Sunday, July 3, 2022

ಉಡುಪಿಯಲ್ಲಿ ಕಲುಷಿತಗೊಂಡ ಕಾಮಿನಿ ನದಿ: ಲಕ್ಷಾಂತರ ಮೌಲ್ಯದ ಮೀನುಗಳ ಮಾರಣಹೋಮ

ಪಡುಬಿದ್ರಿ: ಇಲ್ಲಿನ ಕಾಮಿನಿ ನದಿಯು ಕಲುಷಿತಗೊಂಡ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳು ಸಾವನ್ನಪ್ಪಿದ್ದು, ರಾಸಾಯನಿಕ ಮಿಶ್ರಿತ ನೀರಿನಿಂದ ಮೀನುಗಳು ಸತ್ತುಹೋಗಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.


ಎರಡು ದಿನಗಳ ಹಿಂದೆ ಜೋರಾಗಿ ಮಳೆ ಬಂದ ಬಳಿಕ ಹೊಳೆಯ ನೀರು ಕಪ್ಪು ಬಣ್ಣಕ್ಕೆ ತಿರುಗಿ ಕಲುಷಿತಗೊಂಡಿದೆ. ಇಡೀ ಪರಿಸರ ದುರ್ವಾಸನೆಯಿಂದ ಕೂಡಿದೆ.

ಪಂಜರದಲ್ಲಿ ಸಾಕುವ ಮೀನುಗಳು ಹಾಗೂ ಹೊಳೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಮೀನುಗಳು ಸತ್ತುಹೋಗಿವೆ.

ಅಲ್ಲದೆ, ಹೊಳೆಯ ನೀರು ಕೃಷಿ ಭೂಮಿಗೂ ಆವರಿಸಿರುವುದರಿಂದ ಕೃಷಿ ಭೂಮಿಗೂ ಹಾನಿಯಾಗಿದೆ.

ಪಂಜರದ ಮೀನು ಸಾಕಣೆಯಲ್ಲಿ ಆಸಕ್ತಿ ಹೊಂದಿದ ಇಬ್ಬರು ಯುವಕರು ಹೊಳೆಗೆ ಪಂಜರವನ್ನು ಅಳವಡಿಸಿ ವಿದೇಶಗಳಿಗೆ ರಫ್ತು ಮಾಡಲಾಗುವ ಮುಡಾವು, ಕ್ಯಾವೇಜ್ ಮೀನುಗಳು ಸಾಕುತ್ತಿದ್ದರು.

ಸುಮಾರು ಒಂಬತ್ತು ಟನ್ ಮೀನುಗಳು ಸತ್ತುಹೋಗಿವೆ.

ಅಲ್ಲದೆ, ಹೊಳೆಯಲ್ಲಿರುವ ಪಯ್ಯಾ, ಕಾನೆ, ಕ್ಯಾವೇಜ್, ಮಾಲ, ಇರ್ಪೆ, ತೆಬೇರಿ ಮೀನುಗಳು ಸತ್ತು ಹೋಗಿವೆ ಎಂದು ದೂರಿದ್ದಾರೆ.

ನಾವು ಸಾಕಿದ್ದು ಮಾತ್ರವಲ್ಲದೆ ಹೊಳೆಯ ಮೀನುಗಳು ಕೂಡಾ ಸತ್ತು ಹೋಗಿವೆ. ಇದರಿಂದ ಸುಮಾರು 22 ಲಕ್ಷ ರೂಪಾಯಿಗೂ ಅಧಿಕ ನಷ್ಟ ಆಗಿದೆ.

ಕಂಪನಿಗಳಿಂದ ಹೊರ ಬಿಡುವ ರಾಸಾಯನಿಕಯುಕ್ತ ತ್ಯಾಜ್ಯದಿಂದ ಮೀನುಗಳ ಮಾರಣ ಹೋಮವಾಗಿದೆ.

ಇಲಾಖೆ ಈ ನಿಟ್ಟಿನಲ್ಲಿ ಸೂಕ್ತ ಪರಿಹಾರ ದೊರಕಿಸಿಕೊಡಬೇಕು’ ಎಂದು ಮೀನು ಸಾಕಣೆದಾರರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ಎಕ್ಕೂರಿನಲ್ಲಿ ಲೈಟ್‌ ಕಂಬಕ್ಕೆ ಢಿಕ್ಕಿ ಹೊಡೆದ ಕಾರು-ಮೂವರಿಗೆ ಗಾಯ

ಮಂಗಳೂರು: ಕೇರಳದಿಂದ ಮಂಗಳೂರಿಗೆ ಬರುತ್ತಿದ್ದ ಇನ್ನೋವಾ ಕಾರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದ್ದ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಮೂವರು ಗಾಯಗೊಂಡ ಘಟನೆ ಮಂಗಳೂರು ಹೊರವಲಯದ ಎಕ್ಕೂರು ಬಳಿ ನಿನ್ನೆ ತಡರಾತ್ರಿ ನಡೆದಿದೆ.ನಿನ್ನೆ ಮಧ್ಯರಾತ್ರಿ...

ಸೌದಿ ಅರೇಬಿಯಾ: ಹಜ್‌ ಯಾತ್ರಿಗಳ ಸೇವೆಯಲ್ಲಿ ಇಂಡಿಯಾ ಫ್ರೆಟರ್ನಿಟಿ ಫೋರಂ(I.F.F.)

ರಿಯಾದ್‌: ಕೊಲ್ಲಿ ರಾಷ್ಟ್ರದಲ್ಲಿ ನಿರಂತರವಾಗಿ ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಇಂಡಿಯ ಫ್ರೆಟರ್ನಿಟಿ ಫೋರಂ (ಐ.ಎಫ್.ಎಫ್) ಪ್ರತೀ ವರ್ಷದಂತೆ ಈ ವರ್ಷವೂ ಹಜ್‌ ಯಾತ್ರಾರ್ಥಿಗಳ ಸೇವೆಯಲ್ಲಿ ಸಕ್ರಿಯವಾಗಿದೆ.2022 ರ ಹಜ್‌ಗೆ ಈಗಾಗಲೇ ಭಾರತದಿಂದ ಎಪ್ಪತ್ತು...

ಕುವೈಟ್‌-ಮಂಗಳೂರು ಪ್ರಯಾಣಿಕನ ಜೊತೆ ಸಿಬ್ಬಂದಿ ಉದ್ಧಟತನ: ಕ್ಷಮೆ ಕೇಳಿದ ಏರ್‌ಇಂಡಿಯಾ

ಮಂಗಳೂರು: ಕುವೈಟ್‌ನಿಂದ ಮಂಗಳೂರಿಗೆ ಹೊರಡುವ ವೇಳೆ ಕುವೈಟ್‌ನ ಏರ್‌ಇಂಡಿಯಾ ಕೌಂಟರ್‌ನ ವ್ಯವಸ್ಥಾಪಕ ಉದ್ಧಟತನದ ವರ್ತನೆ ಬಗ್ಗೆ ದೂರಿದ ಮಂಗಳೂರಿಗರೊಬ್ಬರಿಗೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಸಂಸ್ಥೆ ಕ್ಷಮೆ ಕೋರಿದ ಘಟನೆ ನಿನ್ನೆ ನಡೆದಿದೆ.ಕುವೈತ್‌ನ ಅನಿವಾಸಿ ಭಾರತೀಯ,...