Connect with us

LATEST NEWS

ಬೈಬಲ್‌ ಮತ್ತು ಖುರಾನ್‌ ಧಾರ್ಮಿಕ ಪುಸ್ತಕ ಆದರೆ ಭಗವದ್ಗೀತೆಯಲ್ಲ: ಶಿಕ್ಷಣ ಸಚಿವ ಬಿ.ಸಿ ನಾಗೇಶ್‌

Published

on

ಮಂಗಳೂರು: ಬೈಬಲ್‌ ಮತ್ತು ಖುರಾನ್‌ ಎನ್ನುವುದು ಧಾರ್ಮಿಕ ಪುಸ್ತಕಗಳು. ಆದರೆ ಭಗವದ್ಗೀತೆ ಎನ್ನುವುದು ಧರ್ಮದ ಪುಸ್ತಕವಲ್ಲ. ಅದು ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಮಾತ್ರ ಹೇಳುತ್ತದೆ ಎಂದು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಹೇಳಿದ್ದಾರೆ.


ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಕ್ರೈಸ್ತ ಶಿಕ್ಷಣ ನೀಡುತ್ತಿದ್ದಾರೆಂಬ ಆರೋಪಕ್ಕೆ ಮಾಧ್ಯಮಗಳಿಗೆ ಉತ್ತರಿಸಿದ ಅವರು, ಕರ್ನಾಟಕ ಎಜ್ಯುಕೇಶನ್‌ ಆ್ಯಕ್ಟ್‌ನ ಅಡಿಯಲ್ಲಿ ಯಾವ್ಯಾವ ಶಾಲೆಗಳು ರಿಜಿಸ್ಟ್ರಾರ್‌ ಆಗಿದೆಯೋ ಅವುಗಳು ಅದರ ನಿಯಮವನ್ನು ಅನುಸರಿಸಲೇಬೇಕು.

ಅಲ್ಲಿ ಧರ್ಮದ ಪುಸ್ತಕಗಳನ್ನು ಶಿಕ್ಷಣದ ಅಡಿಗೆ ತರಲು ಸಾಧ್ಯವಿಲ್ಲ. ಕ್ರಿಶ್ಚಿಯನ್‌ ಶಾಲೆಗಳಲ್ಲಿ ಬೈಬಲ್‌ ಶಿಕ್ಷಣ ಕೊಡಿಸುವ ಬಗ್ಗೆ ಆರೋಪಗಳು ಕೇಳಿ ಬಂದಿದೆ.

ಈ ಬಗ್ಗೆ ದೂರು ಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಸರಕಾರ ಶಾಲಾ ಆಡಳಿತ ಮಂಡಳಿಯಲ್ಲಿ ಮೂಗು ತೂರಿಸುವ ಕೆಲಸ ಮಾಡುವುದಿಲ್ಲ.

ಆದರೆ ಶಿಕ್ಷಣದಲ್ಲಿ ಕರ್ನಾಟಕ ಎಜ್ಯುಕೇಶನ್‌ ಆ್ಯಕ್ಟ್‌ನ ನಿಯಮವನ್ನು ಪಾಲಿಸಲೇಬೇಕು. ಶಿಕ್ಷಣದಲ್ಲಿ ಧರ್ಮದ ಆಚರಣೆ ತಪ್ಪು. ಬೈಬಲ್‌ ಮತ್ತು ಖುರಾನ್‌ ಎನ್ನುವುದು ಧಾರ್ಮಿಕ ಪುಸ್ತಕಗಳು.

ಆದರೆ ಭಗವದ್ಗೀತೆ ಎನ್ನುವುದು ಧರ್ಮದ ಪುಸ್ತಕವಲ್ಲ. ಅದು ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಮಾತ್ರ ಹೇಳುತ್ತದೆ.

