Monday, July 4, 2022

ಲಲಿತಾ ಜುವೆಲ್ಲರ್ಸ್‌ನಿಂದ ಫುಡ್ ಕಿಟ್‌ ವಿತರಣೆ

ಮಂಗಳೂರು: ಚಿನ್ನಾಭರಣಗಳ ಮಾರಾಟ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಗ್ರಾಹಕರ ನಂಬಿಕೆ ಹಾಗೂ ವಿಶ್ವಾಸಕ್ಕೆ ಪಾತ್ರವಾಗಿರುವ ಲಲಿತಾ ಜುವೆಲ್ಲರ್ಸ್ ನ ಮಾಲಕರಾದ ಡಾ. ಕಿರಣ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಮಂಗಳೂರಿನಲ್ಲಿ ಪುಡ್ ಕಿಟ್‌ ವಿತರಣಾ ಕಾರ್ಯಕ್ರಮ ನಡೆಯಿತು.

ಲಲಿತಾ ಚಾರಿಟೇಬಲ್ ಟ್ರಸ್ಟ್ ಲಲಿತಾ ಜುವೆಲ್ಲರ್ಸ್ ಬ್ರ್ಯಾಂಚ್ ಬಳಿ ಕಾರ್ಯಕ್ರವನ್ನು ಆಯೋಜಿಸಿತ್ತು. ರಿಕ್ಷಾ ಚಾಲಕರಿಗೆ, ಕೂಲಿ ಕಾರ್ಮಿಕರಿಗೆ, ಸೆಕ್ಯೂರಿಟಿ ಗಾರ್ಡ್ ಮತ್ತಿತರರಿಗೆ ಸುಮಾರು 500 ಕಿಟ್ ವಿತರಣೆ ಮಾಡಲಾಯಿತು. ಈ  ಸಂದರ್ಭ ಸ್ಥಳಿಯ ಮಂಗಳೂರು ನಗರ ಪಾಲಿಕೆ ಸದಸ್ಯರಾದ ಲೀಲಾವತಿ ಮಾತನಾಡಿ “ಲಲಿತಾ ಜುವೆಲ್ಲರ್ಸ್ ನಂಬಿಕೆ ಮತ್ತು ವಿಶ್ವಾಸಾರ್ಹ ಸೇವೆಯ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಕೊರೊನಾ ಸಂಕಷ್ಟದ ಸಮಯದಲ್ಲೂ ಫುಡ್ ಕಿಟ್ ವಿತರಿಸುವ ಮೂಲಕ ಜನರ ಹಸಿವು ನೀಗಿಸುವ ಕಾರ್ಯ ಮಾಡಿದೆ. ಎಂದರು.

ಬಳಿಕ ಮಾತನಾಡಿದ ಬ್ರ್ಯಾಂಚ್ ಮ್ಯಾನೇಜರ್ ಕೃಷ್ಣ ಕುಲಕರ್ಣಿ “ಲಲಿತಾ ಜುವೆಲ್ಲರಿ ತಮ್ಮ ಚಾರಿಟೇಬಲ್ ಮೂಲಕ ಈ ಹಿಂದೆಯೂ ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಸಂಸ್ಥೆಯ ನಿರ್ದೇಶಕ ಜನ್ಮ ದಿನದ ಪ್ರಯುಕ್ತ ಸುಮಾರು 500  ಕಿಟ್ ವಿತರಿಸಲಾಗಿದೆ ಎಂದರು.

ಈ ಸಂದರ್ಭ ಕಿಟ್ ಪಡೆದುಕೊಂಡವರು ಲಲಿತಾ ಜುವೆಲ್ಲರಿ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.  ಸಂಸ್ಥೆಯ ಅಸಿಸ್ಟೆಂಟ್ ಬಿಸಿನೆಸ್ ಮ್ಯಾನೇಜರ್ ಶಶಿಧರ್, ಹೆಚ್,ಆರ್ ಸಂತೋಷ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Hot Topics

ಮರವಂತೆ ಸಮುದ್ರಕ್ಕೆ ಬಿದ್ದ ಕಾರಿನಲ್ಲಿದ್ದ ಡೆಡ್‌ ಬಾಡಿ ಎರಡು ದಿನಗಳ ಬಳಿಕ ಪತ್ತೆ

ಉಡುಪಿ: ಎರಡು ದಿನಗಳ ಹಿಂದೆ ಮರವಂತೆ ಸಮುದ್ರಕ್ಕೆ ಬಿದ್ದ ಕಾರಿನಿಂದ ನಾಪತ್ತೆಯಾದ ಓರ್ವನ ಶವ ಇಂದು ಬೈಂದೂರಿನ ಕಂಚುಗೋಡು ಎಂಬಲ್ಲಿ ಪತ್ತೆಯಾಗಿದೆ.ಮೃತನನ್ನು ರೋಶನ್ ಆಚಾರ್ಯ ಎಂದು ಗುರುತಿಸಲಾಗಿದೆ. ಶನಿವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ...

ಆಸ್ಟ್ರೇಲಿಯಾದಲ್ಲಿ ತುಳು ಕೂಟ ಸಿಡ್ನಿಯಿಂದ ಜು.17ರಂದು ‘ಆಟಿಡ್‌ ಒಂಜಿ ದಿನ’

ಸಿಡ್ನಿ: ತುಳುನಾಡಿನ ಸಾಂಪ್ರದಾಯಿಕ ತಿಂಡಿಗಳನ್ನು ಆಸ್ಟ್ರೇಲಿಯಾದಲ್ಲಿರುವ ಅನಿವಾಸಿ ತುಳುವರಿಗೆ ಉಣಬಡಿಸುವ ನಿಟ್ಟಿನಲ್ಲಿ 'ತುಳು ಕೂಟ ಸಿಡ್ನಿ'ಯು ಜು.17ರಂದು ಸಿಡ್ನಿಯಲ್ಲಿ 'ಆಟಿಡ್‌ ಒಂಜಿ ದಿನ' ಆಯೋಜಿಸಿದೆ.ಜು.17 ರಂದು ಮಧ್ಯಾಹ್ನ 12 ಗಂಟೆಗೆ ಈ ಕಾರ್ಯಕ್ರಮ...

ಬೆಳ್ತಂಗಡಿ: ಭಾರೀ ಮಳೆ ಹಿನ್ನೆಲೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ದ.ಕ ಡಿಸಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಾದ್ಯಂತ ನಿನ್ನೆ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದ್ದು ಇಲ್ಲಿನ ಸ್ಥಿತಿಗತಿಗಳನ್ನು ಗಮನಿಸಿ ಕ್ಷೇತ್ರ ಶಿಕ್ಷಣಾಧಿಕಾರಿಯವರಿಂದ ಮಾಹಿತಿಯನ್ನು ಪಡೆದುಕೊಂಡು ಜಿಲ್ಲಾಧಿಕಾರಿಯವರು ತಾಲ್ಲೂಕಿನ ಎಲ್ಲ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಿದ್ದಾರೆ.ಗ್ರಾಮೀಣ...