Friday, May 27, 2022

ಕುಕ್ಕೆಯಲ್ಲಿ ದೇವರ ನೈವೇದ್ಯ ಸ್ವೀಕರಿಸದೆ ದೇವರ ಮೀನುಗಳು ತೆರಳಿದ್ದು ಯಾಕೆ..!?

ಕುಕ್ಕೆಯಲ್ಲಿ ದೇವರ ನೈವೇದ್ಯ ಸ್ವೀಕರಿಸದೆ ದೇವರ ಮೀನುಗಳು ತೆರಳಿದ್ದು ಯಾಕೆ..!?

ಕಡಬ : ದೈವ ಹಾಕಿದ ನೈವೇದ್ಯ ಸ್ವೀಕರಿಸಲು ಈ ಬಾರಿ ಕುಕ್ಕೇ ಶ್ರೀ ಕ್ಷೇತ್ರದಲ್ಲಿ ದೇವರ ಮೀನುಗಳೇ ಇರಲಿಲ್ಲ. ಮೀನುಗಳು ಇರದಿರುವುದನ್ನು ಕಂಡು ದೈವವೂ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಪವಾಡಗಳಿಗೆ ಮತ್ತು ಹಲವಾರು ವೈಶಿಷ್ಟ್ಯಗಳಿಗೆ ಹೆಸರಾದ ನಾಗಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತರಂತೆ ಮೀನುಗಗಳು ಕೂಡ ಜಾತ್ರೆ ನೋಡಲು ಬರುವುದು ಇಲ್ಲಿನ ವಿಶಿಷ್ಠತೆಯಾಗಿದೆ.

ಶ್ರೀ ಕ್ಷೇತ್ರದಲ್ಲಿ ಪ್ರತಿವರ್ಷ ಅದ್ದೂರಿಯಾಗಿ ನಡೆಯುವ ಚಂಪಾ ಷಷ್ಠಿಗೆ ಮತ್ತು ಜಾತ್ರೋತ್ಸವಕ್ಕೆ ಲಕ್ಷಾಂತರ ಮಂದಿ ಭಕ್ತಾಧಿಗಳು ಆಗಮಿಸುತ್ತಾರೆ.

ಈ ಸುಬ್ರಹ್ಮಣ್ಯದಲ್ಲಿ ಜಾತ್ರೆಯ ಸಂದರ್ಭ ದೇವಾಲಯದ ಕುಮಾರಧಾರ ಸ್ನಾನ ಘಟ್ಟಕ್ಕೆ ಮೀನುಗಳು ಅತಿಥಿಗಳಾಗಿ ಬರುವುದು ಕೂಡ ಒಂದಾಗಿದೆ.

ದೇವಸ್ಥಾನದಲ್ಲಿ ಜಾತ್ರೆಯ ಸಂದರ್ಭ ಕೊಪ್ಪರಿಗೆ ಏರುವ ದ್ವಾದಶಿಯಂದು , ದೂರದ ಏನೆಕಲ್ಲು- ಸಂಕಪಾಲ ಸುಬ್ರಹ್ಮಣ್ಯ ದೇವಸ್ಥಾನದ ಮೀನುಗಳು ಇಲ್ಲಿಗೆ ಬರುತ್ತದೆ.

ಜಾತ್ರೆ ಮುಗಿಯುವವರೆಗೂ ಇಲ್ಲೇ ಕಂಡು ಬರುವ ಈ ಮೀನುಗಳು ದೇವಸ್ಥಾನದ ಜಾತ್ರೋತ್ಸವದ ಕೊನೆಯಲ್ಲಿ ನಡೆಯುವ ದೈವದ ಕೋಲದ ಬಳಿಕ ತಮ್ಮ ಸ್ವಸ್ಥಾನಕ್ಕೆ ಮರಳುವುದು ಇಲ್ಲಿ ಪ್ರತಿವರ್ಷ ನಡೆಯುವ ವಾಡಿಕೆಯಾಗಿದೆ.

ದೈವವು ಬಂದು ನದಿಗೆ ನೈವೇದ್ಯ ಹಾಕಿದ ಬಳಿಕ ಅದನ್ನು ತಿಂದು ಅವುಗಳು ಮತ್ತೆ ಬಂದಲ್ಲಿಗೆ ಮರಳುತ್ತವೆ.

ದೇವಸ್ಥಾನದ ಆವರಣದಲ್ಲಿ ನಡೆಯುವ ಪುರುಷರಾಯ ದೈವದ ಕೋಲದ ಬಳಿಕ ಈ ದೈವವು ದೇವಸ್ಥಾನದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಕುಮಾರಧಾರಾ ಸ್ನಾನಘಟ್ಟದ ಬಳಿಗೆ ಬಂದು ದೇವರ ಮೀನುಗಳಿಗೆ ನೈವೇದ್ಯ ಹಾಕುತ್ತದೆ.

ಆದರೆ ಈ ಬಾರಿ ದೈವ ಹಾಕಿದ ನೈವೇದ್ಯ ಸ್ವೀಕರಿಸಲು ದೇವರ ಮೀನುಗಳೇ ಇರಲಿಲ್ಲ. ಮೀನುಗಳು ಇರದಿರುವುದನ್ನು ಕಂಡು ದೈವವೂ ಅಸಮಾಧಾನ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.

