Connect with us

DAKSHINA KANNADA

ಬಿಜೆಪಿಗೆ ಕಸಿವಿಸಿ, ಕಾಂಗ್ರೆಸ್ ನಲ್ಲಿ ಖುಷಿ. ದ.ಕ ಲೋಕಸಭಾ ಕ್ಷೇತ್ರದಲ್ಲಿ ಬಿಗ್ ಫೈಟ್..!

Published

on

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಗೆಲುವಿನ ನಗೆ ಬೀರಿ ತನ್ನ 33 ವರ್ಷದ ಸೋಲಿನ ಬಳಿಕ ಗೆಲುವಿನ ಪತಾಕೆ ಹಾರಿಸುತ್ತದಾ…? ಇಂತಹ ಒಂದು ವಾತಾವರಣವನ್ನು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಅವರು ಹುಟ್ಟು ಹಾಕಿದ್ದಾರಾ…? ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಅವರ ಬಗ್ಗೆ ಬಿಜೆಪಿ ಪಾಳಯದಲ್ಲಿ ಅಂತಹ ಒಂದು ಆತಂಕ ಇದೆಯಾ ? ಹೀಗೆ ಸಾಲು ಸಾಲು ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ನಿರಂತರ ಸೋಲಿನ ಬಳಿಕ ಎದ್ದು ನಿಂತ ಕಾಂಗ್ರೆಸ್..!

ಒಂದು ಕಡೆ ಅಜೇಯ 8 ಚುನಾವಣೆಯಲ್ಲಿ ಜಯಭೇರಿ ಭಾರಿಸಿ 33 ವರ್ಷ ಕ್ಷೇತ್ರವನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಿರುವ ಭಾರತೀಯ ಜನತಾ ಪಕ್ಷ. ಮತ್ತೊಂದು ಕಡೆ ಜನಾರ್ಧನ ಪೂಜಾರಿಯವರ ನಿರಂತರ ಸೋಲಿನಿಂದ ಕೆಂಗೆಟ್ಟು ಹೊರಬಾರಲಾರದೆ ಸ್ಪರ್ಧೆಗೆ ಅಭ್ಯರ್ಥಿಯೇ ಇಲ್ಲದಂತಾಗಿದ್ದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ. ಇದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ವಾರಗಳ ಹಿಂದೆ ಇದ್ದ ಪರಿಸ್ಥಿತಿ. ಆದರೆ ಯಾವಾಗ ಕಾಂಗ್ರೆಸ್ ಪಕ್ಷದಿಂದ ಯುವ ನಾಯಕ ಪದ್ಮರಾಜ್ ರಾಮಯ್ಯ ಅವರಿಗೆ ಟಿಕೇಟ್ ಘೋಷಣೆ ಆಗಿದೆಯೋ ಆವಾಗಿನಿಂದ ಪರಿಸ್ಥಿತಿ ಸ್ವಲ್ಪ ಬದಲಾವಣೆ ಕಂಡಿದೆ. ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ‘ಜಿದ್ದಾಜಿದ್ದಿ’ ಯ ಹೋರಾಟದ ಎಲ್ಲಾ ಲಕ್ಷಣಗಳು ಕಂಡು ಬಂದಿದೆ.

ಜಾತಿ ಲೆಕ್ಕಾಚಾರ ಇಲ್ಲಿ ವರ್ಕೌಟ್ ಆಗೋದಿಲ್ಲ…! ಧರ್ಮವೇ ಇಲ್ಲಿ ಟ್ರಂಪ್ ಕಾರ್ಡ್…!

