್ ತಂಗುದಾಣದ ಪಕ್ಕದಲ್ಲಿದ್ದ ಬೃಹದಾಕಾರದ ಮರವೊಂದು ಉರುಳಿ ಬಿದ್ದಿದೆ. ಪರಿಣಾಮ ಹಲವು ವಾಹನಗಳು ಜಖಂಗೊಂಡಿವೆ. ವಾಹನ ಮಾಲಕರು ವಾಹನಗಳನ್ನು ಹೊರತೆಗೆಯಲು ಹರಸಾಹಸ ಪಡುವಂತಾಯಿತು.

ಬಿದ್ದ ಮರದಲ್ಲಿದ್ದ ಮಾವಿನಕಾಯಿಗಳನ್ನು ಕೊಯ್ಯಲು ಜನ ಮುಗಿಬಿದ್ದ ಘಟನೆಯೂ ನಡೆಯಿತು. ಬಳಿಕ ಸ್ಥಳೀಯರು ಮರದ ಕೊಂಬೆಗಳನ್ನು ಕಡಿದು ತೆರವುಗೊಳಿಸಿದರು.

ಮರ ಬೀಳುವ ಸಂದರ್ಭ ಯಾರೂ ಇಲ್ಲದ ಪರಿಣಾಮ ಭಾರೀ ದುರಂತವೊಂದು ತಪ್ಪಿದೆ.

ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ ಇನೋವಾ ಕಾರು ಪಲ್ಟಿ; ಯುವತಿ ಸಾವು!

Continue Reading

LATEST NEWS

Trending