ಖ್ಯಾತ ದೇಹದಾರ್ಢ್ಯ ಪಟು, ಮಾಜಿ ಮಿಸ್ಟರ್ ಇಂಡಿಯಾ ಪ್ರೇಮ್ ರಾಜ್ ಅರೋರಾ (42) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕೋಟಾ : ಖ್ಯಾತ ದೇಹದಾರ್ಢ್ಯ ಪಟು, ಮಾಜಿ ಮಿಸ್ಟರ್ ಇಂಡಿಯಾ ಪ್ರೇಮ್ ರಾಜ್ ಅರೋರಾ (42) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ರಾಜಸ್ಥಾನದ ಕೋಟಾದಲ್ಲಿ ಈ ಘಟನೆ ನಡೆದಿದೆ.
ಖ್ಯಾತ ಬಾಡಿ ಬಿಲ್ಡರ್, ಮಾಜಿ ಮಿಸ್ಟರ್ ಇಂಡಿಯಾ ಪ್ರೇಮ್ ರಾಜ್ ಎಂದಿನಂತೆ ವ್ಯಾಯಾಮ ಮುಗಿಸಿ ವಾಶ್ ರೂಂಗೆ ತೆರಳಿದ್ದರು.
ಆದರೆ ಸುಮಾರು ಒಂದು ಗಂಟೆ ಕಳೆದರೂ ಹೊರಗೆ ಬಾರದಿರುವುದನ್ನು ಗಮನಿಸಿ, ಕುಟುಂಬ ಸದಸ್ಯರು ವಾಶ್ ರೂಂ ಬಾಗಿಲು ತಟ್ಟಿದ್ದರು.
ಆದರೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಬಾಗಿಲು ಒಡೆದು ನೋಡಿದಾಗ ಪ್ರೇಮ್ ರಾಜ್ ನೆಲದ ಮೇಲೆ ಕುಸಿದು ಬಿದ್ದಿರುವುದನ್ನು ಗಮನಿಸಿ ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.
ಪರೀಕ್ಷೆ ನಡೆಸಿದ ವೈದ್ಯರು ಪ್ರೇಮ್ ರಾಜ್ ಕೊನೆಯುಸಿರೆಳೆದಿರುವುದಾಗಿ ತಿಳಿಸಿದ್ದರು.
ಪ್ರೇಮ್ ರಾಜ್ ದಿಢೀರ್ ನಿಧನ ಕುಟುಂಬ ಸದಸ್ಯರಿಗೆ ಆಘಾತವನ್ನು ತಂದಿದ್ದು, ಅರೋರಾ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.