ರಾಜ್ಯದಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಯ ಗೆಲುವಿನ ಹಿಂದೆ ಜಾತಿ ಲೆಕ್ಕಾಚಾರವೇ ಕೆಲಸ ಮಾಡುತ್ತದೆ. ಪ್ರಭಲ ಜಾತಿಯವರಿಗೆ ಟಿಕೇಟ್ ನೀಡಿದ್ರೆ ಆ ಜಾತಿಯವರು ತಮ್ಮ ಜಾತಿಯ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ ಅನ್ನೋ ಲೆಕ್ಕಾಚಾರ ವರ್ಕೌಟ್ ಆಗುತ್ತದೆ. ಆದ್ರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆ ರೀತಿಯ ಜಾತಿ ಲೆಕ್ಕಾಚಾರ ವರ್ಕೌಟ್ ಆಗೋದಿಲ್ಲ. ಇದಕ್ಕೆ ಸಾಕ್ಷಿ ಜನಾರ್ಧನ ಪೂಜಾರಿ ಅವರ ನಿರಂತರ ಸೋಲು ಹಾಗೂ ಅಲ್ಪ ಸಂಖ್ಯಾತರಾಗಿರುವ ಧನಂಜಯ ಕುಮಾರ್ ಅವರು ಗೆಲುವೇ ಸಾಕ್ಷಿ. ಕ್ಷೇತ್ರದಲ್ಲಿ ಸಂಖ್ಯಾಬಲದಲ್ಲಿ ಪ್ರಭಲವಾಗಿರುವ ಬಿಲ್ಲವರೇ, ಬಿಲ್ಲವ ನಾಯಕ ಜನಾರ್ಧನ ಪೂಜಾರಿ ಅವರ ‘ಕೈ’ ಬಿಟ್ಟಿದ್ದರು. ನಾರಾಯಣ ಗುರುಗುಳ ಆಶಯದಂತೆ ನಡೆದು ಬಿಲ್ಲವ ಸಮೂದಾಯಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದ ‘ಪೂಜಾರಿ’ಯವರ ಕೊನೆಯ ಚುನಾವಣೆಯಲ್ಲೂ ಬೆಂಬಲ ನೀಡಿರಲಿಲ್ಲ. ಇದಕ್ಕೆ ಕಾರಣ ಜಿಲ್ಲೆಯ ಜನರಿಗಿರೋ ಧರ್ಮದ ಮೇಲಿನ ಅಭಿಮಾನ. ಇನ್ನು ಜಿಲ್ಲೆಯ ಪ್ರಭಲ ಜಾತಿಗಳ ಮತದಾರರಲ್ಲಿ ಅಲ್ಪ ಸ್ವಲ್ಪ ಜಾತಿ ಸಮೀಕರಣಗಳು ನಡೆದ್ರೂ ಅದು ಒಂದು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮಟ್ಟಕ್ಕಂತೂ ನಡೆಯೋದಿಲ್ಲ.

ಹಾಗಿದ್ರೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿ ಫೈಟ್ ಇದೆಯಾ…?

ಧರ್ಮದ ಆದಾರದಲ್ಲೇ ಇಷ್ಟು ವರ್ಷ ಜಿಲ್ಲೆಯಲ್ಲಿ ಗೆದ್ದು ಬೀಗುತ್ತಿದ್ದ ಬಿಜೆಪಿಯ ಗೆಲುವಿಗೆ ಇಲ್ಲಿ ಧರ್ಮವೇ ಟ್ರಂಪ್ ಕಾರ್ಡ್. ಹಿಂದುತ್ವದ ಭದ್ರಕೋಟೆಯಲ್ಲಿ ಬಹುತೇಕ ಹಿಂದೂ ಮತದಾರರು ಜಾತಿಗಿಂತ ಇಲ್ಲಿ ಧರ್ಮಕ್ಕೇ ಮತ ಹಾಕುತ್ತಿದ್ದಾರೆ. ಈ ಹಿಂದೆ ಸ್ಪರ್ಧೆ ಮಾಡಿದ್ದ ಜನಾರ್ಧನ ಪೂಜಾರಿಯವರು ಹಿಂದುತ್ವಕ್ಕೆ ಕಡು ವಿರೋಧಿಯಾಗಿದ್ರು, ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ಸಂಘದ ನಾಯಕರನ್ನು ವಾಮಾಗೋಚರ ನಿಂದಿಸ್ತಾ ಇದ್ರು. ಇನ್ನು ಕಳೆದ ಬಾರಿ ಸ್ಪರ್ಧಿಸಿದ್ದ ಯುವ ನಾಯಕ ಮಿಥುನ್ ರೈ ಅವರ ಹಿನ್ನಲೆಯನ್ನು ಇಟ್ಟು ಟೀಕೆ ಮಾಡಲು ಸಾಕಷ್ಟು ಅಸ್ತ್ರಗಳನ್ನು ಬಿಜೆಪಿ ಬಳಸಿಕೊಂಡಿತ್ತು. ಆದ್ರೆ ಈ ಬಾರಿ ಎದುರಾಳಿ ಅಭ್ಯರ್ಥಿ ಪದ್ಮರಾಜ್ ಹಿನ್ನಲೆ ಕಾಂಗ್ರೆಸ್ ಪಕ್ಷಕ್ಕೆ ಮೊದಲ ಪ್ಲಸ್ ಪಾಯಿಂಟ್ ಆಗಿದೆ. ಹೀಗಾಗಿ ಈ ಬಾರಿ ಎದುರಾಳಿ ಅಭ್ಯರ್ಥಿಯನ್ನು ಹಿಯಾಳಿಸಿ ಮಾತನಾಡಿದಷ್ಟೂ ಬಿಜೆಪಿ ಮತಗಳು ಮೈನಸ್ ಆಗುವ ಆತಂಕ ಇದೆ.