ಕುಮಾರಧಾರಾ ಸ್ನಾನಘಟ್ಟದಲ್ಲಿ ಭಕ್ತರಿಗೆ ತೀರ್ಥಸ್ನಾನ ನೆರವೇರಿಸಲು ನೀರನ್ನು ಶೇಖರಿಸಲು ಮೀನುಗಳಿಂದ ತುಂಬಿದ್ದ ಸ್ನಾನಘಟ್ಟದ ಬಳಿ ಜೆಸಿಬಿ ಬಳಸಿ ಹೂಳು ತೆಗೆಯಲಾಗಿತ್ತು.
ಯಂತ್ರಗಳ ಶಬ್ದಕ್ಕೆ ಬೆಚ್ಚಿದ್ದ ಮೀನುಗಳು ಸ್ನಾನಘಟ್ಟದಿಂದ ಬೇರಡೆಗೆ ಸ್ಥಳಾಂತರಗೊಂಡಿದೆ. ತೀರ್ಥಸ್ನಾನ ನೆರವೇರಿಸುವ ಸ್ನಾನಘಟ್ಟದ ಬಳಿ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ಆರಂಭಕ್ಕೆ ಮೊದಲೇ ಹೂಳು ತೆಗೆಯುವ ವ್ಯವಸ್ಥೆಯನ್ನು ಪ್ರತೀ ವರ್ಷ ಮಾಡಲಾಗುತ್ತಿತ್ತು.

ಆದರೆ ಈ ಬಾರಿ ಜಾತ್ರೆ ಆರಂಭಗೊಂಡು ಮೀನುಗಳು ಸ್ನಾನಘಟ್ಟದ ಬಳಿ ಬಂದ ಬಳಿಕ ಹೂಳು ತೆಗೆಯುವ ಕಾಮಗಾರಿ ನಡೆಸಲಾಗಿದೆ. ಇದರಿಂದಾಗಿ ಮೀನುಗಳು ಜಾತ್ರೆ ಕಳೆದ ನೈವೇದ್ಯ ಸ್ವೀಕರಿಸುವ ಮೊದಲೇ ಬೇರೆಡೆಗೆ ಹೋಗಿವೆ.

ದೇವರ ಮೀನುಗಳಿಗಾಗಿಯೇ ಸುಬ್ರಹ್ಮಣ್ಯ ದೇವರ ನೈವೇದ್ಯ ತರುವ ದೈವಕ್ಕೂ ಈ ಬಾರಿ ನಿರಾಶೆಯಾಗಿದೆ. ಈ ವಿಚಾರವಾಗಿ ದೈವವು ತನ್ನ ಅಸಮಾಧಾನವನ್ನು ದೇವಸ್ಥಾನದ ಅಭಿವೃದ್ಧಿ ಸಮಿತಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳ ಮುಂದೆಯೂ ತೋರಿಸಿದೆ.

LEAVE A REPLY

Please enter your comment!
Please enter your name here

Hot Topics

ಪಣಂಬೂರಿನಲ್ಲಿ ರಾಷ್ಟ್ರೀಯ ಸರ್ಫಿಂಗ್ ಚಾಂಪಿಯನ್‌ಶಿಪ್‌ಗೆ ಚಾಲನೆ

ಮಂಗಳೂರು: ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಪ್ರಾಯೋಜಕತ್ವದಲ್ಲಿ ಮಂಗಳೂರು ತಾಲೂಕಿನ ಪಣಂಬೂರು ಕಡಲ ತಡಿಯಲ್ಲಿ ಆಯೋಜಿಸಲಾದ ರಾಷ್ಟ್ರೀಯ ಸರ್ಫಿಂಗ್ ಚಾಂಪಿಯನ್‌ಶಿಪ್‌ಗೆ ಇಂದು ಬೆಳಿಗ್ಗೆ ಚಾಲನೆ ನೀಡಲಾಯಿತು.ಇಂದಿನಿಂದ ಮೇ...

ಪುತ್ತೂರು: ಮರ ಕಡಿಯುತ್ತಿದ್ದಾಗ ವಿದ್ಯುತ್ ಶಾಕ್-ಕಾರ್ಮಿಕ ಸಾವು

ಪುತ್ತೂರು: ಮರ ಕಡಿಯುತ್ತಿದ್ದ ಸಂದರ್ಭ ಪಕ್ಕದಲ್ಲೇ ಹಾದು ಹೋಗಿದ್ದ ವಿದ್ಯುತ್ ವಯರ್ ತಾಗಿ ಕಾರ್ಮಿಕರೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಪುತ್ತೂರಿನ ನರಿಮೊಗರು ಎಂಬಲ್ಲಿ ಗುರುವಾರ ನಡೆದಿದೆ.ಮಾಡನ್ನೂರು ನಿವಾಸಿ ಮಲ್ಲ ಎಂಬವರ ಪುತ್ರ ವಸಂತ(35)...