Connect with us

DAKSHINA KANNADA

ಖಾಕಿಯೊಳಗೂ ಹೈಟೆಕ್ ಮಾಹಿತಿ ಹೊಂದಿರುವ ವ್ಯಕ್ತಿ ಇದ್ದಾನೆ -ಸಚಿವ ಪರಮೇಶ್ವರ್

Published

on

ಮಂಗಳೂರು: ಮಂಗಳೂರು ನಗರ ಸಶಸ್ತ್ರ ಮೀಸಲು ಪಡೆ ಮಂಗಳೂರು ನಗರ ಉಪ ಪೊಲೀಸ್ ಆಯುಕ್ತರ ಕಚೇರಿಯನ್ನು ರಾಜ್ಯ ಗೃಹ ಸಚಿವ ಪರಮೇಶ್ವರ್ ಅವರು ಅ.29ರಂದು ಉದ್ಘಾಟನೆ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪರಮೇಶ್ವರ್ ಅವರು ಸುಮಾರು ಒಂಭತ್ತುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಕಟ್ಟಡಗಳನ್ನು ಪೊಲೀಸ್ ಹೌಸಿಂಗ್ ಕಾರ್ಪೋರೇಶನ್‌ನಿಂದ ನಿರ್ಮಾಣ ಮಾಡಲಾಗಿದೆ. ಸರಕಾರದ ಪ್ರಮುಖ ಉದ್ದೇಶ ಪೊಲೀಸ್ ಇಲಾಖೆ, ಪೊಲೀಸ್ ಸಿಬ್ಬಂದಿ ಆಧುನೀಕರಣ ಮಾಡುವುದು, ಅತ್ಯಾಧುನಿಕ ತರಬೇತಿಯನ್ನು ಅವರಿಗೆ ನಾವು ನೀಡುವುದು.

ಈ ಉದ್ದೇಶಗಳನ್ನು ಇಟ್ಟುಕೊಂಡು ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಅವರ ವಿಶೇಷ ತರಬೇತಿಗಾಗಿ ಕಂಪ್ಯೂಟರ್ ಶಿಕ್ಷಣ, ಸೈಬರ್‌ ಮಾಹಿತಿ, ಶಸ್ತ್ರಾಸ್ತ್ರಗಳ ಬಳಕೆ ಹೀಗೆ ಎಲ್ಲವನ್ನೂ ವಿವರಿಸುತ್ತಿದ್ದೇವೆ. ಪ್ರಸ್ತುತ ಪೊಲೀಸ್ ಇಲಾಖೆಗೆ ನಡೆಸಲಾಗುತ್ತಿರುವ ಆಯ್ಕೆ ಪ್ರಕ್ರಿಯೆಗೆ ಡಬ್ಬಲ್‌ ಗ್ರಾಜುವೆಟ್ಸ್ ಬರುತ್ತಿದ್ದಾರೆ. ರಾಜ್ಯ ಸರಕಾರ 100 ಪೊಲೀಸ್ ಠಾಣೆ ಎಂದು ಯೋಜನೆ ಮಾಡಿ ಮೇಲ್ದರ್ಜೆಗೇರಿಸುತ್ತಿದೆ ಎಂದರು. ಖಾಕಿಯೊಳಗೆ ಕೂಡಾ ಒಬ್ಬ ಅತ್ಯಾಧುನಿಕ ಮಾದರಿಯ ಸಂಪೂರ್ಣ ಮಾಹಿತಿಯನ್ನು ಹೊಂದಿರುವ ವ್ಯಕ್ತಿ ಇದ್ದಾನೆ ಎನ್ನುವುದನ್ನು ಜನ ತಿಳಿದುಕೊಳ್ಳಬೇಕಾಗಿದೆ ಅದಕ್ಕೆ ಸರಕಾರ ಬದ್ಧವಾಗಿದೆ ಎಂದರು.

