Connect with us

LATEST NEWS

ರಣ್‌ ಬೀರ್ ಕಪೂರ್ ಸಿನಿಮಾದ ಸೆಟ್‌ನಲ್ಲಿ ಬೆಂಕಿ ಚಿತ್ರಕೂಟ್ ಸ್ಟುಡಿಯೋಸ್‌ನಲ್ಲಿ ಮೂರು ಮಹಡಿಗಳು ಸುಟ್ಟು ಭಸ್ಮ..! ಒರ್ವ ಸಾವು

Published

on

ಮುಂಬೈ : ಮುಂಬೈನಲ್ಲಿರುವ ಚಿತ್ರಕೂಟ್ ಸ್ಟುಡಿಯೋಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಂದು ಚಿತ್ರಕೂಟ್ ಸ್ಟುಡಿಯೋಸ್‌ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಇದರ ಪರಿಣಾಮ, ಎರಡು ಬಿಗ್ ಬಜೆಟ್ ಬಾಲಿವುಡ್ ಚಿತ್ರಗಳ ಶೂಟಿಂಗ್ ರದ್ದಾಗಿದೆ.

ಲವ್ ರಂಜನ್ ನಿರ್ದೇಶನದ ರಣ್‌ಬೀರ್ ಕಪೂರ್ ಹಾಗೂ ಶ್ರದ್ಧಾ ಕಪೂರ್ ಅಭಿನಯದ ಇನ್ನೂ ಹೆಸರಿಡದ ಚಿತ್ರದ ಶೂಟಿಂಗ್ ಇದೇ ಚಿತ್ರಕೂಟ್ ಸ್ಟುಡಿಯೋಸ್‌ನಲ್ಲಿ ನಡೆಯುತ್ತಿತ್ತು.

ಹಾಗೇ, ರಾಜಶ್ರೀ ಪ್ರೊಡಕ್ಷನ್ಸ್ ನಿರ್ಮಾಣದ ರಾಜವೀದ್ ಡಿಯೋಲ್ ಅಭಿನಯದ ಚೊಚ್ಚಲ ಚಿತ್ರದ ಶೂಟಿಂಗ್‌ ಕೂಡ ಚಿತ್ರಕೂಟ್ ಸ್ಟುಡಿಯೋಸ್‌ನಲ್ಲಿ ಜರುಗುತ್ತಿತ್ತು.

ಆದರೆ, ಇಂದು ಅಗ್ನಿ ಅವಘಡ ಸಂಭವಿಸಿರುವುದರಿಂದ ಎರಡೂ ಚಿತ್ರಗಳ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ.

ಬೆಂಕಿಯಿಂದ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಚಿತ್ರತಂಡದ ಕೆಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೂರು ಅಗ್ನಿಶಾಮಕ ದಳಗಳು ಮತ್ತು ಎರಡು ನೀರಿನ ಟ್ಯಾಂಕರ್‌ಗಳು ಬೆಂಕಿಯನ್ನು ನಂದಿಸಲು ಶೃಮಿಸಿವೆ. ಚಿತ್ರಕೂಟ್ ಸ್ಟುಡಿಯೋಸ್‌ನಲ್ಲಿರುವ ಮೂರು ಮಹಡಿಗಳು ಸುಟ್ಟು ಭಸ್ಮವಾಗಿವೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾರೆ.

 

LATEST NEWS

ಮಾಜಿ ಸಿಎಂ ಎಸ್.ಎಂ. ಕೃಷ್ಣರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ!

Published

on

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ(91) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ, ತೀವ್ರ ನಿಗಾ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಏಪ್ರಿಲ್ 21ರಂದು ಜ್ವರ, ಕೆಮ್ಮು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಚೇತರಿಸಿಕೊಂಡಿದ್ದ ಅವರು ಡಿಸ್ಚಾರ್ಜ್ ಆಗಿದ್ದರು.
ಮತ್ತೆ ಎಸ್‌.ಎಂ. ಕೃಷ್ಣ ಅವರನ್ನು ಏಪ್ರಿಲ್ 29 ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನು ಓದಿ:ಪ್ರತಿ ಮಹಿಳೆಗೆ ಸಿಗುತ್ತೆ 3 ಲಕ್ಷ ರೂಪಾಯಿ..! ಈ ಹಣ ಸಿಗಲು ಹೀಗೆ ಮಾಡಿ ಸಾಕು!

ಆಸ್ಪತ್ರೆ ಪ್ರಕಟಣೆ :

ಎಸ್ ಎಂ ಕೃಷ್ಣ ಅವರು ಐಸಿಯುನಲ್ಲಿದ್ದಾರೆ . ವಿಶೇಷ ನಿಗಾ ವಹಿಸಲಾಗುತ್ತಿದೆ. ಅವರಿಗೆ ಡಾ.ಸತ್ಯನಾರಾಯಣ ಮೈಸೂರು ಹಾಗೂ ಡಾ.ಸುನೀಲ್ ಕಾರಂತ್ ನೇತೃತ್ವದ ಕ್ರಿಟಿಕಲ್ ಕೇರ್ ತಂಡ ಚಿಕಿತ್ಸೆ ನೀಡುತ್ತಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

Continue Reading

BANTWAL

ಬಯಲಾಯ್ತು ಅಕ್ರಮ ಸಂಬಂಧ; ನೇಣಿಗೆ ಶರಣಾದ ವಿವಾಹಿತ!

