Friday, May 27, 2022

ಕಡಬದಲ್ಲಿ ಬೈಕನ್ನು ಅಟ್ಟಾಡಿಸಿ ದಾಳಿ ಆಡಿದ ಕಾಡಾನೆ : ಭಯ- ಆತಂಕದಲ್ಲಿ ಗ್ರಾಮಸ್ಥರು..!

ಕಡಬದಲ್ಲಿ ಬೈಕನ್ನು ಅಟ್ಟಾಡಿಸಿ ದಾಳಿ ಆಡಿದ ಕಾಡಾನೆ : ಭಯ- ಆತಂಕದಲ್ಲಿ ಗ್ರಾಮಸ್ಥರು..!

ಕಡಬ :  ಕಾಡಾನೆಯೊಂದು ಅಟ್ಟಾಡಿಸಿದ ಬಂದ ಪರಿಣಾಮ ವ್ಯಕ್ತಿಯೋರ್ವರು ಕುಸಿದು ಬಿದ್ದು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪೇರಡ್ಕ ಸಮೀಪದ ಮೀನಾಡಿ ಎಂಬಲ್ಲಿ  ನಡೆದಿದೆ.

ಸೋಮವಾರದಂದು ಮೀನಾಡಿ ನಿವಾಸಿ ಶೌಕತಲಿ ಮುಸ್ಲಿಯಾರ್ ಎಂಬವರು ತನ್ನ ಬೈಕಿನಲ್ಲಿ ಕಡಬ ಕಡೆಗೆ ಹೊರಟವರು ರಸ್ತೆಗೆ ತಲುಪಿದ ಕೂಡಲೇ ಕಾಡಾನೆಯನ್ನು ಕಂಡು ಬೈಕನ್ನು ನಿಲ್ಲಿಸಿದ್ದಾರೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಅವರನ್ನು ಅಟ್ಟಿಸಿಕೊಂಡು ಬಂದ ಕಾಡಾನೆಯು ಬೈಕನ್ನು ತುಳಿದು ಹಾನಿಗೊಳಿಸಿದ್ದು, ಆನೆಯಿಂದ ತಪ್ಪಿಸುವ ಭರದಲ್ಲಿ ಶೌಕತಲಿಯವರು ಕುಸಿದು ಬಿದ್ದು ಗಾಯಗೊಂಡಿದ್ದಾರೆ‌.

ಸೋಮವಾರ ಸಂಜೆಯಾಗುತ್ತಿದ್ದಂತೆಯೇ ಆನೆಯ ಘರ್ಜನೆ ಮತ್ತೆ ಕೇಳತೊಡಗಿದೆ, ಮತ್ತೊಂದೆಡೆ ಚಿರತೆಗಳ ಹಾವಳಿ ಕೂಡ ಹೆಚ್ಚಾಗಿದೆ, ಸ್ಥಳೀಯ ನಿವಾಸಿಗಳು ಭಯದಿಂದ ರಾತ್ರಿ ಕಳೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here

Hot Topics