ನಮ್ಮಲ್ಲಿ ಶೇಕಡಾ 40 ಸಿಬ್ಬಂದಿಗಳಿಗೆ ಹೊಸದಾಗಿ ಮನೆಗಳನ್ನು ಕಟ್ಟಿಕೊಡಲು ಮುಂದಾಗಿದ್ದೇವೆ. ಅಪಾರ್ಟ್‌ ಮೆಂಟ್ ಮಾದರಿ ಮನೆ ನೀಡುತ್ತಿದ್ದೇವೆ. ಶೇಕಡಾ 70ರಷ್ಟಾದರೂ ಮನೆ ನೀಡಲು ಯೋಜನೆ ರೂಪಿಸಿದ್ದೇವೆ. ಪೊಲೀಸರು ಸಂಯಮದಿಂದ ವರ್ತಿಸಬೇಕು, ಜನಸ್ನೇಹಿ ಆಗಿರಬೇಕು ಎಂದು ಅವರಿಗೆ ಕಾಲಕಾಲಕ್ಕೆ ಸೂಚನೆ ನೀಡಲಾಗಿದೆ. ಪ್ರತಿ ಪೊಲೀಸ್‌ ಠಾಣೆಗಳ ಚಟುವಟಿಕೆಗಳನ್ನು ನಿರ್ವಹಣೆ ಮಾಡಲು ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್ ಮಾಡ್ತಾ ಇದ್ದೇವೆ. ಇದು ದೇಶದಲ್ಲೇ ಪ್ರಥಮವಾಗಿದೆ. ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಹೈ ರೆಶಲ್ಯೂಶನ್‌ ಕ್ಯಾಮೆರಾ ಅಳವಡಿಸಲಿದ್ದೇವೆ. ಕೆಲವೇ ಕ್ಷಣಗಳಲ್ಲಿ ಈ ಮಾಹಿತಿ ಲಭ್ಯ ಆಗುವಂತೆ ನಾವು ಯೋಜನೆ ರೂಪಿಸುತ್ತಿದ್ದೇವೆ. ಯಾವುದೇ ಠಾಣೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದರೆ ನಮಗೆ ಕಂಟ್ರೋಲ್‌ ರೂಂಗೆ ಗೊತ್ತಾಗುತ್ತದೆ ಎಂದರು. ಎಲ್ಲಾ ಜಿಲ್ಲೆಗಳಲ್ಲೂ ಸೈಬರ್‌ ಕ್ರೈಂ ನೋಡಲು ಸೆಲ್‌ ರೂಪಿಸುತ್ತಿದ್ದೇವೆ. ಪೊಲೀಸ್ ಕಾನ್‌ಸ್ಟೇಬಲ್ 18,000 ಹುದ್ದೆಗಳು ಖಾಲಿ ಇವೆ. ಅದನ್ನು ತುಂಬಲು ಹಂತಹಂತವಾಗಿ ಆಯ್ಕೆ ಪ್ರಕ್ರಿಯೆ ಆರಂಭಿಸಿದ್ದೆವೆ. 1000 ಮಂದಿ ಸಬ್‌ ಇನ್‌ಸ್ಪೆಕ್ಟ್ರರ್ ಹುದ್ದೆಗಳು ಕೂಡಾ ಖಾಲಿ ಇವೆ. ಅವುಗಳನ್ನು ನಾವು ಭರ್ತಿ ಮಾಡುವವರಿದ್ದೇವೆ ಎಂಧರು. ಕಾನೂನುಬಾಹಿರವಾದ ಕೃತ್ಯಗಳನ್ನು ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದರು.

ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್‌ ಅಗರ್ವಾಲ್, ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ, ಎಂಎಲ್‌ಸಿ ಮಂಜುನಾಥ ಭಂಡಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್‌ ಮೊದಲಾದವರು ಉಪಸ್ಥಿತರಿದ್ದರು.

BANTWAL

ಬಯಲಾಯ್ತು ಅಕ್ರಮ ಸಂಬಂಧ; ನೇಣಿಗೆ ಶರಣಾದ ವಿವಾಹಿತ!

Published

on

ಪುತ್ತೂರು : ವ್ಯಕ್ತಿಗಳು ಸಾಲಬಾಧೆಯಿಂದಲೋ, ಅನಾರೋಗ್ಯದಿಂದಲೋ ಅಥವಾ ಜೀವನದಲ್ಲಿ ಜಿಗುಪ್ಸೆ ಹೊಂದಿಯೋ ಜೀವಾಂತ್ಯಗೊಳಿಸುವುದನ್ನು ಕಾಣುತ್ತೇವೆ. ಆದರೆ, ಇಲ್ಲೊಬ್ಬ,
ಅಕ್ರಮ ಪ್ರೇಮ ಸಂಬಂಧದ ಹಿನ್ನಲೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪ ಶನಿವಾರ ಘಟನೆ ಸಂಭವಿಸಿದೆ.