ಪದ್ಮರಾಜ್ ಅವರ ಹಿನ್ನಲೆಯ ಬಗ್ಗೆ ಒಂದಿಷ್ಟು ಮಾಹಿತಿ…

padmaraj

ಪದ್ಮರಾಜ್ ರಾಮಯ್ಯ ರಾಜಕೀಯ ವಲಯದಲ್ಲಿ ಕೆಲವರಿಗೆ ಧಿಡೀರ್ ಪ್ರತ್ಯಕ್ಷ ಆಗಿರುವ ಓರ್ವ ಅಭ್ಯರ್ಥಿಯಾಗಿ ಕಂಡರೂ ಜಿಲ್ಲೆಯ ಬಹುಪಾಲು ಜನರಿಗೆ ಪರಿಚಿತ ವ್ಯಕ್ತಿ. ಪ್ರಮುಖವಾಗಿ ಜನಾರ್ಧನ ಪೂಜಾರಿ ಅವರ ಗರಡಿಯಲ್ಲಿ ವಕೀಲ ವೃತ್ತಿಯಿಂದ ಹಿಡಿದು ಧಾರ್ಮಿಕ ಹಾಗೂ ರಾಜಕೀಯವನ್ನು ಕಲಿತವರು ಪದ್ಮರಾಜ್ ರಾಮಯ್ಯ. ಇನ್ನು ಸಣ್ಣ ವಯಸ್ಸಿನಲ್ಲೇ ತಮ್ಮ ಸಮೂದಾಯದ ಯುವ ಜನರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಂಘಟನಾತ್ಮಕವಾಗಿ ಕೆಲಸ ಮಾಡಿದವರು. ಜೊತೆಗೆ ಜನಾರ್ಧನ ಪೂಜಾರಿ ಅವರ ಪಟ್ಟ ಶಿಷ್ಯನಾಗಿ ಕುದ್ರೋಳಿ ಗೋಕರ್ಣ ಕ್ಷೇತ್ರದಲ್ಲಿ ಕಳೆದ 22 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ವ್ಯಕ್ತಿ. ನಾರಾಯಣ ಗುರುಗಳ ತತ್ವ ಸಂದೇಶವನ್ನು ಚಾಚೂ ತಪ್ಪದೆ ಪಾಲಿಸುವ , ಬಡವರ ಕಣ್ಣೀರು ಒರೆಸುವ ಕೆಲಸ ಮಾಡಲು ಗುರು ಬೆಳದಿಂಗಳು ಅನ್ನೋ NGO ಕಟ್ಟಿಕೊಂಡಿರುವ ಸಮಾಜ ಸೇವಕ. ಇನ್ನು ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಎಲ್ಲರ ಜೊತೆಯೂ ಅನ್ಯೋನತೆಯಿಂದ ಇರುವ ಓರ್ವ ಧಾರ್ಮಿಕ ನಾಯಕ ಕೂಡಾ ಹೌದು. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಅನ್ನೋದಷ್ಟನ್ನು ಬಿಟ್ಟು ಪದ್ಮರಾಜ್ ರಾಮಯ್ಯ ಅವರನ್ನು ಟೀಕೆ ಮಾಡಲು ಬಿಜೆಪಿ ಬಳಿ ಯಾವುದೇ ಅಸ್ತ್ರವಿಲ್ಲ.

ಕ್ಷೇತ್ರದಲ್ಲಿ ಬಿಜೆಪಿಗೆ ಇರುವ ಪ್ಲಸ್ ಪಾಯಿಂಟ್ ಏನು ?

