Sunday, August 14, 2022

ಗಾಳಿ ಮಳೆಗೆ ಕುಸಿದ ಥಿಯೇಟರ್ ಗೋಡೆ-24 ಬೈಕ್ ಗಳು ಸಂಪೂರ್ಣ ಜಖಂ

ಬೆಂಗಳೂರು: ತಡರಾತ್ರಿ ಸುರಿದ ಭಾರೀ ಮಳೆಗೆ ಹಳೆಯ ಕಟ್ಟಡವಾದ ಕೆ.ಆರ್ ಪುರಂನ ಕೃಷ್ಣ ಥಿಯೇಟರ್ ಗೋಡೆ ಕುಸಿದು 24 ಬೈಕ್‌ಗಳು ಸಂಪೂರ್ಣವಾಗಿ ಜಖಂಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಇತ್ತೀಚೆಗಷ್ಟೇ ಸ್ಯಾಂಡಲ್‌ವುಡ್‌ನ ಸಿಂಪಲ್ ಸ್ಟಾರ್ ಖ್ಯಾತಿಯ ನಟ ರಕ್ಷಿತ್ ಶೆಟ್ಟಿ ಅಭಿನಯಿಸಿದ ‘777 ಚಾರ್ಲಿ’ ಸಿನಿಮಾ ಸೆಕೆಂಡ್ ಶೋ ನೋಡಲು ಜನರು ಬಂದಿದ್ದರು.

ಈ ವೇಳೆ ತಮ್ಮ ಬೈಕ್‌ಗಳನ್ನು ಕಾಂಪೌಂಡ್ ಬಳಿ ಪಾರ್ಕ್ ಮಾಡಿದ್ದರು. 11 ಗಂಟೆ ಸುಮಾರಿಗೆ ಬೈಕ್‌ಗಳ ಮೇಲೆ ಗೋಡೆ ಕುಸಿದು ಬಿದ್ದು ಬೈಕ್ ಜಖಂಗೊಂಡಿದೆ.

ಇದರಿಂದ ಆಕ್ರೋಶಗೊಂಡ ಬೈಕ್ ಮಾಲೀಕರು ಥಿಯೇಟರ್ ಸರಿಯಾಗಿ ನಿರ್ವಹಣೆ ಮಾಡದೇ ಇದ್ದಿದ್ದರಿಂದ ಘಟನೆ ಜರುಗಿದೆ ಎಂದು ಥಿಯೇಟರ್‌ನವರ ಜೊತೆ ವಾಗ್ವಾದಕ್ಕಿಳಿದಿದ್ದಾರೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here

Hot Topics

ಟೇಕ್ವಾಂಡೋ ಚಾಂಪಿಯನ್‌ಶಿಪ್‌: ಮಂಗಳೂರಿನ ಸಂಮಿತಾಳಿಗೆ ಬೆಳ್ಳಿ ಪದಕ

ಮಂಗಳೂರು: ಮಲೇಷ್ಯಾದ ಕೌಲಲಾಂಪುರದಲ್ಲಿರುವ ಜುರಾ ಸ್ಟೇಡಿಯಂನಲ್ಲಿ ನಡೆದ 14ನೇ ಅಂತಾರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಚಾಂಪಿಯನ್‌ ಶಿಪ್‌ನಲ್ಲಿ ಮಹಿಳೆಯರ ಕಿರಿಯ ವಿಭಾಗದಲ್ಲಿ ಮಂಗಳೂರಿನ ಸಂಮಿತಾ ಅಲೆವೂರಾಯ ಅವರು ಭಾರತವನ್ನು ಪ್ರತಿನಿಧಿಸಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.ಸಂಮಿತಾ...

ಬಂಟ್ವಾಳ ಡಿವೈಎಸ್‌ಪಿ ಪ್ರತಾಪ್ ಥೋರಾಟ್‌ಗೆ 2022ರ ರಾಷ್ಟ್ರಪತಿ ಪದಕ ಘೋಷಣೆ

ಬಂಟ್ವಾಳ: ಪೊಲೀಸ್ ಇಲಾಖೆಯಲ್ಲಿನ ಉತ್ತಮ ಸೇವೆಗಾಗಿ 2022 ರ ರಾಷ್ಟ್ರಪತಿ ಪದಕವನ್ನು ಬಂಟ್ವಾಳ ಡಿವೈಎಸ್‌ಪಿ ಪ್ರತಾಪ್ ಥೋರಾಟ್ ಅವರಿಗೆ ನೀಡಲಾಗಿದೆ.ಸೆಂಟ್ರಲ್ ಕ್ರೈಂ ಬ್ರಾಂಚ್ ನ ಸಂಘಟಿತ ಅಪರಾಧ ದಳ ಬೆಂಗಳೂರಿನಲ್ಲಿ ಸುಮಾರು 6...

ಸ್ವಾತಂತ್ರ್ಯಕ್ಕೆ ದಾಳಿ ನಡೆಸಲು ಸಂಚು: ನಿಷೇಧಿತ ಸಂಘಟನೆಯ 7 ಉಗ್ರರು ಬಂಧನ

ಇಂಪಾಲ: ಮಣಿಪುರದಲ್ಲಿ ಸ್ವಾತಂತ್ರ್ಯ ದಿನದಂದು ದಾಳಿ ನಡೆಸಲು ಸಂಚು ನಡೆಸಿದ್ದ ನಿಷೇಧಿತ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಸಂಘಟನೆಯ ಏಳು ಉಗ್ರರನ್ನು ರಾಜ್ಯದ ವಿವಿಧ ಸ್ಥಳಗಳಿಂದ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.ಸ್ವಾತಂತ್ರ್ಯ...