ಈಶ್ವರಮಂಗಲ ಸಮೀಪದ ಕತ್ರಿಬೈಲುವಿನ ಪ್ರಶಾಂತ್ ಮುಖಾರಿ (೩೮) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ ತನ್ನ ಮನೆಯಿಂದ ಸುಮಾರು ಒಂದು ಕಿಲೋಮೀಟರ್ ಅಂತರದಲ್ಲಿರುವ ಚಿಮುಣಿಗುಡ್ಡೆ ಎಂಬಲ್ಲಿನ ಗುಡ್ಡದ ರಸ್ತೆ ಬದಿಯಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

 

ಇದನ್ನು ಓದಿ: ಈ ವೀಡಿಯೋವನ್ನು ವೈರಲ್ ಮಾಡುವ ಧೈರ್ಯ ನಿಮ್ಮಲ್ಲಿ ಇದ್ಯಾ ? ವೀಡಿಯೋವೊಂದನ್ನು ಹಂಚಿಕೊಂಡು ಸವಾಲೆಸೆದ ನಟಿ ಜ್ಯೋತಿ ರೈ

ಅಕ್ರಮ ಸಂಬಂಧ ಬಯಲು – ನೇಣಿಗೆ ಶರಣು :

ಪ್ರಶಾoತ್ ಮುಖಾರಿ ಅವರಿಗೆ ಪತ್ನಿ ಮತ್ತು ಎಳೆಯ ವಯಸ್ಸಿನ ಪುತ್ರನಿದ್ದಾನೆ. ಈ ನಡುವೆ ಇನ್ನೊಬ್ಬಳು ಯುವತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ವಿಚಾರ ಬಹಿರಂಗಗೊಂಡಿದ್ದ ಹಿನ್ನೆಲೆಯಲ್ಲಿ ಅವರು ಅಪಮಾನಗೊಂಡು ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ.
ಮೃತರ ಪತ್ನಿ ನೀಡಿರುವ ದೂರಿನಂತೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

BANTWAL

ಕಡಬ : ಸಿಡಿಲು ಬಡಿದು ಓರ್ವ ಸಾವು; ಇಬ್ಬರಿಗೆ ಗಾಯ

Published

on

ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ವರುಣ ಕೃಪೆ ತೋರಿದ್ದಾನೆ. ಇನ್ನೊಂದೆಡೆ ಸಿಡಿಲಾರ್ಭಟಕ್ಕೆ ವ್ಯಕ್ತಿ ಬಲಿಯಾಗಿದ್ದಾರೆ.. ಕಡಬ ತಾಲೂಕಿನಲ್ಲಿ ಸಿಡಿಲು ಬಡಿದು ಓರ್ವ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯಗಳಾಗಿವೆ. ಉತ್ತರ ಪ್ರದೇಶ,ಚೈನ್‌ಪುರ್ ಮೂಲದ ಶ್ರೀಕಿಶುನ್ ಮೃತ ವ್ಯಕ್ತಿ.

ಇದನ್ನು ಓದಿ:ಪುತ್ತೂರಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯುವಕ! 

ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ನದಿ ಬದಿಯ ಶೆಡ್ ನಲ್ಲಿದ್ದ ವೇಳೆ ಶೆಡ್ ಗೇ ಸಿಡಿಲು ಬಡಿದಿದೆ. ಪರಿಣಾಮ ಮರಳು ತೆಗೆಯುವ ಉತ್ತರ ಪ್ರದೇಶ ಮೂಲದ ಕಾರ್ಮಿಕ ಸಾವನ್ನಪ್ಪಿದ್ದಾನೆ.
ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.

Continue Reading

DAKSHINA KANNADA

ಅಕ್ಕಿಯಲ್ಲಿ ಕೀಟಗಳಿದ್ದರೆ ಅದನ್ನು ದೂರ ಮಾಡಲು ಹೀಗೆ ಮಾಡಿ…!

Published

on

ಮಂಗಳೂರು: ಅಕ್ಕಿ ಹೆಚ್ಚಿನವರ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಹೀಗಾಗಿ ಅಕ್ಕಿಯಿಂದ ವಿವಿಧ ತಿಂಡಿ ತಿನಿಸುಗಳನ್ನು ತಯಾರಿಸಿ ಸೇವಿಸುತ್ತಾರೆ. ಆದರೆ ಈ ಅಕ್ಕಿಯನ್ನು ಹೆಚ್ಚು ದಿನಗಳವರೆಗೆ ಸಂಗ್ರಹಿಸಿಡುವುದು ಸ್ವಲ್ಪ ಕಷ್ಟವೇ. ಕೆಲವೊಮ್ಮೆ ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದ ಅಕ್ಕಿಯಲ್ಲಿ ಹುಳಗಳು ಹಾಗೂ ಕೀಟಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಮನೆಯಲ್ಲೇ ಸುಲಭವಾದ ವಿಧಾನವನ್ನು ಬಳಸಿ ಹುಳಗಳು ಹಾಗೂ ಕೀಟಗಳಿಂದ ಅಕ್ಕಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡಬಹುದಾಗಿದೆ.

