Friday, July 1, 2022

ಮರುಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗೆ ಪ್ರಶ್ನೆ ಪತ್ರಿಕೆಯ ಬದಲು ಉತ್ತರ ಪತ್ರಿಕೆ ನೀಡಿದ ಶಿಕ್ಷಕ

ತಿರುವನಂತಪುರ: ಮರುಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಯೊಬ್ಬನಿಗೆ ಪ್ರಶ್ನೆ ಪತ್ರಿಕೆಯ ಬದಲು ಕೀ ಉತ್ತರ ಪತ್ರಿಕೆಯನ್ನೇ ನೀಡಿದ ಘಟನೆ ಕೇರಳ ವಿಶ್ವವಿದ್ಯಾಲಯದಲ್ಲಿ ನಡೆದಿದೆ.


ಪರೀಕ್ಷಾ ಅಧಿಕಾರಿಗಳೊಂದಿಗೆ ಸಮಸ್ಯೆಯನ್ನು ಸರಿಪಡಿಸುವ ಬದಲು ವಿದ್ಯಾರ್ಥಿಯು ಉತ್ತರ ಪುಸ್ತಕವನ್ನು ಭರ್ತಿ ಮಾಡಿ ಸಲ್ಲಿಸಿದ್ದಾನೆ. ಮೌಲ್ಯಮಾಪಕರು ವಿಶ್ವವಿದ್ಯಾಲಯದ ಎಡವಟ್ಟನ್ನು ಗುರುತಿಸಿದ ಬಳಿಕವೇ ಈ ದೊಡ್ಡ ದೋಷ ಬೆಳಕಿಗೆ ಬಂದಿದೆ.

ಆದರೆ ಈ ಪರೀಕ್ಷೆ ರದ್ದಾಗಿದ್ದು ಮೇ. 3ರಂದು ಮತ್ತೆ ಮರುಪರೀಕ್ಷೆಯನ್ನು ನಿಗದಿ ಮಾಡಲಾಗಿದೆ.

ಈ ಲೋಪದ ಬಗ್ಗೆ ಪರೀಕ್ಷಾ ಮೇಲ್ವಿಚಾರಕರಿಗೆ ಹಾಗೂ ವಿದ್ಯಾರ್ಥಿಗೆ ಅರಿವಿಗೆ ಬಂದಿತ್ತೇ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿಯಿಲ್ಲ. ಆದರೆ ಪರೀಕ್ಷೆಯನ್ನು ರದ್ದುಗೊಳಿಸಿರುವ ವಿಶ್ವವಿದ್ಯಾಲಯದ ಕುಲಪತಿ ತನಿಖೆಗೆ ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಬಂಟ್ವಾಳ: ಗೋಕಳ್ಳತನ-ದನದ ಮಾಂಸ ಸಹಿತ ಆರೋಪಿಗಳು ವಶಕ್ಕೆ

ಬಂಟ್ವಾಳ: ಕಳ್ಳತನ ಮಾಡಿದ ದನಗಳನ್ನು ಕಡಿದು ಮಾರಾಟ ಮಾಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ದನದ ಮಾಂಸ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಗೋಳ್ತಮಜಲು ಎಂಬಲ್ಲಿ...

ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದರಿಂದ ಮನನೊಂದು ಪಿಯುಸಿ ವಿದ್ಯಾರ್ಥಿನಿ ಜೀವಾಂತ್ಯ

ಉಡುಪಿ: ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಮತ್ತೆ ಅನುತ್ತೀರ್ಣಳಾಗಿದ್ದರಿಂದ ಮನನೊಂದು ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದಲ್ಲಿ ನಿನ್ನೆ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಮಾನಸ (17)...

ಟೈಲರ್ ಕನ್ನಯ್ಯ ಲಾಲ್ ಕೊಲೆಗೈದವರಿಗೆ ಮರಣದಂಡನೆ ವಿಧಿಸಿ: ಶಾಸಕ ಕಾಮತ್‌ ಆಗ್ರಹ

ಮಂಗಳೂರು: ರಾಜಸ್ಥಾನದ ಉದಯಪುರದಲ್ಲಿ ಬಡ ಟೈಲರ್ ಕನ್ನಯ್ಯ ಲಾಲ್ ಹತ್ಯೆಗೈದು ಪ್ರಧಾನಮಂತ್ರಿಗಳಿಗೆ ಬೆದರಿಕೆಯೊಡ್ಡಿದ ಹಂತಕರಿಗೆ ಮರಣ ದಂಡನೆ ವಿಧಿಸುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಕುಕೃತ್ಯ ಎಸಗುವವರಿಗೆ ಎಚ್ಚರಿಕೆಯ ಸಂದೇಶ ನೀಡಬೇಕೆಂದು ಮಂಗಳೂರು...