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಹೇಳುವಂತೆ ‘ದೇವ ದುರ್ಲಭ ಕಾರ್ಯಕರ್ತ’ರೇ ಪಕ್ಷದ ಶಕ್ತಿ. ಇನ್ನು ಬಿಜೆಪಿ ಕಾರ್ಯಕರ್ತರ ಜೊತೆ ಗುಪ್ತವಾಗಿ ತಳಹಂತದಲ್ಲಿ ಕೆಲಸ ಮಾಡುವ ಸಂಘಪರಿವಾರ ಕೂಡಾ ಪಕ್ಷಕ್ಕೆ ಶ್ರೀರಕ್ಷೆಯಾಗಿದೆ. ಇನ್ನು ಅಭಿವೃದ್ಧಿಯ ಅಜೆಂಡಾದ ಜೊತೆಗೆ ಕಾಂಗ್ರೆಸ್ ಪಕ್ಷದ ಹಾಗೂ ಅದರ ನಾಯಕರ ಹುಳುಕನ್ನು ಎತ್ತಿ ತೋರಿಸೋದ್ರಲ್ಲಿ ಬಿಜೆಪಿಯದು ಎತ್ತಿದ ಕೈ. ಎದುರಾಳಿಯ ಸಣ್ಣ ತಪ್ಪನ್ನೂ ಎನ್ಕ್ಯಾಶ್ ಮಾಡುವ ದೊಡ್ಡ ಅಸ್ತ್ರಗಳ ಬಿಜೆಪಿ ಬತ್ತಳಿಕೆಯಲ್ಲಿ ಸದಾ ಇರುತ್ತದೆ. ಇನ್ನು ಎಲ್ಲದಕ್ಕಿಂತ ಮಿಗಿಲಾಗಿ ಕ್ಷೇತ್ರದ ಅಭ್ಯರ್ಥಿ ಯಾರೇ ಆದ್ರೂ ಅದು ‘ಮೋದಿ’ಯೇ ಅಭ್ಯರ್ಥಿ ಅಂತ ಪ್ರಚಾರ ನಡೆಸ್ತಾ ಇರೋದು ದೊಡ್ಡ ಪ್ಲಸ್ ಪಾಯಿಂಟ್. ತನ್ನ ಪ್ರಭಲ ಐಟಿ ಸೆಲ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಪಕ್ಷದ ಪರ ಹವಾ ಸೃಷ್ಟಿಸಿ ಎದುರಾಳಿಯ ಬೆವರಿಳಿಸೋದ್ರಲ್ಲಿ ಬಿಜೆಪಿಗರು ನಿಸ್ಸೀಮರು. ಹೀಗೇ ಹಲವರು ಆಯಾಮಗಳಲ್ಲಿ ಬಿಜೆಪಿಯನ್ನು ಸರಿಗಟ್ಟಲು ಕಾಂಗ್ರೆಸ್ ಪಕ್ಷ ಹೆಣಗಾಡಬೇಕಿದೆ.

ಎರಡೂ ಪಕ್ಷದಿಂದ ಕಣಕ್ಕಿಳಿದ ಸಮರ್ಥ ಅಭ್ಯರ್ಥಿಗಳು…

ಅಭ್ಯರ್ಥಿಗಳನ್ನು ನೋಡಿ ಮತದಾರ ಮತ ಹಾಕ್ತಾನೆ ಅನ್ನೋ ವಿಚಾರ ಬಂದ್ರೂ ಇಬ್ಬರ ನಡುವೆ ಸಮಭಲದ ಪೈಪೋಟಿ ಇದೆ. ಇಬ್ಬರೂ ಉತ್ತಮ ಶೈಕ್ಷಣಿಕ ಹಿನ್ನಲೆ ಹೊಂದಿದ್ದಾರೆ‌ ಮತ್ತು ಸಂಸ್ಕಾರ ಕಲಿತವರಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ಶೈಕ್ಷಣಿಕವಾಗಿ ಪದ್ಮರಾಜ್ ಅವರಿಗಿಂತ ಒಂದು ಸ್ಟೆಪ್ ಮೇಲಿದ್ರೂ ಪದ್ಮರಾಜ್ ಅವರೂ ಕೂಡಾ ವಕೀಲರು. ಇಬ್ಬರೂ ಇಂಗ್ಲೀಷ್ ಸೇರಿದಂತೆ ಬಹುತೇಕ ಭಾಷೆಗಳ ಮೇಲೆ ಹಿಡಿತ ಹೊಂದಿದವರು. ಇನ್ನು ಸಮಾಜ ಸೇವೆಯ ವಿಚಾರದಲ್ಲೂ ಕೂಡಾ ಇಬ್ಬರೂ ತಮ್ಮ ಇತಿಮಿತಿಯಲ್ಲಿ ಸಮಾಜ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಲ್ಲಿಯೂ ಇಬ್ಬರೂ ಸಮಾನರೆ. ಇನ್ನು ಇಬ್ಬರೂ ಕೂಡಾ ಚುನಾವಣಾ ರಾಜಕೀಯಕ್ಕೆ ಹೊಸಬರು ಅನ್ನೋದು ಮತ್ತೊಂದು ವಿಶೇಷ. ಹೀಗಾಗಿ ಪಕ್ಷ ನೋಡದೆ ಅಭ್ಯರ್ಥಿಯ ಆಯ್ಕೆ ಮಾಡಿ ಅಂತ ಮತದಾರನ ಮುಂದೆ ಹೋದ್ರೂ ಇಬ್ಬರನ್ನೂ ತಕ್ಕಡಿಯಲ್ಲಿಟ್ಟು ತೂಕ ಮಾಡ ಬೇಕಾದಷ್ಟು ಜಿದ್ದಾಜಿದ್ದಿ ಬರಬಹುದು.

