ರಿಯಾದ್: ಸೌದಿ ಅರೇಬಿಯಾದಲ್ಲಿ ಮೊದಲ ಕೋವಿಡ್-19ನ ರೂಪಾಂತಿ ತಳಿ ಓಮಿಕ್ರಾನ್ ಪತ್ತೆಯಾಗಿದೆ.
ಸೌದಿ ಪ್ರಜೆಯಲ್ಲೇ ಈ ಸೋಂಕು ಕಂಡುಬಂದಿದ್ದು, ಅವರ ಸಂಪರ್ಕದಲ್ಲಿರುವ ಜನರನ್ನು ಐಸೋಲೇಷನ್‌ನಲ್ಲಿಡಲಾಗಿದೆ.
ಇದರಿಂದ ಯಾರೂ ಭಯ ಪಡಬೇಕಾಗಿಲ್ಲ ಎಂದು ಸೌದಿ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
ಇದರ ಜೊತೆಗೆ ಭಾರತ-ಪಾಕಿಸ್ಥಾನ ಸೇರಿದಂತೆ 6 ರಾಷ್ಟ್ರಗಳಿಗೆ ವಿಧಿಸಿದ್ದ ಪ್ರಯಾಣ ಬ್ಯಾನ್ ಹಿಂಪಡೆದಿದೆ.
ಕೊರೋನಾ ಹಿನ್ನೆಲೆಯಲ್ಲಿ ಈ ಹಿಂದೆ ಭಾರತದಿಂದ ಸೌದಿ ರಾಷ್ಟ್ರಕ್ಕೆ ನೇರ ವಿಮಾನಯಾನ ಸಂಪರ್ಕ ಇರಲಿಲ್ಲ. ದುಬೈ ಮೂಲಕ ತೆರಳಬಹುದಿತ್ತು. ಇದೀಗ ನೇರ ವಿಮಾನ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.