ಅದು ಯಾವುದೇ ಧರ್ಮದ ಆಚರಣೆಯನ್ನು ಹೇಳುವುದಿಲ್ಲ. ಬದಲಾಗಿ ಮೌಲ್ಯಗಳನ್ನು ಹೇಳುತ್ತದೆ. ಕ್ರಿಶ್ಚಿಯನ್‌ ಆಗಬೇಕಾದರೆ ಬೈಬಲ್‌ ನಂಬಬೇಕು ಎಂದು ಹೇಳುತ್ತದೆ. ಆದ್ದರಿಂದ ಭಗವದ್ಗೀತೆಯನ್ನು ಬೇರೆ ಧರ್ಮಗ್ರಂಥಗಳಿಗೆ ಹೊಲೀಸುವುದು ಸರಿಯಲ್ಲ ಎಂದರು.

DAKSHINA KANNADA

ಚೈತ್ರಾ ಹೆಬ್ಬಾರ್ ನಾಪತ್ತೆ ಹಿಂದೆ ಅನ್ಯಕೋಮಿನ ಯುವಕನ ಕೈವಾಡ ಶಂಕೆ- ಆರೋಪಿಯ ಬಂಧಿಸಲು ಹಿಂದೂ‌ ಸಂಘಟನೆ ಒತ್ತಾಯ

Published

on

ಪುತ್ತೂರು: ಮಾಡೂರು ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣ ಪ್ರಕರಣದ ಹಿಂದೆ ಡ್ರಗ್ಸ್ ಮಾಫಿಯಾ, ಲವ್ ಜಿಹಾದ್ ಶಂಕೆಯನ್ನು ವ್ಯಕ್ತಪಡಿಸಿದ ಹಿಂದೂ‌ ಸಂಘಟನೆ ಮುಖಂಡರು, ಇದೀಗ ಬಂಟ್ವಾಳದ ಅನ್ಯಕೋಮಿನ ಯುವಕನ ಕೈವಾಡ ಆಕೆ ನಾಪತ್ತೆ ಪ್ರಕರಣದ ಹಿಂದೆ ಇದ್ದು, ಆರೋಪಿಯನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

ಪುತ್ತೂರಿನ ಕೂರ್ನಡ್ಕದಲ್ಲಿ ವಾಸವಿದ್ದ ಶಾರೂಕ್ ಶೇಖ್ ಮೂಲತಃ ಬಂಟ್ವಾಳದ ನೇರಳಕಟ್ಟೆಯ ನಿವಾಸಿಯಾಗಿದ್ದಾನೆ. ಚೈತ್ರಾ ತಂಗಿದ್ದ ಪಿಜಿಗೆ ಬರುತ್ತಿದ್ದ ಶಂಕಿತ ಬರುತ್ತಿದ್ದ. ಚೈತ್ರಾ ಪೋಷಕರಿಗೆ ಮಾಡೂರು ಬಜರಂಗದಳ ಮುಖಂಡರು ಮಾಹಿತಿಯನ್ನೂ ನೀಡಿದ್ದರು. ಇದೀಗ ಮಾಹಿತಿ ನೀಡಿದ ಬಳಿಕ ನಾಪತ್ತೆಯಾದ ಚೈತ್ರಾ ಹೆಬ್ಬಾರ್‌ ಹಿಂದೆ ಈ ಆರೋಪಿ ಇರುವುದು ದೃಢಪಡುತ್ತಿರುವುದರಿಂದ ಎರಡು ದಿನದಲ್ಲಿ ಚೈತ್ರಾಳನ್ನು ಪೊಲೀಸರು ಕರೆ ತರಬೇಕು. ಇಲ್ಲದೇ ಇದ್ದಲ್ಲಿ ಉಳ್ಳಾಲ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ಪ್ರಾಂತ ಸಂಚಾಲಕ ಮುರಳಿ ಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದ್ದಾರೆ.

Continue Reading

DAKSHINA KANNADA

Ullala: ನಾಪತ್ತೆಯಾಗಿದ್ದ ಚೈತ್ರಾ ಹೆಬ್ಬಾರ್ ಸ್ಕೂಟರ್ ಪತ್ತೆ..!

Published

on

ಮಂಗಳೂರು: ಉಳ್ಳಾಲದ ಮಾಡೂರಿನ ಪಿಜಿಯಿಂದ ಫೆ.17 ರಂದು ನಾಪತ್ತೆಯಾಗಿದ್ದ ಚೈತ್ರಾ ಹೆಬ್ಬಾರ್ ಚಲಾಯಿಸಿದ ಸ್ಕೂಟರ್ ಸುರತ್ಕಲ್ ಬಳಿ ಪತ್ತೆಯಾಗಿದೆ.