ಅಕ್ಕಿಯಲ್ಲಿ ವಿವಿಧ ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿದ್ದು, ವಿಟಮಿನ್ ಡಿ, ಕ್ಯಾಲ್ಸಿಯಂ, ಫೈಬರ್, ಕಬ್ಬಿಣ, ಥಯಾಮಿನ್ ಮತ್ತು ರಿಬೋಫ್ಲಾವಿನ್ ಗಳಿವೆ. ಕೆಲವರು ಮನೆಯಲ್ಲಿ ಅಕ್ಕಯನ್ನ ಶೇಖರಿಸಿ ಇಟ್ಟರೂ ಕೀಟಗಳು ಹಾಗೂ ಹುಳಗಳ ಬಾಧೆ ತಪ್ಪಿದ್ದಲ್ಲ. ಅಕ್ಕಿಗೆ ಕೀಟಬಾಧೆ ಬಾರದಂತೆ ರಾಸಾಯನಿಕ ಮಿಶ್ರಿತ ಪೌಡರ್ ಬಳಸಿದರೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

  • ಅಕ್ಕಿಯನ್ನು ಸಂಗ್ರಹಿಸುವ ಪ್ರದೇಶವು ಶುಷ್ಕವಾಗಿಟ್ಟುಕೊಳ್ಳಿ. ಅಕ್ಕಿಯ ಚೀಲದಲ್ಲಿ ಮಸಾಲೆ ಪದಾರ್ಥಗಳನ್ನು ಇಟ್ಟರೆ ಕೀಟಗಳು ಬರುವುದಿಲ್ಲ. ಕರ್ಪೂರ, ಇಂಗು, ಲವಂಗ, ದಾಲ್ಚಿನ್ನಿ, ಬಿರಿಯಾನಿ ಎಲೆಗಳು ಮತ್ತು ನಕ್ಷತ್ರದ ಹೂವುಗಳನ್ನು ಕವರ್‌ನಲ್ಲಿ ಹಾಕಿ ಅಕ್ಕಿ ಚೀಲಗಳಲ್ಲಿ ಹಾಕಿಟ್ಟರೆ ದೀರ್ಘಕಾಲದವರೆಗೆ ಯಾವುದೇ ಕೀಟಗಳು ಬಾರದಂತೆ ಸಂರಕ್ಷಿಸಿಡಬಹುದು.
  • ಅಕ್ಕಿಯನ್ನು ಕೀಟಗಳಿಂದ ಮುಕ್ತವಾಗಿಡುವಲ್ಲಿ ಬೇವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಬಹಳಷ್ಟು ಪರಿಣಾಮಕಾರಿಯಾಗಿದೆ.
  • ಅಕ್ಕಿ ಚೀಲಗಳಲ್ಲಿ ಬೆಳ್ಳುಳ್ಳಿ ಮತ್ತು ಉಪ್ಪನ್ನು ಹಾಕಿಟ್ಟರೆ ಅಕ್ಕಿಗೆ ಕೀಟಗಳು ಬರದಂತೆ ನೋಡಿಕೊಳ್ಳಬಹುದು. ಸಿಪ್ಪೆ ಸುಲಿದ ಬೆಳ್ಳುಳ್ಳಿ ಹಾಗೂ ಉಪ್ಪನ್ನು ಕವರ್ ನಲ್ಲಿಟ್ಟು ಅಕ್ಕಿಯ ಶೇಖರಣೆಯಲ್ಲಿಟ್ಟರೆ ಕೀಟಗಳು ಬರುವುದಿಲ್ಲ.
  • ಅಕ್ಕಿ ಚೀಲದಲ್ಲಿ ತುಳಸಿ ಎಲೆಗಳನ್ನು ಇರಿಸಿದರೆ ಹುಳಗಳು ಬೇಗನೇ ಆಗುವುದಿಲ್ಲ.
  • ಒಂದು ವೇಳೆ ಅಕ್ಕಿಯಲ್ಲಿ ಹುಳಗಳು ಆಗಿದ್ದರೆ ಆ ಅಕ್ಕಿಯನ್ನು ಗಾಳಿಯಾಡದ ಕವರ್‌ನಿಂದ ಹಾಕಿಟ್ಟು 3-4 ದಿನಗಳವರೆಗೆ ಫ್ರಿಜ್‌ನಲ್ಲಿ ಇಟ್ಟರೆ ಕೀಟಗಳು ಹಾಗೂ ಹುಳಗಳು ಸಾಯುತ್ತವೆ.
Continue Reading

LATEST NEWS

Trending