Published

on

ಪುತ್ತೂರು : ವ್ಯಕ್ತಿಗಳು ಸಾಲಬಾಧೆಯಿಂದಲೋ, ಅನಾರೋಗ್ಯದಿಂದಲೋ ಅಥವಾ ಜೀವನದಲ್ಲಿ ಜಿಗುಪ್ಸೆ ಹೊಂದಿಯೋ ಜೀವಾಂತ್ಯಗೊಳಿಸುವುದನ್ನು ಕಾಣುತ್ತೇವೆ. ಆದರೆ, ಇಲ್ಲೊಬ್ಬ,
ಅಕ್ರಮ ಪ್ರೇಮ ಸಂಬಂಧದ ಹಿನ್ನಲೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪ ಶನಿವಾರ ಘಟನೆ ಸಂಭವಿಸಿದೆ.

ಈಶ್ವರಮಂಗಲ ಸಮೀಪದ ಕತ್ರಿಬೈಲುವಿನ ಪ್ರಶಾಂತ್ ಮುಖಾರಿ (೩೮) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ ತನ್ನ ಮನೆಯಿಂದ ಸುಮಾರು ಒಂದು ಕಿಲೋಮೀಟರ್ ಅಂತರದಲ್ಲಿರುವ ಚಿಮುಣಿಗುಡ್ಡೆ ಎಂಬಲ್ಲಿನ ಗುಡ್ಡದ ರಸ್ತೆ ಬದಿಯಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

 

ಇದನ್ನು ಓದಿ: ಈ ವೀಡಿಯೋವನ್ನು ವೈರಲ್ ಮಾಡುವ ಧೈರ್ಯ ನಿಮ್ಮಲ್ಲಿ ಇದ್ಯಾ ? ವೀಡಿಯೋವೊಂದನ್ನು ಹಂಚಿಕೊಂಡು ಸವಾಲೆಸೆದ ನಟಿ ಜ್ಯೋತಿ ರೈ

ಅಕ್ರಮ ಸಂಬಂಧ ಬಯಲು – ನೇಣಿಗೆ ಶರಣು :

ಪ್ರಶಾoತ್ ಮುಖಾರಿ ಅವರಿಗೆ ಪತ್ನಿ ಮತ್ತು ಎಳೆಯ ವಯಸ್ಸಿನ ಪುತ್ರನಿದ್ದಾನೆ. ಈ ನಡುವೆ ಇನ್ನೊಬ್ಬಳು ಯುವತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ವಿಚಾರ ಬಹಿರಂಗಗೊಂಡಿದ್ದ ಹಿನ್ನೆಲೆಯಲ್ಲಿ ಅವರು ಅಪಮಾನಗೊಂಡು ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ.
ಮೃತರ ಪತ್ನಿ ನೀಡಿರುವ ದೂರಿನಂತೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

BANTWAL

ಕಡಬ : ಸಿಡಿಲು ಬಡಿದು ಓರ್ವ ಸಾವು; ಇಬ್ಬರಿಗೆ ಗಾಯ

Published

on

ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ವರುಣ ಕೃಪೆ ತೋರಿದ್ದಾನೆ. ಇನ್ನೊಂದೆಡೆ ಸಿಡಿಲಾರ್ಭಟಕ್ಕೆ ವ್ಯಕ್ತಿ ಬಲಿಯಾಗಿದ್ದಾರೆ.. ಕಡಬ ತಾಲೂಕಿನಲ್ಲಿ ಸಿಡಿಲು ಬಡಿದು ಓರ್ವ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯಗಳಾಗಿವೆ. ಉತ್ತರ ಪ್ರದೇಶ,ಚೈನ್‌ಪುರ್ ಮೂಲದ ಶ್ರೀಕಿಶುನ್ ಮೃತ ವ್ಯಕ್ತಿ.

ಇದನ್ನು ಓದಿ:ಪುತ್ತೂರಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯುವಕ! 

ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ನದಿ ಬದಿಯ ಶೆಡ್ ನಲ್ಲಿದ್ದ ವೇಳೆ ಶೆಡ್ ಗೇ ಸಿಡಿಲು ಬಡಿದಿದೆ. ಪರಿಣಾಮ ಮರಳು ತೆಗೆಯುವ ಉತ್ತರ ಪ್ರದೇಶ ಮೂಲದ ಕಾರ್ಮಿಕ ಸಾವನ್ನಪ್ಪಿದ್ದಾನೆ.
ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.

Continue Reading

LATEST NEWS

Trending