ರಾತ್ರಿ ಮಲಗಿದ್ದ ಮಹಿಳೆ ಬೆಳಿಗ್ಗೆ ನಾಪತ್ತೆಯಾದ ಘಟನೆ ಉತ್ತರ ಕನ್ನಡದ ಬೆಳ್ಳಮಕ್ಕಿ ಎಂಬಲ್ಲಿ ವರದಿಯಾಗಿದೆ.
ಹೊನ್ನಾವರ: ರಾತ್ರಿ ಮಲಗಿದ್ದ ಮಹಿಳೆ ಬೆಳಿಗ್ಗೆ ನಾಪತ್ತೆಯಾದ ಘಟನೆ ಉತ್ತರ ಕನ್ನಡದ ಬೆಳ್ಳಮಕ್ಕಿ ಎಂಬಲ್ಲಿ ವರದಿಯಾಗಿದೆ.
ಸ್ಥಳೀಯ ನಿವಾಸಿ ಕೊಚುರಾಣಿ ಯಾನೆ ಥೆರೆಸಾ (25) ನಾಪತ್ತೆಯಾಗಿರುವ ಮಹಿಳೆಯಾಗಿದ್ದಾರೆ.
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಥೆರೆಸಾ ರಾತ್ರಿ ಮನೆಯಲ್ಲಿ ಪತಿ ಹಾಗೂ ಮಕ್ಕಳೊಂದಿಗೆ ಮಲಗಿದ್ದರು.
ಆದರೆ ಮರುದಿನ ಬೆಳಿಗ್ಗೆ ಪತಿ ನೋಡುವಾಗ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.
ಈ ಬಗ್ಗೆ ನಾಪತ್ತೆಯಾಗಿರುವ ಥೆರೆಸಾ ಅವರ ಪತಿ ನೀಡಿದ ದೂರಿನಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.