Saturday, July 2, 2022

ಒಳ ಉಡುಪಿನಲ್ಲಿ ಚಿನ್ನ ಸಾಗಿಸುತ್ತಿದ್ದ ಯುವಕ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ

ಬೆಂಗಳೂರು: ಒಳ ಉಡುಪಿನಲ್ಲಿ ಚಿನ್ನದ ಗಟ್ಟಿಯನ್ನು ಕಳ್ಳಸಾಗಾಣಿಕೆ ಮಾಡಲು ಯತ್ನಿಸಿದ ಯುವಕ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿ ಬಿದ್ದ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.


ಈತ ದುಬೈನಿಂದ ಬಂದಿದ್ದು, 50 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಎಂದು ತಿಳಿದುಬಂದಿದೆ.

ಮೇ 6 ರಂದು ಅಬು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನನ್ನು ಖಚಿತ ಮಾಹಿತಿ ಮೇರೆಗೆ ಡಿಆರ್‌ಐ ಅಧಿಕಾರಿಗಳು ತಪಾಸಣೆ ನಡೆಸಿದರು.

ಆಗ ಆತ ತನ್ನ ಒಳ ಉಡುಪಿನಲ್ಲಿ ಚಿನ್ನದ ಗಟ್ಟಿಯನ್ನ ಮರೆಮಾಚಿ ಇಟ್ಟಿರುವುದು ಪತ್ತೆಯಾಗಿದೆ.

966.10 ಗ್ರಾಂ ತೂಕದ 50,07, 276 ರೂಪಾಯಿ ಮೌಲ್ಯದ ಚಿನ್ನದ ಗಟ್ಟಿಯನ್ನ ಜಪ್ತಿ ಮಾಡಲಾಗಿದೆ.

ಚಿನ್ನ ವಶಪಡಿಸಿಕೊಂಡ ಕಸ್ಟಮ್ಸ್ ಅಧಿಕಾರಿಗಳು ಬಳಿಕ ಆರೋಪಿ ಪ್ರಯಾಣಿಕನನ್ನು ವಶಕ್ಕೆ ಪಡೆದು, ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಯುಗಾದಿ ಹಬ್ಬದ ಪ್ರಯುಕ್ತ ‘ದುಬೈ ಹೆಮ್ಮೆಯ ಯುಎಇ ಕನ್ನಡಿಗ’ರಿಂದ ಪ್ರತಿಭಾ ಸ್ಪರ್ಧೆ& ಪುರಸ್ಕಾರ

ದುಬೈ: ಯುಗಾದಿ ಹಬ್ಬದ ಪ್ರಯುಕ್ತ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ತಂಡವು ಸಂಯುಕ್ತ ಅರಬ್ ಸಂಸ್ಥಾನದ ಕನ್ನಡ ಮಕ್ಕಳಿಗಾಗಿ ವಿವಿಧ ರೀತಿಯ ಕಲಾ ಪ್ರತಿಭಾ ಸ್ಪರ್ಧೆಯ ಗ್ರಾಂಡ್ ಫೈನಲ್ ಕಾರ್ಯಕ್ರಮ ಜೊತೆಗೆ ಹೆಚ್ಚು...

ಅಗ್ನಿಪಥ್‌ ರಾಜಕೀಯ ಪ್ರೇರಿತ ಬಿಜೆಪಿ ಅಸ್ತ್ರ-ಮಾಜಿ ಶಾಸಕ ಲೋಬೋ

ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ನಗರ ಹಾಗು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಸರಕಾರದ ಅಗ್ನಿಪಥ್‌ ಯೋಜನೆ ವಿರುದ್ದ ಮಂಗಳೂರು ಮಿನಿ ವಿಧಾನ ಸೌಧದ ಮುಂಭಾಗ ಇಂದು...

ಸುಳ್ಯದಲ್ಲಿ ಆರನೇ ಭಾರಿ ಲಘು ಭೂಕಂಪನ-ಆತಂಕದಲ್ಲಿ ಜನತೆ

ಸುಳ್ಯ: ದಕ್ಷಿಣ ಕನ್ನಡ-ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಆರನೇ ಭಾರಿ ಲಘು ಭೂಕಂಪನ ಉಂಟಾಗಿದ್ದು, ಇಂದು ಮುಂಜಾನೆ ಮೂರು ಗಂಟೆಯ ವೇಳೆಗೆ ಭೂಮಿ ಲಘು ಕಂಪಿಸಿದೆ ಎಂಬ ಸುದ್ದಿ ವಾಟ್ಸಪ್‌ನಲ್ಲಿ ಹರಿದಾಡುತ್ತಿದೆ.ಕಲ್ಲುಗುಂಡಿ, ಸಂಪಾಜೆ ಭಾಗಗಳಲ್ಲಿ...