ಹಿಂದಿನ ಚುನಾವಣೆಯ ಲೆಕ್ಕಾಚಾರ ಹಾಕಿದ್ರೂ ಫೈಟ್ ‘ಗ್ಯಾರೆಂಟಿ’..!

ಇಷ್ಟೆಲ್ಲಾ ಲೆಕ್ಕಾಚಾರದ ಜೊತೆಗೆ ಅಂಕಿ ಅಂಶಗಳು ಕೂಡಾ ಇಲ್ಲಿ ಪ್ರಮುಖವಾಗಿದೆ . ಈ ಹಿಂದಿನ ಲೋಕಸಭಾ ಚುನಾವಣೆಗಳು, ವಿಧಾನಸಭಾ ಚುನಾವಣೆಗಳು, ಮತದಾರರ ಹೆಚ್ಚಳ, ಮತ ಚಲಾವಣೆಯಲ್ಲಿ ಹೆಚ್ಚಳ, ಪಕ್ಷಗಳಿಗೆ ಹಂಚಿಕೆಯಾದ ಮತಗಳ ಲೆಕ್ಕಾಚಾರ ಎಲ್ಲವೂ ಇಲ್ಲಿ ಗಣನೆಗೆ ತೆಗೆದುಕೊಂಡ್ರೆ ಈ ಬಾರಿ ‘ಜಿದ್ದಾಜಿದ್ದಿ’ ಪಕ್ಕಾ ಅನಿಸುವುದು ಸಹಜ. ಸಾಮಾನ್ಯವಾಗಿ ವಿಧಾನಭಾ‌ ಚುನಾವಣೆ, ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರೋದಿಲ್ಲ. ಆದ್ರೆ, ಈ ಬಾರಿ ‘ಗ್ಯಾರೆಂಟಿ’ ಯಾಗಿ‌ ಪರಿಣಾಮ ಬೀರಲಿದೆ ಅನ್ನೋದು ಕೈ ಪಾಳಯದಲ್ಲಿ ನಡೆಯುತ್ತಿರುವ ಚರ್ಚೆ…!

Click to comment

Leave a Reply

Your email address will not be published. Required fields are marked *

DAKSHINA KANNADA

“ಗಬ್ಬರ್ ಸಿಂಗ್” ಮೇ 3 ರಂದು ತೆರೆಗೆ ; ಇಂದು ವಿಡಿಯೋ ಸಾಂಗ್ ರಿಲೀಸ್..!

Published

on

ಮುತ್ತು ಗೋಪಾಲ್ ಫಿಲ್ಮ್ಸ್ ಬಾರ್ಕೂರು ಲಾಂಛನದಲ್ಲಿ ತಯಾರಾದ ‘ಗಬ್ಬರ್ ಸಿಂಗ್’ ತುಳು ಚಲನ ಚಿತ್ರ ಮೇ 3 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ಇದೀಗ ಈ ಸಿನೆಮಾದ ವಿಡಿಯೋ ಸಾಂಗ್‌ ರಿಲೀಸ್ ಆಗಿದ್ದು, ಜಸ್ಟ್‌ ರೋಲ್‌ ಫಿಲಂಸ್‌ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಸೂಜಿ ಕಣ್‌ದ ಮೋನಾಲಿಸಾ ಎಂಬ ಉತ್ತಮ ಸಾಹಿತ್ಯವನ್ನು ಹೊಂದಿರುವ ಹಾಡನ್ನು ರಿಲೀಸ್ ಮಾಡಲಾಗಿದೆ. ಹಾಡಿಗೆ ಉಮೇಶ್ ಮಿಜಾರ್ ಸಾಹಿತ್ಯ ಬರೆದಿದ್ದರೆ, ಬೋಜರಾಜ ವಾಮಂಜೂರು, ವಿಸ್ಮಯ ವಿನಾಯಕ ಹಾಗೂ ಸ್ವತಹ ಉಮೇಶ್ ಮಿಜಾರ್ ಹಾಡುಗಳನ್ನು ಹಾಡಿದ್ದಾರೆ.


