Connect with us

LATEST NEWS

BENGALURU : ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಬಾಂಬ್ ಇಟ್ಟವನ ಗುರುತು ಪತ್ತೆ!

Published

on

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟವನ ಗುರುತು ಪತ್ತೆಯಾಗಿದೆ. ಮಾರ್ಚ್‌ 1 ರಂದು ನಗರದ ಪ್ರತಿಷ್ಠಿತ ಕೆಫೆಯಲ್ಲಿ ಬಾಂಬ್ ಇಡಲಾಗಿತ್ತು. ಇದು ಇಡೀ ದೇಶದಲ್ಲೇ ಆತಂಕ ಹುಟ್ಟಿಸಿತ್ತು. ಇದೀಗ ಈ ಬಾಂಬ್ ಇಟ್ಟಿದ್ದು ತೀರ್ಥಹಳ್ಳಿಯ ಮುಸಾಬೀರ್ ಹುಸೇನ್‌ ಶಜೀಬ್‌ ಎಂದು ಗುರುತ್ತಿಸಲಾಗಿದೆ.

ರಾಮೇಶ್ವರಂ ಕೆಫೆ ಸಿಸಿಟಿವಿ ಕ್ಯಾಮರಾ ಹಾಗೂ ಬಸ್ ಇತರ ಸ್ಥಳಗಳಲ್ಲಿರು ಸಿಸಿಕ್ಯಾಮರಾದಲ್ಲಿರುವ ದೃಶ್ಯಗಳನ್ನು ಆಧರಿಸಿ ಆರೋಪಿಯ ಗುರುತು ಪತ್ತೆ ಮಾಡಲಾಗಿದೆ. 800 ಸಿಸಿ ಕ್ಯಾಮರಾಗಳಲ್ಲಿ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ಶಂಕಿತನಿಗೂ ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿರುವ ಶಜೀಬ್ ಭಾವಚಿತ್ರಕ್ಕೂ ಹೊಂದಾಣಿಕೆಯಾಗುತ್ತಿದೆ.

ಹಲವು ಭಯೋತ್ಪಾದನಾ ಕೃತ್ಯದಲ್ಲಿ ಭಾಗಿ :

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮುಸಾಬೀರ್ ಹುಸೇನ್ ಶಾಜಿಬ್ ಒಬ್ಬ ಶಂಕಿತ ಉಗ್ರನಾಗಿದ್ದು ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟು ಹೋಗಿದ್ದ ವ್ಯಕ್ತಿ ಎಂದು ರಾಷ್ಟ್ರೀಯ ತನಿಖಾ ದಳ (NIA)ಪತ್ತೆ ಹಚ್ಚಿದೆ. ಹೀಗಾಗಿ ಈ ಸ್ಪೋಟದ ಹಿಂದೆ ಶಿವಮೊಗ್ಗ ಐಸಿಸ್ ಮಾಡ್ಯೂಲ್ ಕೈವಾಡ ಇರುವುದು ಖಚಿತವಾಗಿದೆ.

ಶಂಕಿತ ಆರೋಪಿ ಈ ಹಿಂದೆ ಕೂಡ ಹಲವಾರು ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎನ್ನಲಾಗುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ನಡೆದ ಭಯೋತ್ಪಾದನಾ ಕೃತ್ಯಗಳಲ್ಲಿ ಶಾಜಿಬ್ ಕೈವಾಡವಿದೆ ಎನ್ನುವುದು ತಿಳಿದು ಬಂದಿದೆ.

ಇತ್ತೀಚಿನ ವರ್ಷಗಳಲ್ಲಿ ನಡೆದ ಮಂಗಳೂರಿನ ದೇಶ ವಿರೋಧಿ ಗೋಡೆ ಬರಹ, ಮಂಗಳೂರು ಕುಕ್ಕರ್ ಸ್ಪೋಟ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತುಂಗಾ ತೀರದಲ್ಲಿ ಬಾಂಬ್ ಪರೀಕ್ಷೆ ಪ್ರಕರಣ, ತಮಿಳುನಾಡಿನ ಕೊಯಮತ್ತೂರಿನ ಬಾಂಬ್ ಸ್ಪೋಟ ಹಾಗೂ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಗಳಿಗೆ ನಂಟಿದೆ.