ಮಾಡೂರಿನ ಪಿಜಿ ಯಿಂದ ಫೆ.17 ರಂದು ಮುಂಜಾನೆ 9 ಗಂಟೆಗೆ ಚೈತ್ರಾ ಇದೇ ಸ್ಕೂಟರ್‌ನಲ್ಲಿ ತೆರಳಿದ್ದರು. ಬಳಿಕ ನಾಪತ್ತೆಯಾಗಿದ್ದ ಚೈತ್ರಾ ಸುಳಿವು ಸಿಗದೆ ಹಿನ್ನೆಲಯಲ್ಲಿ ಚೈತ್ರಾ ದೊಡ್ಡಪ್ಪ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. ಹಿಂದೂ ಸಂಘಟನೆಗಳೂ ಇದೊಂದು ಲವ್‌ ಜಿಹಾದ್ ಪ್ರಕರಣವೆಂದು ಆರೋಪಿಸಿ ಹೋರಾಟದ ಎಚ್ಚರಿಕೆ ನೀಡಿತ್ತು. ಇದಾದ ಬಳಿಕ ತನಿಕೆ ಚುರುಕುಗೊಳಿಸಿ ಪೊಲೀಸರಿಗೆ ಇದೀಗ ಚೈತ್ರಾಳ ಸ್ಕೂಟರ್ ಪತ್ತೆಯಾಗಿದೆ. ಚೈತ್ರ ಪಿಜಿಯಿಂದ ಹೊರಟ ಬಳಿಕ ಪಂಪ್‌ವೆಲ್ ಬಳಿ ಮೊಬೈಲ್ ಆಫ್ ಮಾಡಿಕೊಂಡಿದ್ದು ಬಳಿಕ ಸುರತ್ಕಲ್‌ಗೆ ಬಂದು ಅಲ್ಲಿ ಎಟಿಎಂನಲ್ಲಿ ಹಣ ಡ್ರಾ ಮಾಡಿದ್ದರು, ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿಸಿರುವ ಪೊಲೀಸರು ಶಂಕಿತ ಯುವಕನ ಬಗ್ಗೆಯೂ ಮಾಹಿತಿ ಕಲೆ ಹಾಕಿದೆ. ಆದರೆ ಆತನ ಮೊಬೈಲ್ ಕೂಡಾ ಸ್ವಿಚ್‌ ಆಫ್ ಆಗಿರುವ ಕಾರಣ ಚೈತ್ರಾ ಆತನ ಜೊತೆಯಲ್ಲಿ ಹೋಗಿರುವ ಬಲವಾದ ಅನುಮಾನ ಮೂಡಿದೆ. ಕೇರಳ ಅಥವಾ ಬೆಂಗಳೂರಿಗೆ ಹೋಗಿರುವ ಸಾದ್ಯತೆ ಹಿನ್ನಲೆಯಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Continue Reading

LATEST NEWS

ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಹೃದಯಘಾತಕ್ಕೆ ಬಲಿ..!

Published

on

ಯಾದಗಿರಿ: ಸುರಪುರ ಕಾಂಗ್ರೆಸ್ ಶಾಸಕರ ರಾಜಾ ವೆಂಕಟಪ್ಪ ನಾಯಕ ಅವರು ಫೆ.25 ರಂದು ಹೃದಯಘಾತದಿಂದ ನಿಧನ ಹೊಂದಿದರು.


ರಾಜಾ ವೆಂಕಟಪ್ಪ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹೃದಯಘಾತಕ್ಕೆ ಬಲಿಯಾದ ರಾಜಾ ವೆಂಕಟಪ್ಪ ಅವರ ಸಾವು ಕಾಂಗ್ರೆಸ್ ಗರಿಗೆ ಶಾಕ್ ನೀಡಿದಂತಾಗಿದೆ. ಇವರ ಸಾವಿಗೆ ಹಲವು ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ.

Continue Reading

LATEST NEWS

Trending