‘ಗಬ್ಬರ್ ಸಿಂಗ್’ ತುಳು ಸಿನಿಮಾ ವಿಭಿನ್ನ ಕತೆಯನ್ನೊಳಗೊಂಡಿದ್ದು, ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಕತೆಯನ್ನು ಹೆಣೆಯಲಾಗಿದೆ. ಉತ್ತಮ‌ ಕತೆ, ನವಿರಾದ ಹಾಸ್ಯದೊಂದಿಗೆ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾದಲ್ಲಿ ಆರು ಹಾಡು, ನಾಲ್ಕು ಫೈಟ್ಸ್ ಇದೆ. ಸಿನಿಮಾಕ್ಕೆ ಸುರತ್ಕಲ್, ಚಿತ್ರಾಪುರ, ಬೈಕಂಪಾಡಿ ಮೊದಲಾದ ಪ್ರದೇಶಗಳಲ್ಲಿ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಯಕ ನಟನಾಗಿ ಶರಣ್ ಶೆಟ್ಟಿ ನಾಯಕಿಯಾಗಿ ವೆನ್ಸಿಟಾ ಅಭಿನಯಿಸಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಯಾದಾಗ ಮತ್ತೆ ಶಾಂತಿ ನೆಲೆಸುವಂತೆ ಮಾಡುವ ಖಡಕ್ ಅಧಿಕಾರಿ ಪಾತ್ರದಲ್ಲಿ ಶರಣ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

‘ಗಬ್ಬರ್ ಸಿಂಗ್’ ಸಿನಿಮಾ ಮೇ 3 ರಂದು ಕರಾವಳಿ ಜಿ,ಲ್ಲೆಯಾದ್ಯಂತ ತೆರೆ ಕಾಣಲಿದೆ.  ಆ್ಯಕ್ಷನ್ ಥ್ರಿಲ್ಲರ್ ಫ್ಯಾಮಿಲಿ ಓರಿಯೆಂಟೆಡ್ ಫಿಲ್ಮ್ ಆಗಿದ್ದು,  ಈಗಾಗಲೇ ಮಸ್ಕತ್ ಮತ್ತು ಉಡುಪಿಯಲ್ಲಿ ಸಿನಿಮಾದ ಪ್ರೀಮಿಯರ್ ಶೋ ನಡೆದಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಸಾಂಸಾರಿಕ ಕತೆಯ ಜೊತೆ ಇಲ್ಲಿ ಹಾಸ್ಯವೂ ಚೆನ್ನಾಗಿ ವಕ್೯ಹೌಟ್ ಆಗಿದೆ. ನವೀನ್ ಪಡೀಲ್, ಬೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಸಾಯಿಕೃಷ್ಣ, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ರವಿರಾಮ ಕುಂಜ ಇವರ ಹಾಸ್ಯ ಸಕ್ಕತ್ತಾಗಿದೆ. ಜೊತೆಗೆ ಗಿರೀಶ್ ಶೆಟ್ಟಿ ಕಟೀಲು, ವೀಣಾ ಶೆಟ್ಟಿ ಉಡುಪಿ, ಅಥರ್ವ ಪ್ರಕಾಶ್ ಮೊದಲಾದವರ ಪಾತ್ರಗಳೂ ಕೂಡಾ ಇಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ. ಸಿನಿಮಾ ಮೇ 3 ರಂದು ತೆರೆ ಕಾಣಲಿದೆ ಎಂದು ನಿರ್ಮಾಪಕ ಸತೀಶ್ ಬಾರ್ಕೂರು ತಿಳಿಸಿದ್ದಾರೆ.