ಯಾಕೆಂದರೆ ಮಂಗಳೂರು ಕುಕ್ಕರ್ ಸ್ಪೋಟ ಹಾಗೂ ಶಿವಮೊಗ್ಗ ಜಿಲ್ಲೆ ಬಾಂಬ್ ಪ್ರಯೋಗದಲ್ಲಿ ಪತ್ತೆಯಾಗಿದ್ದ ಸ್ಪೋಟಕ ವಸ್ತುಗಳಿಗೂ ಕೆಫೆ ಸ್ಪೋಟದ ಬಾಂಬ್ ತಯಾರಿಕೆಗೆ ಬಳಸಲಾಗಿದ್ದ ವಸ್ತುಗಳಿಗೂ ತಾಳೆಯಾಗಿದೆ.

ತಲೆಮರೆಸಿಕೊಂಡಿದ್ದ ಆರೋಪಿ :

ಜನವರಿ ಮತ್ತು ಫೆಬ್ರವರಿಯಲ್ಲಿ ಚೆನ್ನೈನಲ್ಲಿ ತಂಗಿದ್ದ ಮುಸಾವೀರ್‌ ಹುಸೇನ್‌ ಶಜೀಬ್‌ ಮಾರ್ಚ್‌ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ನಡೆಸಿದ್ದಾನೆ ಎನ್ನಲಾಗಿದೆ. ಆದರೆ, ಇದುವರೆಗೂ ಈತನೇ ಸ್ಫೋಟ ನಡೆಸಿದ್ದಾನೆ ಎಂದು ಖಚಿತವಾಗಿ ಅಧಿಕಾರಿಗಳು ಮಾಹಿತಿ ನೀಡಿಲ್ಲ.

ಈತ ಮಾಸ್ಟರ್‌ ಮೈಂಡ್‌ ಕೂಡ ಆಗಿರಬಹುದು ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಈತನ ಜೊತೆ ಅಬ್ದುಲ್‌ ಮತೀನ್‌ ತಹಾ ಕೂಡ ಇದ್ದ ಎಂಬುದು ಗೊತ್ತಾಗಿದೆ. ಈ ಇಬ್ಬರು ಕೂಡ ಅಲ್‌ ಹಿಂದ್‌ ಮಾಡ್ಯೂಲ್‌ ಕೇಸ್‌ನಲ್ಲಿ ಎನ್‌ಐಎಗೆ ಬೇಕಾಗಿದ್ದು, 2020ರಿಂದಲೂ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ನಾಪತ್ತೆ ದೂರು :

ಬೆಂಗಳೂರಿನಲ್ಲಿ ರೆಡಿಮೆಡ್‌ ಗಾರ್ಮೆಂಟ್ಸ್‌ ವ್ಯವಹಾರವನ್ನು ಮುಸಾವೀರ್‌ ನಡೆಸುತ್ತಿದ್ದ ಎನ್ನಲಾಗಿದೆ. ಆದರೆ, 2019ರಿಂದ ನಾಪತ್ತೆಯಾಗಿದ್ದಾನೆ ಎಂದು ಅವರ ತಾಯಿ ಕೂಡ ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ಅವರ ದೂರಿನಂತೆ ಬೆಂಗಳೂರಿನ ಸಿಸಿಬಿ ಪೊಲೀಸರು ಮುಸಾವೀರ್‌ ಹುಸೇನ್‌ ಶಜೀಬ್‌ ಅನ್ನು ವಶಕ್ಕೆ ತೆಗೆದುಕೊಂಡಿದ್ದರು. ಅದಾದ ಬಳಿಕ ಆತ ನನ್ನನ್ನು ಸಂಪರ್ಕಿಸಿಲ್ಲ, ನಾಪತ್ತೆಯಾಗಿದ್ದಾನೆ. ನನ್ನ ಮಗನನ್ನು ಹುಡುಕಿಕೊಡಿ ಎಂದು ತಾಯಿ ಹೈಕೋರ್ಟ್‌ಗೆ ಮೊರೆ ಹೋಗಿದ್ದಳು.

DAKSHINA KANNADA

ಅಮೇರಿಕಾದಲ್ಲಿ ಕಾರು ಅಪಘಾತ…! ಮೂವರು ಭಾರತೀಯ ಮಹಿಳೆಯರ ಸಾ*ವು…!

