Friday, July 1, 2022

‘ಶಿವಲಿಂಗ’ ಪತ್ತೆ ಕುರಿತಂತೆ ಆಕ್ಷೇಪಾರ್ಹ ಪೋಸ್ಟ್: ದೆಹಲಿ ವಿವಿ ಪ್ರಾಧ್ಯಾಪಕನ ಬಂಧನ

ನವದೆಹಲಿ: ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ‘ಶಿವಲಿಂಗ’ ಪತ್ತೆ ಕುರಿತಂತೆ ಹೇಳಿಕೆಗಳನ್ನು ಉಲ್ಲೇಖಿಸಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಕ್ಕಾಗಿ ದೆಹಲಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ರತನ್ ಲಾಲ್ ಅವರನ್ನು ನಿನ್ನೆ ರಾತ್ರಿ ದೆಹಲಿಯ ಉತ್ತರ ಸೈಬರ್ ಪೊಲೀಸರು ಬಂಧಿಸಿದ್ದಾರೆ.


ದೆಹಲಿ ಮೂಲದ ವಕೀಲರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಮಂಗಳವಾರ ರಾತ್ರಿ ಲಾಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ವಕೀಲ ವಿನೀತ್ ಜಿಂದಾಲ್ ಅವರು ತಮ್ಮ ದೂರಿನಲ್ಲಿ, ಲಾಲ್ ಇತ್ತೀಚೆಗೆ ‘ಶಿವಲಿಂಗ ಪತ್ತೆ ಕುರಿತಾಗಿ ಪ್ರಚೋದನಕಾರಿ ಟ್ವೀಟ್ ಅನ್ನು ಹಂಚಿಕೊಂಡಿದ್ದರು ಎಂದು ಹೇಳಿದ್ದಾರೆ.

ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಶಿವಲಿಂಗ ಸಿಕ್ಕಿದೆ ಎಂಬುದಾಗಿ ಪ್ರೊಫೆಸರ್ ಪೋಸ್ಟ್ ಮಾಡಿದ್ದಾರೆ. ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ನ್ಯಾಯಾಲಯದ ಮುಂದೆ ಬಾಕಿ ಇದೆ ಎಂದು ವಕೀಲರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
‘ಧರ್ಮ ಮತ್ತು ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮದಲ್ಲಿ ದುರುದ್ದೇಶಪೂರಿತ ಪೋಸ್ಟ್ ಹಾಕಿರುವ ಕುರಿತು ಲಾಲ್ ವಿರುದ್ಧ ಮಂಗಳವಾರ ರಾತ್ರಿ ದೂರು ಸ್ವೀಕರಿಸಲಾಗಿದೆ’ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಸಾಗರ್ ಸಿಂಗ್ ಕಲ್ಸಿ ಹೇಳಿದ್ದಾರೆ.

ತಮ್ಮ ಪೋಸ್ಟ್ ಅನ್ನು ಸಮರ್ಥಿಸಿಕೊಂಡಿರುವ ಲಾಲ್, ‘ಭಾರತದಲ್ಲಿ, ನೀವು ಯಾವುದರ ಬಗ್ಗೆ ಮಾತನಾಡಿದರೂ, ಯಾರಿಗಾದರೂ ಅಥವಾ ಇನ್ನೊಬ್ಬರ ಭಾವನೆಗೆ ಧಕ್ಕೆಯಾಗುತ್ತದೆ. ಹಾಗಾಗಿ ಇದು ಹೊಸದೇನಲ್ಲ.

ನಾನು ಇತಿಹಾಸಕಾರ ಮತ್ತು ಹಲವಾರು ಅವಲೋಕನಗಳನ್ನು ಮಾಡಿದ್ದೇನೆ. ನಾನು ಯಾವಾಗಲೂ ಬಹಳ ಸಭ್ಯ ಭಾಷೆಯನ್ನು ಬಳಸಿದ್ದೇನೆ ಮತ್ತು ಈಗಲೂ ನನ್ನ ಪೋಸ್ಟ್‌ನಲ್ಲಿ ಅದೇ ಮಾಡಿದ್ದೇನೆ. ನಾನು ನನ್ನನ್ನು ರಕ್ಷಿಸಿಕೊಳ್ಳುತ್ತೇನೆ’ ಎಂದಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಬಂಟ್ವಾಳ: ರಸ್ತೆ ಬದಿ ಗುಡ್ಡ ಜರಿದು ವಿದ್ಯುತ್ ಕಂಬಕ್ಕೆ ಹಾನಿ-ರಸ್ತೆ ಸಂಚಾರ ಅಸ್ತವ್ಯಸ್ತ

ಬಂಟ್ವಾಳ : ಧಾರಾಕಾರವಾಗಿ ಸುರಿದ ಮಳೆಗೆ ರಸ್ತೆಯ ಬದಿಯಲ್ಲಿ ಗುಡ್ಡ ಜರಿದು ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದಲ್ಲದೆ ಅರ್ಧ ತಾಸಿಗಿಂತಲೂ ಹೆಚ್ಚು ಸಮಯ ರಸ್ತೆ ಸಂಚಾರಕ್ಕೆ ಅಡಚಣೆಯಾದ ಘಟನೆ ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ನಾವೂರ,...

ಮಂಗಳೂರು: ಪತ್ರಿಕಾ ದಿನಾಚರಣೆ ಹಾಗೂ ಹರ್ಮನ್ ಮೊಗ್ಲಿಂಗ್ ಸ್ಮರಣೆ

ಮಂಗಳೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ರೆವರೆಂಡ್ ಹರ್ಮನ್ ಮೊಗ್ಲಿಂಗ್ ಸ್ಮರಣೆ ಕಾರ್ಯಕ್ರಮ ಇಂದು ಮಂಗಳೂರು ಬಲ್ಮಠದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನಲ್ಲಿ ನಡೆಯಿತು.ಕನ್ನಡದ ಪ್ರಥಮ ಪತ್ರಿಕೆ...

ಉಡುಪಿ: ನೀರಿನಿಂದ ಮುಳುಗಡೆಯಾದ ಕೃಷಿಭೂಮಿ-ಅಪಾರ ಬೆಳೆ ನಷ್ಟ

ಉಡುಪಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮೂರು ನಾಲ್ಕು ದಿನಗಳಿಂದ ಗ್ರಾಮ ಜಲಾವೃತಗೊಂಡು ಕೃಷಿ ಭೂಮಿಗೆ ನೀರು ನುಗ್ಗಿ ನೂರಾರು ಎಕರೆ ಕೃಷಿಭೂಮಿ ನೀರಿನಲ್ಲಿ ಮುಳುಗಡೆಯಾದ ಘಟನೆ ಉಡುಪಿಯ ಬೈಂದೂರಿನ ನಾವುಂದದಲ್ಲಿ ನಡೆದಿದೆ.ರೈಲ್ವೆ ಮಾರ್ಗದ...