ಛಾಯಾಗ್ರಹಣ: ರವಿ ಸುವರ್ಣ, ಸಂಕಲನ: ಪ್ರಜ್ವಲ್ ಸುವರ್ಣ, ಕಲೆ: ವೆಂಕಟೇಶ್ ಬೆಂಗಳೂರು, ಸಂಗೀತ: ಡೊಲ್ಪಿನ್ ಕೊಳಲಗಿರಿ. ಹಿನ್ನಲೆ ಸಂಗೀತ: ಕಾರ್ತಿಕ್ ಮುಲ್ಕಿ, ಸಾಹಸ: ಅಲ್ಟಿಮೆಟ್ ಶಿವ್ ನೃತ್ಯ: ಅವಿನಾಶ್ ಬಂಗೇರ, ಶುಭಕಿರಣ್, ಮೇಕಪ್ ಪ್ರದೀಪ್, ವಸ್ತ್ರಾಲಂಕಾರ : ಶರತ್ ಬರ್ಕೆ, ಸಹ ನಿರ್ದೇಶನ: ಪುಷ್ಪರಾಜ ರೈ, ಜಯರಾಜ್, ಸಹಾಯ: ಭಾಗ್ಯರಾಜ್.

 

 

Continue Reading

DAKSHINA KANNADA

ಪುತ್ತೂರಿನಲ್ಲಿ ಭೀ*ಕರ ಅಪಘಾ*ತ; ರಿಕ್ಷಾ ಚಾಲಕ ಸಾ*ವು

Published

on

ಪುತ್ತೂರು : ಲೋಕಸಭಾ ಚುನಾವಣಾ ಕರ್ತವ್ಯ ಮುಗಿಸಿ ಮಡಿಕೇರಿಯಿಂದ ಪುತ್ತೂರಿಗೆ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್‌ ಮತ್ತು ಆಟೋ ರಿಕ್ಷಾ ನಡುವೆ ಡಿ*ಕ್ಕಿ ಸಂಭವಿಸಿ ರಿಕ್ಷಾ ಚಾಲಕ ಮೃ*ತಪಟ್ಟ ಘಟನೆ ಮುಕ್ರಂಪಾಡಿಯಲ್ಲಿ ನಸುಕಿನ ಜಾವ 2 ಗಂಟೆ ಸುಮಾರಿಗೆ ನಡೆದಿದೆ.

ಆಟೋ ರಿಕ್ಷಾ ಚಾಲಕ 30 ವರ್ಷದ ಜೈಸನ್ ಮೃ*ತಪಟ್ಟವರು. ಪುತ್ತೂರಿಗೆ ಬರುತ್ತಿದ್ದ ಬಸ್ ಮತ್ತು ವಿರುದ್ಧ ದಿಕ್ಕಿನಿಂದ ಚಲಿಸುತ್ತಿದ್ದ ರಿಕ್ಷಾ ನಡುವೆ ಡಿ*ಕ್ಕಿ ಸಂಭವಿಸಿದೆ.

ಇದನ್ನೂ ಓದಿ : ಕಡೆ ಕ್ಷಣ ವರನಿಂದ ತಾಳಿ ಕಟ್ಟಲು ನಿರಾಕರಿಸಿದ ವಧು; ಮುರಿದು ಬಿದ್ದ ಮದುವೆ

ಅಪಘಾತದ ತೀವ್ರತೆಗೆ ರಿಕ್ಷಾ ನಜ್ಜುಗುಜ್ಜಾಗಿದೆ. ಚಾಲಕ ಜೈಸನ್ ರಿಕ್ಷಾದ ಒಳಗೆ ಸಿಲುಕಿ ಹಾಕಿಕೊಂಡಿದ್ದರು. ಪುತ್ತೂರು ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಜೈಸನ್‌ ಅವರನ್ನು ಹೊರತೆಗೆದಿದ್ದಾರೆ. ಆದರೆ, ಜೈಸನ್ ಆಗಲೇ ಇಹಲೋಕ ತ್ಯಜಿಸಿದ್ದರು.