Published

on

ನ್ಯೂಯಾರ್ಕ್‌ : ಅಮೇರಿಕಾದಲ್ಲಿ ನಡೆದ ಕಾರು ಅಪಘಾತದಲ್ಲಿ ಭಾರತೀಯ ಮೂಲದ ಮೂವರು ಮಹಿಳೆಯರು ಇಹಲೋಕ ತ್ಯಜಿಸಿದ್ದಾರೆ. ಕೌಂಟಿಯ ಹೆದ್ದಾರಿಯ ಸೇತುವೆಯೊಂದರ ಮೇಲೆ ವೇಗವಾಗಿ ಕಾರು ಚಲಾಯಿಸಿದ ಕಾರಣ ಈ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಉತ್ತರದ ಕಡೆಗೆ ಕಾರು ಪ್ರಯಾಣಿಸುತ್ತಿದ್ದು, ಎಲ್ಲಾ ಲೇನ್‌ಗಳನ್ನು ದಾಟಿ, ಹಂಪ್‌ ಮೇಲೆ ವೇಗವಾಗಿ ಏರಿತ್ತು. ಈ ಕಾರಣದಿಂದ ಕನಿಷ್ಟ 20 ಅಡಿಗಳಷ್ಟು ಮೇಲಕ್ಕೆ ಹಾರಿ ಸೇತುವೆಯ ಮುಂದೆ ಇದ್ದ ಮರಗಳಿಗೆ ಕಾರು ಅಪ್ಪಳಿಸಿದೆ. ಗುಜಾರಾತ್ ಮೂಲದ ಮೂವರು ಮಹಿಳೆಯರು ಈ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಗುಜರಾತ್‌ನ ಆನಂದ್ ಜಿಲ್ಲೆಯ ರೇಖಾಬೆನ್‌ ಪಟೇಲ್ , ಸಂಗೀತಾಬೆನ್ ಪಟೇಲ್ ಹಾಗೂ ಮನೀಶಾಬೆನ್ ಪಟೇಲ್‌ ಅವರು ಇಹಲೋಕ ತ್ಯಜಿಸಿದವರಾಗಿದ್ದಾರೆ.

 

ಕಾರು ನಿಗದಿಪಡಿಸಿದ ವೇಗದ ಮಿತಿಗಿಂತ ಹೆಚ್ಚು ವೇಗದಲ್ಲಿತ್ತು ಎಂದು ಅಲ್ಲಿನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಪಘಾತದ ಪ್ರಮಾಣ ಎಷ್ಟಿತ್ತು ಮತ್ತು ಕಾರು ಎಷ್ಟು ಎತ್ತರಕ್ಕೆ ಹಾರಿತ್ತು ಅನ್ನೋದಿಕ್ಕೆ ಮರದ ಮೇಲಿರುವ ಕಾರಿನ ಅವಶೇಷಗಳು ಸಾಕ್ಷಿ ಎಂದು ಅವರು ಹೇಳಿದ್ದಾರೆ. ಮರದ ಮೇಲೆ ಬಿದ್ದ ಕಾರು ಛಿದ್ರಗೊಂಡು ಕಾರಿನ ಅವಶೇಷಗಳು ಚೆಲ್ಲಾಪಿಲ್ಲಿಯಾಗಿತ್ತು.


ದಕ್ಷಿಣ ಕೆರೊಲಿನಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಕ್ಷಣ ಸ್ಥಳಕ್ಕೆ ರಕ್ಷಣಾ ತಂಡಗಳು, ಪೊಲೀಸರು ಆಗಮಿಸಿದ್ದಾರೆ. ಅಪಘಾತದಲ್ಲಿ ಓರ್ವ ಬದುಕಿ ಉಳಿದಿದ್ದು, ಆತನ ಸ್ಥಿತಿ ಗಂಭೀರವಾಗಿದ್ದು ಈಗಲೇ ಏನೂ ಹೇಳಲು ಆಗದ ಪರಿಸ್ಥಿತಿಯಲ್ಲಿದ್ದಾನೆ. ವಾಹನ ಅಪಘಾತವಾದ ತಕ್ಷಣ ಅದರಲ್ಲಿದ್ದ ತಾಂತ್ರಿಕ ವ್ಯವಸ್ಥೆಯ ಕಾರಣ ತಕ್ಷಣ ಕುಟುಂಬ ಸದಸ್ಯರಿಗೆ ಅಲರ್ಟ್‌ ಮೆಸೆಜ್ ರವಾನೆಯಾಗಿತ್ತು. ಹೀಗಾಗಿ ತಕ್ಷಣ ಕುಟುಂಬಸ್ಥರು ಕೂಡಾ ತಕ್ಷಣ ಸ್ಥಳಕ್ಕೆ ಆಗಮಿಸಿದ್ದಾರೆ.

Continue Reading

FILM

PHOTOS : ಗೀತಾ ‘ವಿಜಯ್’ ಅದ್ದೂರಿ ಮದುವೆ; ಮೆಚ್ಚುಗೆ ಪಡೆದ ಧನುಷ್ ಮಾಡಿದ ಆ ಒಂದು ಕಾರ್ಯ!

