ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಯೌವನ ನಿರ್ಧಾರವಾಗುವುದು 50 ರ ನಂತರವೇ? ಕಾಂಗ್ರೆಸ್ ಪಕ್ಷದಲ್ಲಿರುವ ಯುವ ನಾಯಕರು ಯಾರು? ಎಂದು ಕಾಂಗ್ರೆಸ್ ಅನ್ನು ಬಿಜೆಪಿ ಟ್ವೀಟ್‌ನಲ್ಲಿ ಕುಟುಕಿದೆ.
ಈ ಬಗ್ಗೆ ಶನಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಚಿಂತನಾ ಶಿಬಿರದಲ್ಲೇನೋ ವಯೋನಿವೃತ್ತಿಯ ಪ್ರಸ್ತಾಪವಾಗಿದೆ.
ಆದರೆ ಯಾವಾಗ?. 70 ಕಳೆದ ಮೇಲೂ ಅಧಿಕಾರ ಅನುಭವಿಸಲು ತಂತ್ರಗಾರಿಕೆ ನಡೆಸುವ ಕಾಂಗ್ರೆಸ್ “ಯಯಾತಿ”ಗಳ ಮೋಹ ಕಳಚುವುದೇ?
ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲ ಈಗ 60 ಪ್ಲಸ್. ಚಿಂತನಾ ಶಿಬಿರದಲ್ಲಿ 50% ರಷ್ಟು ಕ್ಷೇತ್ರಗಳನ್ನು 50 ವರ್ಷದೊಳಗಿನವರಿಗೆ ನೀಡಬೇಕೆಂದು ಕಾಂಗ್ರೆಸ್ ಸಂಕಲ್ಪ ಮಾಡಿದೆ.
ಈ ನಿಯಮವನ್ನು ರಾಜ್ಯದಲ್ಲಿ ಯಥಾವತ್ತಾಗಿ ಜಾರಿಗೆ ತಂದಲ್ಲಿ ಕಾಂಗ್ರೆಸ್ 60+ ನಿಂದ 30+ ಗೆ ಕ್ಕೆ ಇಳಿಯುವುದು ನಿಶ್ಚಿತ! ಎಂದು ಭವಿಷ್ಯ ನುಡಿದಿದೆ.