Continue Reading

DAKSHINA KANNADA

ಕಡೆ ಕ್ಷಣ ವರನಿಂದ ತಾಳಿ ಕಟ್ಟಲು ನಿರಾಕರಿಸಿದ ವಧು; ಮುರಿದು ಬಿದ್ದ ಮದುವೆ

Published

on

ಉಪ್ಪಿನಂಗಡಿ: ಇತ್ತೀಚಿನ ದಿನಗಳಲ್ಲಿ ಕಡೆ ಕ್ಷಣದಲ್ಲಿ ಅದೆಷ್ಟೋ ಮದುವೆಗಳು ಮುರಿದು ಬಿದ್ದ ಘಟನೆ ನಡೆದಿದೆ. ಹಾಗೆಯೇ ಇಲ್ಲೊಂದು ಮದುವೆ ಮಂಟಪದಲ್ಲಿ ಕೊನೆಯ ಕ್ಷಣ ವರನಿಂದ ತಾಳಿ ಕಟ್ಟಲು ವಧು ನಿರಾಕರಸಿದ ಕಾರಣ ಮದುಮೆ ಮುರಿದು ಬಿದ್ದ ಘಟನೆ ಕಡಬ ತಾಲೂಕಿನ ಕೊಣಾಲು ಗ್ರಾಮದಲ್ಲಿ ನಡೆದಿದೆ.

ಕೊಣಾಲು ಗ್ರಾಮದ ಕೋಲ್ಪೆ ದಿ। ಬಾಬು ಗೌಡ ಅವರ ಪುತ್ರ ಉಮೇಶ ಅವರ ಮದುವೆಯು ಬಂಟ್ವಾಳ ತಾಲೂಕು ಕುಳ ಗ್ರಾಮದ ಕಂಟ್ರಮಜಲು ದಿ। ಕೊರಗಪ್ಪ ಗೌಡ ಅವರ ಪುತ್ರಿ ಸರಸ್ವತಿ ಅವರೊಂದಿಗೆ ನಿಗದಿಯಾಗಿತ್ತು. ಎ.26 ರಂದು ಬೆಳಗ್ಗೆ 11.35ರ ಮೂಹೂರ್ತದಲ್ಲಿ ಕಾಂಚನ ಪೆರ್ಲದ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ಮದುವೆ ನಿಗದಿಯಾಗಿತ್ತು. ಅದರಂತೆ ವರ ಹಾಗೂ ವಧುವಿನ ಕಡೆಯವರು ಮದುವೆಯ ದಿಬ್ಬಣದಲ್ಲಿ ಬಂದಿದ್ದರು. ವಧು ದಾರೆ ಸೀರೆ ಹಾಕಿ ಪರಸ್ಪರ ಹೂಮಾಲೆ ಕೂಡ ಹಾಕಿದ್ದರು. ಆದರೆ ತಾಳಿ ಕಟ್ಟಲು ಮುಂದಾದಗ ನನಗೆ ಈ ಮದುವೆ ಇಷ್ಟ ವಿಲ್ಲ ಎಂದು ವಧು ಹೇಳಿದ್ದಾಳೆ.

ಇದರಿಂದ ಎರಡೂ ಕಡೆಯವರು ಕಂಗಾಲಾಗಿ ವಧುವಿನ ಮನವೊಲಿಕೆಗೆ ಮುಂದಾದರು. ಆದರೆ ವಧು ಒಪ್ಪಲಿಲ್ಲ. ಬಳಿಕ ಎರಡೂ ಕಡೆ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿದರು.

ಔತಣ ಕೂಟಕ್ಕೆ ಸಿದ್ಧತೆ:

ವರನ ಮನೆಯಲ್ಲಿ ಮಧ್ಯಾಹ್ನದ ಔತಣ ಕೂಟಕ್ಕೆ ಸುಮಾರು 500 ಜನರಿಗೆ ಮಾಂಸಾಹಾರಿ ಊಟ ತಯಾರಾಗಿತ್ತು. 1 ಸಾವಿರದಷ್ಟು ಐಸ್‌ಕ್ರೀಮ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಮದುವೆ ಮುರಿದು ಬಿದ್ದ ಕಾರಣ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಮತ್ತೆ ಮದುವೆಯಾಗಲು ಒಪ್ಪಿದ ವಧು:

ಪೊಲೀಸ್ ಠಾಣೆಯಲ್ಲಿ ನಡೆದ ಮಾತುಕತೆ ವೇಳೆ ವಧು ಸರಸ್ವತಿ ಮತ್ತೆ ಮದುವೆ ಆಗಲು ಒಪ್ಪಿದ್ದರು. ಆದರೆ ಆಗ ವರ ಉಮೇಶ್ ಅವರು ಮದುವೆ ಆಗಲು ನಿರಾಕರಿಸಿದರು. ಇದರಿಂದಾಗಿ ಎರಡೂ ಕಡೆಯವರು ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆಯಿಸಿಕೊಂಡು ತಮ್ಮ ತಮ್ಮ ಮನೆಗಳಿಗೆ ತೆರಳಿದರು.

Continue Reading

LATEST NEWS

Trending