Published

on

ಬೆಂಗಳೂರು : ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಧಾರಾವಾಹಿ ‘ಗೀತಾ’. ಈ ಧಾರಾವಾಹಿಯ ನಾಯಕ ‘ವಿಜಯ್’ ಅಂದ್ರೆ ಧನುಷ್ ಗೌಡ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಅವರ ವಿವಾಹ ಶುಕ್ರವಾರ ಅದ್ದೂರಿಯಾಗಿ ನೆರವೇರಿತು.


ಧನುಷ್ ಗೌಡ ಅವರು ಸಂಜನಾ ಎಂಬವರ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಸಂಜನಾ ಧನುಷ್ ಅತ್ತೆಯ ಮಗಳಾಗಿದ್ದು, ಇದು ಅರೆಂಜ್ಡ್ ಮ್ಯಾರೇಜ್ ಆಗಿದೆ.


ಇನ್ನು ಮದುವೆಯಲ್ಲಿ ಕುಟುಂಬದವರು, ಆಪ್ತರು, ಸ್ನೇಹಿತರು ಉಪಸ್ಥಿತರಿದ್ದರು.

ಧನುಷ್ ಅವರು ಆರತಕ್ಷತೆ ಕಾರ್ಯಕ್ರಮವೂ ಅದ್ದೂರಿಯಾಗಿ ನಡೆದಿದೆ.

ಧನುಷ್ ಅವರ ಮದುವೆ, ಆರತಕ್ಷತೆ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಪಾಲ್ಗೊಂಡಿದ್ದರು. 

ಇದನ್ನೂ ಓದಿ : ಮೇಕಪ್ ರೂಂನಲ್ಲಿ ಕೂಡಿ ಹಾಕಿದ್ರು…ಆಮೇಲೆ…ನಿರ್ಮಾಪಕನಿಂದಾದ ಕರಾಳ ಅನುಭವ ಬಿಚ್ಚಿಟ್ಟ ಖ್ಯಾತ ಕಿರುತೆರೆ ನಟಿ!

ಭವ್ಯಾ ಗೌಡ, ಮೌನ ಗುಡ್ಡೇಮನೆ, ರಿತ್ವಿಕ್ ಕೃಪಾಕರ್, ಸೇರಿ ಅನೇಕ ಕಿರುತೆರೆ ಹಿರಿತೆರೆ ತಾರೆಯರು ಆಗಮಿಸಿದ್ದರು.

 

ಮದುವೆ ಸಂಭ್ರಮದ ನಡುವೆಯೂ ಧನುಷ್ ವೋಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ. ಧನುಷ್ ನಡೆಗೆ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

 

 

Continue Reading

DAKSHINA KANNADA

ದೆಹಲಿಯ ರಾಣಾ ಪ್ರತಾಪ್ ನಗರದ ಜಿನ ಬಸದಿ 24ತೀರ್ಥಂಕರ ಪಂಚ ಕಲ್ಯಾಣ; ಮೂಡುಬಿದಿರೆ ಸ್ವಾಮೀಜಿ ಭಾಗಿ

Published

on

ನವದೆಹಲಿ : ದೆಹಲಿಯ ರಾಣಾ ಪ್ರತಾಪ್ ನಗರ ದ ಜಿನ ಬಸದಿ 24ತೀರ್ಥಂಕರ ಪಂಚ ಕಲ್ಯಾಣವು ರಾಷ್ಟ್ರ ಸಂತ 108 ಉಪಾಧ್ಯಾಯ ಗುಪ್ತಿ ಸಾಗರ ಮುನಿ ರಾಜ್ ಮಾರ್ಗದರ್ಶನ ಪಾವನ ಸಾನ್ನಿಧ್ಯ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿ ಗೌರವ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಿತು.

3 ಅಡಿ ಎತ್ತರ ದ ಪಂಚಲೋಹದ ಇಪ್ಪತ್ತನಾಲ್ಕು ತೀರ್ಥಂಕರ ಹಾಗೂ ವಿವಿಧ ಜಿನ ಬಿಂಬಗಳ ಸ್ಥಾಪನೆ ಬೆಳಿಗ್ಗೆ 7.30 ರಿಂದ 9.00ರ ವರೆಗೆ ಮೋಕ್ಷ ಕಲ್ಯಾಣ ಪೂಜೆ, ದೆಹಲಿ ವಿಶ್ವವಿದ್ಯಾಲಯ ಸ್ಪೋರ್ಟ್ಸ್ ಕ್ಲಬ್ ಸಭಾಂಗಣ ಹಾಗೂ ಮೆರವಣಿಗೆ ಮೂಲಕ ಮೂರ್ತಿ 3 ಕಿ.ಮೀ ದೂರದ ಬಸದಿಗೆ ತೆರಳಿ ಬೆಳಿಗ್ಗೆ 11.00ರಿಂದ ಮಧ್ಯಾಹ್ನ 1 ಗಂಟೆ ವರೆಗೂ ಮೂರ್ತಿ ಸ್ಥಾಪನೆ ದೆಹಲಿ ರಾಣಾ ಪತ್ ನಗರ ಬಸದಿಯಲ್ಲಿ ಜರುಗಿತು.


ಬಳಿಕ ಧಾರ್ಮಿಕ ಸಭೆಯಲ್ಲಿ ಧರ್ಮೋಪದೇಶ ನೀಡಿದ ಮೂಡುಬಿದಿರೆ ಸ್ವಾಮೀಜಿ, ಜಿನ ಬಿಂಬ ಸ್ಥಾಪನೆಯಿಂದ ಆತ್ಮ ಕಲ್ಯಾಣ ಹಾಗೂ ಪರ ಕಲ್ಯಾಣವಾಗುವುದು ಜನ ಸಂಸ್ಕೃತಿ ಸಂಸ್ಕಾರ ಧರ್ಮದಿಂದ ಸಾಧ್ಯ ಎಂದು ನುಡಿದರು. ಈ ಸಂದರ್ಭ ಸುಂದರ ಜಿನಾಲಯ ಸ್ಥಾಪನೆಗೆ ಕಾರಣರಾದ ದಾನಿಗಳನ್ನು ಗೌರವಿಸಲಾಯಿತು.


ರಾಷ್ಟ್ರ ಸಂತ 108 ಗುಪ್ತಿ ಸಾಗರ ಮುನಿ ರಾಜ್ ಮೂಡು ಬಿದಿರೆ ಶ್ರೀಗಳವರಿಗೆ ಶಾಸ್ತ್ರ ಸ್ಮರಣಿಕೆ ನೀಡಿದರು. ಬಳಿಕ ದೆಹಲಿ ಗ್ರೀನ್ ಪಾರ್ಕ್ ಬಸದಿಯಲ್ಲಿ ಉಪಸ್ಥಿತರಿದ್ದ 108 ರಾಷ್ಟ್ರ ಸಂತ ಆಚಾರ್ಯ ಪ್ರಾಗ್ಯ ಸಾಗರ ಮುನಿಮಹಾರಾಜ್, ಮೂಡುಬಿದಿರೆ ಶ್ರೀಗಳಿಗೆ ಗೌರವಾನ್ವಿತ ಪ್ರಧಾನಮಂತ್ರಿಗಳಿಂದ ಭಗವಾನ್ ಮಹಾವೀರ ಜನ್ಮ ಕಲ್ಯಾಣದಂದು ನಿರ್ವಾಣ ವರ್ಷ 2550ರ ಅಂಗವಾಗಿ ಬಿಡುಗಡೆಗೊಳಿಸಿದ ರೂ. 100 ರ ನಾಣ್ಯ ಹಾಗೂ ಅಂಚೆ ಇಲಾಖೆ ಬಿಡುಗಡೆಗೊಳಿಸಿದ ಪಾವಪುರಿ ಸಿದ್ದ ಕ್ಷೇತ್ರ ಫಸ್ಟ್ ಡೇ ಕವರ್ ನೀಡಿ ಹರಸಿ ಆಶೀರ್ವಾದ ಮಾಡಿದರು.

ಇದನ್ನೂ ಓದಿ : ಖ್ಯಾತ ಕಿರುತೆರೆ ನಟ ಗುರುಚರಣ್ ಸಿಂಗ್ ನಾಪತ್ತೆ!

ಈ ಸಂದರ್ಭ ಮೂಡುಬಿದಿರೆ ಸ್ವಾಮೀಜಿ ಈ ವರ್ಷ ಪೂರ್ತಿ ಆಚಾರ್ಯ ಶಾಂತಿ ಸಾಗರ ಆಚಾರ್ಯ ಶತಾಬ್ದಿ ವರ್ಷ ಹಾಗೂ ಭಗವಾನ್ ಮಹಾವೀರ ಸ್ವಾಮಿ ನಿರ್ವಾಣ ಕಲ್ಯಾಣ ವಿವಿಧೆಡೆ ಆಚರಿಸಲು ಸಂಕಲ್ಪ ಮಾಡಿದರು.

Continue Reading

LATEST NEWS

Trending